ಪರಿಸರ ಸ್ನೇಹಿ ಸೂಪರ್ ಕಾರು ಬಿಡುಗಡೆಗೊಳಿಸಿದ ಎಲೇಷನ್

ಸಾಮಾನ್ಯವಾಗಿ ಸೂಪರ್ ಕಾರುಗಳು ತಮ್ಮ ಎಂಜಿನ್, ಆಕರ್ಷಕ ವಿನ್ಯಾಸ ಹಾಗೂ ಐಷಾರಾಮಿತನಕ್ಕೆ ಹೆಸರುವಾಸಿಯಾಗಿವೆ. ಇತ್ತೀಚೆಗೆ ಬಿಡುಗಡೆಯಾಗಿರುವ ಎಲೇಷನ್ ಫ್ರೀಡಂ ಸೂಪರ್ ಕಾರು ದೊಡ್ಡ ಶಬ್ದ ಹಾಗೂ ಯಾವುದೇ ರೀತಿಯ ಮಾಲಿನ್ಯವನ್ನು ಉಂಟುಮಾಡುವುದಿಲ್ಲ.

ಪರಿಸರ ಸ್ನೇಹಿ ಸೂಪರ್ ಕಾರು ಬಿಡುಗಡೆಗೊಳಿಸಿದ ಎಲೇಷನ್

ಪರಿಸರ ಸ್ನೇಹಿಯಾಗಿರುವ ಈ ಕಾರು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಈ ಎಲೆಕ್ಟ್ರಿಕ್ ಕಾರನ್ನು ತಯಾರಿಸಿರುವ ಕಂಪನಿಯು ಈ ಕಾರಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿದೆ. ಈ ಕಾರು ಕೇವಲ 1.80 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಈ ಕಾರಿನ ಟಾಪ್ ಸ್ಪೀಡ್ ಗಂಟೆಗೆ 420 ಕಿ.ಮೀಗಳಾಗಿದೆ.

ಪರಿಸರ ಸ್ನೇಹಿ ಸೂಪರ್ ಕಾರು ಬಿಡುಗಡೆಗೊಳಿಸಿದ ಎಲೇಷನ್

ಈ ಅಂಕಿ ಅಂಶವು ಯಾವುದೇ ಎಲೆಕ್ಟ್ರಿಕ್ ಕಾರಿನ ನಿರೀಕ್ಷೆಗಿಂತ ಹೆಚ್ಚಾಗಿದೆ. ಪೂರ್ತಿಯಾಗಿ ಚಾರ್ಜ್ ಆದ ನಂತರ ಈ ಎಲೆಕ್ಟ್ರಿಕ್ ಕಾರು 482 ಕಿ.ಮೀಗಳವರೆಗೆ ಚಲಿಸುತ್ತದೆ. ಈ ಕಾರಿನ ಬೆಲೆ 2 ಮಿಲಿಯನ್ ಅಮೆರಿಕನ್ ಡಾಲರ್ ಅಂದರೆ ಸುಮಾರು ರೂ.15 ಕೋಟಿಗಳಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಪರಿಸರ ಸ್ನೇಹಿ ಸೂಪರ್ ಕಾರು ಬಿಡುಗಡೆಗೊಳಿಸಿದ ಎಲೇಷನ್

ಬೆಲೆಗೆ ಅನುಸಾರವಾಗಿ ಈ ಎಲೆಕ್ಟ್ರಿಕ್ ಕಾರಿನಲ್ಲಿ ಹಲವಾರು ಫೀಚರ್ ಹಾಗೂ ಸಾಧನಗಳನ್ನು ನೀಡಲಾಗಿದೆ. ಈ ಫೀಚರ್ ಗಳನ್ನು ಈ ಹಿಂದೆ ಬೇರೆ ಯಾವುದೇ ಸೂಪರ್ ಕಾರುಗಳಲ್ಲಿ ನೀಡಿರಲಿಲ್ಲ.

