Just In
- 6 hrs ago ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- 8 hrs ago Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- 9 hrs ago ಈ ಬೈಕ್ಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾಗಲೇ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟ ಟ್ರಯಂಫ್
- 10 hrs ago ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
Don't Miss!
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
10 ಸ್ಪೀಡ್ ಗೇರ್ಬಾಕ್ಸ್ ಆಯ್ಕೆಯೊಂದಿಗೆ ಬಿಡುಗಡೆಯಾಯ್ತು ಬಿಎಸ್-6 ಫೋರ್ಡ್ ಎಂಡೀವರ್
ಫೋರ್ಡ್ ಇಂಡಿಯಾ ಕಂಪನಿಯು ತನ್ನ ಬಿಎಸ್-6 ಎಂಡೀವರ್ ಎಸ್ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಬಿಎಸ್-6 ಫೋರ್ಡ್ ಎಂಡೀವರ್ ಎಸ್ಯುವಿಯ ಪ್ರಾರಂಭಿಕ ಬೆಲೆಯು ಭಾರತದ ಎಕ್ಸ್ ಶೋರೋಂ ಪ್ರಕಾರ ರೂ.29.55 ಲಕ್ಷಗಳಾಗಿದೆ.
ಬಿಎಸ್-6 ಫೋರ್ಡ್ ಎಂಡೀವರ್ ಟಾಪ್ ಸ್ಪೆಕ್ ಟೈಟಾನಿಯಂ ಪ್ಲಸ್ 4X4 ಎಸ್ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.33.25 ಲಕ್ಷಗಳಾಗಿದೆ. ಈ ಪರಿಚಯಾತ್ಮಕ ಬೆಲೆಗಳು ಏಪ್ರಿಲ್ 30ರವರೆಗೆ ಮಾತ್ರ ವಿರುತ್ತದೆ. ನಂತರ ಎಲ್ಲಾ ರೂಪಾಂತರಗಳ ಬೆಲೆಯನ್ನು ರೂ.70,000ಗಳವರೆಗೆ ಹೆಚ್ಚಳವನ್ನು ಕಾಣುತ್ತವೆ. ಫೋರ್ಡ್ ಎಂಡೀವರ್ ಎಸ್ಯುವಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎವರೆಸ್ಟ್ ಎಂದು ಕರೆಯಲಾಗುತ್ತದೆ.
ಭಾರತದಲ್ಲಿ ಬಿಡುಗಡೆಯಾಗಿರುವ ಹೊಸ ಫೋರ್ಡ್ ಎಂಡೀವರ್ ಹೊಸ ಎಂಜಿನ್ ಅನ್ನು ಅಳವಡಿಸಿದೆ. ಹೊಸದಾಗಿ 2.0 ಲೀಟರ್ ಇಕೋಬ್ಲೂ ಟರ್ಬೊ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಿದೆ. ಈ ಎಂಜಿನ್ 168 ಬಿಹೆಚ್ಪಿ ಪವರ್ ಮತ್ತು 420 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನೊಂದಿಗೆ 10 ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಅನ್ನು ಅಳವಡಿಸಲಿದೆ.
ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿರುವ ಎಂಡೀವರ್ ಎಸ್ಯುವಿಯ ಎರಡು ಎಂಜಿನ್ಗಳನ್ನು ಬದಲಾಯಿಸಿದೆ. ಪ್ರಸ್ತುತ ಎಂಡೀವರ್ ಎಸ್ಯುವಿನಲ್ಲಿರುವ ಎಂಜಿನ್ಗಳ ಬದಲಾವಣೆಗೆ ಪ್ರಮುಖ ಕಾರಣವೆಂದರೆ ಎಂಡೀವರ್ ಬೆಲೆಯನ್ನು ದುಬಾರಿಯಾಗಿಸುತ್ತದೆ.
