ಹೈಬ್ರಿಡ್ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ ಜನಪ್ರಿಯ ಜೀಪ್ ವ್ರಾಂಗ್ಲರ್

ಫಿಯೆಟ್ ಕ್ರಿಸ್ಲರ್ ಆಟೋ ಜೀಪ್‌ನ ಎಲ್ಲಾ ಎಸ್‌ಯುವಿಗಳನ್ನು ಹೈಬ್ರಿಡ್ ಆವೃತ್ತಿಯಲ್ಲಿ ಬಿಡುಗಡೆಗೊಳಿಸುತ್ತಿದೆ. ಜೀಪ್ ಕಂಪಾಸ್ 4x4 ಹಾಗೂ ರೆನೆಗೇಡ್ 4x4 ನಂತರ ಕಂಪನಿಯು ತನ್ನ ಜನಪ್ರಿಯ ಎಸ್‌ಯುವಿಯಾದ ವ್ರಾಂಗ್ಲರ್ ಅನ್ನು ಎಲೆಕ್ಟ್ರಿಕ್ ಹೈಬ್ರಿಡ್ ಆವೃತ್ತಿಯಲ್ಲಿ ಬಿಡುಗಡೆಗೊಳಿಸಲು ಮುಂದಾಗಿದೆ.

ಹೈಬ್ರಿಡ್ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ ಜನಪ್ರಿಯ ಜೀಪ್ ವ್ರಾಂಗ್ಲರ್

ವ್ರಾಂಗ್ಲರ್ ಹೈಬ್ರಿಡ್ ಅನ್ನು ಈ ವರ್ಷದ ಡಿಸೆಂಬರ್‌ನಲ್ಲಿ ಜಾಗತಿಕವಾಗಿ ಬಿಡುಗಡೆಗೊಳಿಸಲಾಗುವುದೆಂದು ಹೇಳಲಾಗಿದೆ. ಮೊದಲಿಗೆ ಈ ಎಸ್‌ಯುವಿಯನ್ನು ಅಮೆರಿಕಾ ಹಾಗೂ ಯುರೋಪಿನ ಹಲವು ದೇಶಗಳಲ್ಲಿ ಬಿಡುಗಡೆಗೊಳಿಸಲಾಗುವುದು. ಈ ಎಸ್‌ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ನಂತರದ ದಿನಗಳಲ್ಲಿ ಬಹಿರಂಗಪಡಿಸಲಾಗುವುದು. ವ್ರಾಂಗ್ಲರ್ ಹೈಬ್ರಿಡ್ ಮಾರುಕಟ್ಟೆಯಲ್ಲಿರುವ ಮಾದರಿಯ ವಿನ್ಯಾಸವನ್ನು ಹೊಂದಿದೆ. ಆದರೆ ಕೆಲವು ಹೈಬ್ರಿಡ್ ಬ್ಯಾಡ್ಜಿಂಗ್ ಗಳನ್ನು ಹೊಂದಲಿದೆ.

ಹೈಬ್ರಿಡ್ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ ಜನಪ್ರಿಯ ಜೀಪ್ ವ್ರಾಂಗ್ಲರ್

ಹಳೆಯ ಎಸ್‌ಯುವಿಯಲ್ಲಿರುವ ಎಲ್ಲಾ ಫೀಚರ್ ಗಳು ಹೊಸ ಮಾದರಿಯಲ್ಲಿ ಮುಂದುವರೆಯಲಿವೆ. ಈ ಎಸ್‌ಯುವಿಯಲ್ಲಿ ಪಿಹೆಚ್‌ಇವಿ ಪ್ಲಾಟ್‌ಫಾರಂನಲ್ಲಿ ನಿರ್ಮಿಸಲಾಗಿರುವ 3.6 ಲೀಟರಿನ ವಿ 6 ಎಂಜಿನ್ ಅಳವಡಿಸಲಾಗುವುದು. ಭಾರತದಲ್ಲಿ 2.0-ಲೀಟರಿನ ಹೈಬ್ರಿಡ್‌ ಎಂಜಿನ್ ನೀಡುವ ಸಾಧ್ಯತೆಗಳಿವೆ. ಕಂಪನಿಯು ಸದ್ಯಕ್ಕೆ ಭಾರತದಲ್ಲಿ ವ್ರಾಂಗ್ಲರ್ ರೂಬಿಕಾನ್ ಕಾರನ್ನು ಮಾರಾಟ ಮಾಡುತ್ತಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಹೈಬ್ರಿಡ್ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ ಜನಪ್ರಿಯ ಜೀಪ್ ವ್ರಾಂಗ್ಲರ್

