ಹೊಸ ಸುರಕ್ಷಾ ಮಾರ್ಗಸೂಚಿ ಅಡಿ ಕಾರುಗಳ ನಿರ್ಮಾಣಕ್ಕೆ ಚಾಲನೆ ನೀಡಿದ ಜೆಎಲ್ಆರ್

ಮಹಾಮಾರಿ ವೈರಸ್‌ನಿಂದಾಗಿ ಆಟೋ ಉದ್ಯಮವು ಭಾರೀ ನಷ್ಟ ಅನುಭವಿಸುತ್ತಿದ್ದು, ಇದೀಗ ಪರಿಸ್ಥಿತಿಗೆ ಅನುಗುಣವಾಗಿ ವಿನಾಯ್ತಿ ಪಡೆದುಕೊಂಡಿರುವ ಆಟೋ ಉದ್ಯಮವು ಹೊಸ ಸುರಕ್ಷಾ ಮಾರ್ಗಸೂಚಿ ಅಡಿ ವಾಹನಗಳ ಉತ್ಪಾದನೆಗೆ ಚಾಲನೆ ನೀಡಿವೆ.

ಹೊಸ ಸುರಕ್ಷಾ ಮಾರ್ಗಸೂಚಿ ಅಡಿ ಜೆಎಲ್ಆರ್ ಕಾರುಗಳ ನಿರ್ಮಾಣಕ್ಕೆ ಚಾಲನೆ

ಟಾಟಾ ಮೋಟಾರ್ಸ್ ಅಡಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಬ್ರಿಟಿಷ್ ಕಾರು ಉತ್ಪಾದನಾ ಕಂಪನಿ ಜೆಎಲ್ಆರ್(ಜಾಗ್ವಾರ್, ಲ್ಯಾಂಡ್ ರೋವರ್ ಮತ್ತು ರೇಂಜ್ ರೋವರ್) ಹೊಸ ಸುರಕ್ಷಾ ಮಾರ್ಗಸೂಚಿ ಅಡಿಯಲ್ಲಿ ಕಾರು ಉತ್ಪಾದನೆ ಮತ್ತು ಮಾರಾಟಕ್ಕೆ ಅವಕಾಶ ಪಡೆದುಕೊಂಡಿದ್ದು, ವೈರಸ್ ಭೀತಿ ಹಿನ್ನಲೆಯಲ್ಲಿ ಗರಿಷ್ಠ ಸುರಕ್ಷಾ ಮಾರ್ಗಗಳನ್ನು ಅನುಸರಿಸಿಕೊಂಡು ಉದ್ಯಮ ವ್ಯವಹಾರಗಳನ್ನು ಮುನ್ನಡೆಸುತ್ತಿದೆ.

ಹೊಸ ಸುರಕ್ಷಾ ಮಾರ್ಗಸೂಚಿ ಅಡಿ ಜೆಎಲ್ಆರ್ ಕಾರುಗಳ ನಿರ್ಮಾಣಕ್ಕೆ ಚಾಲನೆ

ಹೊಸ ಮಾರ್ಗಸೂಚಿ ಅಡಿ ನಿರ್ಮಾಣದ ಮೊದಲ ಕಾರನ್ನು ಈಗಾಗಲೇ ಪ್ರದರ್ಶನಗೊಳಿಸಿರುವ ಜೆಎಲ್ಆರ್ ಕಂಪನಿಯು ಉದ್ಯೋಗಿಗಳಿಗೆ ಮತ್ತು ಗ್ರಾಹಕರಿಗೆ ಗರಿಷ್ಠ ಸುರಕ್ಷತೆ ಒದಗಿಸಲು ಕಂಪನಿಯು ಬದ್ಧವಾಗಿದೆ ಎಂದಿದೆ.

ಹೊಸ ಸುರಕ್ಷಾ ಮಾರ್ಗಸೂಚಿ ಅಡಿ ಜೆಎಲ್ಆರ್ ಕಾರುಗಳ ನಿರ್ಮಾಣಕ್ಕೆ ಚಾಲನೆ

ಇಂಗ್ಲೆಂಡ್‌ನಲ್ಲಿರುವ ಸೊಲಿಹುಲ್ ಕಾರು ಉತ್ಪಾದನಾ ಘಟಕವನ್ನು ತೆರೆದಿರುವ ಜೆಎಲ್‌ಆರ್ ಕಂಪನಿಯು ಇಲ್ಲಿಂದಲೇ ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ಕಾರು ಉತ್ಪನ್ನಗಳನ್ನು ರಫ್ತುಗೊಳಿಸುತ್ತಿದ್ದು, ವೈರಸ್ ಭೀತಿ ಹಿನ್ನಲೆಯಲ್ಲಿ ಗರಿಷ್ಠ ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಂಡಿದೆ.

