Just In
- 5 hrs ago
ವಾಣಿಜ್ಯ ವಾಹನಗಳ ಖರೀದಿಗಾಗಿ ಹಲವು ಆಕರ್ಷಕ ಸಾಲಸೌಲಭ್ಯಗಳಿಗೆ ಚಾಲನೆ ನೀಡಿದ ಟಾಟಾ
- 6 hrs ago
2021ರ ಜೀಪ್ ಕಂಪಾಸ್ ಫೇಸ್ಲಿಫ್ಟ್ ಎಸ್‌ಯುವಿ ವೆರಿಯೆಂಟ್ ಮಾಹಿತಿ ಬಹಿರಂಗ
- 6 hrs ago
ವಿದೇಶಿ ಮಾರುಕಟ್ಟೆಗೂ ಲಗ್ಗೆಯಿಟ್ಟ ಮೇಡ್ ಇನ್ ಇಂಡಿಯಾ ಹೋಂಡಾ ಹೈನೆಸ್ ಸಿಬಿ 350
- 6 hrs ago
ಎಂಟೇ ನಿಮಿಷಗಳಲ್ಲಿ ರಸ್ತೆ ಗುಂಡಿಗಳನ್ನು ಸರಿ ಪಡಿಸಲಿದೆ ಜೆಸಿಬಿಯ ಈ ಹೊಸ ಯಂತ್ರ
Don't Miss!
- News
Biden Inauguration live updates: ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣದ ನೇರಪ್ರಸಾರ
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Sports
ಐಎಸ್ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಅಂಧ ವ್ಯಕ್ತಿಯ ಬಾಳಿಗೆ ಬೆಳಕಾದ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಲಗ್ಷುರಿ ಫೀಚರ್ಸ್‌ಗಳೊಂದಿಗೆ ಮಾಡಿಫೈಗೊಂಡ ಫೋರ್ಸ್ ಟ್ರಾವೆಲರ್
ಗ್ರಾಹಕರು ತಮ್ಮ ಅನೂಕೂಲಕ್ಕೆ ತಕ್ಕಂತೆ ಪ್ರಯಾಣಿಕರ ವಾಹನ ಮಾದರಿಗಳನ್ನು ವಿವಿಧ ಮಾದರಿಯಲ್ಲಿ ಮಾಡಿಫೈಗೊಳಿಸುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ಫೋರ್ಸ್ ಟ್ರಾವೆಲರ್ ಮಾದರಿಯನ್ನು ಲಗ್ಷುರಿ ಕಾರುಗಳಿಂತಲೂ ವಿಭಿನ್ನವಾಗಿ ಮಾರ್ಪಾಡುಗೊಳಿಸಿ ಐಷಾರಾಮಿ ಕಾರು ಮಾಲೀಕರೇ ಅಚ್ಚರಿಗೊಳ್ಳುವಂತೆ ಮಾಡಿದ್ದಾನೆ.

ಬಹುತೇಕ ವಾಹನ ಮಾಲೀಕರು ತಮ್ಮ ವಾಹನಗಳನ್ನು ಇತರೆ ವಾಹನಗಳಿಂತಲೂ ಭಿನ್ನವಾಗಿ ಕಾಣಲು ಒಂದಿಷ್ಟು ಹಣ ಖರ್ಚು ಮಾಡಿ ಮಾಡಿಫೈ ಮೋರೆ ಹೋಗುವುದು ಸಾಮಾನ್ಯ. ಆದರೆ ಫೋರ್ಸ್ ಟ್ರಾವೆಲರ್ ವ್ಯಾನ್ ಮಾಲೀಕ ವಾಹನದ ಮೂಲ ಬೆಲೆಗಿಂತಲೂ ದುಪ್ಪಟ್ಟು ಹಣ ಖರ್ಚು ಮಾಡುವ ಮೂಲಕ ಐಷಾರಾಮಿ ಕಾರುಗಳಂತೆ ಮಾಡಿಫೈಡ್‌ಗೊಳಿಸಿ ಗ್ರಾಹಕರನ್ನು ಆಕರ್ಷಣೆ ಮಾಡುತ್ತಿದ್ದಾನೆ.

ಮತ್ತೊಂದು ವಿಶೇಷ ಅಂದ್ರೆ ಫೋರ್ಸ್ ಟ್ರಾವೆಲರ್ ವ್ಯಾನ್ ಮಾದರಿಗಳನ್ನು ಹೆಚ್ಚಾಗಿ ವಾಣಿಜ್ಯ ಬಳಕೆಯ ಹಳದಿ ಬೋರ್ಡ್‌ಗಾಗಿ ಖರೀದಿ ಮಾಡಿದರೆ ಈ ಫೋರ್ಸ್ ಟ್ರಾವೆಲರ್ ವ್ಯಾನ್ ಮಾಲೀಕ ಮಾತ್ರ ವೈಟ್ ಬೋರ್ಡ್‌ನೊಂದಿಗೆ ಖರೀದಿಸಿ ತನ್ನ ಇಷ್ಟದಂತೆ ಮಾಡಿಫೈಗೊಳಿಸಿದ್ದಾನೆ.

