ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾದ ಫೋರ್ಡ್ ಕಾರುಗಳು

ಬಿ‍ಎಸ್ 4 ಎಂಜಿನ್ ವಾಹನಗಳಿಂದ ಹೆಚ್ಚು ವಾಯು ಮಾಲಿನ್ಯ ಉಂಟಾಗುತ್ತಿರುವ ಕಾರಣಕ್ಕೆ ಕೇಂದ್ರ ಸರ್ಕಾರವು ಬಿ‍ಎಸ್ 4 ಎಂಜಿನ್‍‍ಗಳ ಉತ್ಪಾದನೆಯನ್ನು ಹಾಗೂ ಮಾರಾಟವನ್ನು ಸ್ಥಗಿತಗೊಳಿಸುವಂತೆ ವಾಹನ ತಯಾರಕ ಕಂಪನಿಗಳಿಗೆ ಸೂಚಿಸಿದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾದ ಫೋರ್ಡ್ ಕಾರುಗಳು

ಹೊಸ ಬಿ‍ಎಸ್ 6 ಮಾಲಿನ್ಯ ನಿಯಮಗಳು ಏಪ್ರಿಲ್ 1ರಿಂದ ಜಾರಿಗೆ ಬರಲಿವೆ. ಈ ಹಿನ್ನೆಲೆಯಲ್ಲಿ ಎಲ್ಲಾ ಕಂಪನಿಗಳು ತಮ್ಮ ವಾಹನಗಳನ್ನು ಬಿ‍ಎಸ್ 6 ಎಂಜಿನ್‍‍ನೊಂದಿಗೆ ಅಪ್‍‍ಡೇಟ್‍‍ಗೊಳಿಸುತ್ತಿವೆ. ಫೋರ್ಡ್ ಕಂಪನಿಯು ಸಹ ತನ್ನ ಸರಣಿಯಲ್ಲಿರುವ ಕಾರುಗಳನ್ನು ಬಿ‍ಎಸ್ 6 ಎಂಜಿನ್‍‍ನೊಂದಿಗೆ ಬಿಡುಗಡೆಗೊಳಿಸುತ್ತಿದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾದ ಫೋರ್ಡ್ ಕಾರುಗಳು

ಈಗ ಫೋರ್ಡ್ ಕಂಪನಿಯು ತನ್ನ ಫಿಗೊ, ಫ್ರೀಸ್ಟೈಲ್ ಹಾಗೂ ಆಸ್ಪೈರ್ ಕಾರುಗಳನ್ನು ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಳಿಸಿದೆ. ಹೊಸ ಫೋರ್ಡ್ ಫಿಗೊ ಕಾರಿನ ಬೆಲೆಯು ರೂ.5.39 ಲಕ್ಷಗಳಾದರೆ, ಫ್ರೀಸ್ಟೈಲ್ ಕಾರಿನ ಬೆಲೆ ರೂ.5.89 ಲಕ್ಷ ಹಾಗೂ ಆಸ್ಪೈರ್ ಕಾರಿನ ಬೆಲೆ ರೂ.5.99 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ದರಗಳಾಗಿವೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾದ ಫೋರ್ಡ್ ಕಾರುಗಳು

ಫೋರ್ಡ್ ಕಂಪನಿಯು ಈ ಎಲ್ಲಾ ಮೂರು ಕಾರುಗಳ ಮೇಲೆ ಮೂರು ವರ್ಷಗಳ ಅಥವಾ ಒಂದು ಲಕ್ಷ ಕಿ.ಮೀಗಳ ವಾರಂಟಿಯನ್ನು ನೀಡಲಿದೆ. ಈ ವಾರಂಟಿಯನ್ನು ಸ್ಟಾಂಡರ್ಡ್ ಆಗಿ ನೀಡಲಾಗುತ್ತದೆ. ಈ ಕಾರುಗಳಲ್ಲಿ ಫೋರ್ಡ್ ಪಾಸ್ ಕನೆಕ್ಟಿವಿಟಿಯನ್ನು ನೀಡಲಾಗುತ್ತದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾದ ಫೋರ್ಡ್ ಕಾರುಗಳು

