Just In
- 14 hrs ago ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- 15 hrs ago ಟೊಯೊಟಾದ ಫಾರ್ಚ್ಯೂನರ್ನಲ್ಲೂ ಸಿಗಲಿದೆ ಹೈಬ್ರಿಡ್: ಇದರ ಮೈಲೇಜ್ ಕೇಳಿ ಸುಸ್ತಾದ ಗ್ರಾಹಕರು!
- 16 hrs ago ನಿಜವಾದ ಮಾನವತಾವಾದಿ: ನಟ ರಾಘವ ಲಾರೆನ್ಸ್ರಿಂದ ವಿಶೇಷ ಚೇತನ ಸಾಧಕರಿಗೆ 13 ಟಿವಿಎಸ್ ಸ್ಕೂಟರ್ ಗಿಫ್ಟ್
- 17 hrs ago ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
Don't Miss!
- News Love Jihad: ಹುಬ್ಬಳ್ಳಿ ಹತ್ಯೆಯನ್ನು ಲವ್ ಜಿಹಾದ್ ಆಯಾಮದಲ್ಲಿ ತನಿಖೆ ನಡೆಸಿ: ಪ್ರಹ್ಲಾದ್ ಜೋಶಿ
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಫೋರ್ಸ್ ಗೂರ್ಖಾ ಆಫ್-ರೋಡ್ ಎಸ್ಯುವಿ
ಫೋರ್ಸ್ ಮೋಟಾರ್ಸ್ ಕಂಪನಿಯು ಬಿಡುಗಡೆಗೊಳಿಸಲಿರುವ ಹೊಸ ವಾಹನಗಳ ಪೈಕಿ ಗೂರ್ಖಾ ಆಫ್-ರೋಡ್ ಎಸ್ಯುವಿ ಆವೃತ್ತಿಯು ಭಾರೀ ನೀರಿಕ್ಷೆ ಹುಟ್ಟುಹಾಕಿದ್ದು, ಬಿಎಸ್-6 ಎಂಜಿನ್ ಸೇರಿದಂತೆ ಹೊಸ ಫೀಚರ್ಸ್ನೊಂದಿಗೆ ಉನ್ನತೀಕರಣ ಹೊಂದಿರುವ ಹೊಸ ಕಾರು ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ಹೊಸ ಕಾರನ್ನು ಕಳೆದ ಫೆಬ್ರುವರಿಯಲ್ಲಿ ನಡೆದಿದ್ದ 2020ರ ದೆಹಲಿ ಆಟೋ ಎಕ್ಸ್ಪೋದಲ್ಲಿ ಪ್ರದರ್ಶನಗೊಳಿಸಿದ್ದ ಫೋರ್ಸ್ ಕಂಪನಿಯು ಇದೇ ಜೂನ್ ಅಥವಾ ಜುಲೈ ವೇಳೆಗೆ ಬಿಡುಗಡೆ ಮಾಡುವ ಯೋಜನೆಯಲ್ಲಿತ್ತು. ಆದರೆ ಕರೋನಾ ವೈರಸ್ನಿಂದಾಗಿ ಹೊಸ ಕಾರಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳಿಗೆ ಬಹುದಿನಗಳ ನಂತರ ಮರುಚಾಲನೆ ನೀಡಿದ್ದು, ಹೊಸ ಕಾರು ಬಿಡುಗಡೆಯು ಮುಂಬರುವ ಅಕ್ಟೋಬರ್ ಅಥವಾ ನವೆಂಬರ್ಗೆ ನಡೆಯಲಿದೆ.
ಫೋರ್ಸ್ ಮೋಟಾರ್ಸ್ ಕಂಪನಿಯು ಗೂರ್ಖಾ ಆಫ್ ರೋಡ್ ಎಸ್ಯುವಿ ಆವೃತ್ತಿಯನ್ನು ಎಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬಂದಿರುವ ಹೊಸ ಎಮಿಷನ್ ನಿಯಮದೊಂದಿಗೆ ಉನ್ನತೀಕರಿಸಿದ್ದು, ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್ಗಳನ್ನು ಜೋಡಣೆ ಮಾಡಲಾಗಿದೆ.
