ಏರ್ ಟಿಕೆಟ್ ಹೊಂದಿದವರಿಗೆ ಬೇಕಿಲ್ಲ ಅಂತರ್‌ರಾಜ್ಯ ಪಾಸ್

ಕರೋನಾ ವೈರಸ್ ಸೋಂಕು ಹರಡದಂತೆ ತಡೆಯಲು ಜಾರಿಗೊಳಿಸಿರುವ ನಾಲ್ಕನೇ ಹಂತದ ಲಾಕ್‌ಡೌನ್ ಇನ್ನೂ ಮುಂದುವರೆದಿದೆ. ಈ ಲಾಕ್‌ಡೌನ್‌ನಲ್ಲಿ ಹಲವು ರೀತಿಯ ವಿನಾಯಿತಿಗಳನ್ನು ನೀಡಲಾಗಿದ್ದರೂ, ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಚಲಿಸಲು ಪಾಸ್ ಅಗತ್ಯವಿದೆ. ಈ ಪಾಸ್ ಇಲ್ಲದೆ, ಮತ್ತೊಂದು ರಾಜ್ಯದ ಗಡಿಯನ್ನು ದಾಟುವಂತಿಲ್ಲ.

ಏರ್ ಟಿಕೆಟ್ ಹೊಂದಿದವರಿಗೆ ಬೇಕಿಲ್ಲ ಅಂತರ್‌ರಾಜ್ಯ ಪಾಸ್

ಇದೇ ನಿಯಮವನ್ನು ದೆಹಲಿಯಲ್ಲಿಯೂ ಜಾರಿಗೆ ತರಲಾಗಿದೆ. ಗ್ರೇಟರ್ ನೋಯ್ಡಾದಿಂದ ಹೆಚ್ಚಿನ ಸಂಖ್ಯೆಯ ಜನರು ದೆಹಲಿಯನ್ನು ಪ್ರವೇಶಿಸುತ್ತಾರೆ. ಈ ರೀತಿ ಪ್ರವೇಶಿಸುವವರನ್ನು ದೆಹಲಿಯ ಗಡಿಯಲ್ಲಿ ತಡೆದು ನಿಲ್ಲಿಸಲಾಗುತ್ತಿದೆ. ಈಗ ದೆಹಲಿ ಪೊಲೀಸರು ವಿಮಾನಗಳ ಟಿಕೆಟ್ ಹೊಂದಿರುವವರಿಗೆ ಪಾಸ್ ಅಗತ್ಯವಿಲ್ಲವೆಂದು ತಿಳಿಸಿದ್ದಾರೆ.

ಏರ್ ಟಿಕೆಟ್ ಹೊಂದಿದವರಿಗೆ ಬೇಕಿಲ್ಲ ಅಂತರ್‌ರಾಜ್ಯ ಪಾಸ್

ದೆಹಲಿಯ ಗೌತಮ್ ಬುದ್ಧ ನಗರ ಪೊಲೀಸರು ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ. ದೇಶಿಯ ವಿಮಾನ ಹಾಗೂ ರೈಲು ಸೇವೆಗಳನ್ನು ಪುನರಾರಂಭಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಏರ್ ಟಿಕೆಟ್ ಹೊಂದಿದವರಿಗೆ ಬೇಕಿಲ್ಲ ಅಂತರ್‌ರಾಜ್ಯ ಪಾಸ್

ಸದ್ಯಕ್ಕೆ ದೆಹಲಿ-ನೋಯ್ಡಾ ಗಡಿಯನ್ನು ಬಂದ್ ಮಾಡಲಾಗಿದೆ. ಅಗತ್ಯ ಸೇವೆಗಳನ್ನು ಒದಗಿಸುತ್ತಿರುವವರಿಗೆ ಹಾಗೂ ಸ್ಥಳೀಯ ಆಡಳಿತವು ನೀಡುವ ಪಾಸ್ ಹೊಂದಿರುವವರಿಗೆ ಮಾತ್ರ ಈ ಗಡಿಯನ್ನು ದಾಟಲು ಅನುಮತಿ ನೀಡಲಾಗುತ್ತದೆ.

ಏರ್ ಟಿಕೆಟ್ ಹೊಂದಿದವರಿಗೆ ಬೇಕಿಲ್ಲ ಅಂತರ್‌ರಾಜ್ಯ ಪಾಸ್

ಮೇ 25ರಿಂದ ಕೆಲವು ನಗರಗಳ ಮಧ್ಯೆ ದೇಶಿಯ ವಿಮಾನಗಳನ್ನು ಪುನರಾರಂಭಿಸಲು ಕೇಂದ್ರ ಸರ್ಕಾರವು ನಿರ್ಧರಿಸಿದೆ. ರೈಲ್ವೆ ಇಲಾಖೆಯು ಜೂನ್ 1ರಿಂದ ರೈಲು ಸಂಚಾರವನ್ನು ಆರಂಭಿಸಲಿದ್ದು, ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ಕಿಂಗ್‌ಗಳನ್ನು ಆರಂಭಿಸಲಾಗಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಏರ್ ಟಿಕೆಟ್ ಹೊಂದಿದವರಿಗೆ ಬೇಕಿಲ್ಲ ಅಂತರ್‌ರಾಜ್ಯ ಪಾಸ್

ಈ ಬಗ್ಗೆ ಮಾತನಾಡಿದ ದೆಹಲಿಯ ಕಾನೂನು ಹಾಗೂ ಸುವ್ಯವಸ್ಥೆ ಹೆಚ್ಚುವರಿ ಜಿಲ್ಲಾಧಿಕಾರಿ ಅಶುತೋಷ್ ದ್ವಿವೇದಿರವರು, ವಿಮಾನ ಟಿಕೆಟ್ ಅಥವಾ ಟಿಕೆಟ್‌ಗಳನ್ನು ಬುಕ್ಕಿಂಗ್ ಮಾಡಿರುವ ಜನರು ವಿಮಾನ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಕ್ಕೆ ಹೋಗಲು ಅನುಮತಿ ನೀಡುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಏರ್ ಟಿಕೆಟ್ ಹೊಂದಿದವರಿಗೆ ಬೇಕಿಲ್ಲ ಅಂತರ್‌ರಾಜ್ಯ ಪಾಸ್

ಈ ಟಿಕೆಟ್‌ಗಳನ್ನು ಹೊಂದಿರುವವರಿಗೆ ದೆಹಲಿ-ನೋಯ್ಡಾ ಗಡಿ ದಾಟಲು ಯಾವುದೇ ರೀತಿಯ ಪಾಸ್ ಅಗತ್ಯವಿಲ್ಲವೆಂದು ಅವರು ಹೇಳಿದರು. ಕರೋನಾ ವೈರಸ್ ಹರಡದಂತೆ ತಡೆಯಲು ಅಗತ್ಯ ಸೇವೆಗಳನ್ನು ನೀಡುವವರನ್ನು ಹೊರತುಪಡಿಸಿ ಉಳಿದವರಿಗೆ ನೋಯ್ಡಾ-ದೆಹಲಿ ಗಡಿಯನ್ನು ಬಂದ್ ಮಾಡಲಾಗಿದೆ.

Most Read Articles

Kannada
English summary
Flight tickets sufficient to cross borders. Read in Kannada.
Story first published: Monday, May 25, 2020, 19:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X