ಬಿಎಸ್-6 ಫೋರ್ಡ್ ಎಂಡೀವರ್ ಎಸ್‌ಯುವಿ ಕಾರಿನ ಬೆಲೆಯಲ್ಲಿ ಭಾರೀ ಹೆಚ್ಚಳ

ಫೋರ್ಡ್ ಇಂಡಿಯಾ ಕಂಪನಿಯು ಲಾಕ್‌ಡೌನ್ ತೆರವುಗೊಂಡ ನಂತರ ಹೊಸ ಸುರಕ್ಷಾ ಕ್ರಮಗಳೊಂದಿಗೆ ಕಾರು ಮಾರಾಟಕ್ಕೆ ಚಾಲನೆ ನೀಡಿದ್ದು, ಲಾಕ್‌ಡೌನ್‌ನಿಂದಿದಾಗಿ ಏರಿಕೆಯಾಗಿರುವ ವಾಹನ ಉತ್ಪಾದನಾ ವೆಚ್ಚವನ್ನು ಸರಿದೂಗಿಸಲು ತನ್ನ ಪ್ರಮುಖ ಕಾರು ಮಾದರಿಗಳ ಬೆಲೆಯಲ್ಲಿ ಏರಿಕೆ ಮಾಡಿದೆ.

ಬಿಎಸ್-6 ಫೋರ್ಡ್ ಎಂಡೀವರ್ ಎಸ್‌ಯುವಿ ಕಾರಿನ ಬೆಲೆಯಲ್ಲಿ ಭಾರೀ ಹೆಚ್ಚಳ

ಹೊಸ ದರ ಪಟ್ಟಿಯಲ್ಲಿ ಬಿಎಸ್-6 ಎಂಜಿನ್ ಪ್ರೇರಿತ ಎಂಡೀವರ್ ಮಾದರಿಯು ಕೂಡಾ ದುಬಾರಿ ಬೆಲೆ ಪಡೆದುಕೊಂಡಿದ್ದು, ಲಾಕ್‌ಡೌನ್‌ನಿಂದಾಗಿ ಹೆಚ್ಚಿರುವ ಕಾರು ಉತ್ಪಾದನಾ ವೆಚ್ಚ ತಗ್ಗಿಸಲು ಕಾರುಗಳ ಬೆಲೆ ಏರಿಕೆ ಮಾಡಲಾಗಿದೆ. ಫೋರ್ಡ್ ಮಾತ್ರವಲ್ಲ ಬಹುತೇಕ ವಾಹನ ಉತ್ಪಾದನಾ ಕಂಪನಿಗಳು ಬೆಲೆ ಏರಿಕೆ ಮಾಡಿದ್ದು, ಬಿಎಸ್-6 ಎಂಜಿನ್ ನಂತರ ಇದು 2ನೇ ಬಾರಿಗೆ ಹೆಚ್ಚಳಗೊಂಡಿರುವ ಬೆಲೆ ಏರಿಕೆ ಎನ್ನಬಹುದು.

ಬಿಎಸ್-6 ಫೋರ್ಡ್ ಎಂಡೀವರ್ ಎಸ್‌ಯುವಿ ಕಾರಿನ ಬೆಲೆಯಲ್ಲಿ ಭಾರೀ ಹೆಚ್ಚಳ

ಫೋರ್ಡ್ ಎಂಡೀವರ್ ಕಾರು ಮಾದರಿಯು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ. 44 ಸಾವಿರದಿಂದ ರೂ. 1.20 ಲಕ್ಷದಷ್ಟು ಹೆಚ್ಚಳವಾಗಿದ್ದು, ಬೆಲೆ ಹೆಚ್ಚಳ ನಂತರ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 29.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 34.45 ಲಕ್ಷ ಬೆಲೆ ಹೊಂದಿದೆ.

ಬಿಎಸ್-6 ಫೋರ್ಡ್ ಎಂಡೀವರ್ ಎಸ್‌ಯುವಿ ಕಾರಿನ ಬೆಲೆಯಲ್ಲಿ ಭಾರೀ ಹೆಚ್ಚಳ

ಬಿಎಸ್-6 ಎಂಡೀವರ್ ಕಾರು ಮಾದರಿಯು ಎಸ್‌ಯುವಿ ಪ್ರಿಯರ ಬೇಡಿಕೆಗೆ ಅನುಗುಣವಾಗಿ ಟೈಟಾನಿಯಂ 2.0 4X2 ಎಟಿ, ಟೈಟಾನಿಯಂ ಪ್ಲಸ್ 2.0 4x2 ಎಟಿ ಮತ್ತು ಟೈಟಾನಿಯಂ 4X4 ಎಟಿ ಮಾದರಿಗಳೊಂದಿಗೆ ಖರೀದಿಗೆ ಲಭ್ಯವಿದೆ.

ಬಿಎಸ್-6 ಫೋರ್ಡ್ ಎಂಡೀವರ್ ಎಸ್‌ಯುವಿ ಕಾರಿನ ಬೆಲೆಯಲ್ಲಿ ಭಾರೀ ಹೆಚ್ಚಳ

ಟೈಟಾನಿಯಂ 2.0 4X2 ಎಟಿ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.29.99 ಲಕ್ಷ ಬೆಲೆ ಹೊಂದಿದ್ದರೆ ಟೈಟಾನಿಯಂ ಪ್ಲಸ್ 2.0 4x2 ಎಟಿ ಮಾದರಿಯು ರೂ.32.75 ಲಕ್ಷ ಮತ್ತು ಟೈಟಾನಿಯಂ 4X4 ಎಟಿ ಮಾದರಿಯು ರೂ. 34.45 ಲಕ್ಷ ಬೆಲೆ ಹೊಂದಿದೆ.