ಸ್ಕೈಲೈನರ್ ಮಾಡಿಫೈ ಕಂಪನಿಯೊಂದಿಗೆ ಈ ಟ್ರಾವೆಲರ್ ವ್ಯಾನ್ ಮಾದರಿಯನ್ನು ಮಾಡಿಫೈಗೊಳಿಸಲಾಗಿದ್ದು, ಐಷಾರಾಮಿ ಫೀಚರ್ಸ್‌ವುಳ್ಳ ಆಸನ ಸೌಲಭ್ಯ ನೀಡುವುದಕ್ಕಾಗಿ ವಾಹನದ ಬಹುತೇಕ ಮೂಲ ತಾಂತ್ರಿಕ ಅಂಶಗಳನ್ನು ತೆಗೆದುಹಾಕಿ ಸಂಪೂರ್ಣ ಹೊಸ ಸೌಲಭ್ಯಗಳನ್ನು ಮರುಜೋಡಣೆ ಮಾಡಲಾಗಿದೆ.

ಫೋರ್ಸ್ ಟ್ರಾವೆಲರ್ ಮಾಡಿಫೈಡ್ ವ್ಯಾನ್‌ನ ಮುಂಭಾಗದ ವಿನ್ಯಾಸವನ್ನು ಸಂಪೂರ್ಣವಾಗಿ ಬದಲಾವಣೆಗೊಳಿಸುವ ಮೂಲಕ ಆಕರ್ಷಕ ಗ್ರಿಲ್, ಸ್ಮೋಕ್ಡ್ ಹೆಡ್‌ಲ್ಯಾಂಪ್ ನೀಡಲಾಗಿದೆ. ಜೊತೆಗೆ ಸ್ಕೈಲೈನರ್ ಲೋಗೊ ಕೂಡಾ ಆಕರ್ಷಕವಾಗಿದ್ದು, ಸೈಡ್ ಪ್ರೋಫೈಲ್ ಕೂಡಾ ಗಮನಸೆಳೆಯುತ್ತದೆ.

ಮಾಡಿಫೈಡ್ ವ್ಯಾನ್‌ನಲ್ಲಿ ಸಿಂಗಲ್ ಪೀಸ್ ವಿಂಡೋ ಗ್ಲಾಸ್ ಜೋಡಣೆ ಮಾಡಿರುವುದು ಆಕರ್ಷಕವಾಗಿದ್ದು, ಪೂರ್ಣ ಪ್ರಮಾಣದಲ್ಲಿ ಕಿಟಕಿಗಳು ಮುಚ್ಚಿರುವ ಹಿನ್ನಲೆಯಲ್ಲಿ ಕ್ಯಾಬಿನ್ ತಾಪಮಾನಕ್ಕೆ ಪೂರಕವಾದ ಎಸಿ ಸೌಲಭ್ಯವನ್ನು ಜೋಡಣೆ ಮಾಡಲಾಗಿದೆ.

ಸಿಂಗಲ್ ಪೀಸ್ ಗ್ಲಾಸ್ ಜೋಡಣೆಗಾಗಿ ಪಿಲ್ಲರ್‌ಗಳನ್ನು ತೆಗೆದುಹಾಕಿರುವ ಸ್ಕೈಲೈನರ್ ಕಸ್ಟಮೈಸ್ಡ್ ಕಂಪನಿಯು ವ್ಯಾನಿನ ಮೇಲ್ಚಾವಣೆಯನ್ನು ಸಹ ಬದಲಾವಣೆಗೊಳಿಸಿದ್ದು, ವ್ಯಾನಿನ ಒಳಭಾಗವು ಕೂಡಾ ಅದ್ಬುತವಾಗಿ ಮಾಡಿಫೈಗೊಂಡಿದೆ.
13 ಆಸನವುಳ್ಳ ಫೋರ್ಸ್ ಟ್ರಾವೆಲರ್ ಮಾದರಿಯನ್ನು ಮಾಡಿಫೈ ಮಾಡಿರುವ ಸ್ಕೈಲೈನರ್ ಕಸ್ಟಮೈಸ್ಡ್ ಕಂಪನಿಯು ಮುಂಭಾಗದಲ್ಲಿ ಡ್ರೈವರ್ ಸೀಟ್ ಜೊತೆಗೆ ಕೋ-ಪ್ಯಾಸೆಂಜರ್ ಆಸನವನ್ನು ಮತ್ತು ಮಧ್ಯದಲ್ಲಿ ನಾಲ್ಕು ಪ್ರತ್ಯೇಕ ಕ್ಯಾಪ್ಟನ್ ಸೀಟ್‌ಗಳನ್ನು ಜೋಡಿಸಲಾಗಿದೆ.
MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಹಿಂಬದಿಯಲ್ಲಿ ಲಭ್ಯವಿದ್ದ ಸ್ಥಳವನ್ನು ಸಹ ವ್ಯವಸ್ಥಿತವಾಗಿ ಬಳಕೆ ಮಾಡಿಕೊಂಡು ಮೂವರು ಕುಳಿತಗೊಳ್ಳಬಹುದಾದ ಬೆಂಚ್ ಸೀಟ್ ಜೋಡಣೆ ಮಾಡಿದ್ದು, ಪ್ರಯಾಣಿಕರ ಬಳಕೆ ಬೇಡವಾದಲ್ಲಿ ಬೆಂಚ್ ಸೀಟಿನಲ್ಲಿಯೇ ಅರಾಮವಾಗಿ ಮಲಗಿಕೊಳ್ಳಬಹುದಾದಷ್ಟು ಸೌಲಭ್ಯವಿದೆ.

