ಬಿಎಸ್-6 ಎಫೆಕ್ಟ್- ಫಿಯೆಟ್ ಜನಪ್ರಿಯ ಡೀಸೆಲ್ ಎಂಜಿನ್ ಕೈಬಿಟ್ಟ ಮಾರುತಿ ಸುಜುಕಿ, ಟಾಟಾ..

ಭಾರತದಲ್ಲಿ ಕಡ್ಡಾಯವಾಗಿ ಜಾರಿಯಾಗುತ್ತಿರುವ ಬಿಎಸ್-6 ಎಮಿಷನ್ ನಿಯಮದಿಂದಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಹಲವು ಡೀಸೆಲ್ ಎಂಜಿನ್ ಪ್ರೇರಿತ ಕಾರು ಮಾದರಿಗಳಿಗೆ ಸಂಕಷ್ಟ ಎದುರಾಗಿದ್ದು, ಮಾರುತಿ ಸುಜುಕಿ ಮತ್ತು ಟಾಟಾ ಸೇರಿದಂತೆ ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ಏಪ್ರಿಲ್ 1ರ ನಂತರ ಎಂಟ್ರಿ ಲೆವಲ್ ಡೀಸೆಲ್ ಕಾರು ಮಾದರಿಗಳ ಮಾರಾಟಕ್ಕೆ ಗುಡ್ ಬೈ ಹೇಳುತ್ತಿವೆ.

ಬಿಎಸ್-6 ಎಫೆಕ್ಟ್- ಫಿಯೆಟ್ ಜನಪ್ರಿಯ ಡೀಸೆಲ್ ಎಂಜಿನ್ ಕೈಬಿಟ್ಟ ಮಾರುತಿ ಸುಜುಕಿ, ಟಾಟಾ..

ಹೌದು, ಹೊಸ ಎಮಿಷನ್ ನಿಯಮದಿಂದಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬಿಎಸ್-4 ಡೀಸೆಲ್ ಎಂಜಿನ್ ಮಾದರಿಗಳನ್ನು ಬಿಎಸ್-6 ನಿಯಮಕ್ಕೆ ಉನ್ನತೀಕರಿಸುವುದು ಕಾರುಗಳ ಬೆಲೆಯಲ್ಲಿ ಒಂದೇ ಬಾರಿಗೆ ರೂ. 90 ಸಾವಿರದಿಂದ ರೂ. 1.50 ಲಕ್ಷ ತನಕ ಹೆಚ್ಚುವರಿ ಬೆಲೆ ಪಡೆಯುವ ಸಾಧ್ಯತೆಗಳಿದ್ದು, ಈ ಹಿನ್ನಲೆಯಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಫಿಯೆಟ್ ನಿರ್ಮಾಣದ 1.3-ಲೀಟರ್ ಡೀಸೆಲ್ ಎಂಜಿನ್ ಬಳಕೆಯ ಕಾರುಗಳ ಉತ್ಪಾದನೆಯು ಶೀಘ್ರದಲ್ಲೇ ಬಂದ್ ಆಗಲಿದೆ.

ಬಿಎಸ್-6 ಎಫೆಕ್ಟ್- ಫಿಯೆಟ್ ಜನಪ್ರಿಯ ಡೀಸೆಲ್ ಎಂಜಿನ್ ಕೈಬಿಟ್ಟ ಮಾರುತಿ ಸುಜುಕಿ, ಟಾಟಾ..

ಫಿಯೆಟ್ ನಿರ್ಮಾಣದ 1.3-ಲೀಟರ್ ಡೀಸೆಲ್ ಎಂಜಿನ್ ಮಾದರಿಯನ್ನು ಮಾರುತಿ ಸುಜುಕಿ, ಟಾಟಾ ಸೇರಿದಂತೆ ಪ್ರಮುಖ ಐದು ಕಾರು ಉತ್ಪಾದನಾ ಸಂಸ್ಥೆಗಳು ಬಳಕೆ ಮಾಡುತ್ತಿದ್ದು, ಬಿಎಸ್-6 ನಿಯಮಕ್ಕೆ ಉನ್ನತೀಕರಿಸಬೇಕಿರುವ ಹಿನ್ನಲೆಯಲ್ಲಿ ಜನಪ್ರಿಯ ಡೀಸೆಲ್ ಎಂಜಿನ್ ಮಾದರಿಯನ್ನು ಇಂದಿನಿಂದಲೇ ಸ್ಥಗಿತಗೊಳಿಸಿದೆ.

