10 ಸ್ಪೀಡ್ ಗೇರ್‍‍ಬಾಕ್ಸ್ ಆಯ್ಕೆಯೊಂದಿಗೆ ಬಿಡುಗಡೆಯಾಯ್ತು ಬಿಎಸ್-6 ಫೋರ್ಡ್ ಎಂಡೀವರ್

ಫೋರ್ಡ್ ಇಂಡಿಯಾ ಕಂಪನಿಯು ತನ್ನ ಬಿಎಸ್-6 ಎಂಡೀವರ್ ಎಸ್‍‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಬಿಎಸ್-6 ಫೋರ್ಡ್ ಎಂಡೀವರ್ ಎಸ್‍‍ಯುವಿಯ ಪ್ರಾರಂಭಿಕ ಬೆಲೆಯು ಭಾರತದ ಎಕ್ಸ್ ಶೋರೋಂ ಪ್ರಕಾರ ರೂ.29.55 ಲಕ್ಷಗಳಾಗಿದೆ.

10 ಸ್ಪೀಡ್ ಗೇರ್‍‍ಬಾಕ್ಸ್ ಆಯ್ಕೆಯೊಂದಿಗೆ ಬಿಡುಗಡೆಯಾಯ್ತು ಬಿಎಸ್-6 ಫೋರ್ಡ್ ಎಂಡೀವರ್

ಬಿಎಸ್-6 ಫೋರ್ಡ್ ಎಂಡೀವರ್ ಟಾಪ್ ಸ್ಪೆಕ್ ಟೈಟಾನಿಯಂ ಪ್ಲಸ್ 4X4 ಎಸ್‍ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.33.25 ಲಕ್ಷಗಳಾಗಿದೆ. ಈ ಪರಿಚಯಾತ್ಮಕ ಬೆಲೆಗಳು ಏಪ್ರಿಲ್ 30ರವರೆಗೆ ಮಾತ್ರ ವಿರುತ್ತದೆ. ನಂತರ ಎಲ್ಲಾ ರೂಪಾಂತರಗಳ ಬೆಲೆಯನ್ನು ರೂ.70,000ಗಳವರೆಗೆ ಹೆಚ್ಚಳವನ್ನು ಕಾಣುತ್ತವೆ. ಫೋರ್ಡ್ ಎಂಡೀವರ್ ಎಸ್‍‍ಯುವಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎವರೆಸ್ಟ್ ಎಂದು ಕರೆಯಲಾಗುತ್ತದೆ.

10 ಸ್ಪೀಡ್ ಗೇರ್‍‍ಬಾಕ್ಸ್ ಆಯ್ಕೆಯೊಂದಿಗೆ ಬಿಡುಗಡೆಯಾಯ್ತು ಬಿಎಸ್-6 ಫೋರ್ಡ್ ಎಂಡೀವರ್

ಭಾರತದಲ್ಲಿ ಬಿಡುಗಡೆಯಾಗಿರುವ ಹೊಸ ಫೋರ್ಡ್ ಎಂಡೀವರ್ ಹೊಸ ಎಂಜಿನ್ ಅನ್ನು ಅಳವಡಿಸಿದೆ. ಹೊಸದಾಗಿ 2.0 ಲೀಟರ್ ಇಕೋಬ್ಲೂ ಟರ್ಬೊ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಿದೆ. ಈ ಎಂಜಿನ್ 168 ಬಿ‍‍ಹೆಚ್‍‍ಪಿ ಪವರ್ ಮತ್ತು 420 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿ‍ನೊಂದಿಗೆ 10 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಿದೆ.

10 ಸ್ಪೀಡ್ ಗೇರ್‍‍ಬಾಕ್ಸ್ ಆಯ್ಕೆಯೊಂದಿಗೆ ಬಿಡುಗಡೆಯಾಯ್ತು ಬಿಎಸ್-6 ಫೋರ್ಡ್ ಎಂಡೀವರ್

ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿರುವ ಎಂಡೀವರ್ ಎಸ್‍‍ಯುವಿಯ ಎರಡು ಎಂಜಿನ್‍ಗಳನ್ನು ಬದಲಾಯಿಸಿದೆ. ಪ್ರಸ್ತುತ ಎಂಡೀವರ್ ಎಸ್‍‍ಯುವಿನಲ್ಲಿರುವ ಎಂಜಿನ್‍‍ಗಳ ಬದಲಾವಣೆಗೆ ಪ್ರಮುಖ ಕಾರಣವೆಂದರೆ ಎಂಡೀವರ್ ಬೆಲೆಯನ್ನು ದುಬಾರಿಯಾಗಿಸುತ್ತದೆ.

10 ಸ್ಪೀಡ್ ಗೇರ್‍‍ಬಾಕ್ಸ್ ಆಯ್ಕೆಯೊಂದಿಗೆ ಬಿಡುಗಡೆಯಾಯ್ತು ಬಿಎಸ್-6 ಫೋರ್ಡ್ ಎಂಡೀವರ್

ಈ ಎಸ್‍‍ಯುವಿಯ ಪ್ರಸ್ತುತ ಎಂಜಿನ್‍‍ಗಳನ್ನು ನವೀಕರಿಸುವುದರಿಂದ ಎಂಡೀವರ್ ಬೆಲೆಗಳನ್ನು ಸುಮಾರು ರೂ.3 ರಿಂದ ರೂ.4 ಲಕ್ಷಗಳಾವರೆಗೆ ಬೆಲೆಯನ್ನು ಹೆಚ್ಚಿಸಬೇಕಾಗಿತ್ತು. ಹೊಸ ಎಂಜಿನ್ ಅನ್ನು ಅಳವಡಿಸುವುದರಿಂದ ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟ ಮಾಡಬಹುದಾಗಿದೆ.

