ಭಾರತದ ಮೊದಲ ರೆಟ್ರೊಫಿಟೆಡ್ ಎಲೆಕ್ಟ್ರಿಕ್ ಲೈಟ್ ಕಮರ್ಷಿಯಲ್ ವೆಹಿಕಲ್ ಬಿಡುಗಡೆಗೊಳಿಸಿದ ಎಟ್ರಿಯೊ

ಪ್ರಪಂಚದೆಲ್ಲೆಡೆ ಈಗ ಎಲೆಕ್ಟ್ರಿಕ್ ವಾಹನಗಳದೇ ಸದ್ದು. ಭಾರತದಲ್ಲಿಯೂ ಸಹ ಹಲವಾರು ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ. ಟಾಟಾ ಮೋಟಾರ್ಸ್, ಹುಂಡೈ, ಮಹೀಂದ್ರಾದಂತಹ ಕಂಪನಿಗಳು ಈಗಾಗಲೇ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಿವೆ.

ಭಾರತದ ಮೊದಲ ರೆಟ್ರೊಫಿಟೆಡ್ ಎಲೆಕ್ಟ್ರಿಕ್ ಲೈಟ್ ಕಮರ್ಷಿಯಲ್ ವೆಹಿಕಲ್ ಬಿಡುಗಡೆಗೊಳಿಸಿದ ಎಟ್ರಿಯೊ

ಪ್ರಮುಖ ವಾಹನ ತಯಾರಕ ಕಂಪನಿಗಳು ಸಹ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿಯಲ್ಲಿ ತೊಡಗಿವೆ. ಇವುಗಳ ಜೊತೆಗೆ ಸ್ಟಾರ್ಟ್ ಅಪ್ ಕಂಪನಿಗಳು ಸಹ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ. ಬೈಕ್, ಸ್ಕೂಟರ್, ಕಾರು ಮಾತ್ರವಲ್ಲದೇ ಟ್ರಕ್ ಹಾಗೂ ಕಮರ್ಷಿಯಲ್ ವಾಹನಗಳನ್ನು ಸಹ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಗೊಳಿಸಲಾಗುತ್ತಿದೆ. ಈಗ ದೇಶದ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್ಅಪ್ ಕಂಪನಿಯಾದ ಎಟ್ರಿಯೊ ದೇಶದ ಮೊದಲ ರೆಟ್ರೊಫಿಟೆಡ್ ಎಲೆಕ್ಟ್ರಿಕ್ ಲೈಟ್ ಕಮರ್ಷಿಯಲ್ ವೆಹಿಕಲ್ (ಇಎಲ್‌ಸಿವಿ) ಅನ್ನು ಬಿಡುಗಡೆಗೊಳಿಸಿದೆ.

ಭಾರತದ ಮೊದಲ ರೆಟ್ರೊಫಿಟೆಡ್ ಎಲೆಕ್ಟ್ರಿಕ್ ಲೈಟ್ ಕಮರ್ಷಿಯಲ್ ವೆಹಿಕಲ್ ಬಿಡುಗಡೆಗೊಳಿಸಿದ ಎಟ್ರಿಯೊ

ಎಟ್ರಿಯೊ ಬಿಡುಗಡೆಗೊಳಿಸಿರುವ ಇಎಲ್‌ಸಿವಿಯ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.7.75 ಲಕ್ಷಗಳಾಗಿದೆ. ಮಾಹಿತಿಗಳ ಪ್ರಕಾರ, ಎಟ್ರಿಯೊದ ಈ ಇಎಲ್‌ಸಿವಿಯಲ್ಲಿ 20 ಕಿವ್ಯಾನ ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಭಾರತದ ಮೊದಲ ರೆಟ್ರೊಫಿಟೆಡ್ ಎಲೆಕ್ಟ್ರಿಕ್ ಲೈಟ್ ಕಮರ್ಷಿಯಲ್ ವೆಹಿಕಲ್ ಬಿಡುಗಡೆಗೊಳಿಸಿದ ಎಟ್ರಿಯೊ

ಇದರ ಜೊತೆಗೆ 96 ವೋಲ್ಟ್ ನ ಹೈ ವೋಲ್ಟೇಜ್ ಸಿಸ್ಟಂ ಅನ್ನು ಸಹ ಅಳವಡಿಸಲಾಗಿದೆ. ಈ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆದ ನಂತರ ಇಎಲ್‌ಸಿವಿಯು 120 ಕಿ.ಮೀಗಳವರೆಗೆ ಚಲಿಸುತ್ತದೆ. ಈ ಇಎಲ್‌ಸಿವಿಯಲ್ಲಿ 15 ಕಿ.ವ್ಯಾನ ಎಲೆಕ್ಟ್ರಿಕ್ ಮೋಟರ್ ಅಳವಡಿಸಲಾಗಿದೆ.

