ಟ್ರಕ್ ಡ್ರೈವರ್‍‍ಗಳ ಸೌಲಭ್ಯಕ್ಕೆ ಒತ್ತಾಯಿಸಿದ ಸಂಸದ

ಟ್ರಕ್ ಹಾಗೂ ಲಾರಿ ಡ್ರೈವರ್‍‍ಗಳು ನಿಗದಿತ ಅವಧಿಯಲ್ಲಿ ಸರಕುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪಿಸುವ ಒತ್ತಡವನ್ನು ಎದುರಿಸುತ್ತಿರುತ್ತಾರೆ. ಇದರಿಂದಾಗಿ ಗಂಟೆಗಟ್ಟಲೇ, ಕೆಲವೊಮ್ಮೆ ದಿನಗಟ್ಟಲೇ ಡ್ರೈವ್ ಮಾಡುತ್ತಲೇ ಇರುತ್ತಾರೆ.

ಟ್ರಕ್ ಡ್ರೈವರ್‍‍ಗಳ ಸೌಲಭ್ಯಕ್ಕೆ ಒತ್ತಾಯಿಸಿದ ಸಂಸದ

ನಿದ್ದೆ ಇಲ್ಲದೇ ನಿದ್ದೆ ಮಂಪರಿನಲ್ಲಿಯೇ ಟ್ರಕ್, ಲಾರಿಗಳನ್ನು ಚಲಾಯಿಸುತ್ತಾರೆ. ಈಗ ಸಂಸತ್‍‍ನ ಬಜೆಟ್ ಅಧಿವೇಶನ ನಡೆಯುತ್ತಿದೆ. ಈ ಅಧಿವೇಶನದಲ್ಲಿ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿ‍‍ಪಿ‍ಐ) ಎಂಪಿಗಳಾದ ಬಿನೊಯ್ ವಿಶ್ವಂರವರು ಟ್ರಕ್, ಲಾರಿ ಡ್ರೈವರ್‍‍ಗಳಿಗೆ ಸರಿಯಾದ ನಿಯಮಗಳನ್ನು ಅಳವಡಿಸುವಂತೆ ಒತ್ತಾಯಿಸಿದ್ದಾರೆ.

ಟ್ರಕ್ ಡ್ರೈವರ್‍‍ಗಳ ಸೌಲಭ್ಯಕ್ಕೆ ಒತ್ತಾಯಿಸಿದ ಸಂಸದ

ಈ ನಿಯಮಗಳಲ್ಲಿ ಟ್ರಕ್‍‍ಗಳಲ್ಲಿ ಟ್ರಕ್ ಡ್ರೈವರ್‍‍ಗಳಿಗಾಗಿ ಸ್ಲೀಪರ್ ಬರ್ತ್‍‍ಗಳನ್ನು ಕಡ್ಡಾಯವಾಗಿ ಅಳವಡಿಸಲು ಕ್ರಮಕೈಗೊಳ್ಳಬೇಕೆಂದು ಕೇಂದ್ರದ ಸಾರಿಗೆ ಸಚಿವರಾದ ನಿತಿನ್ ಗಡ್ಕರಿಯವರನ್ನು ಒತ್ತಾಯಿಸಿದ್ದಾರೆ. ಇತ್ತೀಚಿಗೆ ತಮಿಳುನಾಡಿನ ಅವಿನಾಶಿಯ ಬಳಿ ಬಸ್ ಹಾಗೂ ಟ್ರಕ್ ನಡುವೆ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಸುಮಾರು 19 ಜನರು ದುರ್ಮರಣಕ್ಕೀಡಾಗಿದ್ದರು.

ಟ್ರಕ್ ಡ್ರೈವರ್‍‍ಗಳ ಸೌಲಭ್ಯಕ್ಕೆ ಒತ್ತಾಯಿಸಿದ ಸಂಸದ

ಪೊಲೀಸರ ತನಿಖೆಯ ನಂತರ ಟ್ರಕ್ ಡ್ರೈವರ್ ನಿದ್ದೆಯ ಮಂಪರಿನಲ್ಲಿದ್ದ ಕಾರಣ ಅಪಘಾತ ಸಂಭವಿಸಿರುವುದು ಕಂಡು ಬಂದಿದೆ. ಈ ದುರ್ಘಟನೆಯ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗಿದ್ದು, ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ತಡೆಯಲು ಟ್ರಕ್‍‍ಗಳಲ್ಲಿ ಡ್ರೈವರ್ ಹಾಗೂ ಕ್ಲೀನರ್‍‍ಗಾಗಿ ಸ್ಲೀಪರ್ ಬರ್ತ್‍‍ಗಳನ್ನು ಕಡ್ಡಾಯಗೊಳಿಸುವಂತೆ ಒತ್ತಾಯಿಸಲಾಗಿದೆ.

