ಅತಿ ಕಡಿಮೆ ಬೆಲೆಯ ಈ ಎಲೆಕ್ಟ್ರಿಕ್ ಕಾರು ಚಾಲನೆಗೆ ಬೇಕಿಲ್ಲ ಡಿಎಲ್

ಫ್ರೆಂಚ್ ಜನಪ್ರಿಯ ಕಾರು ಉತ್ಪಾದನಾ ಕಂಪನಿಯಾದ ಸಿಟ್ರನ್ ತನ್ನ ಬಹುನೀರಿಕ್ಷಿತ ಮಿನಿ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಿದ್ದು, ವಿಶೇಷ ತಾಂತ್ರಿಕ ಅಂಶಗಳನ್ನು ಈ ಕಾರು ಹಲವಾರು ವಿಶೇಷತೆಗಳನ್ನು ಹೊಂದಿದೆ.

ಅತಿ ಕಡಿಮೆ ಬೆಲೆಯ ಈ ಎಲೆಕ್ಟ್ರಿಕ್ ಕಾರು ಚಾಲನೆಗೆ ಬೇಕಿಲ್ಲ ಡಿಎಲ್

2 ಸೀಟರ್ ಆವೃತ್ತಿಯಾಗಿರುವ ಸಿಟ್ರನ್ ಹೊಸ ಮಿನಿ ಎಲೆಕ್ಟ್ರಿಕ್ ವಾಹನವು ಕ್ವಾಡ್ರಿಸೈಕಲ್ ವಿಭಾಗದಲ್ಲಿ ಗುರುತಿಸಿಕೊಂಡಿದ್ದು, ಹೊಸ ಎಲೆಕ್ಟ್ರಿಕ್ ವಾಹನವನ್ನು 'ಆಮಿ' ಎಂದು ಕರೆಯಲಾಗಿದೆ. ಆಮಿ ಎಲೆಕ್ಟ್ರಿಕ್ ವಾಹನವು 5.5kWh ಲಿಥೀಯಂ ಅಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ನಗರಪ್ರದೇಶದಲ್ಲಿನ ಸಂಚಾರಕ್ಕೆ ಉತ್ತಮ ಆಯ್ಕೆಯಾಗಲಿದೆ. 6kW ಮೋಟಾರ್‌ನೊಂದಿಗೆ ಪ್ರತಿ ಗಂಟೆಗೆ 45 ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ ಆಮಿ ವಾಹನವು ಪ್ರತಿ ಚಾರ್ಜ್‌ಗೆ ಗರಿಷ್ಠ70 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಅತಿ ಕಡಿಮೆ ಬೆಲೆಯ ಈ ಎಲೆಕ್ಟ್ರಿಕ್ ಕಾರು ಚಾಲನೆಗೆ ಬೇಕಿಲ್ಲ ಡಿಎಲ್

ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಸಿಟ್ರನ್ ಆಮಿ ಎಲೆಕ್ಟ್ರಿಕ್ ಕಾರು ರೂ. 5.20 ಲಕ್ಷ ಬೆಲೆ ಹೊಂದಿದ್ದು, ಪ್ರತಿ ಚಾರ್ಚ್‌ಗೆ ಗರಿಷ್ಠ 70 ಕಿ.ಮೀ ಮೈಲೇಜ್ ಹಿಂದಿರುಗಿಸುವುದಾಗಿ ಕಂಪನಿಯು ಭರವಸೆ ನೀಡಿದೆ.

ಅತಿ ಕಡಿಮೆ ಬೆಲೆಯ ಈ ಎಲೆಕ್ಟ್ರಿಕ್ ಕಾರು ಚಾಲನೆಗೆ ಬೇಕಿಲ್ಲ ಡಿಎಲ್

ಈ ಹೊಸ ಎಲೆಕ್ಟ್ರಿಕ್ ಕಾರಿನ ಮತ್ತೊಂದು ವೈಶಿಷ್ಟ್ಯತೆ ಅಂದರೆ ಅದು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾರಾದರೂ ಅದನ್ನು ಓಡಿಸಬಹುದಾಗಿದ್ದು, ಸಿಟಿ ವ್ಯಾಪ್ತಿಯಲ್ಲಿ ಮಾತ್ರವೇ ಈ ವಾಹನವನ್ನು ಬಳಕೆ ಮಾಡಬೇಕೆಂಬ ನಿರ್ಬಂಧ ವಿಧಿಸಿದೆ.

