Just In
Don't Miss!
- Finance
ಪ್ರತಿ ಲೀಟರ್ ಪೆಟ್ರೋಲ್- ಡೀಸೆಲ್ ಗೆ ನೀವು ನೀಡುವ ಬೆಲೆಯಲ್ಲಿ 48% ಕೇಂದ್ರದ ಸುಂಕ
- News
ಕರ್ನಾಟಕ ಆಕ್ರಮಿತ ಪ್ರದೇಶ ಶೀಘ್ರ ಮಹಾರಾಷ್ಟ್ರಕ್ಕೆ ಸೇರ್ಪಡೆ: ಉದ್ಧವ್ ಠಾಕ್ರೆ
- Sports
ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ನೀಡಿದ ಪ್ರದರ್ಶನ ಅಸಾಮಾನ್ಯ: ಮೈಕಲ್ ವಾನ್
- Movies
ಶಿವಮೊಗ್ಗದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್: 'ಬೆಸ್ಟ್ ವೀಕೆಂಡ್ ಎವರ್' ಎಂದ ನಟಿ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಟಿಟಾನಿಯಂ ಆಟೋಮ್ಯಾಟಿಕ್ ಮಾದರಿ ಬಿಡುಗಡೆಗೊಳಿಸಿದ ಫೋರ್ಡ್
ಅಮೆರಿಕದ ಕಾರು ತಯಾರಕ ಕಂಪನಿಯಾದ ಫೋರ್ಡ್ ತನ್ನ ಇಕೋಸ್ಪೋರ್ಟ್ ಟಿಟಾನಿಯಂನ ಆಟೋಮ್ಯಾಟಿಕ್ ಮಾದರಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.10.66 ಲಕ್ಷಗಳಾಗಿದೆ.

ಈ ಹೊಸ ಕಾರು ಕಂಪನಿಯ ಸಬ್ -4-ಮೀಟರ್ ಎಸ್ಯುವಿ ಪೋರ್ಟ್ ಫೋಲಿಯೊದಲ್ಲಿ ಟಿಟಾನಿಯಂ ಪ್ಲಸ್ ಮ್ಯಾನುವಲ್ ಮಾದರಿಯ ಕೆಳಗಿನ ಸ್ಥಾನದಲ್ಲಿರಲಿದೆ. ಫೋರ್ಡ್ ಇಕೋಸ್ಪೋರ್ಟ್ ಟಿಟಾನಿಯಂ ಆಟೋಮ್ಯಾಟಿಕ್ ಮಾದರಿಯು 1.5-ಲೀಟರಿನ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ.

ಈ ಎಂಜಿನ್ 121 ಬಿಹೆಚ್ಪಿ ಪವರ್ ಹಾಗೂ 149 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ನಲ್ಲಿ 6-ಸ್ಪೀಡಿನ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಅನ್ನು ಅಳವಡಿಸಲಾಗಿದೆ. ಫೋರ್ಡ್ ಕಂಪನಿಯು ಇಕೋಸ್ಪೋರ್ಟ್ ಟಿಟಾನಿಯಂ ಆಟೋಮ್ಯಾಟಿಕ್ ಮಾದರಿಯಲ್ಲಿ ಹಲವಾರು ಫೀಚರ್ ಗಳನ್ನು ನೀಡಿದೆ.
MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ಈ ಫೀಚರ್ ಗಳಲ್ಲಿ ಪ್ಯಾಡಲ್ ಶಿಫ್ಟರ್, ಕ್ರೂಸ್ ಕಂಟ್ರೋಲ್, ಪುಶ್ ಬಟನ್ ಸ್ಟಾರ್ಟ್ / ಸ್ಟಾಪ್, ಡ್ಯುಯಲ್ ಏರ್ಬ್ಯಾಗ್, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಹಾಗೂ ಹಿಲ್ ಅಸಿಟ್ಗಳು ಸೇರಿವೆ.

ಹೊಸ ಕಾರಿನ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಫೋರ್ಡ್ ಇಂಡಿಯಾದ ಮಾರ್ಕೆಟಿಂಗ್- ಸೇಲ್ಸ್ ಹಾಗೂ ಸರ್ವಿಸ್ ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ವಿನಯ್ ರೈನಾರವರು ಹೊಸ ಟಿಟಾನಿಯಂ ಮಾದರಿಯ ಬಿಡುಗಡೆಯೊಂದಿಗೆ ಇನ್ನೂ ಹೆಚ್ಚಿನ ಗ್ರಾಹಕರನ್ನು ಸೆಳೆಯಬೇಕೆಂದಿದ್ದೇವೆ ಎಂದು ಹೇಳಿದರು.
MOSTREAD: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್

ಫೋರ್ಡ್ ಇಕೋಸ್ಪೋರ್ಟ್ ದೇಶಿಯ ಮಾರುಕಟ್ಟೆಯಲ್ಲಿ 7 ವರ್ಷಗಳನ್ನು ಪೂರೈಸಿದೆ. ಈ ಕಾರನ್ನು ಮೊದಲ ಬಾರಿಗೆ 2012ರ ಆಟೋ ಎಕ್ಸ್ಪೋದಲ್ಲಿ ಕಾನ್ಸೆಪ್ಟ್ ಕಾರ್ ಆಗಿ ಪರಿಚಯಿಸಲಾಯಿತು. ಒಂದು ವರ್ಷದ ನಂತರ 2013ರಲ್ಲಿ ಈ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಯಿತು.

ಮಾಹಿತಿಯ ಪ್ರಕಾರ, ಫೋರ್ಡ್ ಕಂಪನಿಯು 2021ರಲ್ಲಿ ಹೊಸ ಇಕೋಸ್ಪೋರ್ಟ್ ಕಾರ್ ಅನ್ನು ಬಿಡುಗಡೆಗೊಳಿಸಲಿದೆ. ಈ ಕಾರಿನಲ್ಲಿ ಮಹೀಂದ್ರಾ ಎಕ್ಸ್ಯುವಿ 300ನಲ್ಲಿರುವ ಎಂಜಿನ್ ಬಳಸಲಾಗುವುದು. ಎಕ್ಸ್ಯುವಿ 300ನಲ್ಲಿ 1.2-ಲೀಟರಿನ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 108.5 ಬಿಹೆಚ್ಪಿ ಪವರ್ ಹಾಗೂ 200 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.