ಜನಪ್ರಿಯ ಫಾರ್ಮುಲಾ 1 ರೇಸರ್ ಇನ್ನಿಲ್ಲ

ಫಾರ್ಮುಲಾ -1 ರೇಸಿಂಗ್‌ನ ಜನಪ್ರಿಯ ರೇಸರ್‌ಗಳಲ್ಲಿ ಒಬ್ಬರಾಗಿದ್ದ ಸರ್ ಸ್ಟಿರ್ಲಿಂಗ್ ಮೋಸ್‌ರವರು ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಇಂಗ್ಲೆಂಡ್‌ನ ಸರ್ ಸ್ಟಿರ್ಲಿಂಗ್ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಜನಪ್ರಿಯ ಫಾರ್ಮುಲಾ 1 ರೇಸರ್ ಇನ್ನಿಲ್ಲ

ರೋಗದ ತೀವ್ರತೆಯಿಂದಾಗಿ ಚಿಕಿತ್ಸೆ ಫಲಿಸದೇ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಸರ್ ಸ್ಟಿರ್ಲಿಂಗ್ ಒಮ್ಮೆಯೂ ಫಾರ್ಮುಲಾ 1 ಕಾರ್ ರೇಸ್‌ ಪ್ರಶಸ್ತಿಯನ್ನು ಗೆದ್ದಿಲ್ಲ. ಆದರೆ ಅವರು ಫಾರ್ಮುಲಾ 1 ರೇಸಿಂಗ್‌ನಲ್ಲಿ ವಿಶ್ವದ ರೇಸರ್‌ಗಳಲ್ಲಿ ಒಬ್ಬರು ಎಂದು ಗುರುತಿಸಲ್ಪಟ್ಟಿದ್ದಾರೆ. ಅವರು ಎರಡನೇ ಹಾಗೂ ನಾಲ್ಕನೇ ಸ್ಥಾನವನ್ನು ಪಡೆದಿದ್ದರು.

ಜನಪ್ರಿಯ ಫಾರ್ಮುಲಾ 1 ರೇಸರ್ ಇನ್ನಿಲ್ಲ

1962ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಗುಡ್‌ವುಡ್ಸ್ ಫಾರ್ಮುಲಾ 1 ಓಟದ ಸಂದರ್ಭದಲ್ಲಿ ಅವರು ಗಾಯಗೊಂಡಿದ್ದರು. ನಂತರ ಅವರು ಒಂದು ತಿಂಗಳು ಕೋಮಾದಲ್ಲಿದ್ದರು. ಇದಾದ ನಂತರ ಸಂಧಿವಾತದಿಂದ 6 ತಿಂಗಳು ಆಸ್ಪತ್ರೆಯಲ್ಲಿದ್ದರು. ಈ ಕಾರಣದಿಂದಾಗಿ ಅವರು ಮೋಟಾರ್ ರೇಸಿಂಗ್ ತ್ಯಜಿಸಬೇಕಾಯಿತು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಜನಪ್ರಿಯ ಫಾರ್ಮುಲಾ 1 ರೇಸರ್ ಇನ್ನಿಲ್ಲ

1980ರ ದಶಕದಲ್ಲಿ, ಅವರು ಮೋಟಾರ್ ರೇಸಿಂಗ್ ಸೇರಿದಂತೆ ಹಲವಾರು ಕಾರ್ಯಗಳಲ್ಲಿ ತೊಡಗಿಸಿಕೊಂಡರು. ಸ್ಟಿರ್ಲಿಂಗ್‌ರವರು ವೋಕ್ಸ್ಹಾಲ್, ಮಾಸೆರೋಟಿ ಹಾಗೂ ಮರ್ಸಿಡಿಸ್ ಬೆಂಝ್ ಕಂಪನಿಗಳ ಪರವಾಗಿ ಫಾರ್ಮುಲಾ 1 ರೇಸಿಂಗ್ ನಲ್ಲಿ ಭಾಗವಹಿಸಿದ್ದರು.

ಜನಪ್ರಿಯ ಫಾರ್ಮುಲಾ 1 ರೇಸರ್ ಇನ್ನಿಲ್ಲ

ಫಾರ್ಮುಲಾ 1 ಸ್ಪರ್ಧೆಗಳ ಮೊದಲ ದಶಕದಲ್ಲಿ ಅತ್ಯಂತ ಪ್ರಸಿದ್ಧ ಆಟಗಾರನಾಗಿದ್ದ ಮ್ಯಾನುಯೆಲ್ ಫ್ಯಾಂಜಿಯೊ ಅವರೊಂದಿಗೆ ಮರ್ಸಿಡಿಸ್ ತಂಡದ ಭಾಗವಾಗಲು ಹೆಮ್ಮೆಪಡುವುದಾಗಿ ತಿಳಿಸಿದ್ದರು. ಅವರು ತಮ್ಮ 10 ವರ್ಷಗಳ ಫಾರ್ಮುಲಾ 1 ರೇಸ್‌ನಲ್ಲಿ 16 ಸಲ ಗೆದ್ದಿದ್ದರು.

