ದುಬೈ ರಾಯಲ್ ಫ್ಯಾಮಿಲಿಯ ಸೂಪರ್‍‍ಕಾರುಗಳ ರ‍್ಯಾಲಿ

ಭಾರತದ ರಸ್ತೆಗಳಲ್ಲಿ ಸೂಪರ್‍‍ಕಾರುಗಳನ್ನು ಕಾಣುವುದು ಅಪರೂಪದ ದೃಶ್ಯವಾಗಿದೆ. ಆದರೆ ದುಬೈನಂತಹ ಶ್ರೀಮಂತ ರಾಷ್ಟ್ರದ ನಗರಗಳಲ್ಲಿ ಸೂಪರ್ ಕಾರುಗಳು ಸಾಮಾನ್ಯವಾಗಿವೆ. ದುಬೈನಲ್ಲಿ ನಡೆದ ಸೂಪರ್‍‍ಕಾರುಗಳ ರ‍್ಯಾಲಿಯ ಬಗ್ಗೆ ಮಾಹಿತಿ ಇಲ್ಲಿದೆ.

ದುಬೈ ರಾಯಲ್ ಫ್ಯಾಮಿಲಿಯ ಸೂಪರ್‍‍ಕಾರುಗಳ ರ‍್ಯಾಲಿ

ವಿಶ್ವದಲ್ಲೇ ಅತಿ ಹೆಚ್ಚು ಸೂಪರ್ ಕಾರುಗಳನ್ನು ಹೊಂದಿರುವ ನಗರಗಳಲ್ಲಿ ದುಬೈ ಕೂಡ ಒಂದಾಗಿದೆ. ದುಬೈನ ರಾಜಮನೆತನದವರೆಗೆ ಸೂಪರ್ ಕಾರುಗಳ ಕ್ರೇಜ್ ಹೆಚ್ಚಿದೆ. ಆಗರ್ಭ ಶ್ರೀಮಂತರಾದ ಇವರು ಒಬ್ಬೊಬ್ಬರೂ ಹಲವು ಸೂಪರ್‍‍ಕಾರುಗಳನ್ನು ಹೊಂದಿರುತ್ತಾರೆ. ಇವರ ಕಾರುಗಳ ಕ್ರೇಜ್ ಎಷ್ಟು ಇದೆ ಅಂದರೆ ರಾಜಮನೆತನದವರು ತಮ್ಮ ಕಾರುಗಳಿಗೆ ಚಿನ್ನದ ಲೇಪನವನ್ನು ಮಾಡಿಸುತ್ತಾರೆ. ವಿಶ್ವದ ಅತಿ ದುಬಾರಿ ಸೂಪರ್ ಕಾರುಗಳೆಲ್ಲವನ್ನು ನೀವು ದುಬೈಗೆ ತೆರಳಿದರೆ ಒಟ್ಟಿಗೆ ನೋಡಬಹುದಾಗಿದೆ.

ದುಬೈ ರಾಯಲ್ ಫ್ಯಾಮಿಲಿಯ ಸೂಪರ್‍‍ಕಾರುಗಳ ರ‍್ಯಾಲಿ

ದುಬೈನಲ್ಲಿ ಸೂಪರ್‍‍ಕಾರುಗಳ ಗುಂಪು ವರ್ಷ ವರ್ಷವೂ ರ‍್ಯಾಲಿಗಳನ್ನು ನಡೆಸುತ್ತಲೇ ಇರುತ್ತಾರೆ. ಇದರ ಭಾಗವಾಗಿ 2020ರ ವರ್ಷದ ಮೊದಲ ಸೂಪರ್ ಕಾರು ರ‍್ಯಾಲಿ ಒಂದನ್ನು ಆಯೋಜಿಸಿದ್ದಾರೆ.

ದುಬೈ ರಾಯಲ್ ಫ್ಯಾಮಿಲಿಯ ಸೂಪರ್‍‍ಕಾರುಗಳ ರ‍್ಯಾಲಿ

ಈ ರ‍್ಯಾಲಿಯ ವೀಡಿಯೋವನ್ನು ಮೊ ವ್ಲಾಗ್ಸ್ ತಮ್ಮ ಯುಟ್ಯೂಬ್ ಚಾನೆಲ್‍ನಲ್ಲಿ ಅಪ್‍‍ಲೋಡ್ ಮಾಡಿದೆ. ಈ ವೀಡಿಯೋದಲ್ಲಿ ರೋಲ್ಸ್ ರಾಯ್ಸ್ ನಂತಹ ಅಲ್ಟ್ರಾ ಐಷಾರಾಮಿ ಕಾರುಗಳನ್ನು ಕಾಣಬಹುದು.

