ಕರೋನಾ ವೈರಸ್ ಎಫೆಕ್ಟ್: ಪ್ರೇಕ್ಷಕರಿಲ್ಲದೇ ನಡೆಯಲಿದೆ ಫಾರ್ಮುಲಾ 1 ರೇಸ್

ಕರೋನಾ ವೈರಸ್ ಕಾರಣಕ್ಕೆ ಫಾರ್ಮುಲಾ -1 ಕಾರ್ ರೇಸ್‌ಗಳನ್ನು ಮುಂದೂಡಲಾಗಿತ್ತು. ಈಗ ಈ ರೇಸ್‌ಗಳ ವೇಳಾಪಟ್ಟಿಯನ್ನು ಬದಲಿಸಿರುವ ಫಾರ್ಮುಲಾ -1 ರೇಸಿಂಗ್ ಫೆಡರೇಶನ್ ಈ ವರ್ಷದ ಫಾರ್ಮುಲಾ -1 ಕಾರ್ ರೇಸ್ ಅನ್ನು ಪ್ರೇಕ್ಷಕರಿಲ್ಲದೆ ಆಯೋಜಿಸಲು ನಿರ್ಧರಿಸಿದೆ.

ಕರೋನಾ ವೈರಸ್ ಎಫೆಕ್ಟ್: ಪ್ರೇಕ್ಷಕರಿಲ್ಲದೇ ನಡೆಯಲಿದೆ ಫಾರ್ಮುಲಾ 1 ರೇಸ್

ವಿಶ್ವದ ಬಹುತೇಕ ದೇಶಗಳಲ್ಲಿ ಕರೋನಾ ವೈರಸ್ ಕಾರಣಕ್ಕೆ ಲಾಕ್‌ಡೌನ್ ಜಾರಿಗೊಳಿಸಲಾಗಿತ್ತು. ಲಾಕ್‌ಡೌನ್ ಹಾಗೂ ಆಟಗಾರರಿಗೆ ಸೋಂಕು ಹರಡದಿರಲಿ ಎಂಬ ಕಾರಣಕ್ಕೆ ಕೆಲವು ಫಾರ್ಮುಲಾ -1 ಕಾರ್ ರೇಸ್‌ಗಳನ್ನು ರದ್ದುಪಡಿಸಲಾಗಿತ್ತು.

ಕರೋನಾ ವೈರಸ್ ಎಫೆಕ್ಟ್: ಪ್ರೇಕ್ಷಕರಿಲ್ಲದೇ ನಡೆಯಲಿದೆ ಫಾರ್ಮುಲಾ 1 ರೇಸ್

ಫಾರ್ಮುಲಾ -1 ಕಾರ್ ರೇಸಿಂಗ್ ಫೆಡರೇಶನ್ ಈ ವರ್ಷ ನಡೆಯಬೇಕಾಗಿರುವ ಫಾರ್ಮುಲಾ -1 ಕಾರ್ ರೇಸ್ ವಿಧಾನಗಳನ್ನು ಪರಿಶೀಲಿಸುತ್ತಿದೆ. ಮುಂದಿನ ತಿಂಗಳು 5 ಹಾಗೂ 12ರಂದು ಆಸ್ಟ್ರಿಯಾದಲ್ಲಿ ಫಾರ್ಮುಲಾ -1 ಕಾರ್ ರೇಸ್ ನಡೆಸಲು ನಿರ್ಧರಿಸಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಕರೋನಾ ವೈರಸ್ ಎಫೆಕ್ಟ್: ಪ್ರೇಕ್ಷಕರಿಲ್ಲದೇ ನಡೆಯಲಿದೆ ಫಾರ್ಮುಲಾ 1 ರೇಸ್

ಇದೇ ವೇಳೆ ಕರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಫಾರ್ಮುಲಾ -1 ರೇಸ್‌ಗಳನ್ನು ಪ್ರೇಕ್ಷಕರಿಲ್ಲದೆ ನಡೆಸಲು ಯೋಜಿಸಿದೆ. ಸಾಮಾನ್ಯವಾಗಿ 1.50ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರು ಫಾರ್ಮುಲಾ -1 ರೇಸ್‌ಗಳನ್ನು ವೀಕ್ಷಿಸುತ್ತಾರೆ. ಕರೋನಾ ವೈರಸ್ ಸೋಂಕಿನ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ.

ಕರೋನಾ ವೈರಸ್ ಎಫೆಕ್ಟ್: ಪ್ರೇಕ್ಷಕರಿಲ್ಲದೇ ನಡೆಯಲಿದೆ ಫಾರ್ಮುಲಾ 1 ರೇಸ್

ಮುಂದಿನ ಕೆಲ ತಿಂಗಳು ಪರಿಸ್ಥಿತಿಯನ್ನು ವಿಶ್ಲೇಷಿಸಿ, ನಂತರ ಪ್ರೇಕ್ಷಕರು ಹಾಗೂ ಅಭಿಮಾನಿಗಳಿಗೆ ಸ್ಪರ್ಧೆಗಳನ್ನು ವೀಕ್ಷಿಸಲು ಅವಕಾಶ ನೀಡಲಾಗುತ್ತದೆ. ಸ್ಪರ್ಧಿಗಳು ಫಾರ್ಮುಲಾ -1 ರೇಸ್‌ಗಳಿಗಾಗಿ ಸಿದ್ದತೆಗಳನ್ನು ನಡೆಸುತ್ತಿದ್ದಾರೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕರೋನಾ ವೈರಸ್ ಎಫೆಕ್ಟ್: ಪ್ರೇಕ್ಷಕರಿಲ್ಲದೇ ನಡೆಯಲಿದೆ ಫಾರ್ಮುಲಾ 1 ರೇಸ್

ಫಾರ್ಮುಲಾ -1 ಫೆಡರೇಶನ್ ವಾರಕ್ಕೆ ಎರಡು ರೇಸ್‌ಗಳನ್ನು ಆಯೋಜಿಸಲು ಚಿಂತನೆ ನಡೆಸಿದೆ. ಇದರಿಂದಾಗಿ ಈ ವರ್ಷ ನಿಗದಿಯಾಗಿರುವ ಎಲ್ಲಾ ಪಂದ್ಯಗಳನ್ನು ಮುಗಿಸಲು ಸಾಧ್ಯವಾಗಲಿದೆ ಎಂಬುದು ಫೆಡರೇಶನ್‌ನ ಆಶಯ.

ಕರೋನಾ ವೈರಸ್ ಎಫೆಕ್ಟ್: ಪ್ರೇಕ್ಷಕರಿಲ್ಲದೇ ನಡೆಯಲಿದೆ ಫಾರ್ಮುಲಾ 1 ರೇಸ್

ಭಾಗವಹಿಸುವ ಪ್ರತಿ ತಂಡವು ತಲಾ 130 ಜನರೊಂದಿಗೆ ಕಾರ್ ರೇಸಿಂಗ್ ಟ್ರ್ಯಾಕ್‌ಗಳಿಗೆ ಭೇಟಿ ನೀಡಲಿದೆ. ಆದರೆ ಫಾರ್ಮುಲಾ -1 ಫೆಡರೇಶನ್ ಪ್ರತಿ ತಂಡಕ್ಕೆ ಕೇವಲ 80 ಜನರನ್ನು ಕರೆತರಲು ಅವಕಾಶ ನೀಡಲಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕರೋನಾ ವೈರಸ್ ಎಫೆಕ್ಟ್: ಪ್ರೇಕ್ಷಕರಿಲ್ಲದೇ ನಡೆಯಲಿದೆ ಫಾರ್ಮುಲಾ 1 ರೇಸ್

ಟ್ರ್ಯಾಕ್‌ಗಳಿಗೆ ಬರುವ ಎಲ್ಲಾ ಸ್ಪರ್ಧಿಗಳು ಹಾಗೂ ಅವರ ತಂಡದ ಸದಸ್ಯರನ್ನು ಕರೋನಾ ವೈರಸ್ ಪರೀಕ್ಷೆಗೆ ಒಳಪಡಿಸಲಾಗುವುದು. ಫಾರ್ಮುಲಾ -1 ರೇಸಿಂಗ್ ಅನ್ನು ಟ್ರ್ಯಾಕ್‌ನಲ್ಲಿ ನೇರವಾಗಿ ನೋಡಲು ಸಾಧ್ಯವಾಗದ ಅಭಿಮಾನಿಗಳು ನೇರಪ್ರಸಾರದಲ್ಲಿ ವೀಕ್ಷಿಸಬಹುದು.

Most Read Articles

Kannada
English summary
Formula 1 race to be held without spectators. Read in Kannada.
Story first published: Saturday, June 6, 2020, 10:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X