10 ಸ್ಪೀಡ್ ಗೇರ್‍‍ಬಾಕ್ಸ್ ಆಯ್ಕೆಯೊಂದಿಗೆ ಬಿಡುಗಡೆಯಾಯ್ತು ಬಿಎಸ್-6 ಫೋರ್ಡ್ ಎಂಡೀವರ್

ಈ ಎಸ್‍ಯುವಿಯಲ್ಲಿ ಹೆಡ್‌ಲ್ಯಾಂಪ್ ಯುನಿಟ್, ಎಲ್ಇಡಿ ಟೇಲ್‍ಲೈಟ್, 18-ಇಂಚಿನ ಅಲಾಯ್ ವ್ಹೀಲ್, ನವೀಕರಿಸಿದ ಫ್ರಂಟ್ ಬಂಪರ್, ಸೆಮಿ ಪ್ಯಾರಾಲೆಲ್ ಅಸಿಸ್ಟ್, ಪನರೋಮಿಕ್ ಸನ್‌ರೂಫ್ ಅನ್ನು ಅಳವಡಿಸಲಾಗಿದೆ.

10 ಸ್ಪೀಡ್ ಗೇರ್‍‍ಬಾಕ್ಸ್ ಆಯ್ಕೆಯೊಂದಿಗೆ ಬಿಡುಗಡೆಯಾಯ್ತು ಬಿಎಸ್-6 ಫೋರ್ಡ್ ಎಂಡೀವರ್

ಈ ಎಸ್‍ಯುವಿ ಇಂಟಿರಿಯರ್‍‍ನಲ್ಲಿ ಸ್ಟೀಯರಿಂಗ್ ಮೌಟೆಂಡ್ ಆಡಿಯೋ ಕಂಟ್ರೋಲ್, ಡ್ಯುಯಲ್-ಜೋನ್ ಕ್ಲೈಮೆಟ್ ಕಂಟ್ರೋಲ್, 8.0-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೇನ್‌ಮೆಂಟ್ ಸಿಸ್ಟಂ ಜೊತೆ ಆ್ಯಪಲ್ ಕಾರ್ ಪ್ಲೇ, ಅಂಡ್ರಾಯಿಡ್ ಆಟೋ ಮತ್ತು 10-ಸ್ಪಿಕರ್ಸ್ ಸೌಂಡ್ ಸಿಸ್ಟಂ ಹೊಂದಿದೆ.

10 ಸ್ಪೀಡ್ ಗೇರ್‍‍ಬಾಕ್ಸ್ ಆಯ್ಕೆಯೊಂದಿಗೆ ಬಿಡುಗಡೆಯಾಯ್ತು ಬಿಎಸ್-6 ಫೋರ್ಡ್ ಎಂಡೀವರ್

ಫೋರ್ಡ್ ಎಂಡೀವರ್ ಎಸ್‍‍ಯುವಿಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಏಳು ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಅಸಿಸ್ಟ್ ಮತ್ತು ಪಾರ್ಕಿಂಗ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

10 ಸ್ಪೀಡ್ ಗೇರ್‍‍ಬಾಕ್ಸ್ ಆಯ್ಕೆಯೊಂದಿಗೆ ಬಿಡುಗಡೆಯಾಯ್ತು ಬಿಎಸ್-6 ಫೋರ್ಡ್ ಎಂಡೀವರ್

ಈ ಎಸ್‍ಯುವಿಯಲ್ಲಿ 4x4 ಡ್ರೈವ್ ಟೆಕ್ನಾಲಜಿ ಸೌಲಭ್ಯ ಹೊಂದಿದೆ. ಈ ಎಸ್‍ಯುವಿಯ ಮುಂಭಾಗದಲ್ಲಿ ಫ್ರಂಟ್ ಗ್ರಿಲ್ ಮತ್ತು ಕ್ರೋಮ್ ಸ್ಲಾಟ್‌ಗಳನ್ನು ಅಳವಡಿಸಲಾಗಿದೆ.

10 ಸ್ಪೀಡ್ ಗೇರ್‍‍ಬಾಕ್ಸ್ ಆಯ್ಕೆಯೊಂದಿಗೆ ಬಿಡುಗಡೆಯಾಯ್ತು ಬಿಎಸ್-6 ಫೋರ್ಡ್ ಎಂಡೀವರ್

ಬಿಎಸ್-6 ಟೊಯೊಟಾ ಎಂಡೀವರ್ ಎಸ್‍‍ಯುವಿ ದೇಶಿಯ ಮಾರುಕಟ್ಟೆಯಲ್ಲಿ ಟೊಯೊಟಾ ಫಾರ್ಚೂನರ್, ಮಹೀಂದ್ರಾ ಅಲ್ಟುರಾಸ್ ಜಿ4 ಮತ್ತು ಇಸುಝು ಎಂಯು-ಎಕ್ಸ್ ಎಸ್‍‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಫೋರ್ಡ್ ford
English summary
BS6 Ford Endeavour launched at Rs 29.55 lakh. Read in Kannada.
Story first published: Tuesday, February 25, 2020, 16:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X