ಕಾರು ಮಾರಾಟ ಹೆಚ್ಚಿಸಲು ಹೊಸ ಫೈನಾನ್ಸ್ ಆಫರ್ ನೀಡಿದ ಫೋರ್ಡ್

ಆಟೋ ಉದ್ಯಮವು ಸೇರಿದಂತೆ ಎಲ್ಲಾ ವಲಯದಲ್ಲೂ ಕರೋನಾ ವೈರಸ್ ಮಹಾಮಾರಿಯಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದ್ದು, ವ್ಯಾಪಾರ ಅಭಿವೃದ್ದಿಯು ಇದೀಗ ಹೊಸ ಸವಾಲಾಗಿ ಪರಿಣಮಿಸಿದೆ. ಸದ್ಯಕ್ಕೆ ಆಟೋ ಉದ್ಯಮಕ್ಕೆ ಕೆಲವು ವಿನಾಯ್ತಿಗಳನ್ನು ನೀಡಲಾಗಿದ್ದರೂ ಸಹ ವಾಹನ ಖರೀದಿದಾರರು ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.

ಕಾರು ಮಾರಾಟ ಹೆಚ್ಚಿಸಲು ಹೊಸ ಫೈನಾನ್ಸ್ ಆಫರ್ ನೀಡಿದ ಫೋರ್ಡ್

ಲಾಕ್‌ಡೌನ್‌ನಿಂದಾಗಿ ಬಹುತೇಕ ವಾಣಿಜ್ಯ ಚಟುವಟಿಕೆಗಳು ನೆಲಕಚ್ಚಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗದ ಅಭದ್ರತೆ ಇದೀಗ ಅತಿ ದೊಡ್ಡ ಸಮಸ್ಯೆಯಾಗಿ ಕಾಡತೋಡಗಿದೆ. ಹೀಗಿರುವಾಗ ಹೊಸ ವಾಹನಗಳ ಮಾರಾಟವನ್ನು ಸರಿದಾರಿಗೆ ತರಲು ಯತ್ನಿಸುತ್ತಿರುವ ಆಟೋ ಕಂಪನಿಯು ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸುತ್ತಿವೆ. ಫೋರ್ಡ್ ಇಂಡಿಯಾ ಕೂಡಾ ವಿವಿಧ ಕಾರು ಮಾದರಿಗಳ ಮೇಲೆ ವಿಶೇಷ ಆಫರ್‌ಗಳನ್ನು ಘೋಷಣೆ ಮಾಡಿದೆ.

ಕಾರು ಮಾರಾಟ ಹೆಚ್ಚಿಸಲು ಹೊಸ ಫೈನಾನ್ಸ್ ಆಫರ್ ನೀಡಿದ ಫೋರ್ಡ್

ಆರ್ಥಿಕ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಕಾರು ಖರೀದಿಯ ಯೋಜನೆ ಗ್ರಾಹಕರು ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿಯುವುತ್ತಿದ್ದು, ಇದು ಪ್ರಮುಖ ಆಟೋ ಕಂಪನಿಗಳನ್ನು ಚಿಂತೆಗೀಡು ಮಾಡಿದೆ.

ಕಾರು ಮಾರಾಟ ಹೆಚ್ಚಿಸಲು ಹೊಸ ಫೈನಾನ್ಸ್ ಆಫರ್ ನೀಡಿದ ಫೋರ್ಡ್

ಕರೋನಾ ವೈರಸ್ ಹರಡುವುದಕ್ಕೂ ಮುನ್ನ ವಾಹನ ಖರೀದಿ ಯೋಜನೆಯಲ್ಲಿದ್ದ ಗ್ರಾಹಕರಲ್ಲಿ ಇದೀಗ ಸುಮಾರು ಶೇ.60ರಿಂದ ಶೇ.70ರಷ್ಟು ಜನ ವಾಹನ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿದ್ದು, ಉದ್ಯೋಗದ ಅಭದ್ರತೆ ಮತ್ತು ಆದಾಯಕ್ಕಿಂತ ಖರ್ಚು ಹೆಚ್ಚುತ್ತಿರುವುದರಿಂದ ಹೊಸ ವಾಹನಗಳ ಖರೀದಿಯು ಭಾರೀ ಪ್ರಮಾಣದ ಇಳಿಕೆಯಾಗಿದೆ.