MOST READ:ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?

ಜನಪ್ರಿಯ ಫಾರ್ಮುಲಾ 1 ರೇಸರ್ ಇನ್ನಿಲ್ಲ

ಫಾರ್ಮುಲಾ 1 ಜೊತೆಗೆ, ಇದರ ಜೊತೆಗೆ ಬೇರೆ ಮೋಟಾರ್ ರೇಸಿಂಗ್‌ನಲ್ಲೂ ತೊಡಗಿಸಿಕೊಂಡಿದ್ದರು. 1948 ರಿಂದ 1962ರವರೆಗೆ 14 ವರ್ಷಗಳಲ್ಲಿ ಅವರು 529 ಮೋಟಾರು ರೇಸ್‌ಗಳಲ್ಲಿ ಭಾಗವಹಿಸಿ, 212 ರೇಸ್‌ಗಳಲ್ಲಿ ಗೆದ್ದಿದ್ದರು.

ಜನಪ್ರಿಯ ಫಾರ್ಮುಲಾ 1 ರೇಸರ್ ಇನ್ನಿಲ್ಲ

ಇಟಲಿಯ ಸಾರ್ವಜನಿಕ ರಸ್ತೆಯಲ್ಲಿ 1000 ಮೈಲಿ ವೇಗದಲ್ಲಿ ಚಲಿಸಿದ್ದ ಹೊಸ ದಾಖಲೆಯನ್ನೂ ಅವರು ನಿರ್ಮಿಸಿದ್ದರು. ಸರ್ ಸ್ಟಿರ್ಲಿಂಗ್ ಅವರ ಮರಣವು ಫಾರ್ಮುಲಾ 1 ರೇಸಿಂಗ್ ಟೀಂಗಳಿಗೆ ಹಾಗೂ ಮೋಟರ್‌ಸೈಕಲ್ ರೇಸರ್‌ಗಳಿಗೆ ಆಘಾತವನ್ನುಂಟು ಮಾಡಿದೆ.

MOSTREAD: ವಾಹನ ಉತ್ಪಾದನೆ ಸ್ಥಗಿತದಿಂದಾಗಿ ಸಾವಿರಾರು ಕೋಟಿ ನಷ್ಟ

ಜನಪ್ರಿಯ ಫಾರ್ಮುಲಾ 1 ರೇಸರ್ ಇನ್ನಿಲ್ಲ

ಮೋಟಾರು ರೇಸಿಂಗ್ ಪ್ರಪಂಚವು ತನ್ನ ಮುಖ್ಯ ಗುರುತನ್ನು ಕಳೆದುಕೊಂಡಿದೆ. ನಮ್ಮ ಮರ್ಸಿಡಿಸ್ ಫಾರ್ಮುಲಾ 1 ತಂಡಕ್ಕೆ ನಾವು ಉತ್ತಮ ಸ್ನೇಹಿತನನ್ನು ಕಳೆದುಕೊಂಡಿದ್ದೇವೆ ಎಂದು ಮರ್ಸಿಡಿಸ್ ಎಎಂಜಿ ಫಾರ್ಮುಲಾ 1 ತಂಡವು ಕಂಬನಿ ಮಿಡಿದಿದೆ.

ಜನಪ್ರಿಯ ಫಾರ್ಮುಲಾ 1 ರೇಸರ್ ಇನ್ನಿಲ್ಲ

ಸ್ಕುಡೆರಿಯಾ ಫೆರಾರಿ ತಂಡವೂ ಸಹ ಸರ್ ಸ್ಟಿರ್ಲಿಂಗ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಅವರು ನಮಗೆ ಉತ್ತಮ ಪ್ರತಿಸ್ಪರ್ಧಿಯಾಗಿದ್ದರು ಎಂದು ಹೇಳಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಜನಪ್ರಿಯ ಫಾರ್ಮುಲಾ 1 ರೇಸರ್ ಇನ್ನಿಲ್ಲ

ಆರು ಬಾರಿಯ ಫಾರ್ಮುಲಾ 1 ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್‌ರವರು ವಯಸ್ಸಿನ ಅಂತರವನ್ನೂ ಮೀರಿ ನಮ್ಮಲ್ಲಿ ಗಾಢವಾದ ಸ್ನೇಹವಿತ್ತು ಎಂದು ಹೇಳಿದ್ದಾರೆ. ಜೆನ್ಸನ್ ಬಟನ್‌ರವರು ಸಹ ಸಂತಾಪ ಸೂಚಿಸಿ ಸರ್ ಸ್ಟಿರ್ಲಿಂಗ್‌ರವರು ತಮಗೆ ನೀಡುತ್ತಿದ್ದ ಸಲಹೆಗಳನ್ನು ನೆನಪಿಸಿಕೊಂಡರು.

Most Read Articles

Kannada
English summary
Formula One Legend Sir Stirling Moss dies at age 90. Read in Kannada.
Story first published: Monday, April 13, 2020, 15:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X