ವಿನೂತನ ಕಾರ್ಯಕ್ಕೆ ಮುಂದಾದ ರೆನಾಲ್ಟ್ ಕಂಪನಿ ಸಿಬ್ಬಂದಿ

ಕರೋನಾ ವೈರಸ್ ಇಡೀ ಪ್ರಪಂಚವನ್ನು ತತ್ತರಿಸುವಂತೆ ಮಾಡಿದೆ. ಇಲ್ಲಿಯವರೆಗೂ ಈ ವೈರಸ್ ನಿಂದಾಗಿ ವಿಶ್ವದಾದ್ಯಂತ 25,000ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಸಾವು ನೋವುಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ವಿನೂತನ ಕಾರ್ಯಕ್ಕೆ ಮುಂದಾದ ರೆನಾಲ್ಟ್ ಕಂಪನಿಯ ಸಿಬ್ಬಂದಿ

ಇಲ್ಲಿಯವರೆಗೆ, ವಿಶ್ವದಾದ್ಯಂತ 5 ಲಕ್ಷಕ್ಕೂ ಹೆಚ್ಚು ಜನರು ಕೋವಿಡ್ -19 ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಕೋವಿಡ್ -19 ವೈರಸ್‌ನಿಂದ 1,28,706 ಜನರು ಚೇತರಿಸಿಕೊಂಡಿದ್ದಾರೆ ಎಂಬುದು ಸಮಾಧಾನಕರ ಸುದ್ದಿ. ಕೋವಿಡ್ -19 ವೈರಸ್ ಸೋಂಕಿಗೆ ಒಳಗಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವುದರಿಂದ, ವೈದ್ಯಕೀಯ ಉಪಕರಣಗಳ ಅಗತ್ಯವು ಹೆಚ್ಚಾಗಿದೆ.

ವಿನೂತನ ಕಾರ್ಯಕ್ಕೆ ಮುಂದಾದ ರೆನಾಲ್ಟ್ ಕಂಪನಿಯ ಸಿಬ್ಬಂದಿ

ಅದರಲ್ಲೂ ವೆಂಟಿಲೇಟರ್‌ಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಿದೆ. ಕೋವಿಡ್ -19 ವೈರಸ್ ಉಸಿರಾಟದ ಮೇಲೆ ಪರಿಣಾಮವನ್ನು ಬೀರುವ ಕಾರಣ ವೆಂಟಿಲೇಟರ್‌ಗಳು ಅಗತ್ಯವಾಗಿವೆ. ಪರಿಸ್ಥಿತಿ ಹದಗೆಟ್ಟಿರುವ ಕಾರಣಕ್ಕೆ ಆಟೋಮೊಬೈಲ್ ಕಂಪನಿಗಳು ವೆಂಟಿಲೇಟರ್‌ ತಯಾರಿಕೆಗೆ ಮುಂದಾಗಿವೆ.

ವಿನೂತನ ಕಾರ್ಯಕ್ಕೆ ಮುಂದಾದ ರೆನಾಲ್ಟ್ ಕಂಪನಿಯ ಸಿಬ್ಬಂದಿ

ಅಮೇರಿಕಾದಲ್ಲಿ ಫೋರ್ಡ್, ಟೆಸ್ಲಾ ಹಾಗೂ ಜನರಲ್ ಮೋಟಾರ್ಸ್ ಕಂಪನಿಗಳು ವೆಂಟಿಲೇಟರ್ ಉತ್ಪಾದನೆಯಲ್ಲಿ ತೊಡಗಿವೆ. ಭಾರತದಲ್ಲಿ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ವೆಂಟಿಲೇಟರ್‌ಗಳ ಉತ್ಪಾದನೆಗೆ ಮುಂದಾಗಿದೆ.

ವಿನೂತನ ಕಾರ್ಯಕ್ಕೆ ಮುಂದಾದ ರೆನಾಲ್ಟ್ ಕಂಪನಿಯ ಸಿಬ್ಬಂದಿ

ಮಹೀಂದ್ರಾ ಕಂಪನಿಯ ಎಂಜಿನಿಯರ್‌ಗಳು ಮೊದಲ ವೆಂಟಿಲೇಟರ್‌ನ ಮೂಲಮಾದರಿಯನ್ನು ಕೇವಲ 48 ಗಂಟೆಗಳಲ್ಲಿ ಅಭಿವೃದ್ಧಿಪಡಿಸಿದ್ದಾರೆ. ಇದರ ಬೆಲೆ ರೂ.7,500ಗಳಾಗಿದೆ. ಅತ್ಯಾಧುನಿಕ ವೆಂಟಿಲೇಟರ್‌ ಗಳ ಬೆಲೆ ರೂ.5 ಲಕ್ಷಗಳಿಂದ ರೂ.10 ಲಕ್ಷಗಳಾಗುತ್ತದೆ.