ಈ ಎಸ್ಯುವಿಯ ಪ್ರಸ್ತುತ ಎಂಜಿನ್ಗಳನ್ನು ನವೀಕರಿಸುವುದರಿಂದ ಎಂಡೀವರ್ ಬೆಲೆಗಳನ್ನು ಸುಮಾರು ರೂ.3 ರಿಂದ ರೂ.4 ಲಕ್ಷಗಳಾವರೆಗೆ ಬೆಲೆಯನ್ನು ಹೆಚ್ಚಿಸಬೇಕಾಗಿತ್ತು. ಹೊಸ ಎಂಜಿನ್ ಅನ್ನು ಅಳವಡಿಸುವುದರಿಂದ ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟ ಮಾಡಬಹುದಾಗಿದೆ.
ಈ ಎಸ್ಯುವಿಯಲ್ಲಿ ಹೆಡ್ಲ್ಯಾಂಪ್ ಯುನಿಟ್, ಎಲ್ಇಡಿ ಟೇಲ್ಲೈಟ್, 18-ಇಂಚಿನ ಅಲಾಯ್ ವ್ಹೀಲ್, ನವೀಕರಿಸಿದ ಫ್ರಂಟ್ ಬಂಪರ್, ಸೆಮಿ ಪ್ಯಾರಾಲೆಲ್ ಅಸಿಸ್ಟ್, ಪನರೋಮಿಕ್ ಸನ್ರೂಫ್ ಅನ್ನು ಅಳವಡಿಸಲಾಗಿದೆ.
ಈ ಎಸ್ಯುವಿ ಇಂಟಿರಿಯರ್ನಲ್ಲಿ ಸ್ಟೀಯರಿಂಗ್ ಮೌಟೆಂಡ್ ಆಡಿಯೋ ಕಂಟ್ರೋಲ್, ಡ್ಯುಯಲ್-ಜೋನ್ ಕ್ಲೈಮೆಟ್ ಕಂಟ್ರೋಲ್, 8.0-ಇಂಚಿನ ಟಚ್ಸ್ಕ್ರೀನ್ ಇನ್ಪೋಟೇನ್ಮೆಂಟ್ ಸಿಸ್ಟಂ ಜೊತೆ ಆ್ಯಪಲ್ ಕಾರ್ ಪ್ಲೇ, ಅಂಡ್ರಾಯಿಡ್ ಆಟೋ ಮತ್ತು 10-ಸ್ಪಿಕರ್ಸ್ ಸೌಂಡ್ ಸಿಸ್ಟಂ ಹೊಂದಿದೆ.
ಫೋರ್ಡ್ ಎಂಡೀವರ್ ಎಸ್ಯುವಿಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಏಳು ಏರ್ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಅಸಿಸ್ಟ್ ಮತ್ತು ಪಾರ್ಕಿಂಗ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಈ ಎಸ್ಯುವಿಯಲ್ಲಿ 4x4 ಡ್ರೈವ್ ಟೆಕ್ನಾಲಜಿ ಸೌಲಭ್ಯ ಹೊಂದಿದೆ. ಈ ಎಸ್ಯುವಿಯ ಮುಂಭಾಗದಲ್ಲಿ ಫ್ರಂಟ್ ಗ್ರಿಲ್ ಮತ್ತು ಕ್ರೋಮ್ ಸ್ಲಾಟ್ಗಳನ್ನು ಅಳವಡಿಸಲಾಗಿದೆ.
ಬಿಎಸ್-6 ಟೊಯೊಟಾ ಎಂಡೀವರ್ ಎಸ್ಯುವಿ ದೇಶಿಯ ಮಾರುಕಟ್ಟೆಯಲ್ಲಿ ಟೊಯೊಟಾ ಫಾರ್ಚೂನರ್, ಮಹೀಂದ್ರಾ ಅಲ್ಟುರಾಸ್ ಜಿ4 ಮತ್ತು ಇಸುಝು ಎಂಯು-ಎಕ್ಸ್ ಎಸ್ಯುವಿಗಳಿಗೆ ಪೈಪೋಟಿ ನೀಡುತ್ತದೆ.