ಅಗತ್ಯ ಸೇವೆಯ ವಾಹನಗಳಿಗೆ ಸಿಗಲಿದೆ ಉಚಿತ ರಿಪೇರಿ ಹಾಗೂ ಸರ್ವಿಸ್

ಕರೋನಾ ವೈರಸ್ ಹರಡದಂತೆ ತಡೆಯಲು ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಸಾರಿಗೆ ಸೇವೆಗಳನ್ನು ರದ್ದುಪಡಿಸಲಾಗಿದೆ. ಆದರೆ ಅಗತ್ಯ ಸೇವೆ ನೀಡುವ ವಾಹನಗಳಿಗೆ ವಿನಾಯಿತಿ ನೀಡಲಾಗಿದೆ.

ಅಗತ್ಯ ಸೇವೆಯ ವಾಹನಗಳಿಗೆ ಸಿಗಲಿದೆ ಉಚಿತ ರಿಪೇರಿ ಹಾಗೂ ಸರ್ವಿಸ್

ಹೀಗೆ ಅಗತ್ಯ ಸೇವೆಯನ್ನು ನೀಡುತ್ತಿರುವ ವಾಹನಗಳಿಗೆ ಉಚಿತವಾಗಿ ಮೇಂಟೆನೆನ್ಸ್ ಸೇವೆಗಳನ್ನು ನೀಡುವುದಾಗಿ ಪಿಟ್‌ಸ್ಟಾಪ್ ಘೋಷಿಸಿದೆ. ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಪಿಟ್‌ಸ್ಟಾಪ್, ಕಾರು ರಿಪೇರಿ ಹಾಗೂ ಸರ್ವಿಸ್ ನೀಡುವ ಕಂಪನಿಯಾಗಿದೆ. ಕಂಪನಿಯು ತನ್ನ ಗ್ರಾಹಕರಿಗೆ ಕಾರ್ ಸೇವೆಯನ್ನು ನೀಡುತ್ತಿದೆ.

ಅಗತ್ಯ ಸೇವೆಯ ವಾಹನಗಳಿಗೆ ಸಿಗಲಿದೆ ಉಚಿತ ರಿಪೇರಿ ಹಾಗೂ ಸರ್ವಿಸ್

ಲಾಕ್ ಡೌನ್ ಹಿನ್ನೆಲೆಯಲ್ಲಿ ಅಗತ್ಯ ಸರಕುಗಳ ವಿತರಣೆ ಮಾಡುವ ವಾಹನಗಳು, ಅಗ್ನಿಶಾಮಕ ವಾಹನಗಳು, ಪೊಲೀಸ್ ವಾಹನಗಳು, ಆಂಬ್ಯುಲೆನ್ಸ್ ಹಾಗೂ ವೈದ್ಯಕೀಯ ಸಿಬ್ಬಂದಿಯ ವಾಹನಗಳಿಗೆ ತನ್ನ ಕೇಂದ್ರಗಳಲ್ಲಿ ಉಚಿತ ಸರ್ವಿಸ್ ಮಾಡುವುದಾಗಿ ಪಿಟ್‌ಸ್ಟಾಪ್ ತಿಳಿಸಿದೆ.

ಅಗತ್ಯ ಸೇವೆಯ ವಾಹನಗಳಿಗೆ ಸಿಗಲಿದೆ ಉಚಿತ ರಿಪೇರಿ ಹಾಗೂ ಸರ್ವಿಸ್

ಈ ಸೇವೆಯನ್ನು ನೀಡುತ್ತಿರುವ ವಾಹನಗಳು ಅಗತ್ಯ ಬಿದ್ದಾಗ 6262621234 ನಂಬರಿಗೆ ಕರೆ ಮಾಡಬೇಕೆಂದು ಪಿಟ್‌ಸ್ಟಾಪ್ ಹೇಳಿದೆ.

ಅಗತ್ಯ ಸೇವೆಯ ವಾಹನಗಳಿಗೆ ಸಿಗಲಿದೆ ಉಚಿತ ರಿಪೇರಿ ಹಾಗೂ ಸರ್ವಿಸ್

ಬೆಂಗಳೂರು, ಚೆನ್ನೈ, ಹೈದರಾಬಾದ್, ಪುಣೆ, ಮುಂಬೈ, ದೆಹಲಿ, ನೋಯ್ಡಾ, ಗುರಗಾಂವ್ ಹಾಗೂ ಫರಿದಾಬಾದ್‌ನಲ್ಲಿ ಅಗತ್ಯ ಸೇವೆಯನ್ನು ನೀಡುತ್ತಿರುವ ವಾಹನಗಳಿಗೆ ರಿಪೇರಿ ಹಾಗೂ ಸರ್ವಿಸ್ ಒದಗಿಸಲು ಬಿಟ್‌ಸ್ಟಾಪ್ ಮುಂದಾಗಿದೆ.