ಪರಿಸರ ಸ್ನೇಹಿ ಸೂಪರ್ ಕಾರು ಬಿಡುಗಡೆಗೊಳಿಸಿದ ಎಲೇಷನ್

ಈ ಕಾರಿನಲ್ಲಿರುವ ಚಾಸಿಸ್ ಅನ್ನು ಕಾರ್ಬನ್ ಫೈಬರ್ ನಿಂದ ಮಾಡಲಾಗಿರುವುದರಿಂದ ಕಾರಿನ ತೂಕವು ಹಗುರವಾಗಿದೆ. ಈ ಕಾರು ಕೇವಲ 1,650 ಕೆ.ಜಿ ತೂಕವನ್ನು ಹೊಂದಿದೆ. ಈ ತೂಕವು ಬೇರೆ ಸ್ಪೋರ್ಟ್ಸ್ ಕಾರುಗಳಿಗಿಂತ ಕಡಿಮೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಪರಿಸರ ಸ್ನೇಹಿ ಸೂಪರ್ ಕಾರು ಬಿಡುಗಡೆಗೊಳಿಸಿದ ಎಲೇಷನ್

ಈ ಕಾರಿನಲ್ಲಿ ಅಳವಡಿಸಲಾಗಿರುವ ನಾಲ್ಕು ಎಲೆಕ್ಟ್ರಿಕ್ ಮೋಟರ್‌ಗಳು ಒಟ್ಟಾರೆಯಾಗಿ 1,900 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತವೆ. ಇದು ಯಾವುದೇ ಸ್ಪೋರ್ಟ್ಸ್ ಕಾರಿನಲ್ಲಿ ಉತ್ಪಾದನೆಯಾಗುವ ಅತಿ ಹೆಚ್ಚಿನ ಪವರ್ ಆಗಿದೆ.

ಪರಿಸರ ಸ್ನೇಹಿ ಸೂಪರ್ ಕಾರು ಬಿಡುಗಡೆಗೊಳಿಸಿದ ಎಲೇಷನ್

ಈ ಎಲೆಕ್ಟ್ರಿಕ್ ಕಾರಿನಲ್ಲಿರುವ ಕ್ಯಾಬಿನ್ ಅನ್ನು ಫೈಟರ್ ಜೆಟ್‌ನ ಕಾಕ್‌ಪಿಟ್‌ನ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಕಾರಿನ ಇಂಟಿರಿಯರ್ ನಲ್ಲಿ ಲೆದರ್ ಹಾಗೂ ಗುಣಮಟ್ಟದ ಕಾರ್ಬನ್ ಫೈಬರ್ ಫಿನಿಶಿಂಗ್ ನೀಡಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಪರಿಸರ ಸ್ನೇಹಿ ಸೂಪರ್ ಕಾರು ಬಿಡುಗಡೆಗೊಳಿಸಿದ ಎಲೇಷನ್

ಈ ಕಾರಿನಲ್ಲಿರುವ ಸ್ಟ್ಯಾಂಡರ್ಡ್ ಬ್ಯಾಟರಿ ಪ್ಯಾಕ್‌ ಅನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 482 ಕಿ.ಮೀ ಚಲಿಸಬಹುದು. ವಿಸ್ತೃತ ಬ್ಯಾಟರಿ ಪ್ಯಾಕ್‌ ಅನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 643 ಕಿ.ಮೀಗಳವರೆಗೆ ಚಲಿಸಬಹುದು. ಈ ಕಾರನ್ನು ಪೆಟ್ರೋಲ್ ಮಾದರಿಯಲ್ಲಿಯೂ ಬಿಡುಗಡೆಗೊಳಿಸಲಾಗಿದೆ. ಪೆಟ್ರೋಲ್ ಮಾದರಿಯಲ್ಲಿ 5.2 ಲೀಟರಿನ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 720 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ.

Most Read Articles

Kannada
English summary
Elation launches Freedom electric supercar. Read in Kannada.
Story first published: Thursday, November 19, 2020, 17:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X