ಎಲೆಕ್ಟ್ರಿಕ್ ಕಾರು ಖರೀದಿಗೆ ಟೆಂಡರ್ ಕರೆದ ಇಇಎಸ್ಎಲ್

ಕೇಂದ್ರ ಸರ್ಕಾರದ ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್ (ಇಇಎಸ್ಎಲ್) 250 ಎಲೆಕ್ಟ್ರಿಕ್ ಕಾರುಗಳ ಖರೀದಿಗೆ ಟೆಂಡರ್ ಕರೆದಿದೆ. ಇದರಡಿಯಲ್ಲಿ ಸರ್ಕಾರವು 4 ಮೀಟರ್‌ಗಿಂತ ಕಡಿಮೆ ಉದ್ದದ 150 ಎಲೆಕ್ಟ್ರಿಕ್ ಕಾರುಗಳನ್ನು ಹಾಗೂ 4 ಮೀಟರ್‌ಗಿಂತ ಹೆಚ್ಚು ಉದ್ದದ 100 ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಲಿದೆ.

ಎಲೆಕ್ಟ್ರಿಕ್ ಕಾರು ಖರೀದಿಗೆ ಟೆಂಡರ್ ಕರೆದ ಇಇಎಸ್ಎಲ್

ಈ ಟೆಂಡರ್‌ನಲ್ಲಿ ಖರೀದಿಸಬೇಕಾದ ಕಾರುಗಳಲ್ಲಿರ ಬೇಕಾದ ಸರ್ವೀಸ್ ಹಾಗೂ ಮೆಂಟೆನೆನ್ಸ್ ಗೆ ಸಂಬಂಧಿಸಿದ ಕೆಲವು ಅಗತ್ಯ ಷರತ್ತುಗಳನ್ನು ಇಇಎಸ್‌ಎಲ್ ಪರಿಚಯಿಸಿದೆ. ಎಲ್ಲಾ ಕಾರುಗಳ ಮೇಲೆ 3 ವರ್ಷಗಳ ಗುಣಮಟ್ಟದ ವಾರಂಟಿಯ ಜೊತೆಗೆ 8 ವರ್ಷಗಳ ಮೆಂಟೆನೆನ್ಸ್ ಕಡ್ಡಾಯವಾಗಲಿದೆ ಎಂದು ಇಇಎಸ್ಎಲ್ ಹೇಳಿದೆ. ಜೊತೆಗೆ ಕಾರಿನ ಸರ್ವೀಸ್ ಹಾಗೂ ಮೆಂಟೆನೆನ್ಸ್ ಗೆ ಸಂಬಂಧಿಸಿದ ಸೇವೆಗಳನ್ನು ಭಾರತದಲ್ಲಿ ಎಲ್ಲಿಯಾದರೂ ಪಡೆಯುವಂತೆ ಷರತ್ತು ವಿಧಿಸಲಾಗುವುದು.

ಎಲೆಕ್ಟ್ರಿಕ್ ಕಾರು ಖರೀದಿಗೆ ಟೆಂಡರ್ ಕರೆದ ಇಇಎಸ್ಎಲ್

ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಹಾಗೂ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ, ಟಾಟಾ, ಹ್ಯುಂಡೈ ಹಾಗೂ ಎಂಜಿ ಕಂಪನಿಗಳು ಟೆಂಡರ್‌ನಲ್ಲಿ ಭಾಗಿಯಾಗಲಿವೆ. ಟಾಟಾ, ಮಹೀಂದ್ರಾ ಹಾಗೂ ಎಂಜಿ ಕಂಪನಿಗಳು ಈ ಹಿಂದೆ ವಿವಿಧ ಸರ್ಕಾರಗಳಿಗೆ ಎಲೆಕ್ಟ್ರಿಕ್ ಕಾರುಗಳನ್ನು ವಿತರಿಸಿವೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಎಲೆಕ್ಟ್ರಿಕ್ ಕಾರು ಖರೀದಿಗೆ ಟೆಂಡರ್ ಕರೆದ ಇಇಎಸ್ಎಲ್

ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಹಾಗೂ ಟಿಗೊರ್ ನಂತಹ ಎಲೆಕ್ಟ್ರಿಕ್ ಕಾರುಗಳನ್ನು ಕೈಗೆಟಕುವ ದರದಲ್ಲಿ ಮಾರಾಟ ಮಾಡುತ್ತಿದೆ. ಮಹೀಂದ್ರಾ ಕಂಪನಿಯು ಎಲೆಕ್ಟ್ರಿಕ್ ಸೆಡಾನ್ ಸೆಗ್ ಮೆಂಟಿನಲ್ಲಿ ಇ-ವೆರಿಟೊ ಕಾರ್ ಅನ್ನು ಮಾರಾಟ ಮಾಡುತ್ತಿದೆ.

