ಉತ್ಪಾದನಾ ಘಟಕವನ್ನು ಸ್ಥಗಿತಗೊಳಿಸಿದ ಜನರಲ್ ಮೋಟಾರ್ಸ್

ಜನರಲ್ ಮೋಟಾರ್ಸ್ (ಜಿಎಂ) ಕಂಪನಿಯು ಪುಣೆಯ ತಾಲೇಗಾಂವ್ ನಲ್ಲಿರುವ ತನ್ನ ಉತ್ಪಾದನಾ ಘಟಕವನ್ನು ಸ್ಥಗಿತಗೊಳಿಸಿದೆ. ಕಂಪನಿಯು ಗ್ರೇಟ್ ವಾಲ್ ಮೋಟಾರ್ಸ್ (ಜಿಡಬ್ಲ್ಯೂಎಂ) ಭಾರತದಲ್ಲಿ ಕಾರ್ಯಾಚರಣೆ ಆರಂಭಿಸುತ್ತಿರುವುದರಿಂದ ಈ ನಿರ್ಧಾರವನ್ನು ಕೈಗೊಂಡಿದೆ.

ಉತ್ಪಾದನಾ ಘಟಕವನ್ನು ಸ್ಥಗಿತಗೊಳಿಸಿದ ಜನರಲ್ ಮೋಟಾರ್ಸ್

ಈ ವರ್ಷದ ಆರಂಭದಲ್ಲಿ ಚೀನಾದ ಗ್ರೇಟ್ ವಾಲ್ ಮೋಟಾರ್ಸ್ ಕಂಪನಿಯು ಜನರಲ್ ಮೋಟಾರ್ಸ್ ಉತ್ಪಾದನಾ ಘಟಕವನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿತ್ತು. ಆದರೆ ಕರೋನಾ ವೈರಸ್‌ ಕಾರಣದಿಂದಾಗಿ ಈ ಯೋಜನೆಯು ಮುಂದೂಡಿಕೆಯಾಯಿತು.

ಉತ್ಪಾದನಾ ಘಟಕವನ್ನು ಸ್ಥಗಿತಗೊಳಿಸಿದ ಜನರಲ್ ಮೋಟಾರ್ಸ್

ಇದಾದ ನಂತರ ಭಾರತ ಹಾಗೂ ಚೀನಾ ನಡುವೆ ಗಡಿ ವಿವಾದ ತಲೆದೋರಿತು. ಅಂದಿನಿಂದ ಚೀನಾ ದೇಶಕ್ಕೆ ಸಂಬಂಧಿಸಿದ ಎಲ್ಲಾ ಹೊಸ ಯೋಜನೆಗಳನ್ನು ನಿಲ್ಲಿಸಲಾಗಿದೆ. ಉದ್ಯಮದ ಉನ್ನತ ಮೂಲಗಳ ಪ್ರಕಾರ ಕಂಪನಿಯು 2021ರ ಫೆಬ್ರವರಿಯೊಳಗೆ ಈ ಯೋಜನೆಗೆ ಅನುಮೋದನೆಯನ್ನು ಪಡೆಯುವ ಸಾಧ್ಯತೆಗಳಿವೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಉತ್ಪಾದನಾ ಘಟಕವನ್ನು ಸ್ಥಗಿತಗೊಳಿಸಿದ ಜನರಲ್ ಮೋಟಾರ್ಸ್

ಈ ಘಟಕವು ಬಂದ್ ಆಗಿರುವುದು ತಾತ್ಕಾಲಿಕವಾಗಿರಲಿದೆ ಎಂದು ಮೂಲಗಳು ತಿಳಿಸಿವೆ. ಈ ಸಮಯದಲ್ಲಿ ಭಾರತದಲ್ಲಿ ಬಂಡವಾಳ ಹೂಡಿಕೆಯ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಭಾರತ ಹಾಗೂ ಚೀನಾ ದೇಶಗಳು ಪ್ರಾಯೋಗಿಕ ವಿಧಾನವನ್ನು ಅಳವಡಿಸಿಕೊಳ್ಳುವ ಬಗ್ಗೆ ಯೋಚಿಸಬಹುದು.