ಹೊಸ ಸುರಕ್ಷಾ ಮಾರ್ಗಸೂಚಿ ಅಡಿ ಜೆಎಲ್ಆರ್ ಕಾರುಗಳ ನಿರ್ಮಾಣಕ್ಕೆ ಚಾಲನೆ

ಸದ್ಯ ವಾಹನಗಳ ಉತ್ಪಾದನೆಗೆ ಅನುಮತಿ ಪಡೆದುಕೊಂಡಿರುವ ಆಟೋ ಕಂಪನಿಗಳು ಶೇ.50ಕ್ಕಿಂತಲೂ ಕಡಿಮೆ ಪ್ರಮಾಣದ ಉದ್ಯೋಗಿಗಳೊಂದಿಗೆ ಉತ್ಪಾದನಾ ಚಟುವಟಿಕೆಗಳನ್ನು ಕೈಗೊಂಡಿದ್ದು, ಉದ್ಯೋಗದ ಸ್ಥಳದಲ್ಲಿ ಸಾಮಾಜಿಕ ಅಂತರದ ಜೊತೆ ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್ ಮತ್ತು ಹ್ಯಾಂಡ್ ಗ್ಲೌಸ್ ಬಳಕೆಯು ಕಡ್ಡಾಯಗೊಳಿಸಿವೆ.

ಹೊಸ ಸುರಕ್ಷಾ ಮಾರ್ಗಸೂಚಿ ಅಡಿ ಜೆಎಲ್ಆರ್ ಕಾರುಗಳ ನಿರ್ಮಾಣಕ್ಕೆ ಚಾಲನೆ

ಇನ್ನು ಇಡೀ ಜಗತ್ತನ್ನೇ ಆತಂಕಕ್ಕೆ ದೂಡಿರುವ ಮಹಾಮಾರಿ ಕರೋನಾ ವಿರುದ್ದ ಹೋರಾಟಕ್ಕೆ ವಿಶ್ವದ ಪ್ರಮುಖ ರಾಷ್ಟ್ರಗಳು ಒಂದಾಗಿ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರದ ಪ್ರಯತ್ನಗಳಿಗೆ ಆಟೋ ಉತ್ಪಾದನಾ ಕಂಪನಿಗಳು ಕೂಡಾ ಅತಿ ಹೆಚ್ಚು ದೇಣಿಗೆ ನೀಡುವ ಮೂಲಕ ಕಾರ್ಪೋರೆಟ್ ಸಾಮಾಜಿಕ ಜವಾಬ್ದಾರಿಯನ್ನು ಮೇರೆದಿವೆ.

ಹೊಸ ಸುರಕ್ಷಾ ಮಾರ್ಗಸೂಚಿ ಅಡಿ ಜೆಎಲ್ಆರ್ ಕಾರುಗಳ ನಿರ್ಮಾಣಕ್ಕೆ ಚಾಲನೆ

ಕರೋನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಈಗಾಗಲೇ ಜೆಎಲ್ಆರ್ ಸೇರಿದಂತೆ ಹಲವು ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ಹಣಕಾಸಿನ ನೆರವು ಘೋಷಣೆ ಮಾಡಿರುವುದಲ್ಲದೇ ಅಗತ್ಯ ವೈದ್ಯಕೀಯ ಉಪಕರಣಗಳನ್ನು ಅಭಿವೃದ್ದಿಪಡಿಸುತ್ತಿವೆ.

ಹೊಸ ಸುರಕ್ಷಾ ಮಾರ್ಗಸೂಚಿ ಅಡಿ ಜೆಎಲ್ಆರ್ ಕಾರುಗಳ ನಿರ್ಮಾಣಕ್ಕೆ ಚಾಲನೆ

ಜೆಎಲ್ಆರ್ ಕಂಪನಿಯು ಕೂಡಾ 167 ಐಷಾರಾಮಿ ಕಾರುಗಳನ್ನು ಕರೋನಾ ವಿರುದ್ಧ ಹೋರಾಡುತ್ತಿರುವ ಕರೋನಾ ವಾರಿರ್ಯಸ್ ಸೇವೆಗಾಗಿ ದೇಣಿಗೆ ನೀಡಿದ್ದು, ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ರೆಡ್ ಕ್ರಾಸ್ ಸಂಸ್ಥೆಗೆ 167 ಲ್ಯಾಂಡ್ ರೋವರ್ ರೇಂಜ್ ರೋವರ್ ಮತ್ತು ಡಿಫೆಂಡರ್ ಎಸ್‌ಯುವಿ ಕಾರುಗಳನ್ನು ಹಸ್ತಾಂತರಿಸಿದೆ.

Most Read Articles

Kannada
English summary
First Range Rover Under Social Distancing Measures Leaves The Production Line. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X