ಈ ಫೀಚರ್ ಹೊಂದಿರುವುದಿಲ್ಲ ಬಿಎಸ್-6 ಫೋರ್ಡ್ ಎಂಡೀವರ್

ಫೋರ್ಡ್ ಇಂಡಿಯಾ ಕಂಪನಿಯು ತನ್ನ ಬಿಎಸ್-6 ಎಂಡೀವರ್ ಎಸ್‍‍ಯುವಿಯನ್ನು ಭಾರತದಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಬಿಎಸ್-6 ಫೋರ್ಡ್ ಎಂಡೀವರ್ ಎಸ್‍‍ಯುವಿಯಲ್ಲಿ ಟ್ವಿನ್ ಟರ್ಬೂ ವರ್ಷನ್ ಅನ್ನು ಅಳವಡಿಸಲಾಗುವುದಿಲ್ಲ.

ಈ ಫೀಚರ್ ಹೊಂದಿರುವುದಿಲ್ಲ ಬಿಎಸ್ 6 ಫೋರ್ಡ್ ಎಂಡೀವರ್

ಭಾರತದಲ್ಲಿ ಬಿಡುಗಡೆಯಾಗಿರುವ ಹೊಸ ಫೋರ್ಡ್ ಎಂಡೀವರ್ ಹೊಸ ಎಂಜಿನ್ ಅನ್ನು ಅಳವಡಿಸಿದೆ. ಹೊಸದಾಗಿ 2.0 ಲೀಟರ್ ಇಕೋಬ್ಲೂ ಟರ್ಬೊ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಿದೆ. ಈ ಎಂಜಿನ್ 168 ಬಿ‍‍ಹೆಚ್‍‍ಪಿ ಪವರ್ ಮತ್ತು 420 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿ‍ನೊಂದಿಗೆ 10 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಿದೆ.

ಈ ಫೀಚರ್ ಹೊಂದಿರುವುದಿಲ್ಲ ಬಿಎಸ್ 6 ಫೋರ್ಡ್ ಎಂಡೀವರ್

ಭಾರತೀಯ ಅಡ್ವೆಂಚರ್ ರೈಡರ್ ಗಳಿಗೆ ಫೋರ್ಡ್ ನಿರಾಸೆ ಮೂಡಿಸಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬಿಎಸ್-6 ಎಂಡೀವರ್ ಎಸ್‍‍ಯುವಿಯಲ್ಲಿ ಪವರ್ ಫುಲ್ ಟ್ವಿನ್ ಟರ್ಬೂ ವರ್ಷನ್ ಹೊಂದಿರುವುದಿಲ್ಲ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಈ ಫೀಚರ್ ಹೊಂದಿರುವುದಿಲ್ಲ ಬಿಎಸ್ 6 ಫೋರ್ಡ್ ಎಂಡೀವರ್

ಭಾರತದಲ್ಲಿ ಬಿಡುಗಡೆಗೊಳಿಸಿದ ಬಿಎಸ್-6 ಎಂಡೀವರ್ ಎಸ್‍‍ಯುವಿಯಲ್ಲಿ ಮಾತ್ರ ಸಿಂಗಲ್ ಟರ್ಬೂ ಎಂಜಿನ್ ಅನ್ನು ಹೊಂದಿದೆ. ವಿದೇಶಿ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಹೊಸ ಎಂಡೀವರ್ ನಲ್ಲಿ ಟ್ವಿನ್-ಟರ್ಬೊ ಎಂಜಿನ್ ಅನ್ನು ಹೊಂದಿದೆ.

ಈ ಫೀಚರ್ ಹೊಂದಿರುವುದಿಲ್ಲ ಬಿಎಸ್ 6 ಫೋರ್ಡ್ ಎಂಡೀವರ್

ದೇಶಿಯ ಮಾರುಕಟ್ಟೆಯಲ್ಲಿದ್ದ ಹಿಂದಿನ ಎಂಡೀವರ್ ಎಸ್‍‍ಯುವಿಯ ಎರಡು ಎಂಜಿನ್‍ಗಳನ್ನು ಬದಲಾಯಿಸಿದೆ. ಪ್ರಸ್ತುತ ಎಂಡೀವರ್ ಎಸ್‍‍ಯುವಿನಲ್ಲಿರುವ ಎಂಜಿನ್‍‍ಗಳ ಬದಲಾವಣೆಗೆ ಪ್ರಮುಖ ಕಾರಣವೆಂದರೆ ಎಂಡೀವರ್ ಬೆಲೆಯನ್ನು ತುಸು ದುಬಾರಿಯಾಗಿಸಿದೆ.

MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6

ಈ ಫೀಚರ್ ಹೊಂದಿರುವುದಿಲ್ಲ ಬಿಎಸ್ 6 ಫೋರ್ಡ್ ಎಂಡೀವರ್

ಈ ಎಸ್‍ಯುವಿಯಲ್ಲಿ ಹೆಡ್‌ಲ್ಯಾಂಪ್ ಯುನಿಟ್, ಎಲ್ಇಡಿ ಟೇಲ್‍ಲೈಟ್, 18-ಇಂಚಿನ ಅಲಾಯ್ ವ್ಹೀಲ್, ನವೀಕರಿಸಿದ ಫ್ರಂಟ್ ಬಂಪರ್, ಸೆಮಿ ಪ್ಯಾರಾಲೆಲ್ ಅಸಿಸ್ಟ್, ಪನರೋಮಿಕ್ ಸನ್‌ರೂಫ್ ಅನ್ನು ಅಳವಡಿಸಲಾಗಿದೆ.

ಈ ಫೀಚರ್ ಹೊಂದಿರುವುದಿಲ್ಲ ಬಿಎಸ್ 6 ಫೋರ್ಡ್ ಎಂಡೀವರ್

ಈ ಎಸ್‍ಯುವಿ ಇಂಟಿರಿಯರ್‍‍ನಲ್ಲಿ ಸ್ಟೀಯರಿಂಗ್ ಮೌಟೆಂಡ್ ಆಡಿಯೋ ಕಂಟ್ರೋಲ್, ಡ್ಯುಯಲ್-ಜೋನ್ ಕ್ಲೈಮೆಟ್ ಕಂಟ್ರೋಲ್, 8.0-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೇನ್‌ಮೆಂಟ್ ಸಿಸ್ಟಂ ಜೊತೆ ಆ್ಯಪಲ್ ಕಾರ್ ಪ್ಲೇ, ಅಂಡ್ರಾಯಿಡ್ ಆಟೋ ಮತ್ತು 10-ಸ್ಪಿಕರ್ಸ್ ಸೌಂಡ್ ಸಿಸ್ಟಂ ಹೊಂದಿದೆ.

MOST READ: ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕರೋಕ್ ಎಸ್‍‍‍ಯುವಿ

ಈ ಫೀಚರ್ ಹೊಂದಿರುವುದಿಲ್ಲ ಬಿಎಸ್ 6 ಫೋರ್ಡ್ ಎಂಡೀವರ್

ಫೋರ್ಡ್ ಎಂಡೀವರ್ ಎಸ್‍‍ಯುವಿಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಏಳು ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಅಸಿಸ್ಟ್ ಮತ್ತು ಪಾರ್ಕಿಂಗ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಈ ಫೀಚರ್ ಹೊಂದಿರುವುದಿಲ್ಲ ಬಿಎಸ್ 6 ಫೋರ್ಡ್ ಎಂಡೀವರ್

ಈ ಎಸ್‍ಯುವಿಯಲ್ಲಿ 4x4 ಡ್ರೈವ್ ಟೆಕ್ನಾಲಜಿ ಸೌಲಭ್ಯ ಹೊಂದಿದೆ. ಈ ಎಸ್‍ಯುವಿಯ ಮುಂಭಾಗದಲ್ಲಿ ಫ್ರಂಟ್ ಗ್ರಿಲ್ ಮತ್ತು ಕ್ರೋಮ್ ಸ್ಲಾಟ್‌ಗಳನ್ನು ಅಳವಡಿಸಲಾಗಿದೆ. ಬಿಎಸ್-6 ಫೋರ್ಡ್ ಎಂಡೀವರ್ ಎಸ್‍‍ಯುವಿ ದೇಶಿಯ ಮಾರುಕಟ್ಟೆಯಲ್ಲಿ ಟೊಯೊಟಾ ಫಾರ್ಚೂನರ್, ಮಹೀಂದ್ರಾ ಅಲ್ಟುರಾಸ್ ಜಿ4 ಮತ್ತು ಇಸುಝು ಎಂಯು-ಎಕ್ಸ್ ಎಸ್‍‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಫೋರ್ಡ್ ford
English summary
Current-gen Ford Endeavour won’t get twin-turbo version of new 2.0-litre diesel engine. Read in Kannada.
Story first published: Tuesday, May 12, 2020, 12:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X