ಜೀಪ್ ಕಂಪನಿಯು ಇತ್ತೀಚೆಗಷ್ಟೇ ತನ್ನ ಜನಪ್ರಿಯ ಎಸ್‌ಯುವಿಯಾದ ಕಂಪಾಸ್‌ನ ನೈಟ್ ಎಡಿಷನ್ ಆವೃತ್ತಿಯನ್ನು ಬಿಡುಗಡೆಗೊಳಿಸಿದ್ದು, ಅದರ ವಿತರಣೆಯನ್ನು ಆರಂಭಿಸಿದೆ. ಈ ಎಸ್‌ಯುವಿಯನ್ನು ಕೆಲವೇ ಕೆಲವು ದೇಶಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

ಹೈಬ್ರಿಡ್ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ ಜನಪ್ರಿಯ ಜೀಪ್ ವ್ರಾಂಗ್ಲರ್

ಫಿಯೆಟ್ ಕ್ರಿಸ್ಲರ್ ಕಂಪನಿಯು ತಾಂತ್ರಿಕ ದೋಷ ಉಂಟಾಗಿರುವ ಹಿನ್ನೆಲೆಯಲ್ಲಿ ಭಾರತದಲ್ಲಿರುವ ಜೀಪ್ ಕಂಪಾಸ್‌ನ 547 ಯುನಿಟ್ ಗಳನ್ನು ರಿಕಾಲ್ ಮಾಡಿದೆ. ಈ ವರ್ಷ ಬಿಡುಗಡೆಯಾದ ಈ ಕಾರುಗಳ ವೈಪರ್ ಯುನಿಟ್ ನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಇವುಗಳನ್ನು ರಿಕಾಲ್ ಮಾಡಲಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಹೈಬ್ರಿಡ್ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ ಜನಪ್ರಿಯ ಜೀಪ್ ವ್ರಾಂಗ್ಲರ್

ಈ ವರ್ಷದ ಜೂನ್‌ ತಿಂಗಳಿನಲ್ಲಿ ಕಂಪನಿಯು 95,000 ಯುನಿಟ್ ಜೀಪ್ ಚಿರೋಕಿಗಳನ್ನು ವಿಶ್ವದಾದ್ಯಂತ ರಿಕಾಲ್ ಮಾಡಿತ್ತು. ಈ ಕಾರುಗಳ ಗೇರ್‌ಬಾಕ್ಸ್‌ನಲ್ಲಿ ದೋಷ ಕಂಡುಬಂದಿದ್ದು, ಚಾಲನೆಯಲಿದ್ದಾಗ ದಾರಿ ಮಧ್ಯದಲ್ಲಿ ಈ ಕಾರುಗಳು ನಿಲ್ಲುತ್ತಿವೆ.

ಹೈಬ್ರಿಡ್ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ ಜನಪ್ರಿಯ ಜೀಪ್ ವ್ರಾಂಗ್ಲರ್

ಭಾರತದಲ್ಲಿ ಉಪಯೋಗಿಸಿದ ಕಾರುಗಳನ್ನು ಮಾರಾಟ ಮಾಡಲು ಜೀಪ್ ಕಂಪನಿಯು ಹೊಸ ಪ್ಲಾಟ್‌ಫಾರಂ ಅನ್ನು ಆರಂಭಿಸಿದೆ. ಇದರಡಿಯಲ್ಲಿ ಗ್ರಾಹಕರು ಹಳೆಯ ಜೀಪ್ ಕಂಪಾಸ್ ಎಸ್‌ಯುವಿಗಳನ್ನು ಕಂಪನಿಯ ಶೋ ರೂಂನಿಂದ ಖರೀದಿಸಬಹುದು. ಲಾಕ್‌ಡೌನ್ ಕಾರಣದಿಂದ ಹೊಸ ಕಾರು ಖರೀದಿಸುವ ಯೋಜನೆಯನ್ನು ಕೈಬಿಟ್ಟಿರುವ ಜನರು ಕೈಗೆಟುಕುವ ದರದಲ್ಲಿ ಸೆಕೆಂಡ್ ಹ್ಯಾಂಡ್ ಜೀಪ್‌ ಕಾರನ್ನು ಖರೀದಿಸಬಹುದು.

Most Read Articles

Kannada
Read more on ಜೀಪ್ jeep
English summary
Fiat Crystler launching Jeep wrangler in hybrid version. Read in Kannada.
Story first published: Thursday, September 3, 2020, 16:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X