ಭಾರತದಲ್ಲಿ ಬಿಡುಗಡೆಯಾಗಲಿರುವ 4×4 ಆಫ್ ರೋಡ್ ಎಸ್‍ಯುವಿಗಳಿವು

ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಎಸ್‍ಯುವಿಗಳ ಬೇಡಿಕೆಯು ಹೆಚ್ಚಾಗುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ವಾಹನ ಉತ್ಪಾದನಾ ಕಂಪನಿಗಳು ಎಸ್‍ಯುವಿಯನ್ನು ಬಿಡುಗಡೆಗೊಳಿಸುತ್ತಿವೆ.

ಭಾರತದಲ್ಲಿ ಬಿಡುಗಡೆಯಾಗಲಿರುವ 4×4 ಆಫ್ ರೋಡ್ ಎಸ್‍ಯುವಿಗಳಿವು

ಭಾರತೀಯ ಮಾರುಕಟೆಯಲ್ಲಿ ಮಹೀಂದ್ರಾ ಎಕ್ಸ್‌ಯುವಿ 300, ಹ್ಯುಂಡೈ ವೆನ್ಯೂ, ಎಂಜಿ ಹೆಕ್ಟರ್ ಮತ್ತು ಕಿಯಾ ಸೆಲ್ಟೋಸ್ ನಂತಹ ಜನಪ್ರಿಯ ಎಸ್‍ಯುವಿಗಳು ಲಭ್ಯವಿದೆ. ಈ ಜನಪ್ರಿಯ ಕಾಂಪ್ಯಾಕ್ಟ್ ಎಸ್‍ಯುವಿಗಳ ನಡುವೆ ಪೂರ್ಣ ಪ್ರಮಾಣದ ಎಸ್‍ಯುವಿಗಳನ್ನು ಹಲವು ವಾಹನ ಉತ್ಪಾದಕರು ಬಿಡುಗಡೆಗೊಳಿಸುತ್ತಿವೆ, ಇದರ ನಡುವೆ ಭಾರತೀಯ ಮಾರುಕಟ್ಟೆಯಲ್ಲಿ 4×4 ಆಫ್ ರೋಡ್ ಎಸ್‍ಯುವಿಗಳಿಗೆ ಬೇಡಿಕೆ ಹೊಂದಿದೆ. ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ 4×4 ಆಫ್ ರೋಡ್ ಎಸ್‍ಯುವಿಗಳ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ 4×4 ಆಫ್ ರೋಡ್ ಎಸ್‍ಯುವಿಗಳಿವು

2020ರ ಮಹೀಂದ್ರಾ ಥಾರ್

ಐಕಾನಿಕ್ ಆಫ್-ರೋಡರ್ 2020ರ ಥಾರ್ ಅನ್ನು ಈ ವರ್ಷದ ಮಧ್ಯದಲ್ಲಿ ಬಿಡುಗಡೆಗೊಳಿಸುವುದಾಗಿ ಮಹೀಂದ್ರಾ ಕಂಪನಿಯು ಖಚಿತಪಡಿಸಿದೆ. ಮಹೀಂದ್ರಾ ಕಂಪನಿಯು ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಬ್ರಾಂಡ್‌ನ ಉತ್ಪಾದನಾ ಕೇಂದ್ರದ ಬಳಿ ಥಾರ್ ಎಸ್‍ಯುವಿಯ ಸ್ಪಾಟ್ ಟೆಸ್ಟ್ ಅನ್ನು ಇತ್ತೀಚೆಗೆ ನಡೆಸಿದ್ದಾರೆ.

MOST READ: ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕರೋಕ್ ಎಸ್‍‍‍ಯುವಿ

ಭಾರತದಲ್ಲಿ ಬಿಡುಗಡೆಯಾಗಲಿರುವ 4×4 ಆಫ್ ರೋಡ್ ಎಸ್‍ಯುವಿಗಳಿವು

ಹೊಸ ಮಹೀಂದ್ರಾ ಥಾರ್‍‍ನ 4×4 ಲಿವರ್ ವಿಭಿನ್ನವಾಗಿದೆ. ಇದರಲ್ಲಿ 2ಡಬ್ಲ್ಯುಡಿ(ಆರ್‍‍ಡಬ್ಲ್ಯುಡಿ) ಹೈ, 4ಡಬ್ಲ್ಯುಡಿ ಹೈ ಮತ್ತು 4 ಡಬ್ಲ್ಯು ಡಿ ಲೋ ಎಂಬ ಮೂರು ಮೋಡ್‍‍ಗಳಿವೆ. ಹೊಸ ಥಾರ್ 120 ಬಿ‍‍ಹೆಚ್‌ಪಿ ಪವರ್ ಉತ್ಪಾದಿಸುವ 2.0 ಲೀಟರ್ ಡೀಸೆಲ್ ಬಿಎಸ್ 6 ಎಂಜಿನ್ ಹೊಂದಿರಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ 4×4 ಆಫ್ ರೋಡ್ ಎಸ್‍ಯುವಿಗಳಿವು

ಮಾರುತಿ ಸುಜುಕಿ ಜಿಮ್ನಿ

ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಜಿಮ್ನಿ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.ಈ ಜಿಮ್ನಿ ಎಸ್‍‍ಯುವಿ 33 ವರ್ಷಗಳ ಕಾಲ ದೇಶದಲ್ಲಿ ಮಾರಾಟವಾಗಿದ್ದ ಜನಪ್ರಿಯ ಜಿಪ್ಸಿ ಎಸ್‍‍ಯುವಿಯ ಉತ್ತರಾಧಿಕಾರಿಯಾಗಲಿದೆ. ಈ ಜಿಮ್ಮಿ ಅರೆಕಾಲಿಕ 4ಡಬ್ಲೂಡಿ ಸೆಟಪ್ ಅನ್ನು ಹೊಂದಿದೆ. ಇದನ್ನು 2ಹೆಚ್/4ಡಬ್ಲ್ಯೂ ಹೈ/4ಡಬ್ಲ ಲೋ ಹೀಗೆ ಬದಲಾಯಿಸಬಹುದುದಾಗಿದೆ.

