ಬಿಎಸ್ 6 ನಿಯಮ ಜಾರಿ ನಂತರ ಭಾರೀ ಪ್ರಮಾಣದಲ್ಲಿ ಕುಸಿದ ಡೀಸೆಲ್ ಕಾರುಗಳ ಮಾರಾಟ

ಈ ವರ್ಷದ ಏಪ್ರಿಲ್ 1ರಿಂದ ಭಾರತದಲ್ಲಿ ಬಿಎಸ್ 6 ಮಾಲಿನ್ಯ ನಿಯಮಗಳನ್ನು ಜಾರಿಗೆ ತರಲಾಯಿತು. ಬಿಎಸ್ 4 ನಿಯಮಗಳನ್ನು ಅನುಸರಿಸಿ, ಬಿಎಸ್ 6 ನಿಯಮಗಳನ್ನು ನೇರವಾಗಿ ಜಾರಿಗೊಳಿಸಲಾಗಿದ್ದು, ಬಿಎಸ್ 5 ನಿಯಮಗಳನ್ನು ಕೈಬಿಡಲಾಗಿದೆ.

ಬಿಎಸ್ 6 ನಿಯಮ ಜಾರಿ ನಂತರ ಭಾರೀ ಪ್ರಮಾಣದಲ್ಲಿ ಕುಸಿದ ಡೀಸೆಲ್ ಕಾರುಗಳ ಮಾರಾಟ

ಬಿಎಸ್ 6 ನಿಯಮಗಳಿಗೆ ತಕ್ಕಂತೆ ಎಂಜಿನ್ ಗಳನ್ನು ಅಪ್ ಡೇಟ್ ಗೊಳಿಸಬೇಕಾದ ಕಾರಣ, ಈ ನಿಯಮವು ಡೀಸೆಲ್ ಕಾರುಗಳ ಮಾರಾಟದ ಮೇಲೆ ಹೆಚ್ಚು ಪರಿಣಾಮವನ್ನುಂಟು ಮಾಡಿದೆ. ಬಿಎಸ್ 6 ನಿಯಮಗಳಿಗೆ ಅನುಗುಣವಾಗಿ ಡೀಸೆಲ್ ಕಾರುಗಳ ಎಂಜಿನ್ ಹಾಗೂ ಎಕ್ಸಾಸ್ಟ್ ಸಿಸ್ಟಂಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಈ ಕಾರಣಕ್ಕೆ ಬಿಎಸ್ 6 ಕಾರುಗಳ ಬೆಲೆ ಬಿಎಸ್ 4 ಕಾರುಗಳ ಬೆಲೆಗಿಂತ ತುಂಬಾ ದುಬಾರಿಯಾಗಿದೆ. ಇದರ ಜೊತೆಗೆ ಕಳೆದ ಕೆಲವು ತಿಂಗಳುಗಳಿಂದ ಡೀಸೆಲ್ ಬೆಲೆಯು ನಿರಂತರವಾಗಿ ಏರಿಕೆಯನ್ನು ಕಾಣುತ್ತಿದೆ.

ಬಿಎಸ್ 6 ನಿಯಮ ಜಾರಿ ನಂತರ ಭಾರೀ ಪ್ರಮಾಣದಲ್ಲಿ ಕುಸಿದ ಡೀಸೆಲ್ ಕಾರುಗಳ ಮಾರಾಟ

ಅನೇಕ ನಗರಗಳಲ್ಲಿ ಡೀಸೆಲ್ ಬೆಲೆ ಪೆಟ್ರೋಲ್ ಬೆಲೆಗಿಂತ ಹೆಚ್ಚಾಗಿದೆ. ಈ ಕಾರಣಕ್ಕೆ ಡೀಸೆಲ್ ಕಾರುಗಳ ಬೇಡಿಕೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ. ಟಿಎನ್‌ಎನ್‌ ವರದಿಗಳ ಪ್ರಕಾರ 2020ರ ಏಪ್ರಿಲ್ - ಜುಲೈ ನಡುವೆ ಮಾರಾಟವಾದ ಒಟ್ಟು ವಾಹನಗಳಲ್ಲಿ ಡೀಸೆಲ್ ವಾಹನಗಳ ಸಂಖ್ಯೆ ತೀರಾ ಕಡಿಮೆಯಾಗಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಬಿಎಸ್ 6 ನಿಯಮ ಜಾರಿ ನಂತರ ಭಾರೀ ಪ್ರಮಾಣದಲ್ಲಿ ಕುಸಿದ ಡೀಸೆಲ್ ಕಾರುಗಳ ಮಾರಾಟ

ಹೊಸ ಡೀಸೆಲ್ ಹ್ಯಾಚ್‌ಬ್ಯಾಕ್ ಹಾಗೂ ಸೆಡಾನ್‌ ಕಾರುಗಳ ಮಾರಾಟ ಪ್ರಮಾಣವು ಈ ಅವಧಿಯಲ್ಲಿ 1.8%ನಷ್ಟಿದೆ. ಇದೇ ವೇಳೆ ಎಸ್ ಯುವಿ ಸೆಗ್ ಮೆಂಟಿನಲ್ಲಿಯೂ ಸಹ ಡೀಸೆಲ್ ವಾಹನಗಳ ಮಾರಾಟವೂ ಕಳೆದ ನಾಲ್ಕು ತಿಂಗಳಲ್ಲಿ 42%ಗೆ ಇಳಿದಿದೆ. ಈಗ ಹೆಚ್ಚಿನ ಸಂಖ್ಯೆಯ ಜನರು ಡೀಸೆಲ್ ಎಂಜಿನ್ ಎಸ್ ಯುವಿಗಳ ಬದಲು ಪೆಟ್ರೋಲ್ ಎಂಜಿನ್ ಎಸ್‌ಯುವಿಗಳನ್ನು ಖರೀದಿಸುತ್ತಿದ್ದಾರೆ.