ವಿನೂತನ ಕಾರ್ಯಕ್ಕೆ ಮುಂದಾದ ರೆನಾಲ್ಟ್ ಕಂಪನಿಯ ಸಿಬ್ಬಂದಿ

ಕರೋನಾ ವೈರಸ್ ನಿಂದಾಗಿ ಆಟೋ ಮೊಬೈಲ್ ಉದ್ಯಮಕ್ಕೆ ತೀವ್ರ ಪೆಟ್ಟು ಬಿದ್ದಿದೆ. ಈ ಕಾರಣಕ್ಕೆ ಉತ್ಪಾದನಾ ಘಟಕಗಳು ಮುಚ್ಚಲ್ಪಟ್ಟಿವೆ. ಇಂತಹ ವಾತಾವರಣದಲ್ಲಿ, ವಾಹನ ಕಂಪನಿಗಳ ಈ ಸಹಾಯವು ವೈದ್ಯಕೀಯ ಸಿಬ್ಬಂದಿಗೆ ಸಹಕಾರಿಯಾಗಲಿದೆ.

ವಿನೂತನ ಕಾರ್ಯಕ್ಕೆ ಮುಂದಾದ ರೆನಾಲ್ಟ್ ಕಂಪನಿಯ ಸಿಬ್ಬಂದಿ

ಈಗ ರೆನಾಲ್ಟ್ ಕಂಪನಿಯು ಸಹ ತನ್ನ ಕಾರುಗಳ ಉತ್ಪಾದನೆಯನ್ನು ನಿಲ್ಲಿಸಿದ್ದು, ತನ್ನ ನೌಕರರಿಗೆ ರಜೆ ನೀಡಿದೆ. ಆದರೆ ಸಮಯವನ್ನು ವ್ಯರ್ಥ ಮಾಡಲು ಬಯಸದ ರೆನಾಲ್ಟ್ ನೌಕರರು ವೈದ್ಯಕೀಯ ವೈಸರ್ ಅಂದರೆ ಮಾಸ್ಕ್ ಗಳನ್ನು ತಯಾರಿಸುತ್ತಿದ್ದಾರೆ.

ವಿನೂತನ ಕಾರ್ಯಕ್ಕೆ ಮುಂದಾದ ರೆನಾಲ್ಟ್ ಕಂಪನಿಯ ಸಿಬ್ಬಂದಿ

ಇದರಿಂದ ಆರೋಗ್ಯ ಸಿಬ್ಬಂದಿಗೆ ಅನುಕೂಲವಾಗಲಿದೆ. ಸ್ಪೇನ್‌ನ ರೆನಾಲ್ಟ್ ಕಂಪನಿಯ ಉದ್ಯೋಗಿಗಳು ಈ ಕಾರ್ಯಕ್ಕೆ ಕೈಹಾಕಿದ್ದಾರೆ. ಕರೋನಾ ವೈರಸ್ ನಿಂದ ಹೆಚ್ಚು ತೊಂದರೆಗೆ ಒಳಗಾಗಿರುವ ದೇಶಗಳಲ್ಲಿ ಸ್ಪೇನ್ ಸಹ ಒಂದು.

ವಿನೂತನ ಕಾರ್ಯಕ್ಕೆ ಮುಂದಾದ ರೆನಾಲ್ಟ್ ಕಂಪನಿಯ ಸಿಬ್ಬಂದಿ

ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಆಟೋಮೊಬೈಲ್ ಕಂಪನಿಗಳ ಈ ಕಾರ್ಯವು ಶ್ಲಾಘನೀಯ. ಭಾರತದಲ್ಲಿ 21 ದಿನಗಳ ಲಾಕ್ ಡೌನ್ ಘೋಷಿಸಲಾಗಿದೆ. ಕರೋನಾ ವೈರಸ್ ಹರಡದಂತೆ ತಡೆಯಲು ಕೇಂದ್ರ ಸರ್ಕಾರವು ಈ ನಿರ್ಧಾರವನ್ನು ಕೈಗೊಂಡಿದೆ.

Most Read Articles

Kannada
English summary
Renault workers making medical visors at home. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X