ದುಬೈ ರಾಯಲ್ ಫ್ಯಾಮಿಲಿಯ ಸೂಪರ್‍‍ಕಾರುಗಳ ರ‍್ಯಾಲಿ

ಈ ರ‍್ಯಾಲಿಯಲ್ಲಿ ಲ್ಯಾಂಬೊರ್ಗಿನಿ ಅವೆಂಟಡೊರ್ ಸ್ಪೋರ್ಟ್ಸ್ ಕಾರುಗಳು ಪಾಲ್ಗೊಂಡಿದ್ದವು. ಈ ಸ್ಪೋರ್ಟ್ಸ್ ಕಾರ್ ಅನ್ನು ವ್ಲಾಗ್ಗರ್ ಬ್ಲ್ಯಾಕ್ ಬಣ್ಣದೊಂದಿಗೆ ಕಸ್ಟಮೈಸ್ ಮಾಡಲಾಗಿದೆ. ಈ ಸೂಪರ್‍‍ಕಾರುಗಳ ವೀಡಿಯೋದಲ್ಲಿ ಭರ್ಜರಿ ಎಕ್ಸಾಸ್ಟ್ ಸೌಂಡ್‍ ಅನ್ನು ಕೇಳಬಹುದು.

ದುಬೈ ರಾಯಲ್ ಫ್ಯಾಮಿಲಿಯ ಸೂಪರ್‍‍ಕಾರುಗಳ ರ‍್ಯಾಲಿ

ಈ ರ‍್ಯಾಲಿಯಲ್ಲಿ ಲ್ಯಾಂಬೊರ್ಗಿನಿ ಅವೆಂಟಡಾರ್ ಮತ್ತು ಗಲ್ಲಾರ್ಡೊಸ್, ಪೋರ್ಷೆ 911, ಮೆಕ್ಲಾರೆನ್ 720, ಮೆಕ್ಲಾರೆನ್ 570 ಎಸ್, ಫೆರಾರಿ, ಲ್ಯಾಂಬೊರ್ಗಿನಿ ಉರುಸ್, ಮರ್ಸಿಡಿಸ್-ಎಎಂಟಿ ಜಿಟಿ ಮತ್ತು ಮುಂತಾದ ಕಾರುಗಳು ಭಾಗಿಯಾಗಿದ್ದವು.

ದುಬೈ ರಾಯಲ್ ಫ್ಯಾಮಿಲಿಯ ಸೂಪರ್‍‍ಕಾರುಗಳ ರ‍್ಯಾಲಿ

ಈ ರ‍್ಯಾಲಿಯಲ್ಲಿ ದುಬೈ ಪೊಲೀಸ್ ಇಲಾಖೆಯ ಎರಡು ಸೂಪರ್‍‍ಕಾರುಗಳು ಬೆಂಗಾವಲು ಆಗಿ ಪ್ರಯಾಣಿಸಿದವು. ದುಬೈ ಪೊಲೀಸರು ಬುಗಾಟಿ ವೇರೊನ್‍‍ರಂತಹ ಸೂಪರ್‍ ಕಾರುಗಳನ್ನು ಹೊಂದಿದ್ದಾರೆ.

ದುಬೈ ರಾಯಲ್ ಫ್ಯಾಮಿಲಿಯ ಸೂಪರ್‍‍ಕಾರುಗಳ ರ‍್ಯಾಲಿ

ವಿಶ್ವದ ಅತ್ಯಂತ ಎತ್ತರ ಕಟ್ಟಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದುಬೈ ನಗರ ವಿಶ್ವದಲ್ಲೇ ವೇಗದ ಕಾರನ್ನು ಹೊಂದುವ ಮೂಲಕ ದುಬೈ ಪೊಲೀಸರು ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ಸೇರ್ಪಡೆಯಾಗಿದ್ದಾರೆ. ದುಬೈ ಪೊಲೀಸರ ಬಳಿ ಈಗ ದುಬಾರಿ ಲಕ್ಷುರಿ ಬುಗಾಟಿ ವೇಯ್ರಾನ್ ಕಾರುಗಳಿವೆ.