ಬಿಎಸ್-6 ಎಫೆಕ್ಟ್- ಫಿಯೆಟ್ ಜನಪ್ರಿಯ ಡೀಸೆಲ್ ಎಂಜಿನ್ ಕೈಬಿಟ್ಟ ಮಾರುತಿ ಸುಜುಕಿ, ಟಾಟಾ..

ಫಿಯೆಟ್ ಕಾರು ಮಾದರಿಗಳಾದ ಲಿನಿಯಾ ಸೆಡಾನ್, ಪುಂಟೊ ಇವೊ ಮತ್ತು ಅಬಾರ್ತ್ ಪುಂಟೊ ಸೇರಿದಂತೆ ಒಟ್ಟು ವಿವಿಧ ಮಾದರಿಯ 24 ಕಾರುಗಳಲ್ಲಿ 1.3-ಲೀಟರ್ ಡೀಸೆಲ್ ಎಂಜಿನ್ ಬಳಕೆಯಾಗುತ್ತಿದ್ದು, ಇದೀಗ ಹೊಸ ನಿಯಮದಂತೆ ಸುಧಾರಿತ ತಂತ್ರಜ್ಞಾನ ಪ್ರೇರಿತ ಡೀಸೆಲ್ ಎಂಜಿನ್ ಅಭಿವೃದ್ದಿಗೊಳಿಸಲು ಸಿದ್ದತೆ ನಡೆಸಿದೆ.

ಬಿಎಸ್-6 ಎಫೆಕ್ಟ್- ಫಿಯೆಟ್ ಜನಪ್ರಿಯ ಡೀಸೆಲ್ ಎಂಜಿನ್ ಕೈಬಿಟ್ಟ ಮಾರುತಿ ಸುಜುಕಿ, ಟಾಟಾ..

ಮಾರುತಿ ಸುಜುಕಿ ಕಾರು ಮಾದರಿಗಳಾದ ವಿಟಾರಾ ಬ್ರೆಝಾ, ಎಸ್-ಕ್ರಾಸ್, ಡಿಜೈರ್, ಬಲೆನೊ, ಸ್ವಿಫ್ಟ್ ಸೇರಿದಂತೆ ಟಾಟಾ ನಿರ್ಮಾಣದ ಜೆಸ್ಟ್, ಬೊಲ್ಟ್ ಕಾರು ಸಹ ಫಿಯೆಟ್ 1.3-ಲೀಟರ್ ಡೀಸೆಲ್ ಎಂಜಿನ್ ಮಾದರಿಯನ್ನೇ ಹೊಂದಿದ್ದು, ಇದೀಗ ಬಿಎಸ್-6 ನಿಯಮದಿಂದಾಗಿ ಹೊಸ ಮಾದರಿಯ ಎಂಜಿನ್ ಪಡೆದುಕೊಳ್ಳಲಿವೆ. ಅದರಲ್ಲೂ ಮಾರುತಿ ಸುಜುಕಿ ನಿರ್ಮಾಣದ ಹೊಸ ಡೀಸೆಲ್ ಎಂಜಿನ್ ಕಾರುಗಳಲ್ಲಿ ಮಹತ್ವದ ಬದಲಾವಣೆ ತರಲಾಗುತ್ತಿದ್ದು, ಎಂಟ್ರಿ ಲೆವಲ್ ಕಾರುಗಳಲ್ಲಿ ಡೀಸೆಲ್ ಎಂಜಿನ್ ಆಯ್ಕೆಯನ್ನೇ ಕೈಬಿಡಲಾಗಿದೆ.

ಬಿಎಸ್-6 ಎಫೆಕ್ಟ್- ಫಿಯೆಟ್ ಜನಪ್ರಿಯ ಡೀಸೆಲ್ ಎಂಜಿನ್ ಕೈಬಿಟ್ಟ ಮಾರುತಿ ಸುಜುಕಿ, ಟಾಟಾ..

ಮಾಲಿನ್ಯ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವು ಕೆಲವು ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿರುವುದೇ ಈ ಬದಲಾವಣೆಗೆ ಪ್ರಮುಖ ಕಾರಣವಾಗಿದ್ದು, ಮಾರುತಿ ಸುಜುಕಿ ಸೇರಿದಂತೆ ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ಎಂಟ್ರಿ ಲೆವಲ್ ಕಾರುಗಳಲ್ಲಿ ಡೀಸೆಲ್ ಎಂಜಿನ್ ಆಯ್ಕೆಯನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿವೆ.

