Just In
- 8 hrs ago Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- 8 hrs ago ಬಹುಕೋಟಿ ಬೆಲೆಯ ಕಾರುಗಳಿದ್ದರೂ ಸಾಮಾನ್ಯ ಮಾರುತಿ ಕಾರಿನಲ್ಲಿ ಓಡಾಡಿದ ರೋಹಿತ್ ಶರ್ಮಾ: ಕಾರಣವೇನು?
- 9 hrs ago HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- 9 hrs ago Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
Don't Miss!
- Movies Shobha Shetty ; ನಿಶ್ಚಿತಾರ್ಥದ ಬಗ್ಗೆ ಮಾಹಿತಿ ನೀಡಿದ ನಟಿ ಶೋಭಾ ಶೆಟ್ಟಿ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿನಿಮಾದಲ್ಲಿ ವಿಲನ್, ರಿಯಲ್ ಲೈಫ್ನಲ್ಲಿ ಹೀರೋ ಆದ ಸೋನು ಸೂದ್ ಬಳಿಯಿರುವ ಕಾರುಗಳು
ಬಾಲಿವುಡ್ ಸಿನಿಮಾಗಳಲ್ಲಿ ಸೋನು ಸೂದ್ ಅವರು ಹೆಚ್ಚಾಗಿ ವಿಲನ್ ಪಾತ್ರದಲ್ಲಿ ಅಭಿನಯಿಸಿ ಖಡಕ್ ವಿಲನ್ ಎಂದೇ ಜನಪ್ರಿಯರಾಗಿದ್ದರು. ಆದರೆ ಅವರು ನಿಜ ಜೀವನದಲ್ಲಿ ಕೂಲಿ ಕಾರ್ಮಿಕರಿಗೆ ನೆರವಾಗುವ ಮೂಲಕ ರಿಯಲ್ ಹೀರೋ ಎಂದು ಅನಿಸಿಕೊಂಡಿದ್ದಾರೆ.
ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ನೂರಾರು ಕಾರ್ಮಿಕರು ಕೆಲಸಕ್ಕೆ ತೆರಳಿದ್ದರು. ಆದರೆ ಲಾಕ್ಡೌನ್ನಿಂದಾಗಿ ಅವರು ಅಲ್ಲಿಯೇ ಉಳಿಯಬೇಕಾಗಿ ಬಂದಿತ್ತು. ಸಂಕಷ್ಟದಲ್ಲಿದ್ದ ಕರ್ನಾಟಕದ ಕಾರ್ಮಿಕ ಸಹಾಯಕ್ಕೆ ಯಾರೊಬ್ಬರೂ ಮುಂದೆ ಬಂದಿರಲಿಲ್ಲ. ಆದರೆ ನಟ ಸೋನು ಸೂದ್ ಥಾಣೆಯಲ್ಲಿ ಸಿಲುಕಿದ ಕಾರ್ಮಿಕರಿಗೆ ವಿಶೇಷವಾಗಿ 10 ಬಸ್ಗಳನ್ನು ಮಾಡಿ ಅವರನ್ನು ಊರಿಗೆ ಕಳುಹಿಸಿದ್ದಾರೆ. ಈ ಮೂಲಕ ಸಿನಿಮಾಗಳಲ್ಲಿ ವಿಲನ್ ಆಗಿದ್ದರು ನಿಜ ಜೀವನದಲ್ಲಿ ಕನ್ನಡಿಗರ ಮನ ಗೆದ್ದ ಸೋನ್ ಸೂದ್.
ಇಷ್ಟೇ ಅಲ್ಲದೇ ಕಾರ್ಮಿಕರ ಮಾಹಿತಿ ಪಡೆದು ತಾವೇ ಅವರ ರಾಜ್ಯ ಸರ್ಕಾರಗಳನ್ನು ಸಂಪರ್ಕಿಸಿ ಅವರೆ ಒಪ್ಪಿಗೆ ಪಡೆದಿದ್ದಾರೆ. ಇದುವರೆಗೆ 100 ಬಸ್ಗಳಲ್ಲಿ 3000ಕ್ಕೂ ಹೆಚ್ಚು ಮಂದಿಯನ್ನು ಕರ್ನಾಟಕ, ಉತ್ತರಪ್ರದೇಶ, ಅಸ್ಸಾಂ, ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ್, ಒಡಿಶಾ ಸೇರಿದಂತೆ ಇತರ ರಾಜ್ಯಗಳಲ್ಲಿನ ಕಾರ್ಮಿಕರನ್ನು ಕಳುಹಿಸಿದ್ದಾರೆ.
MOST READ: ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಖ್ಯಾತ ಕ್ರಿಕೆಟಿಗನ ಸಹೋದರ
ಬಸ್ನಲ್ಲಿ ಸಾಗುವ ಕಾರ್ಮಿಕರಿಗೆ ಆಹಾರದ ಕಿಟ್ಗಳನ್ನು ನೀಡಿದ್ದರು. ಅಷ್ಟೇ ಅಲ್ಲದೆ ಇದರ ಸಂಪೂರ್ಣ ಖರ್ಚನ್ನು ಅವರೇ ಭರಿಸಿದ್ದಾರೆ. ವಿಶೇಷ ಎಂದರೆ, ಕಾರ್ಮಿಕರನ್ನು ಬಸ್ಸು ಹತ್ತಿಸಲು ಖುದ್ದು ಸೋನು ಸೂದ್ ಸ್ಥಳಕ್ಕೆ ಆಗಮಿಸಿದ್ದರು.
