ವಿನೂತನ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಲಿದೆ ಫೋರ್ಡ್ ಫ್ರೀಸ್ಟೈಲ್ ಫ್ಲೈರ್ ಎಡಿಷನ್

ಫೋರ್ಡ್ ಇಂಡಿಯಾ ಕಂಪನಿಯು ತನ್ನ ಫ್ರೀಸ್ಟೈಲ್ ಕ್ರಾಸ್ಓವರ್ ಹ್ಯಾಚ್‌ಬ್ಯಾಕ್ ಕಾರಿನಲ್ಲಿ ಫ್ಲೈರ್ ಎನ್ನುವ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಸ್ಟ್ಯಾಂಡರ್ಡ್ ಮಾದರಿಗಿಂತಲೂ ವಿನೂತನ ತಾಂತ್ರಿಕ ಅಂಶಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

ವಿನೂತನ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಲಿದೆ ಫ್ರೀಸ್ಟೈಲ್ ಫ್ಲೈರ್

ಫ್ರೀಸ್ಟೈಲ್ ಫ್ಲೈರ್ ಎಡಿಷನ್ ಕಾರು ಈಗಾಗಲೇ ಅಧಿಕೃತ ಡೀಲರ್ಸ್ ಬಳಿ ಸ್ಟಾಕ್ ಮಾಡಲಾಗುತ್ತಿದ್ದು, ಹೊಸ ಕಾರಿನ ಸಂಪೂರ್ಣ ಮಾಹಿತಿ ಒಳಗೊಂಡ ಕೈಪಿಡಿಯು ಇದೀಗ ಡ್ರೈವ್‌ಸ್ಪಾರ್ಕ್ ತಂಡಕ್ಕೆ ಲಭ್ಯವಾಗಿದೆ. ಹೊಸ ಕಾರಿನಲ್ಲಿ ಹಲವಾರು ತಾಂತ್ರಿಕ ಅಂಶಗಳು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚು ಆಕರ್ಷಕವಾಗಿದ್ದು, ಸ್ಪೋರ್ಟಿ ಲುಕ್ ಮೂಲಕ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಪ್ರಿಯರ ಆಕರ್ಷಣೆಗೆ ಕಾರಣವಾಗಲಿದೆ.

ವಿನೂತನ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಲಿದೆ ಫ್ರೀಸ್ಟೈಲ್ ಫ್ಲೈರ್

ಹೊಸ ಫ್ರೀಸ್ಟೈಲ್ ಕಾರಿನಲ್ಲಿ ಸೀಮಿತ ಅವಧಿಗಾಗಿ ಪರಿಚಯಿಸಲಾಗುತ್ತಿರುವ ಫ್ಲೈರ್ ಎಡಿಷನ್ ಮಾದರಿಯು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಸಾಕಷ್ಟು ಬದಲಾವಣೆಗೊಂಡಿದ್ದರೂ ಫ್ಲೈರ್ ಎಡಿಷನ್ ಮಾದರಿಯು ಯಾವುದೇ ಹೆಚ್ಚುವರಿ ಬೆಲೆ ಪಡೆದುಕೊಳ್ಳದೆ ಮಾರುಕಟ್ಟೆ ಪ್ರವೇಶಿಸಲಿದೆ ಎನ್ನಲಾಗಿದ್ದು, ಶೀಘ್ರದಲ್ಲೇ ಹೊಸ ಕಾರು ಅಧಿಕೃತವಾಗಿ ಬಿಡುಗಡೆಯಾಗಲಿದೆ.

ವಿನೂತನ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಲಿದೆ ಫ್ರೀಸ್ಟೈಲ್ ಫ್ಲೈರ್

ಫ್ಲೈರ್ ಎಡಿಷನ್ ಮಾದರಿಯು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚು ಆಕರ್ಷಕವಾಗಿದ್ದು, ಫ್ಲೈರ್ ಬ್ಯಾಡ್ಜ್‌ನೊಂದಿಗೆ ಬಾಡಿ ಗ್ರಾಫಿಕ್ಸ್ ವಿನ್ಯಾಸವು ಕೂಡಾ ಕ್ರಾಸ್ ಓವರ್ ಹ್ಯಾಚ್‌ಬ್ಯಾಕ್ ಕಾರಿಗೆ ಮತ್ತಷ್ಟು ಮೆರಗು ನೀಡಿದೆ.

ವಿನೂತನ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಲಿದೆ ಫ್ರೀಸ್ಟೈಲ್ ಫ್ಲೈರ್

ಸ್ಪೆಷಲ್ ಎಡಿಷನ್‌ಗೆ ತಕ್ಕಂತೆ ಹೊಸ ಕಾರಿನಲ್ಲಿ ಬ್ಲ್ಯಾಕ್ ಕಲರ್ ರೂಫ್, ರೂಫ್ ರೈಲ್ಸ್ ಮತ್ತು ವಿಂಗ್ ಮಿರರ್ ಮೇಲೆ ರೆಡ್ ಕಾಟ್ರಾಸ್ಟ್ ಲೇಪನ ಮಾಡಲಾಗಿದ್ದು, 15-ಇಂಚಿನ ರೆಡ್ ಮತ್ತು ಬ್ಲ್ಯಾಕ್ ಔಟ್ ಅಲಾಯ್ ಚಕ್ರವು ಕಾರಿಗೆ ಮತ್ತಷ್ಟು ಸ್ಪೋರ್ಟಿ ಲುಕ್ ನೀಡಿದೆ.