ಬಿಎಸ್-6 ಎಫೆಕ್ಟ್- ಫಿಯೆಟ್ ಜನಪ್ರಿಯ ಡೀಸೆಲ್ ಎಂಜಿನ್ ಕೈಬಿಟ್ಟ ಮಾರುತಿ ಸುಜುಕಿ, ಟಾಟಾ..

ಎಂಟ್ರಿ ಲೆವಲ್ ಕಾರುಗಳಲ್ಲಿ ಡೀಸೆಲ್ ಎಂಜಿನ್ ಬದಲಿಗೆ ಪೆಟ್ರೋಲ್ ಮತ್ತು ಸಿಎನ್‌ಜಿ ಕಾರುಗಳ ಆಯ್ಕೆಯನ್ನು ಹೆಚ್ಚಿಸುತ್ತಿರುವ ಮಾರುತಿ ಸುಜುಕಿಯು ಹೈ ಎಂಡ್ ಕಾರು ಮಾದರಿಗಳಲ್ಲಿ ಮಾತ್ರವೇ ಡೀಸೆಲ್ ಎಂಜಿನ್ ಆಯ್ಕೆ ನೀಡುವ ಮಹತ್ವದ ನಿರ್ಧಾರ ಪ್ರಕಟಿಸಿದೆ.

ಬಿಎಸ್-6 ಎಫೆಕ್ಟ್- ಫಿಯೆಟ್ ಜನಪ್ರಿಯ ಡೀಸೆಲ್ ಎಂಜಿನ್ ಕೈಬಿಟ್ಟ ಮಾರುತಿ ಸುಜುಕಿ, ಟಾಟಾ..

ಒಂದು ವೇಳೆ ಎಂಟ್ರಿ ಲೆವಲ್ ಕಾರುಗಳ ಡೀಸೆಲ್ ಮಾದರಿಗಳನ್ನು ಉನ್ನತೀಕರಿಸಿದರೂ ಸಹ ಕಾರುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಲಿದ್ದು, ಈ ಕಾರಣಕ್ಕಾಗಿಯೇ ಮಾರುತಿ ಸುಜುಕಿಯು ರೂ.10 ಲಕ್ಷದೊಳಗಿನ ಕಾರುಗಳಲ್ಲಿ ಡೀಸೆಲ್ ಎಂಜಿನ್ ಆಯ್ಕೆಯ ಬಗೆಗೆ ಹೆಚ್ಚು ತೆಲೆಕೆಡಿಸಿಕೊಳ್ಳದೇ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಆವೃತ್ತಿಗಳಿಗೆ ವಿಶೇಷ ಗಮನಹರಿಸುತ್ತಿದೆ.

ಬಿಎಸ್-6 ಎಫೆಕ್ಟ್- ಫಿಯೆಟ್ ಜನಪ್ರಿಯ ಡೀಸೆಲ್ ಎಂಜಿನ್ ಕೈಬಿಟ್ಟ ಮಾರುತಿ ಸುಜುಕಿ, ಟಾಟಾ..

ಇದರಿಂದ ಮಾರುತಿ ಸುಜುಕಿ ನಿರ್ಮಾಣದ ಎಂಟ್ರಿ ಲೆವಲ್ ಕಾರುಗಳಲ್ಲಿ ಇನ್ಮುಂದೆ ಪೆಟ್ರೋಲ್ ಎಂಜಿನ್ ಆಯ್ಕೆ ಮಾತ್ರವೇ ಸಿಗಲಿದ್ದು, ಹೈ ಎಂಡ್ ಮಾದರಿಗಳಲ್ಲಿ ಮಾತ್ರವೇ 1.5-ಲೀಟರ್, 1.6-ಲೀಟರ್ ಸಾಮರ್ಥ್ಯದ ಡೀಸೆಲ್ ಎಂಜಿನ್ ಬಿಡುಗಡೆ ಮಾಡುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಬಿಎಸ್-6 ನಂತರ ಬೆಲೆ ಹೆಚ್ಚಿದರೂ ಕೂಡಾ ಹೊಸ ಬದಲಾವಣೆಯೊಂದಿಗೆ ಕಾರು ಮಾರಾಟದಲ್ಲಿ ಕುಸಿಯದಂತೆ ಎಂಜಿನ್ ಆಯ್ಕೆಗಳನ್ನು ಸಿದ್ದಪಡಿಸುತ್ತಿದೆ.

Most Read Articles

Kannada
English summary
Fiat Stops Production Of 1.3-Litre Multijet Engine. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X