Just In
- 6 hrs ago
ವಾಣಿಜ್ಯ ವಾಹನಗಳ ಖರೀದಿಗಾಗಿ ಹಲವು ಆಕರ್ಷಕ ಸಾಲಸೌಲಭ್ಯಗಳಿಗೆ ಚಾಲನೆ ನೀಡಿದ ಟಾಟಾ
- 6 hrs ago
2021ರ ಜೀಪ್ ಕಂಪಾಸ್ ಫೇಸ್ಲಿಫ್ಟ್ ಎಸ್‌ಯುವಿ ವೆರಿಯೆಂಟ್ ಮಾಹಿತಿ ಬಹಿರಂಗ
- 7 hrs ago
ವಿದೇಶಿ ಮಾರುಕಟ್ಟೆಗೂ ಲಗ್ಗೆಯಿಟ್ಟ ಮೇಡ್ ಇನ್ ಇಂಡಿಯಾ ಹೋಂಡಾ ಹೈನೆಸ್ ಸಿಬಿ 350
- 7 hrs ago
ಎಂಟೇ ನಿಮಿಷಗಳಲ್ಲಿ ರಸ್ತೆ ಗುಂಡಿಗಳನ್ನು ಸರಿ ಪಡಿಸಲಿದೆ ಜೆಸಿಬಿಯ ಈ ಹೊಸ ಯಂತ್ರ
Don't Miss!
- News
Biden Inauguration live updates: ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣದ ನೇರಪ್ರಸಾರ
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Sports
ಐಎಸ್ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಅಂಧ ವ್ಯಕ್ತಿಯ ಬಾಳಿಗೆ ಬೆಳಕಾದ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಎಸ್-6 ಎಂಜಿನ್ ಪ್ರೇರಿತ ಫೋರ್ಸ್ ಟ್ರಾಕ್ಸ್ ಕ್ರೂಸರ್ ಮತ್ತು ಟೂಫಾನ್ ಬಿಡುಗಡೆ
ಫೋರ್ಸ್ ಮೋಟಾರ್ಸ್ ಕಂಪನಿಯು ತನ್ನ ಜನಪ್ರಿಯ ವಾಹನ ಮಾದರಿಗಳಾದ ಟ್ರಾಕ್ಸ್ ಕ್ರೂಸರ್ ಮತ್ತು ಟೂಫಾನ್ ಬಿಎಸ್-6 ಆವೃತ್ತಿಗಳನ್ನು ಬಿಡುಗಡೆ ಮಾಡಿದ್ದು, ಹೊಸ ವಾಹನಗಳು ಆಕರ್ಷಕ ಬೆಲೆಯೊಂದಿಗೆ ಹಲವಾರು ಹೊಸ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿವೆ.

ಟ್ರಾಕ್ಸ್ ಕ್ರೂಸರ್ ಮತ್ತು ಟೂಫಾನ್ ವಾಹನ ಮಾದರಿಗಳು ಗ್ರಾಹಕರ ಬೇಡಿಕೆಯೆಂತೆ 9 ಸೀಟರ್, 12 ಸೀಟರ್ ಮತ್ತು 11 ಸೀಟರ್ ಮಾದರಿಯಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ವಾಹನಗಳ ಆರಂಭಿಕ ಬೆಲೆಯು ರೂ. 11,00,666 ಮತ್ತು ಹೈ ಎಂಡ್ ಮಾದರಿಯ ಬೆಲೆಯು ರೂ. 12,88,751 ದರ ನಿಗದಿ ಮಾಡಲಾಗಿದೆ. ಟ್ರಾಕ್ಸ್ ಕ್ರೂಸರ್ ಮಾದರಿಯು ಚಾಲಕನ ಆಸನ ಪ್ರತ್ಯೇಕಿಸಿ 9 ಸೀಟರ್, 12 ಸೀಟರ್ ಮಾದರಿಯಲ್ಲಿ ಖರೀದಿಗೆ ಲಭ್ಯವಿದ್ದಲ್ಲಿ ಟೂಫಾನ್ ಮಾದರಿಯು ಚಾಲಕನ ಸೀಟು ಪ್ರತ್ಯೇಕಿಸಿ 11 ಸೀಟರ್ ಸೌಲಭ್ಯದೊಂದಿಗೆ ಖರೀದಿ ಮಾಡಬಹುದಾಗಿದೆ.