ಅತಿ ಕಡಿಮೆ ಬೆಲೆಯ ಈ ಎಲೆಕ್ಟ್ರಿಕ್ ಕಾರು ಚಾಲನೆಗೆ ಬೇಕಿಲ್ಲ ಡಿಎಲ್

ಎಲೆಕ್ಟ್ರಿಕ್ ಸ್ಕೂಟರ್ ಅಥವಾ ಮೊಪೆಡ್‌ಗಳಿಗಿಂತಲೂ ಇದು ಸುರಕ್ಷಿತ ಎಂದು ಹೇಳಿಕೊಂಡಿರುವ ಸಿಟ್ರನ್ ಕಂಪನಿಯು ಕಾಲೇಜು ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಬಿಡುಗಡೆ ಮಾಡಿದ್ದು, ಈ ವಾಹನ ಚಾಲನೆ ಯಾವುದೇ ಚಾಲನಾ ಪರವಾನಿಗೆ ಅಗತ್ಯವಿಲ್ಲ ಎಂದಿದೆ.

ಅತಿ ಕಡಿಮೆ ಬೆಲೆಯ ಈ ಎಲೆಕ್ಟ್ರಿಕ್ ಕಾರು ಚಾಲನೆಗೆ ಬೇಕಿಲ್ಲ ಡಿಎಲ್

ಪ್ಲಾಸ್ಟಿಕ್ ಮತ್ತು ಫೈಬರ್ ಅಂಶಗಳನ್ನು ಹೊಂದಿರುವ ಆಮಿ ಕಾರಿನ ಬಹುತೇಕ ತಾಂತ್ರಿಕ ಅಂಶಗಳು ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ಒದಗಿಸಲಿದ್ದು, ಡ್ಯುಯಲ್ ಟೋನ್ ಇಂಟಿರಿಯರ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಪುಶ್ ಬಟನ್, ಇನ್ಟುಮೆಂಟ್ ಕ್ಲಸ್ಟರ್ ಸೌಲಭ್ಯವನ್ನು ಹೊಂದಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಅತಿ ಕಡಿಮೆ ಬೆಲೆಯ ಈ ಎಲೆಕ್ಟ್ರಿಕ್ ಕಾರು ಚಾಲನೆಗೆ ಬೇಕಿಲ್ಲ ಡಿಎಲ್

ಜೊತೆಗೆ ಕಾರಿನ ತಾಂತ್ರಿಕ ಅಂಶಗಳನ್ನು ಪ್ರತ್ಯೇಕ ಮೊಬೈಲ್ ಅಪ್ಲಿಕೇಷನ್ ಮೂಲಕ ನಿಯಂತ್ರಣ ಮಾಡಬಹುದಾಗಿದ್ದು, ವೆಹಿಕಲ್ ಟ್ರ್ಯಾಕಿಂಗ್ ನಂತಹ ಸೌಲಭ್ಯಗಳಿಂದಾಗಿ ಹೊಸ ಎಲೆಕ್ಟ್ರಿಕ್ ಕಾರಿಗೆ ಗರಿಷ್ಠ ಭದ್ರತೆ ಸಿಗಲಿದೆ.

ಅತಿ ಕಡಿಮೆ ಬೆಲೆಯ ಈ ಎಲೆಕ್ಟ್ರಿಕ್ ಕಾರು ಚಾಲನೆಗೆ ಬೇಕಿಲ್ಲ ಡಿಎಲ್

ಇನ್ನು ಸಿಟ್ರನ್ ಶೀಘ್ರದಲ್ಲೇ ಭಾರತದಲ್ಲೂ ಹೊಸ ಕಾರು ಮಾರಾಟವನ್ನು ಆರಂಭಿಸುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎಸ್‌ಯುವಿ, ಎಂಪಿವಿ, ಸೆಡಾನ್ ಮತ್ತು ಹ್ಯಾಚ್‌ಬ್ಯಾಕ್ ಕಾರುಗಳನ್ನು ಬಿಡುಗಡೆಗೊಳಿಸಲು ಭರ್ಜರಿ ಸಿದ್ದತೆ ನಡೆಸಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಅತಿ ಕಡಿಮೆ ಬೆಲೆಯ ಈ ಎಲೆಕ್ಟ್ರಿಕ್ ಕಾರು ಚಾಲನೆಗೆ ಬೇಕಿಲ್ಲ ಡಿಎಲ್

ಇದರೊಂದಿಗೆ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೂ ಸಾಕಷ್ಟು ತಯಾರಿ ನಡೆಸಿರುವ ಸಿಟ್ರನ್ ಕಂಪನಿಯು ವಿನೂತನ ಮಾದರಿಯ ಮಿನಿ ಎಲೆಕ್ಟ್ರಿಕ್ ವಾಹನ ಮಾದರಿಯೊಂದನ್ನು ಯುರೋಪ್ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದ್ದು, ಶೀಘ್ರದಲ್ಲೇ ಮತ್ತಷ್ಟು ಎಲೆಕ್ಟ್ಕಿಕ್ ಮಾದರಿಗಳನ್ನು ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಬಿಡುಗಡೆಯಾಗಲಿವೆ.

Most Read Articles

Kannada
English summary
Citroen Ami mini electric car launched. Read in Kannada.
Story first published: Saturday, September 12, 2020, 23:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X