ಫೇಮ್ 2 ಯೋಜನಾ ಅವಧಿ ವಿಸ್ತರಣೆಗಾಗಿ ಕೇಂದ್ರಕ್ಕೆ ಒತ್ತಾಯಿಸಿದ ಎಫ್ಐಸಿಸಿಐ

ಕರೋನಾ ವೈರಸ್ ಪರಿಣಾಮ ಭಾರೀ ನಷ್ಟ ಅನುಭವಿಸುತ್ತಿರುವ ಆಟೋ ಉದ್ಯಮ ಕ್ಷೇತ್ರವು ಇದೀಗ ಹೊಸ ಸವಾಲುಗಳೊಂದಿಗೆ ಉದ್ಯಮ ಚಟುವಟಿಕೆಗಳನ್ನು ನಡೆಸಬೇಕಾದ ಅನಿವಾರ್ಯತೆಯಲ್ಲಿವೆ. ಇದರಿಂದ ಭಾರೀ ನಷ್ಟ ಭೀತಿಯಲ್ಲಿರುವ ಆಟೋ ಉದ್ಯಮ ಸುಧಾರಿಸುವ ನಿಟ್ಟಿನಲ್ಲಿ ಕೆಲವು ವಿನಾಯ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಎಫ್ಐಸಿಸಿಐ ಸಂಸ್ಥೆಯು ಒತ್ತಾಯಿಸಿದೆ.

ಫೇಮ್ 2 ಯೋಜನಾ ಅವಧಿ ವಿಸ್ತರಣೆಗಾಗಿ ಕೇಂದ್ರಕ್ಕೆ ಒತ್ತಾಯಿಸಿದ ಎಫ್ಐಸಿಸಿಐ

ಎಫ್ಐಸಿಸಿಐ(ಫೆಡರೇಶನ್ ಆಫ್ ಇಂಡಿಯನ್ ಟ್ರೇಡ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ) ಸಂಸ್ಥೆಯು ಕೇಂದ್ರ ಸರ್ಕರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಎಲೆಕ್ಟ್ರಿಕ್ ವಾಹನ ಉದ್ಯಮಕ್ಕೆ ಗರಿಷ್ಠ ವಿನಾಯ್ತಿ ನೀಡುವಂತೆ ಒತ್ತಾಯಿಸಿದ್ದು, ಇವಿ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ಹೆಚ್ಚಿಸಲು ಜಾರಿಗೊಳಿಸಲಾಗಿರುವ ಫೇಮ್ 2 ಯೋಜನಾ ಅವಧಿಯನ್ನು 2025ರ ತನಕ ವಿಸ್ತರಣೆ ಮಾಡುವಂತೆ ಸಲಹೆ ನೀಡಿದೆ.

ಫೇಮ್ 2 ಯೋಜನಾ ಅವಧಿ ವಿಸ್ತರಣೆಗಾಗಿ ಕೇಂದ್ರಕ್ಕೆ ಒತ್ತಾಯಿಸಿದ ಎಫ್ಐಸಿಸಿಐ

ಭವಿಷ್ಯ ದೃಷ್ಠಿಯಿಂದ ಎಲೆಕ್ಟ್ರಿಕ್ ವಾಹನ ಉತ್ಪಾದನಾ ವಲಯಕ್ಕೆ ವಿನಾಯ್ತಿ ನೀಡದೆ ಹೋದಲ್ಲಿ ಹೊಸ ಉದ್ಯಮ ಸ್ಥಾಪನೆಗಳು ಮತ್ತು ಬಂಡವಾಳ ಹೂಡಿಕೆ ಪ್ರಮಾಣವು ಗಣನೀಯ ಪ್ರಮಾಣದಲ್ಲಿ ತಗ್ಗುವುದಾಗಿ ಕೇಂದ್ರ ಸರ್ಕಾರಕ್ಕೆ ಮುನ್ನೆಚ್ಚೆರಿಕೆ ನೀಡಿದೆ.

ಫೇಮ್ 2 ಯೋಜನಾ ಅವಧಿ ವಿಸ್ತರಣೆಗಾಗಿ ಕೇಂದ್ರಕ್ಕೆ ಒತ್ತಾಯಿಸಿದ ಎಫ್ಐಸಿಸಿಐ

ಹೀಗಾಗಿ ಎಲೆಕ್ಟ್ರಿಕ್ ವಾಹನ ಉದ್ಯಮ ಅಭಿವೃದ್ದಿಗಾಗಿ ಫೇಮ್ 2 ಯೋಜನೆಯನ್ನು 2025ರ ತನಕ ವಿಸ್ತರಣೆಗೆ ಒತ್ತಾಯಿಸಲಾಗಿದ್ದು, ಫೇಮ್ 2 ಯೋಜನೆಯು ಮುಂದಿನ ವರ್ಷ 2021ಕ್ಕೆ ಕೊನೆಗೊಳ್ಳಲಿದೆ.

ಫೇಮ್ 2 ಯೋಜನಾ ಅವಧಿ ವಿಸ್ತರಣೆಗಾಗಿ ಕೇಂದ್ರಕ್ಕೆ ಒತ್ತಾಯಿಸಿದ ಎಫ್ಐಸಿಸಿಐ

2019ರಲ್ಲಿ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮತ್ತು ಮಾರಾಟವನ್ನು ಹೆಚ್ಚಿಸುವ ಸಂಬಂಧ ಫೇಮ್ 2 ಯೋಜನೆ ಜಾರಿಗೆ ತಂದಿರುವ ಕೇಂದ್ರ ಸರ್ಕಾರವು ಮೂರು ವರ್ಷಗಳ ಅವಧಿಗಾಗಿ ಬರೋಬ್ಬರಿ ರೂ. 10 ಸಾವಿರ ಕೋಟಿ ಮೀಸಲಿಡಲಾಗಿದೆ.