ಭಾರತದ ಮೊದಲ ರೆಟ್ರೊಫಿಟೆಡ್ ಎಲೆಕ್ಟ್ರಿಕ್ ಲೈಟ್ ಕಮರ್ಷಿಯಲ್ ವೆಹಿಕಲ್ ಬಿಡುಗಡೆಗೊಳಿಸಿದ ಎಟ್ರಿಯೊ

ಈ ಎಲೆಕ್ಟ್ರಿಕ್ ಮೋಟರ್ 120 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು ವಾರ್ಷಿಕವಾಗಿ 5000 ವಾಹನಗಳ ಉತ್ಪಾದನಾ ಸಾಮರ್ಥ್ಯದೊಂದಿಗೆ ಇಂಟ್ರಾ-ಸಿಟಿ ಲಾಜಿಸ್ಟಿಕ್ಸ್ ಅನ್ನು ಬದಲಿಸುವ ಹಾಗೂ ಎಲೆಕ್ಟ್ರಿಕ್ ಕರಿಸುವ ಮೊದಲ ಪ್ರಯತ್ನವಾಗಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಭಾರತದ ಮೊದಲ ರೆಟ್ರೊಫಿಟೆಡ್ ಎಲೆಕ್ಟ್ರಿಕ್ ಲೈಟ್ ಕಮರ್ಷಿಯಲ್ ವೆಹಿಕಲ್ ಬಿಡುಗಡೆಗೊಳಿಸಿದ ಎಟ್ರಿಯೊ

ಇಎಲ್‌ಸಿವಿ ಬಿಡುಗಡೆಯ ಸಂದರ್ಭದಲ್ಲಿ ಮಾತನಾಡಿದ ಕಂಪನಿಯ ಸಹ-ಸಂಸ್ಥಾಪಕ ಹಾಗೂ ಸಿಇಒ ದೀಪಕ್ ಎಂವಿರವರು ಇದು ಈ ಮಟ್ಟದಲ್ಲಿ ಸಾಮರ್ಥ್ಯದ ಪರಿವರ್ತನೆಯ ಹೆಜ್ಜೆಯಾಗಿದೆ. ಎಟ್ರಿಯೊದ ಇಎಲ್‌ಸಿವಿ ಆರಂಭಿಸಲು ನಾವು ತುಂಬಾ ಹೆಮ್ಮೆಪಡುತ್ತೇವೆ ಎಂದು ಹೇಳಿದರು.

ಭಾರತದ ಮೊದಲ ರೆಟ್ರೊಫಿಟೆಡ್ ಎಲೆಕ್ಟ್ರಿಕ್ ಲೈಟ್ ಕಮರ್ಷಿಯಲ್ ವೆಹಿಕಲ್ ಬಿಡುಗಡೆಗೊಳಿಸಿದ ಎಟ್ರಿಯೊ

ನಮ್ಮ ಸೈಂಟಿಫಿಕ್ ರೆಟ್ರೊಫಿಟ್ಮೆಂಟ್ ಪ್ರಕ್ರಿಯೆಯ ಮೂಲಕ ವಾಹನ ಮಾಲೀಕರು ಸುಮಾರು 60%ನಷ್ಟು ನಿರ್ವಹಣಾ ವೆಚ್ಚವನ್ನು ಉಳಿಸುತ್ತಾರೆ. ಇದು ಡೀಸೆಲ್-ಎಂಜಿನ್ ಎಲ್‌ಸಿವಿಯನ್ನು ಪರಿಸರ ಸ್ನೇಹಿಯಾಗಿ ಬದಲಿಸುತ್ತದೆ ಎಂದು ಅವರು ಹೇಳಿದರು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಭಾರತದ ಮೊದಲ ರೆಟ್ರೊಫಿಟೆಡ್ ಎಲೆಕ್ಟ್ರಿಕ್ ಲೈಟ್ ಕಮರ್ಷಿಯಲ್ ವೆಹಿಕಲ್ ಬಿಡುಗಡೆಗೊಳಿಸಿದ ಎಟ್ರಿಯೊ

ಈ ವಾಹನವು ಇ-ಕಾಮರ್ಸ್ ಲಾಜಿಸ್ಟಿಕ್ಸ್ ಜಾಗವನ್ನು ಬದಲಿಸುವುದಲ್ಲದೆ, ಎಲೆಕ್ಟ್ರಿಕ್ ವಾಹನಗಳ ವ್ಯವಸ್ಥೆಯನ್ನು ಮೇಲೆ ಪರಿಣಾಮ ಬೀರುತ್ತದೆ. 1200ಕ್ಕೂ ಹೆಚ್ಚು ಇಎಲ್‌ಸಿವಿಗಳಿಗಾಗಿ ನಾವು ಆರ್ಡರ್ ಗಳನ್ನು ಪಡೆದಿದ್ದೇವೆ ಎಂದು ಅವರು ಹೇಳಿದರು.

Most Read Articles

Kannada
English summary
Etrio launches India's first electric ELCV. Read in Kannada.
Story first published: Wednesday, August 19, 2020, 17:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X