ಬಿಎಸ್ 6 ನಿಯಮ ಜಾರಿ ನಂತರ ಭಾರೀ ಪ್ರಮಾಣದಲ್ಲಿ ಕುಸಿದ ಡೀಸೆಲ್ ಕಾರುಗಳ ಮಾರಾಟ

ಕೆಲ ವರ್ಷಗಳ ಹಿಂದೆ, ಹ್ಯಾಚ್‌ಬ್ಯಾಕ್ ಸೆಗ್ ಮೆಂಟಿನಲ್ಲಿ ಡೀಸೆಲ್ ಎಂಜಿನ್ ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದವು. ಈಗ ಕೆಲವೇ ಕಂಪನಿಗಳು ಮಾತ್ರ ಸಣ್ಣ ಡೀಸೆಲ್ ಕಾರುಗಳನ್ನು ಮಾರಾಟ ಮಾಡುತ್ತಿವೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಬಿಎಸ್ 6 ನಿಯಮ ಜಾರಿ ನಂತರ ಭಾರೀ ಪ್ರಮಾಣದಲ್ಲಿ ಕುಸಿದ ಡೀಸೆಲ್ ಕಾರುಗಳ ಮಾರಾಟ

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಡೀಸೆಲ್ ಕಾರುಗಳ ಮಾರಾಟವನ್ನು ನಿಲ್ಲಿಸಿದೆ. ಟಾಟಾ ಮೋಟಾರ್ಸ್ ಸಹ ಟಿಯಾಗೊ ಹಾಗೂ ಟಿಗೋರ್ ನಂತಹ ಸಣ್ಣ ಕಾರುಗಳಲ್ಲಿ ಡೀಸೆಲ್ ಎಂಜಿನ್ ನೀಡುತ್ತಿಲ್ಲ. ಹ್ಯುಂಡೈ ಹಾಗೂ ಹೋಂಡಾ ಕಂಪನಿಗಳು ಡೀಸೆಲ್ ಎಂಜಿನ್ ಕಾರುಗಳನ್ನು ಮಾರಾಟ ಮಾಡುತ್ತಿದ್ದರೂ ಅವುಗಳ ಬೆಲೆ ಸಣ್ಣ ಕಾರುಗಳ ಬೆಲೆಗಿಂತ ಹೆಚ್ಚಾಗಿದೆ.

ಬಿಎಸ್ 6 ನಿಯಮ ಜಾರಿ ನಂತರ ಭಾರೀ ಪ್ರಮಾಣದಲ್ಲಿ ಕುಸಿದ ಡೀಸೆಲ್ ಕಾರುಗಳ ಮಾರಾಟ

ಈ ಮೊದಲು, ಡೀಸೆಲ್ ಬೆಲೆ ಪೆಟ್ರೋಲ್ ಬೆಲೆಗಿಂತ ಕಡಿಮೆ ಇದ್ದ ಕಾರಣ ಡೀಸೆಲ್ ಎಸ್ ಯುವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದವು. ಈಗ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಬಹುತೇಕ ನಗರಗಳಲ್ಲಿ ಸಮನಾಗಿರುವ ಕಾರಣ ಗ್ರಾಹಕರು ಡೀಸೆಲ್ ಎಸ್ ಯುವಿಗಳನ್ನು ಖರೀದಿಸುತ್ತಿಲ್ಲ. ದೆಹಲಿಯಲ್ಲಿ ಡೀಸೆಲ್ ವಾಹನಗಳ ಅವಧಿಯನ್ನು 10 ವರ್ಷಗಳಿಗೆ ನಿಗದಿಪಡಿಸಲಾಗಿದ್ದರೆ, ಪೆಟ್ರೋಲ್ ವಾಹನಗಳ ಅವಧಿಯನ್ನು 15 ವರ್ಷಗಳಿಗೆ ನಿಗದಿಪಡಿಸಲಾಗಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಬಿಎಸ್ 6 ನಿಯಮ ಜಾರಿ ನಂತರ ಭಾರೀ ಪ್ರಮಾಣದಲ್ಲಿ ಕುಸಿದ ಡೀಸೆಲ್ ಕಾರುಗಳ ಮಾರಾಟ

ಬಿಎಸ್ 6 ನಿಯಮಗಳು ಜಾರಿಗೆ ಬರುವ ಮೊದಲು ಡೀಸೆಲ್ ವಾಹನಗಳು ಮಾರುಕಟ್ಟೆಯಲ್ಲಿ 35%ನಷ್ಟು ಪಾಲನ್ನು ಹೊಂದಿದ್ದವು. ಮುಂಬರುವ ದಿನಗಳಲ್ಲಿ ಈ ಪ್ರಮಾಣವು ಮತ್ತಷ್ಟು ಕಡಿಮೆಯಾಗುವ ಸಾಧ್ಯತೆಯಿದೆ. ಕಾರು ಕಂಪನಿಗಳು ಸಿಎನ್‌ಜಿ, ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ಕಾರುಗಳನ್ನು ಪರ್ಯಾಯವಾಗಿ ಬಿಡುಗಡೆಗೊಳಿಸುತ್ತಿವೆ.

Most Read Articles

Kannada
English summary
Diesel car sales dropped significantly after implementation of BS 6 norms. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X