ಫೇಮ್ 2 ಯೋಜನಾ ಅವಧಿ ವಿಸ್ತರಣೆಗಾಗಿ ಕೇಂದ್ರಕ್ಕೆ ಒತ್ತಾಯಿಸಿದ ಎಫ್ಐಸಿಸಿಐ

2030ರ ವೇಳೆಗೆ ಶೇ.100 ರಷ್ಟು ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳ ಹೆಚ್ಚಿಸುವ ಸಂಬಂಧ ಫೇಮ್ 2 ಯೋಜನೆಯನ್ನು ಈಗಲೇ ಜಾರಿಗೆ ತರಲಾಗಿದ್ದು, ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮತ್ತು ಮಾರಾಟವನ್ನು ಹೆಚ್ಚಿಸಲು ಇದು ಸಾಕಷ್ಟು ಸಹಕಾರಿಯಾಗಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಫೇಮ್ 2 ಯೋಜನಾ ಅವಧಿ ವಿಸ್ತರಣೆಗಾಗಿ ಕೇಂದ್ರಕ್ಕೆ ಒತ್ತಾಯಿಸಿದ ಎಫ್ಐಸಿಸಿಐ

ಫೇಮ್ 2 ಯೋಜನೆ ಅಡಿ ಎಲೆಕ್ಟ್ರಿಕ್ ವಾಹನ ಉತ್ಪಾದಿಸುವ ಕಂಪನಿಗಳಿಗೆ ಮಾತ್ರವಲ್ಲದೆ ಎಲೆಕ್ಟ್ರಿಕ್ ವಾಹನ ಖರೀದಿಸುವ ವಾಹನ ಸವಾರಿಗೂ ಸಾಕಷ್ಟು ಅನುಕೂಲಗಳಿದ್ದು, ಇವಿ ವಾಹನ ಖರೀದಿ ಮೇಲೆ ಗರಿಷ್ಠ ಸಬ್ಸಡಿ, ಕನಿಷ್ಠ ಪ್ರಮಾಣದ ಜಿಎಸ್‌ಟಿ, ತೆರಿಗೆ ವಿನಾಯ್ತಿ ಮತ್ತು ಇವಿ ವಾಹನ ಖರೀದಿಗೆ ಸುಲಭ ಸಾಲ-ಸೌಲಭ್ಯಗಳನ್ನು ಫೇಮ್ 2 ಯೋಜನೆ ಅಡಿ ನೀಡಲಾಗುತ್ತದೆ.

ಫೇಮ್ 2 ಯೋಜನಾ ಅವಧಿ ವಿಸ್ತರಣೆಗಾಗಿ ಕೇಂದ್ರಕ್ಕೆ ಒತ್ತಾಯಿಸಿದ ಎಫ್ಐಸಿಸಿಐ

2021ರ ನಂತರ ಎಲೆಕ್ಟ್ರಿಕ್ ವಾಹನಗಳು ಸಾಮಾನ್ಯ ವಾಹನ ಮಾದರಿಗಳಂತೆ ಮಾರಾಟಗೊಳ್ಳಲಿದ್ದು, ಈ ವೇಳೆ ಫೇಮ್ 2 ಯೋಜನೆ ಅಡಿ ನೀಡಲಾಗುವ ಸಬ್ಸಡಿ, ಜಿಎಸ್‌ಟಿ ವಿನಾಯ್ತಿ ಸೌಲಭ್ಯಗಳನ್ನು ತೆಗೆದುಹಾಕಲಾಗುತ್ತದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಫೇಮ್ 2 ಯೋಜನಾ ಅವಧಿ ವಿಸ್ತರಣೆಗಾಗಿ ಕೇಂದ್ರಕ್ಕೆ ಒತ್ತಾಯಿಸಿದ ಎಫ್ಐಸಿಸಿಐ

ಇದರಿಂದ ಎಲೆಕ್ಟ್ರಿಕ್ ವಾಹನಗಳ ಬೆಲೆಯು ಮತ್ತಷ್ಟು ದುಬಾರಿಯಾಗಲಿದ್ದು, ಇವಿ ವಾಹನಗಳ ಬೇಡಿಕೆ ಮತ್ತೆ ಕಡಿಮೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ಫೇಮ್ 2 ಯೋಜನಾ ಅವಧಿಯನ್ನು 2025ರ ತನಕ ವಿಸ್ತರಿಸುವಂತೆ ಬೇಡಿಕೆ ಹೆಚ್ಚುತ್ತಿದ್ದು, ಕೇಂದ್ರ ಸರ್ಕಾರವು ಯಾವ ನಿರ್ಧಾರ ಕೈಗೊಳ್ಳಲಿದೆ ಎನ್ನುವುದನ್ನು ಕಾಯ್ದುನೋಡಬೇಕಿದೆ.

Most Read Articles

Kannada
English summary
FICCI has urged Central Government for various measures, including the continuation of the FAME -II scheme till 2025, to enhance demand for electric vehicles.
Story first published: Saturday, July 4, 2020, 15:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X