ಫೋರ್ಸ್ ಹೊಸ ಟ್ರಾಕ್ಸ್ ಕ್ರೂಸರ್ ಮತ್ತು ಟೂಫಾನ್ ಬೆಲೆ
ಟ್ರಾಕ್ಸ್ ಕ್ರೂಸರ್ 9 ಸೀಟರ್ ನಾನ್ ಎಸಿ - ರೂ.11,00,666
ಟ್ರಾಕ್ಸ್ ಕ್ರೂಸರ್ 12 ಸೀಟರ್ ನಾನ್ ಎಸಿ- ರೂ. 11,18,542
ಟ್ರಾಕ್ಸ್ ಕ್ರೂಸರ್ 9 ಸೀಟರ್(ಎಸಿ) - ರೂ.12,78,418
ಟ್ರಾಕ್ಸ್ ಕ್ರೂಸರ್ 12 ಸೀಟರ್(ಎಸಿ)- ರೂ. 12,88,751
ಟೂಫಾನ್ 11 ಸೀಟರ್ ನಾನ್ ಎಸಿ- ರೂ. 11,06,534
ಟೂಫಾನ್ 11 ಸೀಟರ್(ಎಸಿ)- ರೂ. 12,83,523

ಫೋರ್ಸ್ ಮೋಟಾರ್ಸ್ ಕಂಪನಿಯು ಹೊಸ ವಾಹನದಲ್ಲಿ ಸುಧಾರಿತ ಎಂಜಿನ್ ಸೇರಿದಂತೆ ಹಲವಾರು ಬದಲಾವಣೆಗಳನ್ನು ಪರಿಚಯಿಸಿದ್ದು, ಟ್ರಾಕ್ಸ್ ಕ್ರೂಸರ್‌ಲ್ಲಿ ಮರುವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್, ಬಂಪರ್ ಮತ್ತು ಹೆಡ್‌ಲ್ಯಾಂಪ್ ಕ್ಲಸ್ಟರ್ ಆಕರ್ಷಕವಾಗಿದ್ದು, ಹೊಸದಾದ ವರ್ಟಿಕಲ್ ಮೌಂಟೆಡ್ ಟೈಲ್ ಲ್ಯಾಂಪ್ ಸೌಲಭ್ಯವನ್ನು ನೀಡಲಾಗಿದೆ.

ಹಳೆಯ ಆವೃತ್ತಿಗಿಂತಲೂ ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳನ್ನು ಹೊಂದಿರುವ ಹೊಸ ಟ್ರಾಕ್ಸ್ ಕ್ರೂಸರ್ ಮಾದರಿಯಲ್ಲಿ ಹೊಸದಾಗಿ ಅಳವಡಿಕೆ ಮಾಡಿರುವ ಬ್ಲ್ಯಾಕ್ ಪ್ಲಾಸ್ಟಿಕ್ ಫ್ಲೈರ್ಡ್ ವೀಲ್ಹ್ ಆರ್ಚ್ ಮತ್ತು ಫುಟ್‌ಬೋರ್ಡ್ ಸೌಲಭ್ಯವು ಗಮನಸೆಳೆಯುತ್ತದೆ.

