ಶೀಘ್ರದಲ್ಲೇ ಡೀಲರ್‍‍ಗಳನ್ನು ತಲುಪಲಿರುವ ಬಿಎಸ್-6 ಇಕೋಸ್ಪೋರ್ಟ್

ಅಮೇರಿಕಾ ಮೂಲದ ಕಾರು ತಯಾರಕ ಕಂಪನಿಯಾದ ಫೋರ್ಡ್ ತನ್ನ ಇಕೋಸ್ಪೋರ್ಟ್ ಕಾಂಪ್ಯಾಕ್ಟ್ ಎಸ್‍‍ಯುವಿಯನ್ನು ಬಿಎಸ್-6 ಆವೃತ್ತಿಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಭಾರತದ ರಸ್ತೆಗಳಲ್ಲಿ ಬಿಎಸ್-6 ಎಂಜಿನ್‍‍ಗಳನ್ನು ಅಳವಡಿಸಿ ಇಕೋಸ್ಪೋರ್ಟ್ ಕಾಂಪ್ಯಾಕ್ಟ್ ಎಸ್‍‍ಯುವಿಯನ್ನು ಈಗಾಗಲೇ ಸ್ಪಾಟ್ ಟೆಸ್ಟ್ ನಡೆಸಲಾಗಿದೆ.

ಶೀಘ್ರದಲ್ಲೇ ಡೀಲರ್‍‍ಗಳನ್ನು ತಲುಪಲಿರುವ ಬಿಎಸ್-6 ಇಕೋಸ್ಪೋರ್ಟ್

ಮಾಲಿನ್ಯವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮುಂದಿನ ಏಪ್ರಿಲ್ ತಿಂಗಳಲ್ಲಿ ಬಿಎಸ್-6 ಮಾಲಿನ್ಯ ನಿಯಮವನ್ನು ಜಾರಿಗೊಳಿಸುತ್ತಿದೆ. ಬಿಎಸ್-6 ಮಾಲಿನ್ಯ ನಿಯಮ ಜಾರಿಗೊಳಿಸುವ ಮೊದಲೇ ಇಕೋಸ್ಪೋರ್ಟ್ ಎಸ್‍‍ಯುವಿಯನ್ನು ಬಿಡುಗಡೆಗೊಳಿಸಲಾಗುತ್ತಿದೆ. ಹೊಸ ಬಿಎಸ್-6 ಇಕೋಸ್ಪೋರ್ಟ್‍ ಕಾಂಪ್ಯಾಕ್ಟ್ ಎಸ್‍‍ಯುವಿಯು ಇದೇ ತಿಂಗಳು ಅಂತ್ಯದ ವೇಳೆಗೆ ಡೀಲರ್‍‍ಗಳ ಬಳಿ ತಲುಪುವ ನಿರೀಕ್ಷೆಗಳಿವೆ. ಈ ಕಾಂಪ್ಯಾಕ್ಟ್ ಎಸ್‍‍ಯುವಿಯ ಬೆಲೆಯ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಶೀಘ್ರದಲ್ಲೇ ಡೀಲರ್‍‍ಗಳನ್ನು ತಲುಪಲಿರುವ ಬಿಎಸ್-6 ಇಕೋಸ್ಪೋರ್ಟ್

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಫೋರ್ಡ್ ಇಕೋಸ್ಪೋರ್ಟ್ ಅನ್ನು ಮೂರು ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. 1.5 ಲೀಟರಿನ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ 121 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5 ಸ್ಪೀಡಿನ ಮ್ಯಾನುವಲ್ ಅಥವಾ 6 ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಅಳವಡಿಸಲಾಗುವುದು.

ಶೀಘ್ರದಲ್ಲೇ ಡೀಲರ್‍‍ಗಳನ್ನು ತಲುಪಲಿರುವ ಬಿಎಸ್-6 ಇಕೋಸ್ಪೋರ್ಟ್

ಇನ್ನು 1.0 ಲೀಟರಿನ ಮೂರು ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ 123 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಮ್ಯಾನುವಲ್ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ. 1.5 ಲೀಟರಿನ ನಾಲ್ಕು ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್‍‍ನಲ್ಲಿ 5 ಸ್ಪೀಡಿನ ಮ್ಯಾನ್ಯುವಲ್ ಗೇರ್‍‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಶೀಘ್ರದಲ್ಲೇ ಡೀಲರ್‍‍ಗಳನ್ನು ತಲುಪಲಿರುವ ಬಿಎಸ್-6 ಇಕೋಸ್ಪೋರ್ಟ್

ಫೋರ್ಡ್, ಬಿಎಸ್6 ನಿಯಮಗಳಿಗೆ ಅನುಗುಣವಾಗಿ 1.5 ಲೀಟರಿನ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‍‍ಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಅಧಿಕ ವೆಚ್ಚವಾಗುವ ಕಾರಣಕ್ಕೆ 1.0 ಲೀಟರಿನ ಇಕೋಬೂಸ್ಟ್ ಎಂಜಿನ್ ಅನ್ನು ಹೊಸ ಇಕೋಸ್ಪೋರ್ಟ್‌ನಲ್ಲಿ ಅಳವಡಿಸಲಾಗುವುದಿಲ್ಲ.