ಹೊಸ ಎಮಿಷನ್ ನಿಯಮದಿಂದಾಗಿ ವಾಹನಗಳ ಎಂಜಿನ್ನಲ್ಲಿ ಮಾತ್ರವಲ್ಲದೇ ಪ್ರೀಮಿಯಂ ಫೀಚರ್ಸ್ಗಳ ಜೊತೆಗೆ ಪ್ರಯಾಣಿಕ ಸುರಕ್ಷತೆಯಲ್ಲೂ ಸಾಕಷ್ಟು ಬದಲಾವಣೆ ಹೊಂದಿದ್ದು, ಹೊರ ಮತ್ತು ಒಳಭಾಗದ ತಾಂತ್ರಿಕ ಅಂಶಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.
ಹೊಸ ಗೂರ್ಖಾ ಕಾರಿನಲ್ಲಿ ಈ ಬಾರಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್, ಬಂಪರ್ ಮೇಲೆ ನೀಡಲಾಗಿರುವ ಹೆಡ್ಲ್ಯಾಂಪ್ ಕ್ಲಸ್ಟರ್, ಬಲಿಷ್ಠವಾದ ಬಾಡಿ ಕ್ಲ್ಯಾಡಿಂಗ್ ಸೌಲಭ್ಯವು ಆಫ್ ರೋಡ್ ಪರ್ಫಾಮೆನ್ಸ್ಗೆ ಸಹಕಾರಿಯಾಗಿದೆ. ಹಾಗೆಯೇ ಹೊಸ ಕಾರಿನ ಸ್ಪೋರ್ಟಿ ಸ್ಟೈಲ್ ಹೆಚ್ಚಿಸುವುದಕ್ಕಾಗಿ 16-ಇಂಚಿನ ಅಲಾಯ್ ವೀಲ್ಹ್, 245/70 ವಿನ್ಯಾಸದ ಟೈರ್ ನೀಡಲಾಗಿದ್ದು, ಒಳಭಾಗದ ವಿನ್ಯಾಸದಲ್ಲೂ ಭಾರೀ ಬದಲಾವಣೆಯೊಂದಿಗೆ ಪ್ರೀಮಿಯಂ ಫೀಚರ್ಸ್ ನೀಡಲಾಗಿದೆ.
MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..
ಹೊಸ ಪ್ರೀಮಿಯಂ ಫೀಚರ್ಸ್ಗಳಿಂದಾಗಿ ಆಫ್ ರೋಡ್ ಕಾರು ಚಾಲನೆಯು ಮತ್ತಷ್ಟು ಸುಗಮವಾಗಲಿದ್ದು, ಡ್ಯಾಶ್ಬೋರ್ಡ್ ತಾಂತ್ರಿಕ ಸೌಲಭ್ಯಗಳನ್ನು ಸಂಪೂರ್ಣವಾಗಿ ಬದಲಾವಣೆಗೊಳಿಸಲಾಗಿದೆ.
ಡ್ಯಾಶ್ಬೋರ್ಡ್ನಲ್ಲಿ ಈ ಬಾರಿ ಸೆಂಟ್ರಲ್ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್, ಹೊಸದಾದ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮಲ್ಟಿ ಇನ್ಫಾರ್ಮೆಷನ್ ಡಿಸ್ಪ್ಲೇ, ಪ್ರತ್ಯೇಕವಾದ ಆಸನ ಸೌಲಭ್ಯಗಳು, ಹೊಸದಾದ ಎಸಿ ವೆಂಟ್ಸ್ ಜೋಡಿಸಲಾಗಿದೆ.
MOST READ: ಪ್ರತಿ ಚಾರ್ಜ್ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್
ಇದರೊಂದಿಗೆ ಹೊಸ ಆಫ್ ರೋಡ್ ಕಾರಿನಲ್ಲಿ ಪ್ರಯಾಣಿಕ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಚಾರ್ಸಿ ಬದಲಾವಣೆ ಸೇರಿದಂತೆ ಹಲವು ಸ್ಟ್ಯಾಂಡರ್ಡ್ ಸೆಫ್ಟಿ ಫೀಚರ್ಸ್ಗಳನ್ನು ಹೊಸ ಗೂರ್ಖಾದಲ್ಲಿ ನೀಡಲಾಗಿದೆ. ಹೊಸ ಕಾರು ಮಾರ್ಚ್ ಅಂತ್ಯದೊಳಗೆ ಮಾರುಕಟ್ಟೆ ಪ್ರವೇಶಿಸಲಿದ್ದು, ಬೆಲೆ ಕೂಡಾ ಬಿಎಸ್-4 ಆವೃತ್ತಿಗಿಂತಲೂ ತುಸು ದುಬಾರಿಯಾಗಲಿದೆ.