ಭಾರತದಲ್ಲೇ ಪೂರ್ಣ ಪ್ರಮಾಣದ ಕಾರು ಉತ್ಪಾದನೆಗೆ ಸಿಟ್ರನ್ ಬೃಹತ್ ಯೋಜನೆ

ಭಾರತವು ಮಧ್ಯಮ ಗಾತ್ರದ ಕಾರು ಮಾರಾಟದಲ್ಲಿ ಜಾಗತಿಕವಾಗಿ ಪ್ರಮುಖ ಆಕರ್ಷಣೆಯಾಗುತ್ತಿದ್ದು, ಹಲವಾರು ಹೊಸ ಕಾರು ಉತ್ಪಾದನಾ ಕಂಪನಿಗಳು ಭಾರತದಲ್ಲಿ ಉದ್ಯಮ ಕಾರ್ಯಾಚರಣೆ ಆರಂಭಿಸುತ್ತಿವೆ. ಫ್ರೆಂಚ್ ಆಟೋ ಕಂಪನಿಯಾದ ಸಿಟ್ರನ್ ಕೂಡಾ ಭಾರತದಲ್ಲಿ ಭಾರೀ ಪ್ರಮಾಣದ ಬಂಡವಾಳ ಹೂಡಿಕೆಯೊಂದಿಗೆ ಕಾರು ಮಾರಾಟ ಆರಂಭಿಸುತ್ತಿದ್ದು, ಭಾರತದಲ್ಲೇ ಪೂರ್ಣ ಪ್ರಮಾಣದ ಕಾರು ಉತ್ಪಾದನೆಗೆ ಸಿದ್ದವಾಗುತ್ತಿದೆ.

ಭಾರತದಲ್ಲೇ ಪೂರ್ಣ ಪ್ರಮಾಣದ ಕಾರು ಉತ್ಪಾದನೆಗೆ ಸಿಟ್ರನ್ ಬೃಹತ್ ಯೋಜನೆ

2021ಕ್ಕೆ ಭಾರತದಲ್ಲಿ ತನ್ನ ಮೊದಲ ಕಾರು ಮಾದರಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಿರುವ ಸಿಟ್ರನ್ ಕಂಪನಿಯು ಮೊದಲ ಹಂತದಲ್ಲಿ ಸಿ5 ಏರ್‌ಕ್ರಾಸ್ ಎಸ್‌ಯುವಿ ಮಾದರಿಯೊಂದಿಗೆ ದೇಶಿಯ ಮಾರುಕಟ್ಟೆ ಪ್ರವೇಶಿಸಲಿದ್ದು, ಹಂತ-ಹಂತವಾಗಿ ಗ್ರಾಹಕರ ಬೇಡಿಕೆಯೆಂತೆ ಹ್ಯಾಚ್‌ಬ್ಯಾಕ್, ಕಂಪ್ಯಾಕ್ಟ್ ಎಸ್‌ಯುವಿ ಮತ್ತು ಎಂಪಿವಿ ಕಾರುಗಳ ಜೊತೆಗೆ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಸಹ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಭಾರತದಲ್ಲೇ ಪೂರ್ಣ ಪ್ರಮಾಣದ ಕಾರು ಉತ್ಪಾದನೆಗೆ ಸಿಟ್ರನ್ ಬೃಹತ್ ಯೋಜನೆ

ಇದಕ್ಕಾಗಿ ಈಗಾಗಲೇ ಅಂತಿಮ ಹಂತದ ಸಿದ್ದತೆ ನಡೆಸಿರುವ ಸಿಟ್ರನ್ ಕಂಪನಿಯು ಈಗಾಗಲೇ ಕಾರು ಉತ್ಪಾದನೆಯ ಟ್ರಯರ್ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಪ್ರಮುಖ 3 ಕಾರುಗಳನ್ನು ಭಾರತದಲ್ಲೇ ಪೂರ್ಣ ಪ್ರಮಾಣದಲ್ಲಿ ಅಭಿವೃದ್ದಿಗೊಳಿಸುವ ಗುರಿಯೋಜನೆ ಹೊಂದಿದೆ.

ಭಾರತದಲ್ಲೇ ಪೂರ್ಣ ಪ್ರಮಾಣದ ಕಾರು ಉತ್ಪಾದನೆಗೆ ಸಿಟ್ರನ್ ಬೃಹತ್ ಯೋಜನೆ

2023ರ ವೇಳೆಗೆ ಶೇ.100ರಷ್ಟು ಬಿಡಿಭಾಗಗಳೊಂದಿಗೆ ಭಾರತದಲ್ಲೇ ಹೊಸ ಕಾರು ಉತ್ಪನ್ನಗಳನ್ನು ಅಭಿವೃದ್ದಿಗೊಳಿಸುವ ಗುರಿಯೋಜನೆ ಹೊಂದಿರುವ ಸಿಟ್ರನ್ ಕಂಪನಿಯು ತಮಿಳುನಾಡಿನ ತಿರುವಲ್ಲೂರ್‌ನಲ್ಲಿ ಮೊದಲ ಕಾರು ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ್ದು, ಮಧ್ಯಮ ಗಾತ್ರದ ಕಾರಗಳ ಜೊತೆ ಐಷಾರಾಮಿ ಫೀಚರ್ಸ್‌ ಕಾರು ಮಾದರಿಗಳನ್ನು ಸಹ ರಸ್ತೆಗಿಳಿಸಲಿದೆ

