ಜುಲೈ ತಿಂಗಳಿನಲ್ಲಿ ಹೊಸ ದಾಖಲೆ ಸೃಷ್ಟಿಸಿದ ಫಾಸ್ಟ್ ಟ್ಯಾಗ್ ವಹಿವಾಟು

ನ್ಯಾಷನಲ್ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ (ಎನ್‌ಇಟಿಸಿ) ಅಡಿಯಲ್ಲಿ ಫಾಸ್ಟ್ ಟ್ಯಾಗ್‌ನಿಂದ 2020ರ ಜುಲೈ ತಿಂಗಳಿನಲ್ಲಿ ಒಟ್ಟು ರೂ.8.6 ಕೋಟಿ ವಹಿವಾಟು ನಡೆಸಲಾಗಿದೆ ಎಂದು ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ದೃಢಪಡಿಸಿದೆ.

ಜುಲೈ ತಿಂಗಳಿನಲ್ಲಿ ಹೊಸ ದಾಖಲೆ ಸೃಷ್ಟಿಸಿದ ಫಾಸ್ಟ್ ಟ್ಯಾಗ್ ವಹಿವಾಟು

ಮಾಹಿತಿಯ ಪ್ರಕಾರ ಕಳೆದ ಕೆಲವು ತಿಂಗಳುಗಳಿಗೆ ಹೋಲಿಸಿದರೆ ಜುಲೈ ತಿಂಗಳಿನಲ್ಲಿ ಚೇತರಿಕೆ ಪ್ರಮಾಣವು 54%ನಷ್ಟು ಹೆಚ್ಚಳವಾಗಿದೆ. 48 ರಾಜ್ಯಗಳು ಹಾಗೂ 20 ನಗರಗಳಲ್ಲಿನ ಟೋಲ್ ಪ್ಲಾಜಾಗಳು ಸೇರಿದಂತೆ ದೇಶದ ಒಟ್ಟು 693 ಟೋಲ್ ಪ್ಲಾಜಾಗಳಲ್ಲಿ ಎನ್‌ಟಿಸಿ ಫಾಸ್ಟ್ ಟ್ಯಾಗ್‌ಗಳು ಬಳಕೆಯಲ್ಲಿವೆ.

ಜುಲೈ ತಿಂಗಳಿನಲ್ಲಿ ಹೊಸ ದಾಖಲೆ ಸೃಷ್ಟಿಸಿದ ಫಾಸ್ಟ್ ಟ್ಯಾಗ್ ವಹಿವಾಟು

ಜುಲೈ ತಿಂಗಳಿನಲ್ಲಿ ದೇಶಾದ್ಯಂತ ಫಾಸ್ಟ್ ಟ್ಯಾಗ್‌ಗಳ ಮೂಲಕ ರೂ.1623.30 ಕೋಟಿ ಮೌಲ್ಯದ 8.62 ಕೋಟಿ ವಹಿವಾಟು ನಡೆದಿದೆ. ಜೂನ್ ತಿಂಗಳಿನಲ್ಲಿ ರೂ.1511.93 ಕೋಟಿ ಮೌಲ್ಯದ ಒಟ್ಟು 8.19 ಕೋಟಿ ವಹಿವಾಟು ನಡೆದಿತ್ತು.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಜುಲೈ ತಿಂಗಳಿನಲ್ಲಿ ಹೊಸ ದಾಖಲೆ ಸೃಷ್ಟಿಸಿದ ಫಾಸ್ಟ್ ಟ್ಯಾಗ್ ವಹಿವಾಟು

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎನ್‌ಪಿಸಿಐನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ರೈರವರು ಎನ್‌ಇಟಿಸಿ ಫಾಸ್ಟ್ ಟ್ಯಾಗ್‌ಗಳನ್ನು ಪರಿಚಯಿಸಿದ 4 ವರ್ಷಗಳಲ್ಲಿ ನಾವು ಹೊಸ ಮೈಲಿಗಲ್ಲನ್ನು ಮುಟ್ಟುತ್ತಿದ್ದು, ಅದರ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ಹೇಳಿದರು.