ಅಗತ್ಯ ಸೇವೆಯ ವಾಹನಗಳಿಗೆ ಸಿಗಲಿದೆ ಉಚಿತ ರಿಪೇರಿ ಹಾಗೂ ಸರ್ವಿಸ್

ಅಗತ್ಯವಿದ್ದರೆ ಈ ವಾಹನಗಳು ಇರುವ ಜಾಗಕ್ಕೆ ಹೋಗಿ ರಿಪೇರಿ ಮಾಡಲಾಗುವುದೆಂದು ತಿಳಿಸಿರುವ ಕಂಪನಿಯು, ಇದಕ್ಕಾಗಿ ಟೋಲ್-ಫ್ರೀ ಸೇವೆಗಳನ್ನು ಒದಗಿಸುವುದಾಗಿ ಹೇಳಿದೆ.

MOST READ: ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಅಗತ್ಯ ಸೇವೆಯ ವಾಹನಗಳಿಗೆ ಸಿಗಲಿದೆ ಉಚಿತ ರಿಪೇರಿ ಹಾಗೂ ಸರ್ವಿಸ್

ಈ ಕುರಿತು ಮಾತನಾಡಿರುವ ಬಿಟ್‌ಸ್ಟಾಪ್‌ನ ಸಿಇಒ ಹಾಗೂ ಸ್ಥಾಪಕ ಮಿಹಿರ್ ಮೋಹನ್ ರವರು ಕರೋನಾ ವಿರುದ್ಧದ ಹೋರಾಡುತ್ತಿರುವ ವೀರರಿಗೆ ನಮ್ಮ ನಮಸ್ಕಾರಗಳು.

MOST READ: ವಾಹನ ಉತ್ಪಾದನೆ ಸ್ಥಗಿತದಿಂದಾಗಿ ಸಾವಿರಾರು ಕೋಟಿ ನಷ್ಟ

ಅಗತ್ಯ ಸೇವೆಯ ವಾಹನಗಳಿಗೆ ಸಿಗಲಿದೆ ಉಚಿತ ರಿಪೇರಿ ಹಾಗೂ ಸರ್ವಿಸ್

ಜನರ ಅಗತ್ಯಗಳನ್ನು ಸರಿಯಾದ ಸಮಯಕ್ಕೆ ತಲುಪಿಸುತ್ತಿರುವ ಈ ವೀರರಿಗೆ ಸಹಾಯ ಮಾಡಲು ನಾವು ಸಿದ್ಧರಿದ್ದೇವೆ. ಅವರು ನಮ್ಮ ದೂರವಾಣಿ ಸಂಖ್ಯೆ ಮೂಲಕ ಅಥವಾ www.getpitstop.com ಮೂಲಕ ನಮಗೆ ಮಾಹಿತಿ ನೀಡುವ ಮೂಲಕ ಯಾವುದೇ ಸಮಯದಲ್ಲಿ ನಮ್ಮ ವಾಹನಗಳನ್ನು ಉಚಿತವಾಗಿ ಬಳಸಬಹುದು ಎಂದು ಹೇಳಿದರು.

MOST READ: ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?

ಅಗತ್ಯ ಸೇವೆಯ ವಾಹನಗಳಿಗೆ ಸಿಗಲಿದೆ ಉಚಿತ ರಿಪೇರಿ ಹಾಗೂ ಸರ್ವಿಸ್

ಲಾಕ್ ಡೌನ್ ಹಿನ್ನೆಲೆಯಲ್ಲಿ ಎಲ್ಲಾ ಅಧಿಕೃತ ವಾಹನ ಸೇವಾ ಕೇಂದ್ರಗಳನ್ನು ಹಾಗೂ ಮೆಕ್ಯಾನಿಕ್ ಅಂಗಡಿಗಳನ್ನು ಮುಚ್ಚಲಾಗಿದೆ. ಈ ಕಾರಣಕ್ಕೆ ವಾಹನ ರಿಪೇರಿಯ ಸಮಸ್ಯೆ ಎದುರಾದರೆ ಆ ಸಮಸ್ಯೆಯನ್ನು ನಿವಾರಿಸಲು ಬಿಟ್‌ಸ್ಟಾಪ್‌ ಮುಂದಾಗಿದೆ. ಇದಕ್ಕಾಗಿ ಸ್ಥಳೀಯ ಸರ್ಕಾರಿ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುತ್ತಿರುವುದಾಗಿ ಪಿಟ್‌ಸ್ಟಾಪ್ ತಿಳಿಸಿದೆ.

Most Read Articles

Kannada
English summary
Essential service workers receive free repair for their vehicle -by Pitstop during lockdown. Read in Kannada.
Story first published: Monday, March 30, 2020, 16:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X