ವಿನೂತನ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಲಿದೆ ಫ್ರೀಸ್ಟೈಲ್ ಫ್ಲೈರ್

ಹೊರಭಾಗದ ವಿನ್ಯಾಸದಂತೆ ಒಳಭಾಗದಲ್ಲೂ ಕೂಡಾ ಕೆಲವು ಪ್ರಮುಖ ಬದಲಾವಣೆಗಳನ್ನು ತರಲಾಗಿದ್ದು, ಡ್ಯುಯಲ್ ಟೋನ್ ಸೀಟುಗಳು, ರೆಡ್ ಕಾಟ್ರಾಸ್ಟ್ ಮಾಡಲಾದ ಡೋರ್, ಸೀಟುಗಳ ಮೇಲೆ ಫ್ಲೈರ್ ಬ್ಯಾಜ್ಡ್ ನೀಡಲಾಗಿದೆ.

ವಿನೂತನ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಲಿದೆ ಫ್ರೀಸ್ಟೈಲ್ ಫ್ಲೈರ್

ಮಾಹಿತಿಗಳ ಪ್ರಕಾರ, ಹೊಸ ಫ್ಲೈರ್ ವೆರಿಯೆಂಟ್ ಅನ್ನು ಫ್ರೀಸ್ಟೈಲ್ ಕಾರಿನ ಟಾಪ್ ವೆರಿಯೆಂಟ್ ಆದ ಟೈಟಾನಿಯಂ ಪ್ಲಸ್ ಮಾದರಿಯಲ್ಲಿ ಖರೀದಿಗೆ ಲಭ್ಯವಿರಲಿದ್ದು, ಸ್ಟ್ಯಾಂಡರ್ಡ್ ಮಾದರಿಯ ಬೆಲೆಯಲ್ಲೇ ಮಾರಾಟಗೊಳ್ಳಲಿವೆ ಎನ್ನಲಾಗಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ವಿನೂತನ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಲಿದೆ ಫ್ರೀಸ್ಟೈಲ್ ಫ್ಲೈರ್

ಸದ್ಯ ಮಾರುಕಟ್ಟೆಯಲ್ಲಿ ಫ್ರೀಸ್ಟೈಲ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 8.49 ಲಕ್ಷ ಬೆಲೆ ಹೊಂದಿದೆ. ಫ್ಲೈರ್ ಮಾದರಿಯು ಟಾಪ್ ಮಾದರಿಯ ಬೆಲೆಯಲ್ಲೇ ಖರೀದಿ ಲಭ್ಯವಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಗಳನ್ನು ಒಳಗೊಂಡಿದೆ.

ವಿನೂತನ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಲಿದೆ ಫ್ರೀಸ್ಟೈಲ್ ಫ್ಲೈರ್

ಫ್ರೀಸ್ಟೈಲ್ ಕಾರಿನಲ್ಲಿ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಟರ್ಬೋ ಮಾದರಿಯು ಖರೀದಿಗೆ ಲಭ್ಯವಿದ್ದು, ಎರಡು ಮಾದರಿಗಳಲ್ಲೂ ಸ್ಟ್ಯಾಂಡರ್ಡ್ ಆಗಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ವಿನೂತನ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಲಿದೆ ಫ್ರೀಸ್ಟೈಲ್ ಫ್ಲೈರ್

ಇನ್ನುಳಿದಂತೆ ಹೊಸ ಕಾರಿನಲ್ಲಿ ಗರಿಷ್ಠ ಪ್ರಯಾಣಿಕರ ಸುರಕ್ಷಾ ಕ್ರಮಗಳನ್ನು ಅಳವಡಿಸಲಾಗಿದ್ದು, ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಬ್ಲೂಟೂಥ್ ಸ್ಮಾರ್ಟ್ ಫೋನ್ ಕನೆಕ್ಟಿವಿಟಿ, ಫುಶ್ ಬಟನ್ ಸ್ಟಾರ್ಟ್, ಕ್ಲೈಮೆಟ್ ಕಂಟ್ರೋಲ್, 6 ಏರ್‌ಬ್ಯಾಗ್, ರಿಯರ್ ವ್ಯೂ ಕ್ಯಾಮೆರಾ, ಪಾರ್ಕ್ ಅಸಿಸ್ಟ್, ಎಬಿಎಸ್ ಜೊತೆ ಇಬಿಡಿ ಮತ್ತು ಫೋರ್ಡ್ ಕಂಪನಿಯ ಪಾಸ್ ಕೆನೆಕ್ಟೆಡ್ ಟೆಕ್ನಾಲಜಿ ಪಡೆದುಕೊಂಡಿದೆ.

Most Read Articles

Kannada
English summary
Ford Freestyle Flair Brochure Leaked Ahead Of India Launch. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X