ಹೊಸ ಫೋರ್ಸ್ ಟ್ರಾಕ್ಸ್ ಕ್ರೂಸರ್ ಮತ್ತು ಟೂಫಾನ್‌ನಲ್ಲಿ ಹೊರಭಾಗದ ಬದವಾವಣೆಯೆಂತೆ ಒಳಭಾಗದ ವಿನ್ಯಾಸದಲ್ಲೂ ಹಲವಾರು ಬದಲಾವಣೆಗಳನ್ನು ಪರಿಚಯಿಸಲಾಗಿದ್ದು, ಈ ಹಿಂದಿನ ಮಾದರಿಗಿಂತಲೂ ಕೆಲವು ಪ್ರೀಮಿಯಂ ಫೀಚರ್ಸ್‌ಗಳು ಸುಖಕರ ಪ್ರಯಾಣಕ್ಕೆ ಅನುಕೂರವಾಗಿವೆ. ಡ್ಯುಯಲ್ ಕಲರ್ ಟೋನ್ ಥೀಮ್, ಹೊಸ ಇನ್‌ಸ್ಟ್ರುಮೆಂಟಲ್ ಕ್ಲಸ್ಟರ್ ಜೊತೆಗೆ ಬ್ಲ್ಯೂ ಲಿಟ್ ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ ನೀಡಲಾಗಿದ್ದು, ಈ ಹಿಂದಿನ ಆವೃತ್ತಿಯಲ್ಲಿ ಆಡಿಯೋ ಸಿಸ್ಟಂ ಸೌಲಭ್ಯವನ್ನು ಹೆಚ್ಚುವರಿಯಾಗಿ ಖರೀದಿ ಮಾಡಬೇಕಿತ್ತು.
MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಹಾಗೆಯೇ ಹೊಸ ವಾಹನದಲ್ಲಿ ಮುಂಭಾಗದ ಪ್ರಯಾಣಿಕರಿಗೆ ಎಸಿ ಸೌಲಭ್ಯವಲ್ಲದೆ ಹಿಂಬದಿಯಲ್ಲಿ ರೂಫ್ ಮೌಂಟೆಡ್ ವೆಂಟ್ಸ್, ಡ್ಯುಯಲ್ ಟೋನ್ ಬಿಜ್ ಸೀಟುಗಳು ಮತ್ತು ಹಿಂಬದಿಯ ಸವಾರರಿಗೆ ಅನುಕೂಲಕರ ಆಸನ ಸೌಲಭ್ಯ ನೀಡಲಾಗಿದೆ. ಈ ಮೂಲಕ ಹೊಸ ವಾಹನದಲ್ಲಿ ಚಾಲಕ ಸೇರಿ ಒಟ್ಟು 13 ಜನ ಪ್ರಯಾಣಿಕರು ಅರಾಮದಾಯಕವಾಗಿ ಪ್ರಯಾಣಿಸಬಹುದಾಗಿದ್ದು, 3+4+3+3 ಮಾದರಿಯಲ್ಲಿ ಆಸನ ವ್ಯವಸ್ಥೆ ಹೊಂದಿದೆ. ಮುಂಭಾಗದಲ್ಲಿ ಚಾಲಕನ ಸೀಟು ಪ್ರತ್ಯೇಕ ನಿಯಂತ್ರಣ ಹೊಂದಿದ್ದು, ಹಿಂಬದಿಯಲ್ಲಿ ಬೆಂಚ್ ಸೀಟಗಳನ್ನು ನೀಡಲಾಗಿದೆ.

ಇದಲ್ಲದೇ ಹೊಸ ವಾಹನದಲ್ಲಿ ಈ ಬಾರಿ ಸುಧಾರಿತ ಸುರಕ್ಷಾ ಸೌಲಭ್ಯಗಳನ್ನು ಹೆಚ್ಚಿಸಲಾಗಿದ್ದು, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್, ಎಬಿಎಸ್ ಮತ್ತು ಹಿಂಬದಿಯಲ್ಲಿ ಡ್ರಮ್ ಬ್ರೇಕ್ ನೀಡಲಾಗಿದೆ. ಜೊತೆಗೆ ಪ್ರತ್ಯೇಕವಾದ ರಿಗೆಡ್-ಆಕ್ಸೆಲ್ ಸೌಲಭ್ಯವನ್ನು ಹೊಂದಿದಿರುವುದು ಹೊಸ ವಾಹನಕ್ಕೆ ಮತ್ತಷ್ಟು ಬಲಿಷ್ಠತೆ ತಂದುಕೊಡಲಿದೆ.
MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಎಂಜಿನ್ ಸಾಮರ್ಥ್ಯ
ಫೋರ್ಸ್ ಹೊಸ ವಾಹನಗಳು ಬಿಎಸ್-6 ವೈಶಿಷ್ಟ್ಯತೆಯ 2.6-ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 90-ಬಿಎಚ್‌ಪಿ ಮತ್ತು 260-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.