ಶೀಘ್ರದಲ್ಲೇ ಡೀಲರ್‍‍ಗಳನ್ನು ತಲುಪಲಿರುವ ಬಿಎಸ್-6 ಇಕೋಸ್ಪೋರ್ಟ್

ಹೊಸ ಕಾಂಪ್ಯಾಕ್ಟ್ ಎಸ್‍‍ಯುವಿನಲ್ಲಿ 1.0 ಲೀಟರಿನ ಇಕೋಬೂಸ್ಟ್ ಎಂಜಿನ್ ಬದಲಿಗೆ ಮಹೀಂದ್ರಾ ಕಂಪನಿಯ 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅಳವಡಿಸಲಾಗುವುದು. ಈ ಎಂಜಿನ್ ಅನ್ನು ಮಹೀಂದ್ರಾ ಕಂಪನಿಯ ಕಾಂಪ್ಯಾಕ್ಟ್ ಎಸ್‌ಯುವಿಯಾದ ಟಿಯುವಿ300ನಲ್ಲಿ ಅಳವಡಿಸಲಾಗಿದೆ.

ಶೀಘ್ರದಲ್ಲೇ ಡೀಲರ್‍‍ಗಳನ್ನು ತಲುಪಲಿರುವ ಬಿಎಸ್-6 ಇಕೋಸ್ಪೋರ್ಟ್

ಇಕೋಸ್ಪೋರ್ಟ್ ಎಸ್‍‍ಯುವಿಯ ಮುಂಭಾಗದಲ್ಲಿ, ಫಾಗ್ ಲ್ಯಾಂಪ್ ಬೆಜೆಲ್ ಮತ್ತು ಗ್ರಿಲ್‍‍ಗಳಿವೆ. ಈ ಹೊಸ ಎಸ್‍‍ಯುವಿಯಲ್ಲಿರುವ ಮುಖ್ಯ ಬದಲಾವಣೆಯೆಂದರೆ ಡ್ಯುಯಲ್-ಟೋನ್ ಬಾನೆಟ್. ಇದರ ಬಹು ಭಾಗವು ಗ್ಲಾಸ್ ಬ್ಲಾಕ್ ಬಣ್ಣವನ್ನು ಹೊಂದಿದೆ.

ಶೀಘ್ರದಲ್ಲೇ ಡೀಲರ್‍‍ಗಳನ್ನು ತಲುಪಲಿರುವ ಬಿಎಸ್-6 ಇಕೋಸ್ಪೋರ್ಟ್

ಕಾಂಪ್ಯಾಕ್ಟ್ ಎಸ್‌ಯುವಿಯ ಥಂಡರ್ ಮಾದರಿಯು ಹೊಸ ಅಲಾಯ್ ವ್ಹೀಲ್‍‍ಗಳನ್ನು ಹೊಂದಿದೆ. ಅಲಾಯ್ ವ್ಹೀಲ್‍‍ಗಳು ಬ್ಲ್ಯಾಕ್ ಬಣ್ಣವನ್ನು ಹೊಂದಿವೆ. ಆದರೆ ಸ್ಯಾಟಿನ್ ಮ್ಯಾಟ್ ಫಿನಿಶ್ ಹೊಂದಿವೆ. ಡೋರ್‍‍ಗಳ ಮೇಲೆ ಕಪ್ಪು ಬಣ್ಣದ ಡೆಕಾಲ್‌ಗಳಿವೆ.

ಶೀಘ್ರದಲ್ಲೇ ಡೀಲರ್‍‍ಗಳನ್ನು ತಲುಪಲಿರುವ ಬಿಎಸ್-6 ಇಕೋಸ್ಪೋರ್ಟ್

ಇಂಟಿರಿಯರ್‍‍ನಲ್ಲಿರುವ ಕ್ಯಾಬಿನ್‌ ಡ್ಯುಯಲ್ ಟೋನ್ ಥೀಮ್ ಹೊಂದಿದೆ. ಸೀಟುಗಳು, ಡೋರ್ ಪ್ಯಾನೆಲ್‍‍ಗಳು, ಪ್ಯಾಸೆಂಜರ್ ಗ್ರಾಬ್ ಹ್ಯಾಂಡಲ್, ಸೆಂಟರ್ ಆರ್ಮ್‌‍‍ರೆಸ್ಟ್ ಹಾಗೂ ಸೆಂಟರ್ ಕನ್ಸೋಲ್‌ಗಳು ಕಂದು ಬಣ್ಣವನ್ನು ಹೊಂದಿವೆ.

ಶೀಘ್ರದಲ್ಲೇ ಡೀಲರ್‍‍ಗಳನ್ನು ತಲುಪಲಿರುವ ಬಿಎಸ್-6 ಇಕೋಸ್ಪೋರ್ಟ್

ಫೋರ್ಡ್ ಇಕೋಸ್ಪೋರ್ಟ್ ಭಾರತದಲ್ಲಿ 2013ರಲ್ಲಿ ಮೊದಲ ಬಾರಿ ಬಿಡುಗಡೆಯಾಗಿತ್ತು. ಇಕೋಸ್ಪೋರ್ಟ್ ಈ ಸೆಗ್‍‍ಮೆಂಟಿನಲ್ಲಿರುವ ಹಳೆಯ ಮಾದರಿಗಳಲ್ಲಿ ಒಂದಾಗಿದೆ. ಈ ಕಾಂಪ್ಯಾಕ್ಟ್ ಎಸ್‍‍ಯುವಿಯು ಹೆಚ್ಚು ಜನಪ್ರಿಯವಾಗಿರುವುದರಿಂದ ಬಿಎಸ್-6 ಮಾದರಿಯು ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.

Most Read Articles

Kannada
Read more on ಫೋರ್ಡ್ ford
English summary
Ford EcoSport BS6 to start reaching dealerships this month. Read in Kannada
Story first published: Tuesday, January 14, 2020, 11:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X