ಹೊಸ ಹೆಸರಿನಲ್ಲಿ ಕಾರ್ಯಾಚರಣೆ ಶುರುಮಾಡಲಿವೆ ಎಫ್‌ಸಿಎ-ಪಿಎಸ್‌ಎ

ಫಿಯೆಟ್ ಕ್ರಿಸ್ಲರ್ ಆಟೋಮೊಬೈಲ್ (ಎಫ್‌ಸಿಎ) ಹಾಗೂ ಪಿಯುಗಿಯೊ ಗ್ರೂಪ್ (ಪಿಎಸ್‌ಎ) ವಿಶ್ವದ ಅತಿದೊಡ್ಡ ಹಾಗೂ ಹೆಸರಾಂತ ವಾಹನ ತಯಾರಕ ಕಂಪನಿಗಳಾಗಿವೆ. ಈ ಎರಡೂ ಕಂಪನಿಗಳು ಪಾಲುದಾರಿಕೆಯನ್ನು ಮಾಡಿಕೊಂಡಿವೆ.

ಹೊಸ ಹೆಸರಿನಲ್ಲಿ ಕಾರ್ಯಾಚರಣೆ ಶುರುಮಾಡಿದ ಎಫ್‌ಸಿಎ-ಪಿಎಸ್‌ಎ

ಈ ಎರಡು ಕಂಪನಿಗಳ ಪಾಲುದಾರಿಕೆಯ ನಂತರ ಹೊಸ ಕಂಪನಿಯನ್ನು ಸ್ಥಾಪಿಸಲಾಗಿದ್ದು, ಸ್ಟೆಲ್ಲಾಸ್ಟಿಸ್ ಎಂದು ಹೆಸರಿಡಲಾಗಿದೆ. ಈ ಎರಡೂ ಕಂಪನಿಗಳು ಕಳೆದ ವರ್ಷ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದವು. ಈ ಪಾಲುದಾರಿಕೆಯಲ್ಲಿ ಎರಡೂ ಕಂಪನಿಗಳು 50-50 ಷೇರನ್ನು ಹೊಂದಿವೆ. ಈ ಪಾಲುದಾರಿಕೆಯ ನಂತರ ಹೊಸ ಕಂಪನಿಯು ಪ್ರಪಂಚದ ನಾಲ್ಕನೇ ಅತಿದೊಡ್ಡ ವಾಹನ ತಯಾರಕ ಕಂಪನಿಯಾಗಲಿದೆ. ಈ ಎರಡೂ ಕಂಪನಿಗಳು ಕಳೆದ ಒಂಬತ್ತು ತಿಂಗಳಿನಿಂದ ಪಾಲುದಾರಿಕೆಯನ್ವಯ ಕಾರ್ಯನಿರ್ವಹಿಸುತ್ತಿವೆ.

ಹೊಸ ಹೆಸರಿನಲ್ಲಿ ಕಾರ್ಯಾಚರಣೆ ಶುರುಮಾಡಿದ ಎಫ್‌ಸಿಎ-ಪಿಎಸ್‌ಎ

ಈಗ ಎರಡೂ ಕಂಪನಿಗಳ ಸಹಭಾಗಿತ್ವದ ನಂತರ ಹೊಸ ಕಂಪನಿ ಶುರುವಾಗಿದೆ. ಈ ಹೊಸ ಕಂಪನಿಯ ಮುಂದಿನ ಉದ್ದೇಶ ಕಂಪನಿಯ ಹೊಸ ಲೋಗೋವನ್ನು ಬಿಡುಗಡೆಗೊಳಿಸುವುದು. ಈ ಲೋಗೋ ಕಂಪನಿಗೆ ಪ್ರಪಂಚದಾದ್ಯಂತ ಗುರುತಾಗಿರಲಿದೆ.