ಉತ್ಪಾದನಾ ಘಟಕವನ್ನು ಸ್ಥಗಿತಗೊಳಿಸಿದ ಜನರಲ್ ಮೋಟಾರ್ಸ್

ಆದರೆ ಮಾಹಿತಿ ತಂತ್ರಜ್ಞಾನದ ಕಡೆಯಿಂದ ಹೆಚ್ಚಿನ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಕಠಿಣ ನಿಯಮಗಳನ್ನು ಅನುಸರಿಸುವ ಸಾಧ್ಯತೆಗಳಿವೆ. ಜಿಡಬ್ಲ್ಯೂಎಂನಂತಹ ಕಂಪನಿಗಳು ಸ್ನೂಪಿಂಗ್ ಅಪಾಯವನ್ನು ತಪ್ಪಿಸಲು ಹೆಚ್ಚು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಉತ್ಪಾದನಾ ಘಟಕವನ್ನು ಸ್ಥಗಿತಗೊಳಿಸಿದ ಜನರಲ್ ಮೋಟಾರ್ಸ್

ಕಂಪನಿಯು ತನ್ನ ಯೋಜನೆಗೆ ಅನುಮೋದನೆಯನ್ನು ಪಡೆದ ನಂತರ ಮಹಾರಾಷ್ಟ್ರ ಸರ್ಕಾರಕ್ಕೂ ನೆರವಾಗಲಿದೆ. ಕರೋನಾ ವೈರಸ್ ನಿಂದ ಉಂಟಾಗಿರುವ ಆರ್ಥಿಕ ಸಂಕಷ್ಟದ ನಂತರ ಮಹಾರಾಷ್ಟ್ರ ಸರ್ಕಾರವು ದೊಡ್ಡ ಹೂಡಿಕೆಯೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಬಹುದು.

ಉತ್ಪಾದನಾ ಘಟಕವನ್ನು ಸ್ಥಗಿತಗೊಳಿಸಿದ ಜನರಲ್ ಮೋಟಾರ್ಸ್

ಭಾರತ - ಚೀನಾ ನಡುವೆ ಹಲವು ಕಾಲದಿಂದ ಬಿಕ್ಕಟ್ಟು ಉಂಟಾಗಿರುವ ಹಿನ್ನೆಲೆಯಲ್ಲಿ ಜಿಡಬ್ಲ್ಯೂಎಂ ಕಂಪನಿಯು ತನ್ನ ಯೋಜನೆಗಳನ್ನು ನಿಲ್ಲಿಸಬೇಕಾಗಿದೆ. ಇದರಿಂದಾಗಿ ಜನರಲ್ ಮೋಟಾರ್ಸ್ ಘಟಕವನ್ನು ಸ್ಥಗಿತಗೊಳಿಸಲಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಉತ್ಪಾದನಾ ಘಟಕವನ್ನು ಸ್ಥಗಿತಗೊಳಿಸಿದ ಜನರಲ್ ಮೋಟಾರ್ಸ್

ಈ ಘಟಕವನ್ನು ಮುಚ್ಚಿರುವುದರಿಂದ ಭಾರತದಲ್ಲಿ ಸ್ಥಗಿತಗೊಂಡ ಘಟಕಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಈಗಾಗಲೇ ಮುಂಬೈ ಬಳಿಯ ಕಲ್ಯಾಣ್ ಬಳಿಯಿರುವ ಪ್ಯೂಜೊ, ಸೂರಜ್‌ಪುರದಲ್ಲಿರುವ ಡೇವೂ, ಪಶ್ಚಿಮ ಬಂಗಾಳದ ಉತ್ತರಪಾರದಲ್ಲಿರುವ ಹಿಂದೂಸ್ತಾನ್ ಮೋಟಾರ್ಸ್ ಕಂಪನಿಯ ಘಟಕಗಳನ್ನು ಮುಚ್ಚಲಾಗಿದೆ.

ಉತ್ಪಾದನಾ ಘಟಕವನ್ನು ಸ್ಥಗಿತಗೊಳಿಸಿದ ಜನರಲ್ ಮೋಟಾರ್ಸ್

ಇತ್ತೀಚೆಗಷ್ಟೇ ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಹೋಂಡಾ ಕಾರ್ಸ್ ಗ್ರೇಟರ್ ನೋಯ್ಡಾದಲ್ಲಿರುವ ತನ್ನ ಘಟಕವನ್ನು ಮುಚ್ಚುವುದಾಗಿ ಘೋಷಿಸಿದೆ. ಜಿಡಬ್ಲ್ಯೂಎಂ ಭಾರತದಲ್ಲಿ ವ್ಯವಹಾರವನ್ನು ಆರಂಭಿಸದಿದ್ದರೆ, ಚೀನಾದ ಇತರ ಕಂಪನಿಗಳು ಸಹ ಇದೇ ಹಾದಿಯನ್ನು ತುಳಿಯಬಹುದು. ಈ ಬಗ್ಗೆ ಆಟೋಕಾರ್ ಇಂಡಿಯಾ ವರದಿ ಮಾಡಿದೆ.

Most Read Articles

Kannada
English summary
General Motors stops Talegaon manufacturing plant operations. Read in Kannada.
Story first published: Friday, December 25, 2020, 16:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X