ಭಾರತದಲ್ಲೇ ಪೂರ್ಣ ಪ್ರಮಾಣದ ಕಾರು ಉತ್ಪಾದನೆಗೆ ಸಿಟ್ರನ್ ಬೃಹತ್ ಯೋಜನೆ

ಯುರೋಪ್ ಮಾರುಕಟ್ಟೆಯಲ್ಲಿ ಪಿಎಸ್ಎ ಗ್ರೂಪ್ ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಿಟ್ರನ್, ಫ್ಯೂಜೊ ಮತ್ತು ಡಿಎಸ್ ಬ್ರಾಂಡ್‌ಗಳು ಯುರೋಪ್ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆಯುಳ್ಳ ಕಾರುಗಳಾಗಿದ್ದು, ಇದರಲ್ಲಿ ಸಿಟ್ರನ್ ನಿರ್ಮಾಣದ ಸಿ5 ಏರ್‌ಕ್ರಾಸ್ ಸದ್ಯ ಭಾರತದಲ್ಲಿ ಬಿಡುಗಡೆಯಾಗುತ್ತಿದೆ.

ಭಾರತದಲ್ಲೇ ಪೂರ್ಣ ಪ್ರಮಾಣದ ಕಾರು ಉತ್ಪಾದನೆಗೆ ಸಿಟ್ರನ್ ಬೃಹತ್ ಯೋಜನೆ

ಸಿಟ್ರನ್ ಹೊಸ ಕಾರುಗಳು ಹಲವು ವಿಶೇಷ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಯಾಗುವ ಸುಳಿವು ನೀಡಿದ್ದು, ಬೆಲೆ ವಿಚಾರದಲ್ಲೂ ಗಮನಸೆಳೆಯಲಿದೆ. ಸಿ5 ಏರ್‌ಕ್ರಾಸ್ ನಂತರ ಮತ್ತಷ್ಟು ಹೊಸ ಕಾರುಗಳನ್ನು ಪರಿಚಯಿಸಲಿದ್ದು, ಜನಪ್ರಿಯ ಕಾರು ಮಾದರಿಗಳಾಗುವ ನೀರಿಕ್ಷೆಗಳಿವೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಭಾರತದಲ್ಲೇ ಪೂರ್ಣ ಪ್ರಮಾಣದ ಕಾರು ಉತ್ಪಾದನೆಗೆ ಸಿಟ್ರನ್ ಬೃಹತ್ ಯೋಜನೆ

ಸಿ5 ಏರ್‌ಕ್ರಾಸ್ ಕಾರು ಮಾದರಿಯು ಬಿಎಸ್-6 ಎಮಿಷನ್ ಪ್ರೇರಿತ 1.5-ಲೀಟರ್ ಡೀಸೆಲ್ ಅಥವಾ 2.0-ಲೀಟರ್ ಟರ್ಬೋ ಡೀಸೆಲ್ ಎಂಜಿನ್ ಪಡೆದುಕೊಳ್ಳುವುದು ಖಚಿತವಾಗಿದ್ದು, 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆದುಕೊಳ್ಳಲಿದೆ.

ಭಾರತದಲ್ಲೇ ಪೂರ್ಣ ಪ್ರಮಾಣದ ಕಾರು ಉತ್ಪಾದನೆಗೆ ಸಿಟ್ರನ್ ಬೃಹತ್ ಯೋಜನೆ

ಆದರೆ ಹೊಸ ಕಾರಿನಲ್ಲಿ ಪೆಟ್ರೋಲ್ ಮಾದರಿಯ ಬಿಡುಗಡೆಯ ಕುರಿತು ಯಾವುದೇ ನಿಖರ ಮಾಹಿತಿಗಳಿಲ್ಲವಾದರೂ ಗ್ರಾಹಕರ ಬೇಡಿಕೆ ಅನುಸಾರವಾಗಿ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಹೊಸ ಎಂಜಿನ್ ಅನ್ನು ಫಿಯೆಟ್ ಕಂಪನಿಯಿಂದ ಎರವಲು ಪಡೆದುಕೊಳ್ಳುವ ಸಾಧ್ಯತೆಗಳಿವೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಭಾರತದಲ್ಲೇ ಪೂರ್ಣ ಪ್ರಮಾಣದ ಕಾರು ಉತ್ಪಾದನೆಗೆ ಸಿಟ್ರನ್ ಬೃಹತ್ ಯೋಜನೆ

ಈ ಮೂಲಕ ವಿನೂತನ ವಿನ್ಯಾಸ ಮತ್ತು ವಿಶೇಷ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಸಿಟ್ರನ್ ಎಸ್‌ಯುವಿ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುವುವ ನೀರಿಕ್ಷೆಯಲ್ಲಿದ್ದು, ಸಿ5 ಏರ್‌ಕ್ರಾಸ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 18 ಲಕ್ಷದಿಂದ ರೂ. 22 ಲಕ್ಷ ಅಂತರದಲ್ಲಿ ಬಿಡುಗಡೆಯಾಗಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
English summary
Citroen Planning To Launch Three Heavily Localised Products In India By 2023. Read in kannada.
Story first published: Saturday, September 26, 2020, 19:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X