MOST READ:ಪೊಲೀಸರಿಗೆ ತಲೆ ನೋವು ತಂದಿಟ್ಟ ಸೀಜ್ ಆದ ವಾಹನಗಳು

ಹೊಸ ಹೆಸರಿನಲ್ಲಿ ಕಾರ್ಯಾಚರಣೆ ಶುರುಮಾಡಿದ ಎಫ್‌ಸಿಎ-ಪಿಎಸ್‌ಎ

ಇನ್ನು ಸ್ಟೆಲ್ಲಾಸ್ಟಿಸ್ ಎಂಬ ಹೆಸರಿನ ಬಗ್ಗೆ ಹೇಳುವುದಾದರೆ, ಈ ಹೆಸರು ಲ್ಯಾಟಿನ್ ನ ಸ್ಟಾಲೊನಿಂದ ಬಂದಿದೆ. ಸ್ಟಾಲೊ ಎಂದರೆ ಲ್ಯಾಟಿನ್ ಭಾಷೆಯಲ್ಲಿ ನಕ್ಷತ್ರಗಳೊಂದಿಗೆ ಹೊಳೆಯುವುದು ಎಂದಾಗಿದೆ. ಈ ಎರಡೂ ಕಂಪನಿಗಳ ಹೊಸ ಹಾಗೂ ಮಹತ್ವಾಕಾಂಕ್ಷೆಯ ಕಾರಣಕ್ಕೆ ಈ ಹೆಸರನ್ನಿಡಲಾಗಿದೆ ಎಂದು ಕಂಪನಿ ಹೇಳಿದೆ.

ಹೊಸ ಹೆಸರಿನಲ್ಲಿ ಕಾರ್ಯಾಚರಣೆ ಶುರುಮಾಡಿದ ಎಫ್‌ಸಿಎ-ಪಿಎಸ್‌ಎ

ಈ ಎರಡೂ ಕಂಪನಿಗಳು ಒಂದಾಗಿ ಮುಂಬರುವ ದಿನಗಳಲ್ಲಿ ವಾಹನಗಳ ಹೊಸ ಯುಗಕ್ಕೆ ನಾಂದಿ ಹಾಡಲಿವೆ ಎಂದು ಕಂಪನಿ ಹೇಳಿದೆ. ಸ್ಟೆಲ್ಲಾಸ್ಟಿಸ್ಹೆಸರಿನ ಲ್ಯಾಟಿನ್ ಅರ್ಥವು ಅಮೆರಿಕಾ ಮೂಲದ ಎಫ್‌ಸಿಎ ಹಾಗೂ ಫ್ರಾನ್ಸ್ ಮೂಲದ ಪಿಎಸ್‌ಎ ಕಂಪನಿಗಳ ಭವ್ಯ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ.

MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಹೊಸ ಹೆಸರಿನಲ್ಲಿ ಕಾರ್ಯಾಚರಣೆ ಶುರುಮಾಡಿದ ಎಫ್‌ಸಿಎ-ಪಿಎಸ್‌ಎ

ಎಫ್‌ಸಿಎ ಗ್ರೂಪ್ ಹಾಗೂ ಪಿಎಸ್‌ಎ ಗ್ರೂಪ್ ಗಳು ಸಹಭಾಗಿತ್ವವನ್ನು ಘೋಷಿಸಿದಾಗಿನಿಂದ, ಎರಡು ಕಂಪನಿಗಳು ಹೊಸ ಹೆಸರನ್ನು ಹುಡುಕಲು ಆರಂಭಿಸಿದ್ದವು. ಎರಡೂ ಕಂಪನಿಗಳ ಮ್ಯಾನೇಜ್ ಮೆಂಟ್ ಈ ಪ್ರಕ್ರಿಯೆಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿತ್ತು ಎಂದು ಕಂಪನಿ ಹೇಳಿದೆ.

ಹೊಸ ಹೆಸರಿನಲ್ಲಿ ಕಾರ್ಯಾಚರಣೆ ಶುರುಮಾಡಿದ ಎಫ್‌ಸಿಎ-ಪಿಎಸ್‌ಎ

ಇದರ ಜೊತೆಗೆ ಹೊಸ ಕಂಪನಿಯಾದ ಸ್ಟೆಲ್ಲಾಸ್ಟಿಸ್ ಮುಂಬರುವ ದಿನಗಳಲ್ಲಿ ತನ್ನ ಗ್ರಾಹಕರಿಗೆ ಗುಣಮಟ್ಟದ ವಾಹನಗಳನ್ನು ನೀಡಲು ಎರಡೂ ಕಂಪನಿಗಳ ಪರಿಣತರ ಪ್ರತಿಭೆ ಹಾಗೂ ಜ್ಞಾನವನ್ನು ಬಳಸಿಕೊಳ್ಳಲಿದೆ ಎಂದು ಎಫ್‌ಸಿಎ ಗ್ರೂಪ್ ಹಾಗೂ ಪಿಎಸ್‌ಎ ಗ್ರೂಪ್ ಗಳು ಹೇಳಿವೆ.

Most Read Articles

Kannada
Read more on ಫಿಯೆಟ್ fiat
English summary
FCA group and PSA group to work under a new brand name Stellantis. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X