ಐಷಾರಾಮಿ ಎಂಪಿವಿಯಾಗಿ ಮಾಡಿಫೈಗೊಂಡ ಟಾಟಾ ವಿಂಗರ್

ಡಿಸಿ ಡಿಸೈನ್ ಕಾರುಗಳನ್ನು ಮಾಡಿಫೈಗೊಳಿಸುವುದಕ್ಕೆ ಹೆಸರುವಾಸಿಯಾಗಿದೆ. ಈ ಕಾರು ಡಿಸೈನಿಂಗ್ ಕಂಪನಿಯು ಮೂಲ ಕಾರುಗಳನ್ನು ಕಸ್ಟಮೈಸ್ ಮಾಡುವುದರಲ್ಲಿ ಎತ್ತಿದ ಕೈ. ಡಿಸಿ ಡಿಸೈನ್ ಕಂಪನಿಯು ಅನೇಕ ಹಳೆ ಕಾರು, ಹೊಸ ಕಾರು ಹಾಗೂ ಸ್ಪೋರ್ಟ್ಸ್ ಕಾರುಗಳನ್ನು ವಿನ್ಯಾಸಗೊಳಿಸುತ್ತದೆ.

ಐಷಾರಾಮಿ ಎಂಪಿವಿಯಾಗಿ ಮಾಡಿಫೈಗೊಂಡ ಟಾಟಾ ವಿಂಗರ್

ಈ ಕಂಪನಿಯು ವಿಂಗರ್ ಕಾರ್ ಅನ್ನು ಕಸ್ಟಮೈಸ್ ಮಾಡಿದೆ. ವಿಂಗರ್ ಕಾರ್ ಅನ್ನು ಐಷಾರಾಮಿ ಎಂಪಿವಿಯಾಗಿ ಮರುವಿನ್ಯಾಸಗೊಳಿಸಲಾಗಿದೆ. ಟಾಟಾ ವಿಂಗರ್‌ನ ಎಕ್ಸ್‌ಟಿರಿಯರ್ ಅನ್ನು ಪೂರ್ತಿಯಾಗಿ ಮರುವಿನ್ಯಾಸಗೊಳಿಸಲಾಗಿದ್ದು, ಹೊಸ ವಿನ್ಯಾಸಕ್ಕೆ ಕಪ್ಪು ಬಣ್ಣವನ್ನು ನೀಡಲಾಗಿದೆ.

ಐಷಾರಾಮಿ ಎಂಪಿವಿಯಾಗಿ ಮಾಡಿಫೈಗೊಂಡ ಟಾಟಾ ವಿಂಗರ್

ಟಾಟಾ ವಿಂಗರ್‌ನ ಬಾಕ್ಸೀ ಶೇಪ್ ಅನ್ನು ಹಾಗೆಯೇ ಉಳಿಸಿಕೊಳ್ಳಲಾಗಿದ್ದು, ಟಾಟಾ ವಿಂಗರ್ ಕಾರಿಗೆ ಎಂಪಿವಿ ಲುಕ್ ನೀಡಲಾಗಿದೆ. ಮಾಡಿಫೈಗೊಳಿಸಲಾದ ಟಾಟಾ ವಿಂಗರ್‌ನ ರೂಫ್ ಅನ್ನು ಎತ್ತರಿಸಲಾಗಿದೆ. ಮುಂಭಾಗದಿಂದ ಹಿಂಭಾಗಕ್ಕೆ ಸ್ಲೋಪ್‌ನಂತೆ ವಿನ್ಯಾಸಗೊಳಿಸಲಾಗಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಐಷಾರಾಮಿ ಎಂಪಿವಿಯಾಗಿ ಮಾಡಿಫೈಗೊಂಡ ಟಾಟಾ ವಿಂಗರ್

ಡ್ರೈವರ್ ಸೀಟ್ ಹಾಗೂ ಫ್ರಂಟ್ ಸೀಟ್‌ಗಳನ್ನು ಹೊರತುಪಡಿಸಿ ಬೇರೆ ಮೂರು ಸೀಟುಗಳನ್ನು ನೀಡಲಾಗಿದೆ. ಇದರಿಂದ ಈ ಐಷಾರಾಮಿ ಎಂಪಿವಿಯಲ್ಲಿ ಒಟ್ಟು 5 ಸೀಟುಗಳಿವೆ. ಕಾರಿನ ಇಂಟಿರಿಯರ್‌ನಲ್ಲೂ ಐಷಾರಾಮಿತನವನ್ನು ನೀಡಲಾಗಿದೆ.