ಜುಲೈ ತಿಂಗಳಿನಲ್ಲಿ ಹೊಸ ದಾಖಲೆ ಸೃಷ್ಟಿಸಿದ ಫಾಸ್ಟ್ ಟ್ಯಾಗ್ ವಹಿವಾಟು

ಎನ್‌ಇಟಿಸಿ ಫಾಸ್ಟ್ ಟ್ಯಾಗ್‌ಗಳಿಂದಾಗಿ ಲಕ್ಷಾಂತರ ವಾಹನ ಮಾಲೀಕರು ಟೋಲ್ ಪ್ಲಾಜಾಗಳಲ್ಲಿ ಗಂಟೆಗಟ್ಟಲೇ ಕಾಯುವ ಸಂದರ್ಭವು ದೂರವಾಗಿದೆ. ಎನ್‌ಪಿಸಿಐ ಗ್ರಾಹಕರ ಪ್ರಯಾಣವನ್ನು ಸುರಕ್ಷಿತವಾಗಿಸುತ್ತದೆ. ಜೊತೆಗೆ ತೊಂದರೆಯಿಲ್ಲದ ಟೋಲ್ ಪಾವತಿಗಳನ್ನು ಒದಗಿಸುತ್ತದೆ ಎಂದು ಹೇಳಿದರು.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಜುಲೈ ತಿಂಗಳಿನಲ್ಲಿ ಹೊಸ ದಾಖಲೆ ಸೃಷ್ಟಿಸಿದ ಫಾಸ್ಟ್ ಟ್ಯಾಗ್ ವಹಿವಾಟು

ಮುಂಬರುವ ದಿನಗಳಲ್ಲಿ ಹೆಚ್ಚು ಹೆಚ್ಚು ಜನರು ಫಾಸ್ಟ್ ಟ್ಯಾಗ್‌ಗಳನ್ನು ಬಳಸುತ್ತಾರೆ ಎಂಬ ವಿಶ್ವಾಸವಿದೆ. ಏಕೆಂದರೆ ಫಾಸ್ಟ್ ಟ್ಯಾಗ್‌ಗಳನ್ನು ರಾಜ್ಯ ಹೆದ್ದಾರಿ, ಸಿಟಿ ಟೋಲ್ ಪ್ಲಾಜಾ ಹಾಗೂ ವಾಹನ ನಿಲುಗಡೆ ಸ್ಥಳಗಳಲ್ಲಿಯೂ ಬಳಸಲಾಗುತ್ತದೆ. ಇದರಿಂದ ಜನರು ಕಾಂಟ್ಯಾಕ್ಟ್ ಲೆಸ್ ಪಾವತಿಗಳನ್ನು ಮಾಡಲು ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.

ಜುಲೈ ತಿಂಗಳಿನಲ್ಲಿ ಹೊಸ ದಾಖಲೆ ಸೃಷ್ಟಿಸಿದ ಫಾಸ್ಟ್ ಟ್ಯಾಗ್ ವಹಿವಾಟು

ಬೆಂಗಳೂರು, ದೆಹಲಿ, ಮುಂಬೈ ಹಾಗೂ ಚೆನ್ನೈ ನಂತಹ ಪ್ರಮುಖ ನಗರಗಳಲ್ಲಿ ಎನ್‌ಟಿಸಿ ಫಾಸ್ಟ್ ಟ್ಯಾಗ್‌ಗಳೊಂದಿಗೆ ಕಾಂಟ್ಯಾಕ್ಟ್ ಲೆಸ್ ಪಾರ್ಕಿಂಗ್ ಪರಿಚಯಿಸುವುದಾಗಿ ಎನ್‌ಪಿಸಿಐ ಇತ್ತೀಚೆಗೆ ಪ್ರಕಟಿಸಿದೆ. ಈ ಸೌಲಭ್ಯವನ್ನು ಈಗಾಗಲೇ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಆರಂಭಿಸಲಾಗಿದೆ.

Most Read Articles

Kannada
English summary
Fastag Sets New Record In Transactions During 2020 July. Read in Kannada.
Story first published: Tuesday, August 11, 2020, 17:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X