ವೈರಸ್ ಭೀತಿ: ಮನೆ ಬಾಗಿಲಿಗೆ ಕಾರ್ ಸರ್ವೀಸ್ ಸೌಲಭ್ಯ ತೆರೆದ ಫೋರ್ಡ್

ಕರೋನಾ ವೈರಸ್ ಮಹಾಮಾರಿಯ ಹಾವಳಿಯ ನಡುವೆಯೂ ಆಟೋ ಉದ್ಯಮವು ನಿಧಾನವಾಗಿ ಚೇತರಿಕೆ ಕಾಣುತ್ತಿದ್ದು, ಸುರಕ್ಷಿತ ವ್ಯಾಪಾರ ವಹಿವಾಟು ಇದೀಗ ಹೊಸ ಸವಾಲಾಗಿ ಪರಿಣಮಿಸಿದೆ.

ವೈರಸ್ ಭೀತಿ: ಮನೆ ಬಾಗಿಲಿಗೆ ಕಾರ್ ಸರ್ವೀಸ್ ಸೌಲಭ್ಯ ತೆರೆದ ಫೋರ್ಡ್

ಕಳೆದ ಕೆಲ ತಿಂಗಳಿನಿಂದ ಭಾರೀ ಕುಸಿತ ಕಂಡಿದ್ದ ಹೊಸ ವಾಹನಗಳ ಮಾರಾಟವು ಇದೀಗ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆಯಾದರೂ ಕರೋನಾ ವೈರಸ್‌ ಮಾಹಾಮಾರಿಯು ವಾಹನ ಮಾರಾಟ ಮಳಿಗೆಗಳ ಸಿಬ್ಬಂದಿಗೆ ಆತಂಕ ಹೆಚ್ಚುತ್ತಿರುವುದು ಆಟೋ ಉತ್ಪಾದನಾ ಕಂಪನಿಗಳಿಗೆ ಚಿಂತೆಗೀಡು ಮಾಡಿದೆ. ಈ ಹಿನ್ನಲೆ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ತೆರಿದಿರುವ ಬಹುತೇಕ ಆಟೋ ಕಂಪನಿಗಳು ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಫೋರ್ಡ್ ಕೂಡಾ ಕಾರು ಸರ್ವೀಸ್ ಸೇವೆಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಿದೆ.

ವೈರಸ್ ಭೀತಿ: ಮನೆ ಬಾಗಿಲಿಗೆ ಕಾರ್ ಸರ್ವೀಸ್ ಸೌಲಭ್ಯ ತೆರೆದ ಫೋರ್ಡ್

ಗ್ರಾಹಕರ ಬೇಡಿಕೆ ಆಧಾರದ ಮೇಲೆ ಕಾರ್ ಸರ್ವೀಸ್ ಸೇವೆಗಳನ್ನು ಮನೆ ಬಾಲಿಗೆ ತಲುಪಿಸಲಿರುವ ಫೋರ್ಡ್ ಕಂಪನಿಯು ವೈರಸ್ ಹರಡುವಿಕೆ ಪ್ರಮಾಣವನ್ನು ತಗ್ಗಿಸುತ್ತಿದ್ದು, ಅಗತ್ಯ ಸಂದರ್ಭಗಳಲ್ಲಿ ಮಾತ್ರವೇ ಅಧಿಕೃತ ಸರ್ವೀಸ್ ಸೆಂಟರ್‌ಗಳಿಗೆ ಕಾರುಗಳನ್ನು ತರಲಾಗುತ್ತದೆ.

ವೈರಸ್ ಭೀತಿ: ಮನೆ ಬಾಗಿಲಿಗೆ ಕಾರ್ ಸರ್ವೀಸ್ ಸೌಲಭ್ಯ ತೆರೆದ ಫೋರ್ಡ್

ಮನೆ ಬಾಗಿಲಿಗೆ ಸರ್ವೀಸ್ ಒದಗಿಸುವಾದ ಕರೋನಾ ಭೀತಿಯನ್ನು ಹೋಗಲಾಡಿಸಲು ಸಂಪೂರ್ಣವಾಗಿ ಸ್ಯಾನಿಟೈಜ್ ಮಾಡಿದ ನಂತರವೇ ಸೇವೆ ಒದಗಿಸಲಿದ್ದು, ಕೊನೆಗೆ ಕಾರಿನ ಕೀ ಹಸ್ತಾಂತರ ಮಾಡುವ ಸಂದರ್ಭದಲ್ಲೂ ಸ್ಯಾನಿಟೈಜ್ ಮಾಡಲಾಗುತ್ತಿದೆ.

