ಕರೋನಾ ವೈರಸ್ ವಿರುದ್ಧ ಹೋರಾಡಲು ರೂ.50 ಕೋಟಿ ದೇಣಿಗೆ ನೀಡಿದ ಐಷರ್

ಕರೋನಾ ವೈರಸ್ ಹರಡುವುದನ್ನು ತಡೆಯಲು ಬಹುತೇಕ ಆಟೋಮೊಬೈಲ್ ಕಂಪನಿಗಳು ಸರ್ಕಾರದ ಜೊತೆ ಕೈಜೋಡಿಸಿವೆ. ಮಾರುತಿ ಹಾಗೂ ಮಹೀಂದ್ರಾ ಕಂಪನಿಗಳು ಮಾಸ್ಕ್ ಹಾಗೂ ವೆಂಟಿಲೇಟರ್ ಉತ್ಪಾದನೆಯಲ್ಲಿ ತೊಡಗಿವೆ.

ಕರೋನಾ ವೈರಸ್ ವಿರುದ್ಧ ಹೋರಾಡಲು ರೂ.50 ಕೋಟಿ ದೇಣಿಗೆ ನೀಡಿದ ಐಷರ್

ಉಳಿದ ವಾಹನ ಕಂಪನಿಗಳು ಕರೋನಾ ವೈರಸ್ ಹರಡದಂತೆ ತಡೆಗಟ್ಟಲು ಹಣಕಾಸಿನ ನೆರವು ಹಾಗೂ ಇತರ ಸಹಾಯವನ್ನು ನೀಡುತ್ತಿವೆ. ಈಗ ಜನಪ್ರಿಯ ವಾಹನ ತಯಾರಕ ಕಂಪನಿಯಾದ ಐಷರ್ ಗ್ರೂಪ್ ಕರೋನಾ ವಿರುದ್ಧ ಹೋರಾಡಲು ರೂ.50 ಕೋಟಿ ನೀಡಿದೆ.

ಕರೋನಾ ವೈರಸ್ ವಿರುದ್ಧ ಹೋರಾಡಲು ರೂ.50 ಕೋಟಿ ದೇಣಿಗೆ ನೀಡಿದ ಐಷರ್

ಈ ಹಣವನ್ನು ವೈದ್ಯಕೀಯ ಉಪಕರಣಗಳು ಹಾಗೂ ಚಿಕಿತ್ಸಾ ಕೇಂದ್ರಗಳಿಗಾಗಿ ಬಳಸಲಾಗುವುದು. ಸಂಕಷ್ಟದ ಈ ಸಮಯದಲ್ಲಿ ಈ ಹಣಕಾಸಿನ ನೆರವಿನಿಂದ ಹೆಚ್ಚು ಅನುಕೂಲವಾಗಲಿದೆ.

ಕರೋನಾ ವೈರಸ್ ವಿರುದ್ಧ ಹೋರಾಡಲು ರೂ.50 ಕೋಟಿ ದೇಣಿಗೆ ನೀಡಿದ ಐಷರ್

ಮುಂಬರುವ ದಿನಗಳಲ್ಲಿ ಕರೋನಾ ವಿರುದ್ಧ ಹೋರಾಡಲು ಇನ್ನೂ ಹೆಚ್ಚಿನ ಹಣಕಾಸಿನ ನೆರವನ್ನು ಒದಗಿಸುವುದಾಗಿ ಐಷರ್ ಗ್ರೂಪ್ ಹೇಳಿದೆ. ಕರೋನಾದಿಂದ ಉಂಟಾಗುವ ಪರಿಣಾಮಗಳಿಂದ ಚೇತರಿಸಿಕೊಳ್ಳಲು ದೀರ್ಘಾವಧಿಯ ಪುನರ್ ರಚನೆ ಯೋಜನೆಗಳಿಗೆ ಸಹಕರಿಸುವುದಾಗಿ ಐಷರ್ ಹೇಳಿದೆ.