ಐಷಾರಾಮಿ ಎಂಪಿವಿಯಾಗಿ ಮಾಡಿಫೈಗೊಂಡ ಟಾಟಾ ವಿಂಗರ್

ಕಾರಿನಲ್ಲಿ ಎರಡು ಸೈಡ್ ಬೈ ಸೈಡ್ ಸೀಟುಗಳಿವೆ. ಈ ಕಾರಿನಲ್ಲಿರುವ ಸೀಟುಗಳನ್ನು ಪ್ರೀಮಿಯಂ ಗುಣಮಟ್ಟದ ವಸ್ತುಗಳಿಂದ ತಯಾರಿಸಲಾಗಿದೆ. ಜೊತೆಗೆ ಗುಣಮಟ್ಟದ ಫಿನಿಶಿಂಗ್ ನೀಡಲಾಗಿದೆ. ಕಾರಿನಲ್ಲಿ ಆರಾಮದಾಯಕವಾದ ಸೋಫಾವನ್ನು ಸಹ ನೀಡಲಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಐಷಾರಾಮಿ ಎಂಪಿವಿಯಾಗಿ ಮಾಡಿಫೈಗೊಂಡ ಟಾಟಾ ವಿಂಗರ್

ಕಾರಿನೊಳಗೆ ಹಲವು ವೆಂಟ್ ಹಾಗೂ ಅಂಬಿಯಂಟ್ ಲೈಟ್‌ಗಳನ್ನು ನೀಡಲಾಗಿದೆ. ಇವುಗಳು ಕಾರ್ ಅನ್ನು ಪರಿಸರ ಸ್ನೇಹಿಯಾಗಿಸುವುದರ ಜೊತೆಗೆ ತಾಜಾ ಗಾಳಿಯನ್ನು ನೀಡುತ್ತದೆ. ಕಾರಿನ ಎಕ್ಸ್‌ಟಿರಿಯರ್ ಬಗ್ಗೆ ಹೇಳುವುದಾದರೆ, ಅದರ ಸಂಪೂರ್ಣ ವಿನ್ಯಾಸವನ್ನು ಬದಲಿಸಲಾಗಿದೆ.

ಐಷಾರಾಮಿ ಎಂಪಿವಿಯಾಗಿ ಮಾಡಿಫೈಗೊಂಡ ಟಾಟಾ ವಿಂಗರ್

ಕಾರಿನಲ್ಲಿದ್ದ ಮೂಲ ಹೆಡ್‌ಲೈಟ್ ಹಾಗೂ ಟೇಲ್‌ಲೈಟ್‌ಗಳನ್ನು ಸಹ ಬದಲಿಸಲಾಗಿದೆ. ಕಾರಿನಲ್ಲಿ ಎಲ್ಇಡಿ ಹೆಡ್‌ಲೈಟ್ ಹಾಗೂ ಎಲ್ಇಡಿ ಟೇಲ್‌ಲೈಟ್‌ಗಳನ್ನು ಅಳವಡಿಸಲಾಗಿದೆ. ಕಾರಿನ ವಿನ್ಯಾಸಕ್ಕೆ ಹೊರಗಿನಿಂದ ಏರೋಡೈನಾಮಿಕ್ ನೀಡಲಾಗಿದೆ. ಈ ಕಾರ್ ಅನ್ನು ಮಾಡಿಫೈಗೊಳಿಸಲು ಎಷ್ಟು ಖರ್ಚಾಗಿದೆ ಎಂಬುದು ಬಹಿರಂಗಗೊಂಡಿಲ್ಲ.

Most Read Articles

Kannada
English summary
DC Designs modifies Tata Winger into luxury MPV. Read in Kannada.
Story first published: Monday, June 22, 2020, 15:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X