ವೈರಸ್ ಭೀತಿ: ಮನೆ ಬಾಗಿಲಿಗೆ ಕಾರ್ ಸರ್ವೀಸ್ ಸೌಲಭ್ಯ ತೆರೆದ ಫೋರ್ಡ್

ವೀಲ್ಹ್ ಆನ್ ಸರ್ವೀಸ್‌ಗಳಲ್ಲಿ ಕಾರಿನ ವಾರಂಟಿಗಳನ್ನು ಒಳಗೊಂಡ ಸೇವೆಗಳನ್ನು ಒದಗಿಸಲಾಗುತ್ತಿದ್ದು, ಮಾರಾಟ ಮಳಿಗಗಳು ಮತ್ತು ಸರ್ವಿಸ್ ಸೆಂಟರ್‌ಗಳಿಗೆ ಗ್ರಾಹಕರ ಭೇಟಿ ತಪ್ಪಿಸುವುದಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸಂಪರ್ಕ ರಹಿತ ವಾಹನ ಖರೀದಿ ಮತ್ತು ಗ್ರಾಹಕರ ಸೇವೆಗಳಿಗೆ ಹೆಚ್ಚಿನ ಒತ್ತುನೀಡುತ್ತಿರುವ ಆಟೋ ಕಂಪನಿಗಳು ಗರಿಷ್ಠ ಸುರಕ್ಷತೆಯೊಂದಿಗೆ ಸಿಬ್ಬಂದಿ ಆರೋಗ್ಯ ಕಾಳಜಿಯೊಂದಿಗೆ ಗ್ರಾಹಕರ ವ್ಯವಹಾರ ಕೈಗೊಳ್ಳುತ್ತಿವೆ.

ವೈರಸ್ ಭೀತಿ: ಮನೆ ಬಾಗಿಲಿಗೆ ಕಾರ್ ಸರ್ವೀಸ್ ಸೌಲಭ್ಯ ತೆರೆದ ಫೋರ್ಡ್

ಮುಂಬರುವ ದಸರಾ ಮತ್ತು ದೀಪಾವಳಿ ಸಂಭ್ರಮದ ಹೊತ್ತಿಗೆ ಹೊಸ ವಾಹನಗಳ ಖರೀದಿಯ ಭರಾಟೆಯಪ ಇನ್ನಷ್ಟು ಹೆಚ್ಚಳವಾಗುವ ನೀರಿಕ್ಷೆಯಿರುವುದರಿಂದ ಗ್ರಾಹಕರ ಭೇಟಿ ಸಂಖ್ಯೆ ಕೂಡಾ ಹೆಚ್ಚಿರುತ್ತದೆ.

ವೈರಸ್ ಭೀತಿ: ಮನೆ ಬಾಗಿಲಿಗೆ ಕಾರ್ ಸರ್ವೀಸ್ ಸೌಲಭ್ಯ ತೆರೆದ ಫೋರ್ಡ್

ಇದರಿಂದಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ವಾಹನ ಖರೀದಿಗೆ ಉತ್ತೇಜಿಸಲಾಗುತ್ತಿದ್ದು, ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಖರೀದಿ ಮಾಡುವುದಕ್ಕಿಂತೂ ಅತಿ ಕಡಿಮೆ ಪತ್ರ ವ್ಯವಹಾರ ಮತ್ತು ಸರಳ ಪ್ರಕ್ರಿಯೆಗಳ ಮೂಲಕ ಆನ್‌ಪ್ಲ್ಯಾಟ್‌ಗಳಲ್ಲಿ ಹೊಸ ವಾಹನಗಳನ್ನು ಖರೀದಿ ಮಾಡಬಹುದಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ವೈರಸ್ ಭೀತಿ: ಮನೆ ಬಾಗಿಲಿಗೆ ಕಾರ್ ಸರ್ವೀಸ್ ಸೌಲಭ್ಯ ತೆರೆದ ಫೋರ್ಡ್