ಕರೋನಾ ವೈರಸ್ ವಿರುದ್ಧ ಹೋರಾಡಲು ರೂ.50 ಕೋಟಿ ದೇಣಿಗೆ ನೀಡಿದ ಐಷರ್

ಬಡ ಜನರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಆಹಾರ ಹಾಗೂ ದಿನಸಿ ಸಾಮಗ್ರಿಗಳನ್ನು ಒದಗಿಸುವುದರ ಬಗ್ಗೆ ಹೆಚ್ಚು ಗಮನ ಹರಿಸುವುದಾಗಿ ಐಷರ್ ಗ್ರೂಪ್ ಹೇಳಿದೆ. ಈ ಹಣವನ್ನು ಸೋಂಕುನಿವಾರಕ ಹಾಗೂ ಸ್ವಚ್ವಗೊಳಿಸುವ ಕಾರ್ಯಾಚರಣೆಗಳಿಗೆ ಸಹ ಬಳಸಲಾಗುವುದು.

ಕರೋನಾ ವೈರಸ್ ವಿರುದ್ಧ ಹೋರಾಡಲು ರೂ.50 ಕೋಟಿ ದೇಣಿಗೆ ನೀಡಿದ ಐಷರ್

ಕರೋನಾದಿಂದ ಪೀಡಿತವಾಗಿರುವ ಪ್ರದೇಶಗಳ ಜನರಿಗೆ ವೈದ್ಯಕೀಯ ಆರೈಕೆಯನ್ನು ನೀಡಲು ಐಷರ್ ಕಂಪನಿಯು ಮುಂದಾಗಿದೆ. ಚೆನ್ನೈನಲ್ಲಿರುವ ಆಸ್ಪತ್ರೆಗಳಿಗೆ ಅಗತ್ಯವಾಗಿರುವ ಉಪಕರಣಗಳನ್ನು ಖರೀದಿಸಲು ನಿರ್ಧರಿಸಿದೆ.

ಕರೋನಾ ವೈರಸ್ ವಿರುದ್ಧ ಹೋರಾಡಲು ರೂ.50 ಕೋಟಿ ದೇಣಿಗೆ ನೀಡಿದ ಐಷರ್

ತನ್ನ ಕಂಪನಿಯ ನೌಕರರ ಪರವಾಗಿ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಹಣಕಾಸಿನ ನೆರವನ್ನು ನೀಡುತ್ತಿರುವುದಾಗಿ ಐಷರ್ ಕಂಪನಿ ಹೇಳಿದೆ.

ಕರೋನಾ ವೈರಸ್ ವಿರುದ್ಧ ಹೋರಾಡಲು ರೂ.50 ಕೋಟಿ ದೇಣಿಗೆ ನೀಡಿದ ಐಷರ್

ಐಷರ್ ಕಂಪನಿಯು ತನ್ನ ಕಂಪನಿಯ ವತಿಯಿಂದ ಕರೋನಾ ಸಂತ್ರಸ್ತರಿಗೆ ತಜ್ಞ ವೈದ್ಯಕೀಯ ಕೇಂದ್ರ, ಕ್ವಾರಂಟೈನ್ ಸೆಂಟರ್ ಹಾಗೂ ರೋಗಿಗಳ ಆರೈಕೆಗಾಗಿ ಸೇವೆಗಳನ್ನು ಒದಗಿಸಲಿದೆ.

ಕರೋನಾ ವೈರಸ್ ವಿರುದ್ಧ ಹೋರಾಡಲು ರೂ.50 ಕೋಟಿ ದೇಣಿಗೆ ನೀಡಿದ ಐಷರ್

ಐಷರ್ ಗ್ರೂಪ್ ಅಡಿಯಲ್ಲಿ ಎರಡು ವಾಹನ ತಯಾರಕ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ರಾಯಲ್ ಎನ್ ಫೀಲ್ಡ್ ಹಾಗೂ ವೋಲ್ವೋ ಕಂಪನಿಗಳು ಐಷರ್ ಕಂಪನಿಯಡಿಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಐಷರ್ ಕಂಪನಿಯು ಚೆನ್ನೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ.

Most Read Articles

Kannada
Read more on ಐಷರ್ eicher
English summary
Eicher group donates Rs50 crore to fight Covid 19 pandemic. Read in Kannada.
Story first published: Thursday, April 9, 2020, 15:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X