ಇತ್ತೀಚೆಗೆ ಪಂಜಾಬ್ನಲ್ಲಿ 1,500 ಪಿಪಿಇ ಕಿಟ್ಗಳನ್ನು ನೀಡುವ ಮೂಲಕ ಸೋನು ಸೂದ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು. ಅಲ್ಲದೆ ಸಾಕಷ್ಟು ಬಡವರಿಗೆ ಅವರು ಆಹಾರವನ್ನು ಒದಗಿಸುತ್ತಿದ್ದಾರೆ. ನಮ್ಮ ರಿಯಲ್ ಹೀರೋ ಸೋನು ಸೂದ್ ಅವರು ಕಾರುಗಳ ಕ್ರೇಜ್ ಅನ್ನು ಕೂಡ ಹೊಂದಿದ್ದಾರೆ. ಸೋನು ಸೂದ್ ಅವರು ಯಾವುದೆಲ್ಲ ಕಾರುಗಳನ್ನು ಹೊಂದಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
MOST READ: ಭಾರತದಲ್ಲಿ ಬಿಡುಗಡೆಯಾಯ್ತು ಅತಿ ವೇಗದ ಹೊಸ ಮರ್ಸಿಡಿಸ್ ಎಎಂಜಿ ಜಿಟಿ-ಆರ್ ಕಾರು
ಪೋರ್ಷೆ ಪನಾಮೆರಾ
ಜರ್ಮನ್ ಬ್ರ್ಯಾಂಡ್ನ ಮೊದಲ ನಾಲ್ಕು-ಡೋರಿನ ಕೂಪ್ ಕಾರು ಇದಾಗಿದೆ ಮತ್ತು ಇದು ಭಾರತದಲ್ಲಿ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ ಎಂದು ಹೇಳಬಹುದು. ಸೋನು ಸೂದ್ ಅವರು ಕೆಲವು ವರ್ಷಗಳ ಹಿಂದೆ ಈ ಪನೆಮೆರಾ ಕಾರನ್ನು ಖರೀದಿಸಿದ್ದರು. ಈ ಕಾರು 3.0-ಲೀಟರ್ ವಿ6 ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ.
ಆಡಿ ಕ್ಯೂ7
ಸೋನು ಸೂದ್ ಅವರ ಮೆಚ್ಚಿನ ಕಾರು ಆಡಿ ಕ್ಯೂ7 ಆಗಿದೆ. ಅವರು ಹೆಚ್ಚಾಗಿ ಈ ಆಡಿ ಕ್ಯೂ7 ಕಾರಿನಲ್ಲಿ ಹೆಚ್ಚಾಗಿ ಓಡಾಡುತ್ತಿದ್ದರು ಆದರೆ ಅವರು ಆಡಿ ಕ್ಯೂ7 ಕಾರು ಬೆಂಕಿಗೆ ಆಹುತಿಯಾಗಿತ್ತು. ಈ ಘಟನೆ ನಡೆದ ಕಲವೇ ವಾರಗಳಲ್ಲಿ ಹೊಸ ಆಡಿ ಕ್ಯೂ7 ಕಾರನ್ನು ಖರೀದಿಸಿದ್ದರು. ಇವರು ತಮ್ಮ ಚಲನಚಿತ್ರಗಳನ್ನು ಪ್ರಚಾರ ಮಾಡಲು ಕ್ಯೂ7 ಕಾರನ್ನು ಬಳಸುತ್ತಾರೆ.
MOST READ: ಹೊಸ ಆಕ್ಟೀವಿಯಾ ಆರ್ಎಸ್ 245 ಕಾರಿನ ಮಾರಾಟವನ್ನು ಪುನಾರಂಭಿಸಿದ ಸ್ಕೋಡಾ
ಮರ್ಸಿಡಿಸ್ ಬೆಂಝ್ ಎಂಎಲ್-ಕ್ಲಾಸ್
ಇವರು ಮಿಡ್ ಎಸ್ಯುವಿಯಾದ ಮರ್ಸಿಡಿಸ್ ಬೆಂಝ್ ಎಂಎಲ್ ಕ್ಲಾಸ್ ಅನ್ನು ಹೊಂದಿದ್ದಾರೆ. ಸೋನು ಸೂದ್ ಅವರ ಎಂಎಲ್-ಕ್ಲಾಸ್ ಈಗ ಸಾಕಷ್ಟು ಹಳೆಯದಾಗಿದೆ ಆದರೆ ಇದು ಇನ್ನೂ ಕೂಡ ಉತ್ತಮ ಸ್ಥಿತಿಯಲ್ಲಿದೆ, ಈಗಲೂ ಅವರು ಈ ಕಾರನ್ನು ಬಳಸುತ್ತಾರೆ.
ಮಾರುತಿ ಸುಜುಕಿ ಝೆನ್
ಸೋನು ಸೂದ್ ಅವರು ಖರೀದಿಸಿದ ಮೊದಲ ಕಾರು ಈ ಮಾರುತಿ ಝೆನ್ ಆಗಿದೆ, ಈ ಕಾರನ್ನು ಅವರು ಪಂಜಾಬ್ನಲ್ಲಿರುವ ಅವರ ಮನೆಯಲ್ಲಿ ನಿಲ್ಲಿಸಲಾಗಿದೆ. ಅವರು ಪಂಜಾಬ್ ನಲ್ಲಿರುವ ತಮ್ಮ ಮನೆಗೆ ತೆರಳಿದಾಗ ಈ ಕಾರನ್ನು ಓಡಿಸುತ್ತಾರೆ. ಈ ಕಾರು ಒಂದು ಕಾಲದಲ್ಲಿ ಪ್ರೀಮಿಯಂ ಹ್ಯಾಚ್ಬ್ಯಾಕ್ ಆಗಿತ್ತು.