ಬಿಎಸ್-6 ಫೋರ್ಡ್ ಎಂಡೀವರ್ ಎಸ್‌ಯುವಿ ಕಾರಿನ ಬೆಲೆಯಲ್ಲಿ ಭಾರೀ ಹೆಚ್ಚಳ

ಬಿಎಸ್-4 ಮಾದರಿಗಿಂತಲೂ ಭಾರೀ ಬದಲಾವಣೆಯೊಂದಿಗೆ ಖರೀದಿಗೆ ಲಭ್ಯವಿರುವ ಬಿಎಸ್-6 ಎಂಡೀವರ್ ಮಾದರಿಯು ಹಲವಾರು ಹೊಸ ಫೀಚರ್ಸ್ ಪಡೆದುಕೊಂಡಿದ್ದು, ಹೊಸ ಕಾರಿನಲ್ಲಿ ನೀಡಲಾಗಿರುವ 'ಫೋರ್ಡ್‌ಪಾಸ್' ಟೆಕ್ನಾಲಜಿ ಸೌಲಭ್ಯವು ಕಾರಿಗೆ ಗರಿಷ್ಠ ಭದ್ರತೆ ಒದಗಿಸುತ್ತದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಬಿಎಸ್-6 ಫೋರ್ಡ್ ಎಂಡೀವರ್ ಎಸ್‌ಯುವಿ ಕಾರಿನ ಬೆಲೆಯಲ್ಲಿ ಭಾರೀ ಹೆಚ್ಚಳ

ರೀಮೋಟ್ ಕಂಟ್ರೋಲ್ ಮೂಲಕವೇ ಕಾರಿನ ಬಹುತೇಕ ತಾಂತ್ರಿಕ ಅಂಶಗಳನ್ನು ನಿಯಂತ್ರಣ ಮಾಡಬಹುದಾಗಿದ್ದು, ಸುರಕ್ಷತೆಗಾಗಿ ಹೊಸ ಕಾರಿನಲ್ಲಿ ಒಟ್ಟು 8 ಏರ್‌ಬ್ಯಾಗ್, ಟೆರೆನ್ ಮ್ಯಾನೆಜ್ಮೆಂಟ್ ಸಿಸ್ಟಂ , ಹಿಲ್ ಹೋಲ್ಡ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್ ಸೇರಿದಂತೆ ಹಲವು ಪ್ರೀಮಿಯಂ ಸೆಫ್ಟಿ ಫೀಚರ್ಸ್ ಪಡೆದುಕೊಂಡಿದೆ.

ಬಿಎಸ್-6 ಫೋರ್ಡ್ ಎಂಡೀವರ್ ಎಸ್‌ಯುವಿ ಕಾರಿನ ಬೆಲೆಯಲ್ಲಿ ಭಾರೀ ಹೆಚ್ಚಳ

ಇನ್ನು ಬಿಎಸ್-6 ಎಂಡೀವರ್ ಕಾರು ಮಾದರಿಯಲ್ಲಿ ಹೊಸದಾಗಿ ಅಭಿವೃದ್ದಿಗೊಳಿಸಲಾದ 2.0-ಲೀಟರ್ ಇಕೋಬ್ಲ್ಯೂ ಡೀಸೆಲ್ ಎಂಜಿನ್ ನೀಡಲಾಗಿದ್ದು, 10-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮೂಲಕ 168-ಬಿಎಚ್‌ಪಿ ಮತ್ತು 420-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಬಿಎಸ್-6 ಫೋರ್ಡ್ ಎಂಡೀವರ್ ಎಸ್‌ಯುವಿ ಕಾರಿನ ಬೆಲೆಯಲ್ಲಿ ಭಾರೀ ಹೆಚ್ಚಳ

ಈ ಮೂಲಕ ಎಸ್‌ಯುವಿ ಕಾರು ಮಾದರಿಗಳಲ್ಲೇ ಬಲಿಷ್ಠ ಎಂಜಿನ್ ಆಯ್ಕೆ ಹೊಂದಿರುವ ಎಂಡೀವರ್ ಕಾರು ಮಾದರಿಯು ಆಫ್-ರೋಡ್ ಕೌಶಲ್ಯದಲ್ಲೂ ಉತ್ತಮ ಪರ್ಫಾಮೆನ್ಸ್ ಹೊಂದಿದ್ದು, ಪ್ರತಿಸ್ಪರ್ಧಿ ಕಾರು ಮಾದರಿಗಳಾದ ಟೊಯೊಟಾ ಫಾರ್ಚೂನರ್, ಮಹೀಂದ್ರಾ ಅಲ್ಟುರಾಸ್ ಜಿ4 ಮತ್ತು ಫೋಕ್ಸ್‌ವ್ಯಾಗನ್ ಟಿಗ್ವಾನ್ ಆಲ್‌ಸ್ಪೆಸ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡುತ್ತಿದೆ.

Most Read Articles

Kannada
Read more on ಫೋರ್ಡ್ ford
English summary
Ford Increases The Price Of The BS6 Endeavour For The Indian Market. Read in Kannada.
Story first published: Tuesday, August 11, 2020, 11:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X