ಎಲೆಕ್ಟ್ರಿಕ್ ಕಾರು ಖರೀದಿಗೆ ಟೆಂಡರ್ ಕರೆದ ಇಇಎಸ್ಎಲ್

ಹ್ಯುಂಡೈ ಕಂಪನಿಯು ಕೋನಾ ಹಾಗೂ ಎಂಜಿ ಝಡ್ಎಸ್ ಇವಿ ಕಾರುಗಳನ್ನು ಮಾರಾಟ ಮಾಡುತ್ತಿದೆ. ಕೇಂದ್ರ ಕೈಗಾರಿಕಾ ಇಲಾಖೆಯು ದೇಶದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳಿಗಾಗಿ ಫೇಮ್ -2 ಯೋಜನೆಯನ್ನು ವಿಸ್ತರಿಸಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಎಲೆಕ್ಟ್ರಿಕ್ ಕಾರು ಖರೀದಿಗೆ ಟೆಂಡರ್ ಕರೆದ ಇಇಎಸ್ಎಲ್

ಫೇಮ್ -2 ಯೋಜನೆಯ ಅವಧಿಯು ಈ ಮೊದಲು ಜೂನ್ 30ಕ್ಕೆ ಕೊನೆಗೊಳ್ಳುತ್ತಿತ್ತು. ಈಗ ಅದನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ.ಕೇಂದ್ರ ಸರ್ಕಾರದ ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್ (ಇಇಎಸ್ಎಲ್) ಈ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ಎಲೆಕ್ಟ್ರಿಕ್ ಕಾರು ಖರೀದಿಗೆ ಟೆಂಡರ್ ಕರೆದ ಇಇಎಸ್ಎಲ್

ಈ ಯೋಜನೆಯಡಿ ದೇಶದ ಹಲವು ರಾಜ್ಯಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ಚಾರ್ಜಿಂಗ್ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ. ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳನ್ನು ಫೇಮ್ -2 ಯೋಜನೆಯಲ್ಲಿ ಸೇರಿಸಲಾಗಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಎಲೆಕ್ಟ್ರಿಕ್ ಕಾರು ಖರೀದಿಗೆ ಟೆಂಡರ್ ಕರೆದ ಇಇಎಸ್ಎಲ್

ಈ ಯೋಜನೆಯಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವ ಕಂಪನಿಗಳಿಗೆ ತಿದ್ದುಪಡಿ ಸುಂಕ, ಉತ್ಪಾದನಾ ಸುಂಕ ಹಾಗೂ ತೆರಿಗೆ ವಿನಾಯಿತಿ ಮುಂತಾದ ಹಲವು ಅನುಕೂಲಗಳನ್ನು ಕಲ್ಪಿಸಲಾಗಿದೆ.

ಎಲೆಕ್ಟ್ರಿಕ್ ಕಾರು ಖರೀದಿಗೆ ಟೆಂಡರ್ ಕರೆದ ಇಇಎಸ್ಎಲ್

ಇದರಿಂದ ಎಲೆಕ್ಟ್ರಿಕ್ ವಾಹನಗಳ ಬೆಲೆ ಕಡಿಮೆಯಾಗುವ ಸಾಧ್ಯತೆಗಳಿವೆ. ಈ ಯೋಜನೆಯಡಿಯಲ್ಲಿ ರಿಜಿಸ್ಟರ್ ಆಗಿರುವ ಎಲ್ಲಾ ವಾಹನ ತಯಾರಕ ಕಂಪನಿಗಳು ಸೆಪ್ಟೆಂಬರ್ 30ರೊಳಗೆ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗಲಿದೆ.

Most Read Articles

Kannada
English summary
EESL calls tender to purchase 250 electric cars. Read in Kannada.
Story first published: Friday, August 7, 2020, 10:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X