ಕರೋನಾ ವೈರಸ್ ಎಫೆಕ್ಟ್: ವಾರಂಟಿ ಅವಧಿ ವಿಸ್ತರಿಸಿದ ಫೋರ್ಡ್ ಇಂಡಿಯಾ

ಕರೋನಾ ಸಮಸ್ಯೆಯಿಂದಾಗಿ ಕಾರು ಹಾಗೂ ಬೈಕ್ ತಯಾರಕ ಕಂಪನಿಗಳು ತಮ್ಮ ಗ್ರಾಹಕರ ಅನುಕೂಲಕ್ಕಾಗಿ ವಿವಿಧ ಸೌಲಭ್ಯಗಳನ್ನು ನೀಡುತ್ತಿವೆ. ವಾರಂಟಿ ಅವಧಿ ಹಾಗೂ ಸರ್ವಿಸ್ ಅವಧಿಗಳನ್ನು ವಿಸ್ತರಿಸಲಾಗಿದೆ.

ಕರೋನಾ ವೈರಸ್ ಎಫೆಕ್ಟ್: ವಾರಂಟಿ ಅವಧಿ ವಿಸ್ತರಿಸಿದ ಫೋರ್ಡ್ ಇಂಡಿಯಾ

ಈಗ ಫೋರ್ಡ್ ಕಂಪನಿಯು ಸಹ ತನ್ನ ಗ್ರಾಹಕರಿಗೆ ಹಲವು ಸೌಲಭ್ಯಗಳನ್ನು ನೀಡಲು ಮುಂದಾಗಿದೆ. ಮಾರ್ಚ್ 15ರಿಂದ ಮೇ 30ರವರೆಗೆ ವಾರಂಟಿ ಅವಧಿ ಮುಗಿದ ಫೋರ್ಡ್ ಕಂಪನಿಯ ಗ್ರಾಹಕರಿಗೆ, ಈ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ.

ಕರೋನಾ ವೈರಸ್ ಎಫೆಕ್ಟ್: ವಾರಂಟಿ ಅವಧಿ ವಿಸ್ತರಿಸಿದ ಫೋರ್ಡ್ ಇಂಡಿಯಾ

ಇನ್ನೂ ತಮ್ಮ ವಾರಂಟಿ ಅವಧಿಯನ್ನು ಹೆಚ್ಚಿಸಿಕೊಳ್ಳಲು ಬಯಸುತ್ತಿರುವವರಿಗೆ ಜೂನ್ 30ರೊಳಗೆ ತಮ್ಮ ವಾರಂಟಿಯನ್ನು ವಿಸ್ತರಿಸಲು ಅವಕಾಶ ನೀಡಲಾಗುವುದು.

ಕರೋನಾ ವೈರಸ್ ಎಫೆಕ್ಟ್: ವಾರಂಟಿ ಅವಧಿ ವಿಸ್ತರಿಸಿದ ಫೋರ್ಡ್ ಇಂಡಿಯಾ

ಈ ಅವಧಿಯಲ್ಲಿ ಉಚಿತ ಕಾರು ಸರ್ವಿಸ್ ಗಳನ್ನು ಹೊಂದಿದ್ದವರಿಗೆ ಜೂನ್ 30ರವರೆಗೆ ಗಡುವನ್ನು ನೀಡಲಾಗಿದೆ. ಇದರಿಂದಾಗಿ ಉಚಿತ ಸರ್ವಿಸ್ ಅವಧಿ ಮುಗಿಯುತ್ತದೆ ಎಂಬ ಆತಂಕದಲ್ಲಿದ್ದ ಜನರು ನಿಟ್ಟುಸಿರು ಬಿಡುವಂತಾಗಿದೆ.

ಕರೋನಾ ವೈರಸ್ ಎಫೆಕ್ಟ್: ವಾರಂಟಿ ಅವಧಿ ವಿಸ್ತರಿಸಿದ ಫೋರ್ಡ್ ಇಂಡಿಯಾ

ಫೋರ್ಡ್ ಕಂಪನಿಯು ಜೂನ್ 30ರವರೆಗೆ ತಮ್ಮ ಕಾರುಗಳನ್ನು ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಕಾರುಗಳನ್ನು ವಿತರಿಸಲಿದೆ. ಬುಕ್ಕಿಂಗ್ ಹಾಗೂ ವೇಟಿಂಗ್ ಅವಧಿ ಹೆಚ್ಚಾದರೂ ಕಾರುಗಳನ್ನು ವಿತರಿಸಲಾಗುವುದು.