ಮತ್ತೊಂದು ವಿಶೇಷ ಅಂದ್ರೆ ಮಧ್ಯದಲ್ಲಿರುವ ನಾಲ್ಕು ಕ್ಯಾಪ್ಟನ್ ಆಸನಗಳು ಪ್ರತ್ಯೇಕವಾದ ಕಂಟ್ರೋಲ್ ಸೌಲಭ್ಯಗಳನ್ನು ಹೊಂದಿದ್ದು, ಪ್ರಯಾಣಿಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಆಸನಗಳನ್ನು ಹೊಂದಾಣಿಕೆ ಮಾಡಿಕೊಳ್ಳಬಹುದಾಗಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಐಷಾರಾಮಿ ಆಸನಗಳಿಗೆ ತಕ್ಕಂತೆ ವ್ಯಾನ್ ಒಳಭಾಗದ ಇಂಟಿರಿಯರ್ ಸೌಲಭ್ಯವನ್ನು ಸಹ ಹೊಸ ಬದಲಾವಣೆಯೊಂದಿಗೆ ಆಕರ್ಷಕವಾಗಿಸಿರುವ ಸ್ಕೈಲೈನರ್ ಕಂಪನಿಯು ಮರದ ಹಾಸು ಜೊತೆಗೆ ಡೋರ್ ಟ್ರಿಮ್‌ಗಳಲ್ಲೂ ಮರದು ಅಂಚು ನೀಡಿರುವುದು ಆಕರ್ಷಕವಾಗಿದೆ.

ಇನ್ನು ಸೀಟಿನ ಬದಿಯಲ್ಲಿಯೂ ವಿವಿಧ ಬಣ್ಣಗಳ ಆಯ್ಕೆ ಹೊಂದಿರುವ ಮೊಡ್ ಲೈಟಿಂಗ್ ನೀಡಿರುವುದು ಮಾಡಿಫೈ ವಾಹನದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದ್ದು, ಲೈಟಿಂಗ್ಸ್ ಮತ್ತು ಹೆಚ್ಚುವರಿ ಚಾರ್ಜಿಂಗ್ ಸಾಕೆಟ್ ನಿರ್ವಹಣೆಗಾಗಿ ವಾಹನದಲ್ಲಿರುವ ಬ್ಯಾಟರಿ ಜೊತೆಗೆ ಹೆಚ್ಚುವರಿಯಾಗಿ 1ಕೆವಿಎ ಬ್ಯಾಟರಿ ಇನ್ವರ್ಟರ್ ಜೋಡಣೆ ಮಾಡಿಲಾಗಿದೆ.
MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಜೊತೆಗೆ ಮಾಡಿಫೈ ವಾಹನದಲ್ಲಿ ಮನರಂಜನೆಗೂ ಆದ್ಯತೆ ನೀಡಲಾಗಿದ್ದು, ಸರ್ರೌಂಡ್ ಸ್ಪಿಕರ್ಸ್ ಜೊತೆಗೆ ಚಾಲಕನ ಬಳಿಯಲ್ಲೂ ಹಲವಾರು ಮಾಡಿಫೈ ಸೌಲಭ್ಯಗಳನ್ನು ಜೋಡಣೆ ಮಾಡುವ ಮೂಲಕ ಆಕರ್ಷಕ ಡ್ಯಾಶ್‌ಬೋರ್ಡ್ ಹೊಂದಿಸಲಾಗಿದೆ.

ಮಾಡಿಫೈಗೊಂಡ ಫೋರ್ಸ್ ಟ್ರಾವೆಲರ್ ಮಾದರಿಯು ಬಿಎಸ್-4 ವೈಶಿಷ್ಟ್ಯತೆಯ 2.6-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, ಮಾರುಕಟ್ಟೆಯಲ್ಲಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 9.50 ಲಕ್ಷ ಬೆಲೆ ಹೊಂದಿರುವ ಫೋರ್ಸ್ ಟ್ರಾವೆಲರ್ ಮಾದರಿಯು ಮಾಡಿಫೈ ವರ್ಷನ್‌ನಲ್ಲಿ ದುಪ್ಪಟ್ಟು ಬೆಲೆಯೊಂದಿಗೆ ಐಷಾರಾಮಿ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.