ಇದು ಕ್ಲೌಡ್ ಕನೆಕ್ಟೆಡ್ ಡಿವೈಸ್ ಆಗಿದ್ದು, ಕಾರಿನ ಮಾಲೀಕರು ರಿಯಲ್ ಟೈಂ ಫೋರ್ಡ್ ಪಾಸ್ ಸ್ಮಾರ್ಟ್‍‍ಫೋನ್ ಅಪ್ಲಿಕೇಶನ್‍‍ನೊಂದಿಗೆ ಕನೆಕ್ಟ್ ಮಾಡಿಕೊಳ್ಳಬಹುದಾಗಿದೆ. ಫೋರ್ಡ್ ಕಂಪನಿಯು ಈ ಫೀಚರ್ ಅನ್ನು ತನ್ನ ಸರಣಿಯಲ್ಲಿರುವ ಎಲ್ಲಾ ಬಿ‍ಎಸ್ 6 ವಾಹನಗಳಲ್ಲಿ ನೀಡಲಿದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾದ ಫೋರ್ಡ್ ಕಾರುಗಳು

ಈ ಫೀಚರ್‍‍ನಿಂದಾಗಿ ಕಾರುಗಳ ಲಾಕಿಂಗ್, ಅನ್‍‍ಲಾಕಿಂಗ್, ಫ್ಯೂಯಲ್ ಲೆವೆಲ್, ಡಿಸ್ಟನ್ಸ್ ಟು ಎಂಪ್ಟಿ, ಕಾರು ಇರುವ ಲೊಕೇಷನ್ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಇದರ ಜೊತೆಗೆ ಹತ್ತಿರದಲ್ಲಿರುವ ಡೀಲರ್ ಹಾಗೂ ಹಿಂದಿನ ಸರ್ವಿಸ್‍‍ಗಳ ಬಗೆಗಿನ ಮಾಹಿತಿಯನ್ನು ಸಹ ಪಡೆಯಬಹುದು.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾದ ಫೋರ್ಡ್ ಕಾರುಗಳು

ಈ ಕಾರುಗಳ ಬಿಡುಗಡೆಯ ವೇಳೆಯಲ್ಲಿ ಮಾತನಾಡಿದ ಫೋರ್ಡ್ ಕಂಪನಿಯ ಅಧ್ಯಕ್ಷರಾದ ಅನುರಾಗ್ ಮೆಹ್ರೊತ್ರಾರವರು ನಾವು ನಮ್ಮ ಕಂಪನಿಯ ಕಾರುಗಳನ್ನು ಕೈಗೆಟಕುವ ದರದಲ್ಲಿ ನೀಡಲಿದ್ದೇವೆ. ಇದರ ಜೊತೆಗೆ ಸರ್ವಿಸ್ ಅನ್ನು ಸಹ ಸ್ಪರ್ಧಾತ್ಮಕ ಬೆಲೆಯಲ್ಲಿ ನೀಡಲಿದ್ದೇವೆ ಎಂದು ಹೇಳಿದರು.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾದ ಫೋರ್ಡ್ ಕಾರುಗಳು

ಕಾರುಗಳನ್ನು ಭಾರತದಲ್ಲಿಯೇ ತಯಾರಿಸುತ್ತಿರುವ ಕಾರಣಕ್ಕೆ ಕಾರುಗಳ ಬೆಲೆಯಲ್ಲಿ ಏರಿಕೆಯಾಗುತ್ತಿಲ್ಲವೆಂದು ಅವರು ಹೇಳಿದರು. ಈ ಕಾರು ಹಾಗೂ ಈ ಕಾರುಗಳಲ್ಲಿರುವ ಬಿಡಿಭಾಗಗಳನ್ನು ಭಾರತದಲ್ಲಿ ತಯಾರಿಸುತ್ತಿರುವುದರಿಂದ ಬಿ‍ಎಸ್ 6 ಎಂಜಿನ್ ಹೊಂದಿದ್ದರೂ ಕಾರುಗಳ ಬೆಲೆ ಹೆಚ್ಚಾಗಿ ಏರಿಕೆಯಾಗಿಲ್ಲ.

Most Read Articles

Kannada
Read more on ಫೋರ್ಡ್ ford
English summary
Ford cars launched in BS 6 engine. Read in Kannada.
Story first published: Wednesday, February 19, 2020, 18:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X