ಆನ್‌ಲೈನ್ ಮೂಲಕ ವಾಹನ ಖರೀದಿ ಪ್ರಕ್ರಿಯೆ ಮುಗಿದ ನಂತರ ಶೋರೂಂ ಸಿಬ್ಬಂದಿಯೇ ನಿಗದಿ ಸ್ಥಳಕ್ಕೆ ವಾಹನಗಳನ್ನು ತಲುಪಿಸಲಿದ್ದು, ಈ ವೇಳೆಯೂ ನಂಜು ನಿರೋಧಕ ರಸಾಯನಿಕಗಳಿಂದ ಸ್ಯಾನಿಟೈಜ್ ಮಾಡಿಯೇ ಹೊಸ ವಾಹನವನ್ನು ಗ್ರಾಹಕರಿಗೆ ಹಸ್ತಾಂತರ ಮಾಡಲಾಗುತ್ತಿದೆ. ಜೊತೆಗೆ ಹಣಕಾಸಿನ ವ್ಯವಹಾರಗಳನ್ನು ಸಂಪೂರ್ಣವಾಗಿ ನಗದು ರಹಿತ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗುತ್ತಿದ್ದು, ಹೊಸ ವಾಹನಗಳಿಗೆ ಮಾತ್ರವಲ್ಲ ಕಾರು ಸರ್ವಿಸ್ ಪ್ರಕ್ರಿಯೆಗೂ ಸಂಪರ್ಕ ರಹಿತ ವ್ಯವಹಾರ ಕೈಗೊಳ್ಳಲಾಗುತ್ತಿದೆ.

ವೈರಸ್ ಭೀತಿ: ಮನೆ ಬಾಗಿಲಿಗೆ ಕಾರ್ ಸರ್ವೀಸ್ ಸೌಲಭ್ಯ ತೆರೆದ ಫೋರ್ಡ್

ಇನ್ನು ಕೋವಿಡ್-19 ಪರಿಣಾಮ ನೆಲಕಚ್ಚಿದ್ದ ದೇಶಿಯ ಆಟೋ ಉದ್ಯಮವು ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಮೇ, ಜೂನ್ ಮತ್ತು ಜುಲೈ ಅವಧಿಗಿಂತಲೂ ಅಗಸ್ಟ್ ಮತ್ತು ಸೆಪ್ಟೆಂಬರ್ ಅವಧಿಯಲ್ಲಿನ ಹೊಸ ವಾಹನ ಮಾರಾಟವು ಸಾಕಷ್ಟು ಸುಧಾರಣೆ ಕಾಣುತ್ತಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ವೈರಸ್ ಭೀತಿ: ಮನೆ ಬಾಗಿಲಿಗೆ ಕಾರ್ ಸರ್ವೀಸ್ ಸೌಲಭ್ಯ ತೆರೆದ ಫೋರ್ಡ್

ಕಳೆದ ವರ್ಷದ ವಾಹನ ಮಾರಾಟಕ್ಕೆ ಹೋಲಿಕೆ ಮಾಡಿದ್ದಲ್ಲಿ ಕುಸಿತ ಅನುಭವಿಸಿದ್ದು, ಈ ವರ್ಷದ ಮೇ, ಜೂನ್ ಮತ್ತು ಜುಲೈ ಅವಧಿಗಿಂತಲೂ ಅಗಸ್ಟ್ ಅವಧಿಯಲ್ಲಿನ ವಾಹನ ಮಾರಾಟವು ತುಸು ಹೆಚ್ಚಳವಾಗಿದೆ ಎನ್ನಬಹುದು.

Most Read Articles

Kannada
Read more on ಫೋರ್ಡ್ ford
English summary
Ford Launches New Service Facility. Read in Kannada.
Story first published: Monday, September 28, 2020, 22:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X