ಕರೋನಾ ವೈರಸ್ ಎಫೆಕ್ಟ್: ವಾರಂಟಿ ಅವಧಿ ವಿಸ್ತರಿಸಿದ ಫೋರ್ಡ್ ಇಂಡಿಯಾ

ಗ್ರಾಹಕರ ಯಾವುದೇ ಪ್ರಶ್ನೆಗಳಿಗೆ ಮಾಹಿತಿ ನೀಡುವ ಸಲುವಾಗಿ ತನ್ನ ಗ್ರಾಹಕ ಸೇವಾ ಕೇಂದ್ರವನ್ನು ದಿನದ 24 ಗಂಟೆಗಳ ಕಾಲ ತೆರೆಯುವುದಾಗಿ ಫೋರ್ಡ್ ಕಂಪನಿ ತಿಳಿಸಿದೆ. ಈ ಕೇಂದ್ರದಲ್ಲಿ ಫೋನ್, ಸಾಮಾಜಿಕ ನೆಟ್‌ವರ್ಕ್ ಹಾಗೂ ಇ-ಮೇಲ್ ಮೂಲಕ ಮಾತುಕತೆ ನಡೆಸಬಹುದಾಗಿದೆ.

ಕರೋನಾ ವೈರಸ್ ಎಫೆಕ್ಟ್: ವಾರಂಟಿ ಅವಧಿ ವಿಸ್ತರಿಸಿದ ಫೋರ್ಡ್ ಇಂಡಿಯಾ

ಇದರ ಜೊತೆಗೆ ಫೋರ್ಡ್ ಕಂಪನಿಯು ಎಮರ್ಜೆನ್ಸಿ ರೋಡ್ ಸೈಡ್ ಅಸಿಸ್ಟೆನ್ಸ ಜೊತೆಗೆ 24 ಗಂಟೆಗಳ ಸರ್ವಿಸ್ ನೀಡುತ್ತದೆ. ಲಾಕ್ ಡೌನ್ ಮುಗಿಯುವವರೆಗೂ ತನ್ನ ಗ್ರಾಹಕರಿಗೆ ಎಮರ್ಜೆನ್ಸಿ ರೋಡ್ ಸೈಡ್ ಅಸಿಸ್ಟೆನ್ಸ ನೀಡಲಾಗುವುದು ಎಂದು ಫೋರ್ಡ್ ತಿಳಿಸಿದೆ.

ಕರೋನಾ ವೈರಸ್ ಎಫೆಕ್ಟ್: ವಾರಂಟಿ ಅವಧಿ ವಿಸ್ತರಿಸಿದ ಫೋರ್ಡ್ ಇಂಡಿಯಾ

ಗ್ರಾಹಕ ಸೇವಾ ಕೇಂದ್ರದಲ್ಲಿ ಯಾವುದೇ ಸಮಯದಲ್ಲಿ ವಾರಂಟಿ ಅವಧಿ, ವಾರಂಟಿ ವಿಸ್ತರಣೆ, ಉಚಿತ ಸರ್ವಿಸ್ ಹಾಗೂ ಎಮರ್ಜೆನ್ಸಿ ರೋಡ್ ಸೈಡ್ ಅಸಿಸ್ಟೆನ್ಸ ಬಗ್ಗೆ ಮಾಹಿತಿ ಪಡೆಯಬಹುದು ಎಂದು ಫೋರ್ಡ್ ಇಂಡಿಯಾ ಕಂಪನಿ ತಿಳಿಸಿದೆ.

Most Read Articles

Kannada
Read more on ಫೋರ್ಡ್ ford
English summary
Ford India extends warranty period and free services till June 30. Read in Kannada.
Story first published: Wednesday, April 8, 2020, 12:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X