Just In
- 9 hrs ago
ಡಕಾರ್ ರ್ಯಾಲಿ 2021: 43ನೇ ಆವೃತ್ತಿಯನ್ನು ಗೆದ್ದ ಹೋಂಡಾ ರೈಡರ್ ಕೆವಿನ್ ಬೆನೆವಿಡೆಸ್
- 11 hrs ago
ಸಿವಿ ವಾಹನ ಮಾದರಿಗಳಿಗಾಗಿ ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಬ್ರಿಡ್ಜ್ಸ್ಟೋನ್
- 11 hrs ago
ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್ಯುವಿ
- 12 hrs ago
ಎರಡನೇ ಬಾರಿ ರೋಲ್ಸ್ ರಾಯ್ಸ್ ಕುಲಿನನ್ ಕಾರು ಖರೀದಿಸಿದ ಮುಖೇಶ್ ಅಂಬಾನಿ
Don't Miss!
- Movies
ಪ್ರತಿಷ್ಟಿತ ಗೋವಾ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಕನ್ನಡದ ಸ್ಟಾರ್ ನಟ
- News
ರೈತರ ಪ್ರತಿಭಟನೆ: ಜನವರಿ 19ಕ್ಕೆ ಕೇಂದ್ರ ಮತ್ತು ರೈತ ಸಂಘಟನೆಗಳ ನಡುವೆ ಮತ್ತೊಂದು ಸುತ್ತಿನ ಸಭೆ
- Lifestyle
ಶನಿವಾರದ ಭವಿಷ್ಯ: ಮಕರ ರಾಶಿಯವರೇ ಆರ್ಥಿಕ ದೃಷ್ಟಿಯಿಂದ ಒಳ್ಳೆಯದು
- Sports
ಭಾರತ vs ಆಸ್ಟ್ರೇಲಿಯಾ, 4ನೇ ಟೆಸ್ಟ್ ಪಂದ್ಯ, 2ನೇ ದಿನ, Live ಸ್ಕೋರ್
- Education
ECIL Recruitment 2021: ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಎಲೆಕ್ಟ್ರಿಕ್ ಕಾರು ಖರೀದಿಗೆ ಟೆಂಡರ್ ಕರೆದ ಇಇಎಸ್ಎಲ್
ಕೇಂದ್ರ ಸರ್ಕಾರದ ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್ (ಇಇಎಸ್ಎಲ್) 250 ಎಲೆಕ್ಟ್ರಿಕ್ ಕಾರುಗಳ ಖರೀದಿಗೆ ಟೆಂಡರ್ ಕರೆದಿದೆ. ಇದರಡಿಯಲ್ಲಿ ಸರ್ಕಾರವು 4 ಮೀಟರ್ಗಿಂತ ಕಡಿಮೆ ಉದ್ದದ 150 ಎಲೆಕ್ಟ್ರಿಕ್ ಕಾರುಗಳನ್ನು ಹಾಗೂ 4 ಮೀಟರ್ಗಿಂತ ಹೆಚ್ಚು ಉದ್ದದ 100 ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಲಿದೆ.

ಈ ಟೆಂಡರ್ನಲ್ಲಿ ಖರೀದಿಸಬೇಕಾದ ಕಾರುಗಳಲ್ಲಿರ ಬೇಕಾದ ಸರ್ವೀಸ್ ಹಾಗೂ ಮೆಂಟೆನೆನ್ಸ್ ಗೆ ಸಂಬಂಧಿಸಿದ ಕೆಲವು ಅಗತ್ಯ ಷರತ್ತುಗಳನ್ನು ಇಇಎಸ್ಎಲ್ ಪರಿಚಯಿಸಿದೆ. ಎಲ್ಲಾ ಕಾರುಗಳ ಮೇಲೆ 3 ವರ್ಷಗಳ ಗುಣಮಟ್ಟದ ವಾರಂಟಿಯ ಜೊತೆಗೆ 8 ವರ್ಷಗಳ ಮೆಂಟೆನೆನ್ಸ್ ಕಡ್ಡಾಯವಾಗಲಿದೆ ಎಂದು ಇಇಎಸ್ಎಲ್ ಹೇಳಿದೆ. ಜೊತೆಗೆ ಕಾರಿನ ಸರ್ವೀಸ್ ಹಾಗೂ ಮೆಂಟೆನೆನ್ಸ್ ಗೆ ಸಂಬಂಧಿಸಿದ ಸೇವೆಗಳನ್ನು ಭಾರತದಲ್ಲಿ ಎಲ್ಲಿಯಾದರೂ ಪಡೆಯುವಂತೆ ಷರತ್ತು ವಿಧಿಸಲಾಗುವುದು.

ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಹಾಗೂ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ, ಟಾಟಾ, ಹ್ಯುಂಡೈ ಹಾಗೂ ಎಂಜಿ ಕಂಪನಿಗಳು ಟೆಂಡರ್ನಲ್ಲಿ ಭಾಗಿಯಾಗಲಿವೆ. ಟಾಟಾ, ಮಹೀಂದ್ರಾ ಹಾಗೂ ಎಂಜಿ ಕಂಪನಿಗಳು ಈ ಹಿಂದೆ ವಿವಿಧ ಸರ್ಕಾರಗಳಿಗೆ ಎಲೆಕ್ಟ್ರಿಕ್ ಕಾರುಗಳನ್ನು ವಿತರಿಸಿವೆ.
MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಹಾಗೂ ಟಿಗೊರ್ ನಂತಹ ಎಲೆಕ್ಟ್ರಿಕ್ ಕಾರುಗಳನ್ನು ಕೈಗೆಟಕುವ ದರದಲ್ಲಿ ಮಾರಾಟ ಮಾಡುತ್ತಿದೆ. ಮಹೀಂದ್ರಾ ಕಂಪನಿಯು ಎಲೆಕ್ಟ್ರಿಕ್ ಸೆಡಾನ್ ಸೆಗ್ ಮೆಂಟಿನಲ್ಲಿ ಇ-ವೆರಿಟೊ ಕಾರ್ ಅನ್ನು ಮಾರಾಟ ಮಾಡುತ್ತಿದೆ.

ಹ್ಯುಂಡೈ ಕಂಪನಿಯು ಕೋನಾ ಹಾಗೂ ಎಂಜಿ ಝಡ್ಎಸ್ ಇವಿ ಕಾರುಗಳನ್ನು ಮಾರಾಟ ಮಾಡುತ್ತಿದೆ. ಕೇಂದ್ರ ಕೈಗಾರಿಕಾ ಇಲಾಖೆಯು ದೇಶದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳಿಗಾಗಿ ಫೇಮ್ -2 ಯೋಜನೆಯನ್ನು ವಿಸ್ತರಿಸಿದೆ.
MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಫೇಮ್ -2 ಯೋಜನೆಯ ಅವಧಿಯು ಈ ಮೊದಲು ಜೂನ್ 30ಕ್ಕೆ ಕೊನೆಗೊಳ್ಳುತ್ತಿತ್ತು. ಈಗ ಅದನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ.ಕೇಂದ್ರ ಸರ್ಕಾರದ ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್ (ಇಇಎಸ್ಎಲ್) ಈ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ಈ ಯೋಜನೆಯಡಿ ದೇಶದ ಹಲವು ರಾಜ್ಯಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ಚಾರ್ಜಿಂಗ್ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ. ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳನ್ನು ಫೇಮ್ -2 ಯೋಜನೆಯಲ್ಲಿ ಸೇರಿಸಲಾಗಿದೆ.
MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಈ ಯೋಜನೆಯಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವ ಕಂಪನಿಗಳಿಗೆ ತಿದ್ದುಪಡಿ ಸುಂಕ, ಉತ್ಪಾದನಾ ಸುಂಕ ಹಾಗೂ ತೆರಿಗೆ ವಿನಾಯಿತಿ ಮುಂತಾದ ಹಲವು ಅನುಕೂಲಗಳನ್ನು ಕಲ್ಪಿಸಲಾಗಿದೆ.

ಇದರಿಂದ ಎಲೆಕ್ಟ್ರಿಕ್ ವಾಹನಗಳ ಬೆಲೆ ಕಡಿಮೆಯಾಗುವ ಸಾಧ್ಯತೆಗಳಿವೆ. ಈ ಯೋಜನೆಯಡಿಯಲ್ಲಿ ರಿಜಿಸ್ಟರ್ ಆಗಿರುವ ಎಲ್ಲಾ ವಾಹನ ತಯಾರಕ ಕಂಪನಿಗಳು ಸೆಪ್ಟೆಂಬರ್ 30ರೊಳಗೆ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗಲಿದೆ.