ಸದ್ಯಕ್ಕಿಲ್ಲ ಬಿಎಸ್-6 ಫೋರ್ಡ್ ಎಂಡೀವರ್ ಎಸ್‍ಯುವಿಯ ಬೆಲೆ ಏರಿಕೆ

ಫೋರ್ಡ್ ಇಂಡಿಯಾ ಕಂಪನಿಯು ತನ್ನ ಬಿಎಸ್-6 ಎಂಡೀವರ್ ಎಸ್‍‍ಯುವಿಯನ್ನು ಭಾರತದಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಇದೀಗ ಫೋರ್ಡ್ ಕಂಪನಿಯು ಹೊಸ ಎಂಡೀವರ್ ಎಸ್‍ಯುವಿ ಖರೀದಿಸಲು ಬಯಸುವ ಗ್ರಾಹಕರಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ.

ಸಧ್ಯಕ್ಕಿಲ್ಲ ಬಿಎಸ್-6 ಫೋರ್ಡ್ ಎಂಡೀವರ್ ಎಸ್‍ಯುವಿಯ ಬೆಲೆ ಏರಿಕೆ

ಬಿಎಸ್-6 ಫೋರ್ಡ್ ಎಂಡೀವರ್ ಎಸ್‍‍ಯುವಿಯನ್ನು ಪ್ರಾರಂಭಿಕ ಬೆಲೆ ಭಾರತದ ಎಕ್ಸ್ ಶೋರೋಂ ಪ್ರಕಾರ ರೂ.29.55 ಲಕ್ಷಗಳಿಗೆ ಬಿಡುಗಡೆಗೊಳಿಸಲಾಗಿತ್ತು. ಇದರ ನಂತರ ಫೋರ್ಡ್ ಕಂಪನಿಯು ಏಪ್ರಿಲ್ 30 ರ ನಂತರ ಸುಮಾರು 70,000 ರೂ.ಗಳ ಬೆಲೆ ಏರಕೆಯನ್ನು ಹೆಚ್ಚಿಸುವುದಾಗಿ ಹೇಳಿದರು. ಆದರೆ ಆ ಸಮಯದಲ್ಲಿ ಲಾಕ್ ಡೌನ್ ನಿಂದ ಡೀಲರ್ ಗಳು ಮಳಿಗೆಗಳನ್ನು ಮುಚ್ಚಿದ್ದರು. ಆದರೆ ಇದೀಗ ಕಂಪನಿಯು ದರವನ್ನು ಸಧ್ಯದಲ್ಲಿ ಏರಿಕೆ ಮಾಡಲಾಗುವುದಿಲ್ಲ. ಪರಿಚಯ ಬೆಲೆಯನ್ನು ಮೂರು ತಿಂಗಳ ಕಾಲ ವಿಸ್ತರಿಸಲಾಗಿದೆ. ಮೂರು ತಿಂಗಳ ಬಳಿಕ ಈ ಎಸ್‍ಯುವಿಯ ಬೆಲೆಯನ್ನು ಹೆಚ್ಚಿಸಬಹುದು.

ಸಧ್ಯಕ್ಕಿಲ್ಲ ಬಿಎಸ್-6 ಫೋರ್ಡ್ ಎಂಡೀವರ್ ಎಸ್‍ಯುವಿಯ ಬೆಲೆ ಏರಿಕೆ

ಫೋರ್ಡ್ ಕಾರು ತಯಾರಕ ಕಂಪನಿಯು ತನ್ನ ಹೊಸ ಡಯಲ್-ಎ-ಫೋರ್ಡ್ ಸಹಾಯವಾಣಿ ಮೂಲಕ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ. ಫೋರ್ಡ್ ಕಂಪನಿಯು ಮಾರಾಟವನ್ನು ಹೆಚ್ಚಿಸುವ ದೃಷ್ಠಿಯಿಂದ ಎಂಡೀವರ್ ಬೆಲೆ ಏರಿಕೆ ಮಾಡುವುದನು ಮುಂದೂಡಿಕೆ ಮಾಡಿರಬಹುದು ಎಂದು ನಿರೀಕ್ಷಿಸುತ್ತೇವೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಸಧ್ಯಕ್ಕಿಲ್ಲ ಬಿಎಸ್-6 ಫೋರ್ಡ್ ಎಂಡೀವರ್ ಎಸ್‍ಯುವಿಯ ಬೆಲೆ ಏರಿಕೆ

ಆದರೆ ಭಾರತೀಯ ಅಡ್ವೆಂಚರ್ ರೈಡರ್ ಗಳಿಗೆ ಫೋರ್ಡ್ ನಿರಾಸೆ ಮೂಡಿಸಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬಿಎಸ್-6 ಎಂಡೀವರ್ ಎಸ್‍‍ಯುವಿಯಲ್ಲಿ ಪವರ್ ಫುಲ್ ಟ್ವಿನ್ ಟರ್ಬೂ ವರ್ಷನ್ ಹೊಂದಿರುವುದಿಲ್ಲ.

ಸಧ್ಯಕ್ಕಿಲ್ಲ ಬಿಎಸ್-6 ಫೋರ್ಡ್ ಎಂಡೀವರ್ ಎಸ್‍ಯುವಿಯ ಬೆಲೆ ಏರಿಕೆ

ಭಾರತದಲ್ಲಿ ಬಿಡುಗಡೆಗೊಳಿಸಿದ ಬಿಎಸ್-6 ಎಂಡೀವರ್ ಎಸ್‍‍ಯುವಿಯಲ್ಲಿ ಮಾತ್ರ ಸಿಂಗಲ್ ಟರ್ಬೂ ಎಂಜಿನ್ ಅನ್ನು ಹೊಂದಿದೆ. ವಿದೇಶಿ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಹೊಸ ಎಂಡೀವರ್ ನಲ್ಲಿ ಟ್ವಿನ್-ಟರ್ಬೊ ಎಂಜಿನ್ ಅನ್ನು ಹೊಂದಿದೆ.

MOST READ: ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

ಸಧ್ಯಕ್ಕಿಲ್ಲ ಬಿಎಸ್-6 ಫೋರ್ಡ್ ಎಂಡೀವರ್ ಎಸ್‍ಯುವಿಯ ಬೆಲೆ ಏರಿಕೆ

ಈ ಎಸ್‍ಯುವಿಯಲ್ಲಿ ಹೆಡ್‌ಲ್ಯಾಂಪ್ ಯುನಿಟ್, ಎಲ್ಇಡಿ ಟೇಲ್‍ಲೈಟ್, 18-ಇಂಚಿನ ಅಲಾಯ್ ವ್ಹೀಲ್, ನವೀಕರಿಸಿದ ಫ್ರಂಟ್ ಬಂಪರ್, ಸೆಮಿ ಪ್ಯಾರಾಲೆಲ್ ಅಸಿಸ್ಟ್, ಪನರೋಮಿಕ್ ಸನ್‌ರೂಫ್ ಅನ್ನು ಅಳವಡಿಸಲಾಗಿದೆ.

ಸಧ್ಯಕ್ಕಿಲ್ಲ ಬಿಎಸ್-6 ಫೋರ್ಡ್ ಎಂಡೀವರ್ ಎಸ್‍ಯುವಿಯ ಬೆಲೆ ಏರಿಕೆ

ಈ ಎಸ್‍ಯುವಿ ಇಂಟಿರಿಯರ್‍‍ನಲ್ಲಿ ಸ್ಟೀಯರಿಂಗ್ ಮೌಟೆಂಡ್ ಆಡಿಯೋ ಕಂಟ್ರೋಲ್, ಡ್ಯುಯಲ್-ಜೋನ್ ಕ್ಲೈಮೆಟ್ ಕಂಟ್ರೋಲ್, 8.0-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೇನ್‌ಮೆಂಟ್ ಸಿಸ್ಟಂ ಜೊತೆ ಆ್ಯಪಲ್ ಕಾರ್ ಪ್ಲೇ, ಅಂಡ್ರಾಯಿಡ್ ಆಟೋ ಮತ್ತು 10-ಸ್ಪಿಕರ್ಸ್ ಸೌಂಡ್ ಸಿಸ್ಟಂ ಹೊಂದಿದೆ.

MOST READ: ತಡವಾಗಲಿದೆ ಫೋಕ್ಸ್‌ವ್ಯಾಗನ್ ಟೈಗನ್ ಎಸ್‍ಯುವಿ ಬಿಡುಗಡೆ

ಸಧ್ಯಕ್ಕಿಲ್ಲ ಬಿಎಸ್-6 ಫೋರ್ಡ್ ಎಂಡೀವರ್ ಎಸ್‍ಯುವಿಯ ಬೆಲೆ ಏರಿಕೆ

ಫೋರ್ಡ್ ಎಂಡೀವರ್ ಎಸ್‍‍ಯುವಿಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಏಳು ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಅಸಿಸ್ಟ್ ಮತ್ತು ಪಾರ್ಕಿಂಗ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಸಧ್ಯಕ್ಕಿಲ್ಲ ಬಿಎಸ್-6 ಫೋರ್ಡ್ ಎಂಡೀವರ್ ಎಸ್‍ಯುವಿಯ ಬೆಲೆ ಏರಿಕೆ

ಈ ಎಸ್‍ಯುವಿಯಲ್ಲಿ 4x4 ಡ್ರೈವ್ ಟೆಕ್ನಾಲಜಿ ಸೌಲಭ್ಯ ಹೊಂದಿದೆ. ಈ ಎಸ್‍ಯುವಿಯ ಮುಂಭಾಗದಲ್ಲಿ ಫ್ರಂಟ್ ಗ್ರಿಲ್ ಮತ್ತು ಕ್ರೋಮ್ ಸ್ಲಾಟ್‌ಗಳನ್ನು ಅಳವಡಿಸಲಾಗಿದೆ. ಬಿಎಸ್-6 ಫೋರ್ಡ್ ಎಂಡೀವರ್ ಎಸ್‍‍ಯುವಿ ದೇಶಿಯ ಮಾರುಕಟ್ಟೆಯಲ್ಲಿ ಟೊಯೊಟಾ ಫಾರ್ಚೂನರ್, ಮಹೀಂದ್ರಾ ಅಲ್ಟುರಾಸ್ ಜಿ4 ಮತ್ತು ಇಸುಝು ಎಂಯು-ಎಕ್ಸ್ ಎಸ್‍‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಫೋರ್ಡ್ ford
English summary
BS6 Ford Endeavour introductory pricing extended by three months. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X