ಕಾರು ಮಾರಾಟ ಹೆಚ್ಚಿಸಲು ಹೊಸ ಫೈನಾನ್ಸ್ ಆಫರ್ ನೀಡಿದ ಫೋರ್ಡ್

ಇದರಿಂದ ಗ್ರಾಹಕರನ್ನು ಸೆಳೆಯಲು ಯತ್ನಿಸುತ್ತಿರುವ ಆಟೋ ಕಂಪನಿಗಳು ಅತಿ ಸುಲಭವಾದ ಸಾಲಸೌಲಭ್ಯ ಸೇರಿದಂತೆ ಹಲವಾರು ಹೊಸ ಆಫರ್‌ಗಳನ್ನು ನೀಡುತ್ತಿದ್ದು, ಫೋರ್ಡ್ ಇಂಡಿಯಾ ಕೂಡಾ ತನ್ನ ಜನಪ್ರಿಯ ಕಾರುಗಳ ಮೇಲೆ ವಿಶೇಷ ಆಫರ್‌ಗಳನ್ನು ಘೋಷಣೆ ಮಾಡಿ ಗ್ರಾಹಕರ ಸೆಳೆಯುವ ಯತ್ನಯಲ್ಲಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಕಾರು ಮಾರಾಟ ಹೆಚ್ಚಿಸಲು ಹೊಸ ಫೈನಾನ್ಸ್ ಆಫರ್ ನೀಡಿದ ಫೋರ್ಡ್

ಆಯ್ದ ಕಾರುಗಳ ಖರೀದಿ ಮೇಲೆ ಹೊಸ ಫೈನಾನ್ಸ್ ಆಫರ್ ನೀಡಿರುವ ಫೋರ್ಡ್ ಕಂಪನಿಯು ಹೊಸ ಕಾರು ಖರೀದಿಸಿದ ಮೊದಲ ಆರು ತಿಂಗಳು ಇಎಂಐ ಮರುಪಾವತಿಗಾಗಿ ಹೆಚ್ಚುವರಿ ಕಾಲಾವಕಾಶ ನೀಡುತ್ತಿದ್ದು, ಶೇ.100 ರಷ್ಟು ಆನ್-ರೋಡ್ ಸಾಲಸೌಲಭ್ಯದೊಂದಿಗೆ ಮಾಲೀಕತ್ವವನ್ನು ಪಡೆದುಕೊಳ್ಳಬಹುದಾಗಿದೆ.

ಕಾರು ಮಾರಾಟ ಹೆಚ್ಚಿಸಲು ಹೊಸ ಫೈನಾನ್ಸ್ ಆಫರ್ ನೀಡಿದ ಫೋರ್ಡ್

ಸದ್ಯ ಲಾಕ್‌ಡೌನ್‌ನಿಂದಾಗಿ ಹೊಸ ವಾಹನ ಖರೀದಿಸಿ ಇಎಂಐ ಮರುಪಾವತಿಗೆ ಕಷ್ಟವಾಗಬಹುದು ಎನ್ನುವ ಗ್ರಾಹಕರಿಗೆ ಹೊಸ ಲೋನ್ ಆಫರ್ ಅತ್ಯುತ್ತಮ ಆಯ್ಕೆಯಾಗಿದ್ದು, ಕಾರು ಖರೀದಿ ಮಾಡಿದ 6 ತಿಂಗಳು ನಂತರ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಇಎಂಐ ಮರುಪಾವತಿಯು ಆರಂಭವಾಗಲಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಕಾರು ಮಾರಾಟ ಹೆಚ್ಚಿಸಲು ಹೊಸ ಫೈನಾನ್ಸ್ ಆಫರ್ ನೀಡಿದ ಫೋರ್ಡ್

ಇನ್ನು ಫೋರ್ಡ್ ಕಂಪನಿಯು ನೀಡುತ್ತಿರುವ ಹೊಸ ಫೈನಾನ್ಸ್ ಆಫರ್‌ ಸೀಮಿತ ಅವಧಿಗಾಗಿ ಮಾತ್ರವೇ ಲಭ್ಯವಿರಲಿದ್ದು, ಕುಸಿದಿರುವ ಕಾರು ಮಾರಾಟವನ್ನು ಸುಧಾರಣೆ ತರಲು ಕೆಲವು ಮಹತ್ವದ ನಿರ್ಧಾರಗಳು ಸದ್ಯ ಆಟೋ ಉದ್ಯಮಕ್ಕೆ ಅನಿವಾರ್ಯವಾಗಿ ಪರಿಣಮಿಸಿವೆ.

Most Read Articles

Kannada
Read more on ಫೋರ್ಡ್ ford
English summary
Ford Introduces 6 Months EMI Skip Plan. Read in Kannada.
Story first published: Thursday, July 16, 2020, 20:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X