ಟ್ರಕ್ ಡ್ರೈವರ್‍‍ಗಳ ಸೌಲಭ್ಯಕ್ಕೆ ಒತ್ತಾಯಿಸಿದ ಸಂಸದ

ಇದರ ಜೊತೆಗೆ ಪ್ರತಿಯೊಂದು ಟ್ರಕ್‍‍ಗಳಲ್ಲಿ ಇಬ್ಬರು ಡ್ರೈವರ್‍‍ಗಳಿರುವಂತೆ ನೋಡಿಕೊಳ್ಳಬೇಕೆಂದು ಸಂಸತ್ತಿನಲ್ಲಿ ಒತ್ತಾಯಿಸಲಾಗಿದೆ. ಇದರಿಂದಾಗಿ ಒಬ್ಬ ಡ್ರೈವರ್‍‍ಗೆ ನಿದ್ದೆ ಬಂದರೆ ಅಥವಾ ಆರೋಗ್ಯದ ಸಮಸ್ಯೆ ಎದುರಾದರೆ ಮತ್ತೊಬ್ಬ ಡ್ರೈವರ್ ಟ್ರಕ್ ಚಲಾಯಿಸಬಹುದು.

ಟ್ರಕ್ ಡ್ರೈವರ್‍‍ಗಳ ಸೌಲಭ್ಯಕ್ಕೆ ಒತ್ತಾಯಿಸಿದ ಸಂಸದ

ಈ ಕುರಿತು ಮಾತನಾಡಿದ ಬಿನೊಯ್ ವಿಶ್ವಂರವರು ಈ ನಿಯಮಗಳನ್ನು ಜಾರಿಗೆ ತರುವುದರಿಂದ ಟ್ರಕ್‍ ಹಾಗೂ ಲಾರಿಗಳಿಂದ ಹೈವೇ ಹಾಗೂ ನಗರಗಳಲ್ಲಿ ಉಂಟಾಗುವ ಅಪಘಾತ ಪ್ರಮಾಣವು ಮುಂಬರುವ ದಿನಗಳಲ್ಲಿ ಕಡಿಮೆಯಾಗಲಿದೆ ಎಂದು ತಿಳಿಸಿದ್ದಾರೆ.

ಟ್ರಕ್ ಡ್ರೈವರ್‍‍ಗಳ ಸೌಲಭ್ಯಕ್ಕೆ ಒತ್ತಾಯಿಸಿದ ಸಂಸದ

ಟ್ರಕ್‍ ಡ್ರೈವರ್‍‍ಗಳಿಗಾಗಿ ಕೆಲಸದ ಅವಧಿಯನ್ನು ನಿಗದಿಪಡಿಸಬೇಕು. ಇದರಿಂದಾಗಿ ಅವರು ಡ್ರೈವ್ ಮಾಡುವ ಅವಧಿಯಲ್ಲಿ ಕೆಲ ಸಮಯ ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ಒತ್ತಾಯಿಸಿದರು.

ಟ್ರಕ್ ಡ್ರೈವರ್‍‍ಗಳ ಸೌಲಭ್ಯಕ್ಕೆ ಒತ್ತಾಯಿಸಿದ ಸಂಸದ

ವಾಸ್ತವವಾಗಿ ನೋಡುವುದಾದರೆ, ಟ್ರಕ್ ಡ್ರೈವರ್‍‍ಗಳು ಒಂದು ಊರಿನಿಂದ ಮತ್ತೊಂದು ಊರಿಗೆ ಅಥವಾ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತೆರಳಲು ಸುದೀರ್ಘ ಅವಧಿಗೆ ಟ್ರಕ್‍‍ಗಳನ್ನು ಡ್ರೈವ್ ಮಾಡುತ್ತಾರೆ. ವಿಶ್ರಾಂತಿ ಇಲ್ಲದ ಕಾರಣ ಅವರ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಉಂಟಾಗುತ್ತಿದೆ.

ಟ್ರಕ್ ಡ್ರೈವರ್‍‍ಗಳ ಸೌಲಭ್ಯಕ್ಕೆ ಒತ್ತಾಯಿಸಿದ ಸಂಸದ

ಇದರ ಜೊತೆಗೆ ನಿದ್ದೆ ಮಂಪರಿನಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಇದಕ್ಕೆ ಇತ್ತೀಚಿಗೆ ತಮಿಳುನಾಡಿನ ಕೊಯಮತ್ತೂರಿನ ಬಳಿಯ ಅವಿನಾಶಿಯಲ್ಲಿ ಟ್ರಕ್ ಹಾಗೂ ಕೇರಳದ ರಾಜ್ಯ ಸಾರಿಗೆ ಸಂಸ್ಥೆಯ ನಡುವೆ ಸಂಭವಿಸಿದ ಭೀಕರ ಅಪಘಾತವೇ ಸಾಕ್ಷಿ.

Most Read Articles

Kannada
English summary
CPI MP urges to allow-sleeping-births-in-trucks-details
Story first published: Tuesday, February 25, 2020, 12:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X