ದುಬೈ ರಾಯಲ್ ಫ್ಯಾಮಿಲಿಯ ಸೂಪರ್‍‍ಕಾರುಗಳ ರ‍್ಯಾಲಿ

ರ‍್ಯಾಲಿಯಲ್ಲಿ ಮರ್ಸಿಡಿಸ್ ಎಂಎಂಜಿ ಜಿಟಿ ಮತ್ತು ಮಾಸೆರೋಟಿ ಗ್ರ್ಯಾನ್‍‍ಟ್ಯುರಿಸ್ಮೊ ಸೂಪರ್‍‍ಕಾರುಗಳು ಭಾಗವಹಿಸಿದ್ದವು. ಈ ರ‍್ಯಾಲಿಗೆ ಪೊಲೀಸ್ ಸೂಪರ್‍‍‍ಕಾರುಗಳು ಕೂಡ ಬೆಂಗಾವಲು ಒದಗಿಸಿದ್ದವು. ಪೊಲೀಸರು ಸ್ಕೈಡ್ರೈವ್ ದುಬೈನಲ್ಲಿ ಜಾಗವನ್ನು ತೆರವುಗೊಳಿಸುತ್ತಾರೆ. ಅಲ್ಲಿಗೆ ಎಲ್ಲಾ ಸೂಪರ್‍‍ಕಾರುಗಳು ಆ ಜಾಗಕ್ಕೆ ಪ್ರವೇಶಿಸುತ್ತವೆ.

ಈ ಜಾಗದಲ್ಲಿ ತಮ್ಮ ಕಾರುಗಳೊಂದಿಗೆ ಮಾಲೀಕರು ಪೋಟೋ ಕ್ಲಿಕ್ಕಿಸಿದ್ದರು. ಸ್ವಲ್ಪ ಸಮಯದ ನಂತರ ದುಬೈ ರಾಜಮನೆತನದ ಸದಸ್ಯರೊಬ್ಬರು ತಮ್ಮ ಸೂಪರ್‍‍ಕಾರನ್ನು ಪ್ರದರ್ಶಿಸುತ್ತಾರೆ. ಅವರ ಕಾರು ಮೆಕ್ಲಾರೆನ್ ಸೆನ್ನಾ ಆಗಿದೆ. ಈ ಕಾರು ಆಕರ್ಷಕ ಲುಕ್ ಅನ್ನು ಹೊಂದಿದೆ. ಮೆಕ್ಲಾರೆನ್ ಸೆನ್ನಾ ಕಾರಿನಲ್ಲಿ 4.0 ಲೀಟರ್ ವಿ8 ಎಂಜಿನ್ ಅನ್ನು ಅಳವಡಿಸಲಾಗಿದೆ.

ದುಬೈ ರಾಯಲ್ ಫ್ಯಾಮಿಲಿಯ ಸೂಪರ್‍‍ಕಾರುಗಳ ರ‍್ಯಾಲಿ

ಈ ಎಂಜಿನ್ 800 ಬಿ‍‍ಹೆಚ್‍‍ಪಿ ಪವರ್ ಮತ್ತು 800 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರು ಗಂಟೆಗೆ 407 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 335 ಕಿಮೀ ಆಗಿದೆ. ಕೇವಲ 2.8 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಕ್ರಮಿಸುತ್ತದೆ.

ದುಬೈ ರಾಯಲ್ ಫ್ಯಾಮಿಲಿಯ ಸೂಪರ್‍‍ಕಾರುಗಳ ರ‍್ಯಾಲಿ

ಈ ಕಾರಿನ ಬೆಲೆಯು 1 ಮಿಲಿಯನ್ ಡಾಲರ್ ಆಗಿದೆ. ಮೆಕ್ಲಾರೆನ್ ಇನ್ನೂ ಕೂಡ ಭಾರತದಲ್ಲಿ ಬಿಡುಗಡೆಯಾಗಿಲ್ಲ. ಈ ಬ್ರಿಟಿಷ್ ಸೂಪರ್‍‍ಕಾರು ಭವಿಷ್ಯದಲ್ಲಿ ಭಾರತದಲ್ಲಿ ಬಿಡುಗಡೆಯಾಗಬಹುದು. ಮಾರ್ಕ್ ಸೂಪರ್ ಕಾರುಗಳು ಭಾರತದಲ್ಲಿ ಬಿಡುಗಡೆಯಾದರೆ ಫೆರಾರಿ ಮತ್ತು ಲ್ಯಾಂಬೂರ್ಗಿನಿ ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Dubai’s royal family supercars on video: Check it out. Read in Kanada.
Story first published: Thursday, January 30, 2020, 12:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X