MOST READ: ಹೊಸ ನವೀಕರಣಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಮಾರುತಿ ಸ್ವಿಫ್ಟ್ ಫೇಸ್‌ಲಿಫ್ಟ್

ಭಾರತದಲ್ಲಿ ಬಿಡುಗಡೆಯಾಗಲಿರುವ 4×4 ಆಫ್ ರೋಡ್ ಎಸ್‍ಯುವಿಗಳಿವು

ಈ ಹೊಸ ಜಿಮ್ನಿ ಮಿನಿ ಎಸ್‍ಯುವಿಯಲ್ಲಿ 3 ಲಿಂಕ್ ಆಕ್ಸಲ್ ಸಸ್ಪೆಂಷನ್ ಅನ್ನು ಹೊಂದಿದೆ. ಇದು ಕಠಿಣ ಭೂಪ್ರದೇಶಗಳಲ್ಲಿ ಸುಗಮವಾಗಿ ಸಾಗಲು ನೆರವಾಗುತ್ತದೆ. ಈ ಮಿನಿ ಎಸ್‍ಯುವಿಯಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ 4×4 ಆಫ್ ರೋಡ್ ಎಸ್‍ಯುವಿಗಳಿವು

ಹೊಸ ಜೀಪ್ ಕಾಂಪ್ಯಾಕ್ಟ್ ಎಸ್‍ಯುವಿ

ಐಷಾರಾಮಿ ಕಾರು ತಯಾರಕ ಕಂಪನಿಯಾದ ಜೀಪ್ ಎಂಟ್ರಿ ಲೆವೆಲ್ ಜೀಪ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷ ಅನಾವರಣವಾಗಲಿದೆ.

MOST READ: ಹೊಸ ನವೀಕರಣಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಮಾರುತಿ ಸ್ವಿಫ್ಟ್ ಫೇಸ್‌ಲಿಫ್ಟ್

ಭಾರತದಲ್ಲಿ ಬಿಡುಗಡೆಯಾಗಲಿರುವ 4×4 ಆಫ್ ರೋಡ್ ಎಸ್‍ಯುವಿಗಳಿವು

ಇದರಲ್ಲಿ ಫೋರ್ ವ್ಹೀಲ್ ಡ್ರೈವ್ ಸಿಸ್ಟಂ ಮತ್ತು ಆಫ್ ರೋಡ್ ಭೂಪ್ರದೇಶದಲ್ಲಿ ಚಲಿಸಲು ಲಾಕಿಂಗ್ ಡಿಫರನ್ಷಿಯಲ್ ಫೀಚರ್ಸ್‍ಗಳನ್ನು ಒಳಗೊಂಡಿರುತ್ತದೆ. ಮುಂದಿನ ಕಾಂಪ್ಯಾಕ್ಟ್ ಎಸ್‍ಯುವಿಯು ಜೀಪ್ ಬ್ರ್ಯಾಂಡ್‍ನ ಆಫ್ ರೋಂಡಿಂಗ್ ವಾಹನಗಳ ಸರಣಿಗೆ ಸೇರುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ 4×4 ಆಫ್ ರೋಡ್ ಎಸ್‍ಯುವಿಗಳಿವು

2020ರ ಇಸುಝು ವಿ-ಕ್ರಾಸ್ ಎಸ್‍ಯುವಿ

ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಇಸುಝು ತನ್ನ ಬಿಎಸ್-6 ವಿ-ಕ್ರಾಸ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಿದೆ. ಬಿಎಸ್-6 ವಿ-ಕ್ರಾಸ್ ಎಸ್‍ಯುವಿಗೆ ಪ್ರಸ್ತುತ ಮಾದರಿಗಿಂತ ರೂ.3 ಲಕ್ಷ ದಷ್ಟು ಬೆಲೆಯು ಹೆಚ್ಚಿರಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ 4×4 ಆಫ್ ರೋಡ್ ಎಸ್‍ಯುವಿಗಳಿವು

ಬಿಎಸ್-6 ಫೋರ್ಸ್ ಗೂರ್ಖಾ

ಫೋರ್ಸ್ ಮೋಟಾರ್ಸ್ ಗೂರ್ಖಾ ಆಫ್ ರೋಡ್ ಆವೃತ್ತಿಯನ್ನು ಮಾಲಿನ್ಯ ನಿಯಮ ಅನುಗುಣವಾಗಿ ಬಿಡುಗಡೆಗೊಳಿಸಲು ಸಜ್ಜಾಗಿದೆ. 2.6-ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಹೊಸ ಗೂರ್ಖಾ ಆವೃತ್ತಿಯು ಐದು ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 90-ಬಿಎಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ ಫೋರ್ ವ್ಝೀಲ್ ಡ್ರೈವ್ ಸ್ಪೀಡ್ ಸಿಸ್ಟಂ ಅನ್ನು ಹೊಂದಿದೆ.

Most Read Articles

Kannada
English summary
New Capable 4x4s To Launch Soon. Read in Kannada.
Story first published: Tuesday, May 12, 2020, 16:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X