ಭಾರತೀಯ ಕ್ರಿಕೆಟಿನ ದಾದಾ ಬಳಿಯಿರುವ ಕಾರುಗಳಿವು

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿರವರಿಗೆ ಇಂದು 48ನೇ ಹುಟ್ಟುಹಬ್ಬದ ಸಂಭ್ರಮ. ಭಾರತೀಯ ಕ್ರಿಕೆಟಿನ ದಾದಾರವರಿಗೆ ಕ್ರಿಕೆಟ್ ಬಗ್ಗೆ ಇದ್ದಷ್ಟೇ ಕ್ರೇಜ್ ಕಾರುಗಳ ಬಗ್ಗೆಯೂ ಇದೆ. ಸೌರವ್ ಗಂಗೂಲಿರವರು ವಿಶ್ವದ ಅತಿದೊಡ್ಡ ಕಂಪನಿಗಳ ಕಾರುಗಳನ್ನು ಹೊಂದಿದ್ದಾರೆ.

ಭಾರತೀಯ ಕ್ರಿಕೆಟಿನ ದಾದಾ ಬಳಿಯಿರುವ ಕಾರುಗಳಿವು

ಸೌರವ್ ಗಂಗೂಲಿ ಮರ್ಸಿಡಿಸ್ ಬೆಂಝ್, ಬಿಎಂಡಬ್ಲ್ಯು, ಒಪೆಲ್ ಹಾಗೂ ಹ್ಯುಂಡೈ ಕಂಪನಿಯ ಕಾರುಗಳನ್ನು ಹೊಂದಿದ್ದಾರೆ. ಈ ಕಾರುಗಳಲ್ಲಿ ಅವರು ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಸೌರವ್ ಗಂಗೂಲಿರವರ ಬಳಿಯಿರುವ ಕೆಲವು ಕಾರುಗಳ ಬಗೆಗಿನ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ಭಾರತೀಯ ಕ್ರಿಕೆಟಿನ ದಾದಾ ಬಳಿಯಿರುವ ಕಾರುಗಳಿವು

1. ಮರ್ಸಿಡಿಸ್ ಬೆಂಝ್ ಸಿಎಲ್‌ಕೆ

ದಾದಾರವರು ಮರ್ಸಿಡಿಸ್ ಬೆಂಝ್‌ ಕಂಪನಿಯ ಸಿಎಲ್‌ಕೆ ಮಾದರಿ ಕಾರ್ ಅನ್ನು ಹೊಂದಿದ್ದಾರೆ. ಭಾರತದಲ್ಲಿ ಈ ಕಾರಿನ ಬೆಲೆ ಸುಮಾರು ರೂ.84 ಲಕ್ಷಗಳಾಗುತ್ತದೆ.

MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ಭಾರತೀಯ ಕ್ರಿಕೆಟಿನ ದಾದಾ ಬಳಿಯಿರುವ ಕಾರುಗಳಿವು

ಮರ್ಸಿಡಿಸ್ ಬೆಂಝ್ ಸಿಎಲ್‌ಕೆ 5.5 ಲೀಟರಿನ ಎಂಜಿನ್ ಹಾಗೂ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದೆ. 4 ಸೀಟುಗಳ ಈ ಕೂಪೆ ಕಾರು ಐಷಾರಾಮಿ ಫೀಚರ್ ಗಳಿಗೆ ಹೆಸರುವಾಸಿಯಾಗಿದೆ. ಈ ಮಾದರಿಯನ್ನು 5 ವಿವಿಧ ರೀತಿಯ ಎಂಜಿನ್ ಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಭಾರತೀಯ ಕ್ರಿಕೆಟಿನ ದಾದಾ ಬಳಿಯಿರುವ ಕಾರುಗಳಿವು

2. ಬಿಎಂಡಬ್ಲ್ಯು 730 ಎಲ್‌ಡಿ

ಸೌರವ್ ಗಂಗೂಲಿ ಬಿಎಂಡಬ್ಲ್ಯು 7 ಸೀರೀಸ್ ಕಾರ್ ಅನ್ನು ಸಹ ಹೊಂದಿದ್ದಾರೆ. ಬಿಎಂಡಬ್ಲ್ಯು 730 ಎಲ್‌ಡಿ ಕಂಪನಿಯ ಆಧುನಿಕವಾದ ಹಾಗೂ ಐಷಾರಾಮಿಯಾದ ಕಾರ್ ಆಗಿದೆ.

MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಭಾರತೀಯ ಕ್ರಿಕೆಟಿನ ದಾದಾ ಬಳಿಯಿರುವ ಕಾರುಗಳಿವು

ಈ ಕಾರಿನ ಬೆಲೆ ಸುಮಾರು ರೂ.1.35 ಕೋಟಿಗಳಾಗಿದೆ. ಈ ಕಾರಿನಲ್ಲಿ ಅಳವಡಿಸಲಾಗಿರುವ 3.0-ಲೀಟರಿನ ಇನ್-ಲೈನ್ ಟರ್ಬೋಚಾರ್ಜ್ಡ್ ಎಂಜಿನ್ 265 ಬಿಹೆಚ್‌ಪಿ ಪವರ್ ಹಾಗೂ 620 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರಿನಲ್ಲಿ 8-ಸ್ಪೀಡಿನ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅಳವಡಿಸಲಾಗಿದೆ.

ಭಾರತೀಯ ಕ್ರಿಕೆಟಿನ ದಾದಾ ಬಳಿಯಿರುವ ಕಾರುಗಳಿವು

3. ಒಪೆಲ್ ಆಸ್ಟ್ರಾ

ದಾದಾ ಅವರ ಕಾರು ಸಂಗ್ರಹದಲ್ಲಿ ಒಪೆಲ್ ಆಸ್ಟ್ರಾ ಸಹ ಸೇರಿದೆ. ಒಪೆಲ್ ಆಸ್ಟ್ರಾ ಕಾರಿನಲ್ಲಿ 1.5-ಲೀಟರಿನ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 74 ಬಿಹೆಚ್‌ಪಿ ಪವರ್ ಹಾಗೂ 121 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರ್ ಅನ್ನು ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಕಾರಿನ ಬೆಲೆ ರೂ.7.55 ಲಕ್ಷಗಳಾಗಿದೆ.

MOST READ:ಪೊಲೀಸರಿಗೆ ತಲೆ ನೋವು ತಂದಿಟ್ಟ ಸೀಜ್ ಆದ ವಾಹನಗಳು

ಭಾರತೀಯ ಕ್ರಿಕೆಟಿನ ದಾದಾ ಬಳಿಯಿರುವ ಕಾರುಗಳಿವು

4. ಹ್ಯುಂಡೈ ಕ್ರೆಟಾ

ಸೌರವ್ ಗಂಗೂಲಿರವರು ಭಾರತದ ಜನಪ್ರಿಯ ಎಸ್ ಯುವಿಯಾದ ಹ್ಯುಂಡೈ ಕ್ರೆಟಾವನ್ನು ಸಹ ಹೊಂದಿದ್ದಾರೆ. ಅವರ ಬಳಿಯಿರುವ ಹ್ಯುಂಡೈ ಕ್ರೆಟಾ 1.5 ಲೀಟರಿನ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ 121 ಬಿಹೆಚ್‌ಪಿ ಪವರ್ ಹಾಗೂ 150 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಸ್ ಯುವಿಯಲ್ಲಿ 5 ಸ್ಪೀಡಿನ ಮ್ಯಾನುವಲ್ ಗೇರ್ ಬಾಕ್ಸ್ ಅಳವಡಿಸಲಾಗಿದೆ.

ಭಾರತೀಯ ಕ್ರಿಕೆಟಿನ ದಾದಾ ಬಳಿಯಿರುವ ಕಾರುಗಳಿವು

ಸೌರವ್ ಗಂಗೂಲಿ ಒಟ್ಟು 36 ಕಾರುಗಳನ್ನು ಹೊಂದಿದ್ದಾರೆಂದು ಹೇಳಲಾಗಿದೆ. ಅವುಗಳಲ್ಲಿ 20 ಕಾರುಗಳು ಮರ್ಸಿಡಿಸ್ ಬೆಂಝ್ ಕಂಪನಿಗೆ ಸೇರಿದ್ದರೆ, 4 ಬಿಎಂಡಬ್ಲ್ಯು ಕಾರುಗಳಾಗಿವೆ. ದಾದಾರವರು ಹಲವು ಬಾರಿ ಈ ಕಾರುಗಳೊಂದಿಗೆ ಕಾಣಿಸಿಕೊಂಡಿದ್ದಾರೆ.

Most Read Articles

Kannada
English summary
Former India cricket captain Sourav Ganguly car collection. Read in Kannada.
Story first published: Wednesday, July 8, 2020, 18:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X