ಕರೋನಾ ವೈರಸ್ ಭೀತಿ: ಜಿನೆವಾ ಆಟೋ ಪ್ರದರ್ಶನಕ್ಕೆ ಬಿತ್ತು ಬ್ರೇಕ್

ಕರೋನಾ ವೈರಸ್‌ನಿಂದಾಗಿ ಚೀನಾ ಮಾತ್ರವಲ್ಲದೆ ಇಡೀ ವಿಶ್ವ ಸಮುದಾಯವೇ ಆತಂಕಕ್ಕೆ ಸಿಲುಕಿದ್ದು, ಸಾಕಷ್ಟು ಮುನ್ನೆಚ್ಚರಿಕೆಯ ನಡುವೆಯೂ ವೈರಸ್ ಹರಡುವಿಕೆಯ ಪ್ರಮಾಣ ಮಾತ್ರ ಜೋರಾಗಿದೆ. ಹೀಗಿರುವಾಗ ಇದೇ ತಿಂಗಳು ನಡೆಯಬೇಕಿದ್ದ ಜಿನೆವಾ ಆಟೋ ಪ್ರದರ್ಶನವನ್ನು ಕೈ ಬಿಡಲು ನಿರ್ಧರಿಸಲಾಗಿದೆ.

ಕರೋನಾ ವೈರಸ್ ಭೀತಿ: ಜಿನೆವಾ ಆಟೋ ಪ್ರದರ್ಶನಕ್ಕೆ ಬಿತ್ತು ಬ್ರೇಕ್

ಸ್ವಿಜರ್ಲ್ಯಾಂಡ್‌ನಲ್ಲಿ ಪ್ರತಿ ವರ್ಷ ನಡೆಯುವ ಪ್ರತಿಷ್ಠಿತ ಜಿನೆವಾ ಆಟೋ ಪ್ರದರ್ಶನಕ್ಕೆ ಈ ಬಾರಿ ಸಿದ್ದತೆ ಮಾಡಿಕೊಳ್ಳತ್ತಿದ್ದ ಸಂದರ್ಭದಲ್ಲೇ ಕರೋನಾ ಭೀತಿ ಆವರಿಸಿದ್ದು, ಒಂದೇ ಜಾಗದಲ್ಲಿ ವಿವಿಧ ದೇಶದ ಸುಮಾರು 10 ಲಕ್ಷ ಜನ ಸೇರಬಹುದಾದ ವಿಶ್ವದ ಅತಿ ದೊಡ್ಡ ಮೋಟಾರ್ ಶೋ ಅನ್ನು ಸುರಕ್ಷತೆಯ ದೃಷ್ಠಿಯಿಂದ ಸ್ಥಗಿತಗೊಳಿಸಲಾಗಿದೆ. ಮಾರ್ಚ್ ಮೊದಲ ವಾರದಲ್ಲಿ ಆರಂಭವಾಗಬೇಕಿದ್ದ ಜಿನೆವಾ ಆಟೋ ಪ್ರದರ್ಶನಕ್ಕೆ ಈಗಾಗಲೇ ಸಾಕಷ್ಟು ಸಿದ್ದತೆ ಮಾಡಿಕೊಳ್ಳಲಾಗಿತ್ತಾದರೂ ಕೊನೆಯ ಕ್ಷಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡದಿರಲು ನಿರ್ಧರಿಸಲಾಗಿದೆ.

ಕರೋನಾ ವೈರಸ್ ಭೀತಿ: ಜಿನೆವಾ ಆಟೋ ಪ್ರದರ್ಶನಕ್ಕೆ ಬಿತ್ತು ಬ್ರೇಕ್

ಇನ್ನು ಕರೋನಾ ವೈರಸ್‌ ಅಟ್ಟಹಾಸವು ಚೀನಾದಲ್ಲಿ ಮಾತ್ರವಲ್ಲದೇ ವಿಶ್ವದ ಪ್ರಮುಖ ರಾಷ್ಟ್ರಗಳಿಗೂ ವ್ಯಾಪಿಸುತ್ತಿದ್ದು, ವೈರಸ್ ಪರಿಣಾಮದಿಂದಾಗಿ ಜನರ ಜೀವ ಮಾತ್ರವಲ್ಲದೇ ಆರ್ಥಿಕ ಕುಸಿತವು ಕೂಡಾ ತಳಮಟ್ಟಕ್ಕೆ ಕುಸಿಯುವಂತೆ ಮಾಡಿದೆ.

ಕರೋನಾ ವೈರಸ್ ಭೀತಿ: ಜಿನೆವಾ ಆಟೋ ಪ್ರದರ್ಶನಕ್ಕೆ ಬಿತ್ತು ಬ್ರೇಕ್

ಈಗಾಗಲೇ ಸಾವಿರಾರು ಜನರ ಜೀವವನ್ನು ಬಲಿಪಡೆದಿರುವ ಕರೋನಾ ವೈರಸ್‌‌ ಭೀತಿಯು ಚೀನಾವನ್ನು ಮಾತ್ರವಲ್ಲದೇ ಇಡೀ ವಿಶ್ವ ಸಮುದಾಯವನ್ನೇ ಆತಂಕಕ್ಕೆ ಈಡಾಗುವಂತೆ ಮಾಡಿದ್ದು, ವೈರಸ್ ತಡೆಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದರು ಸಾವಿನ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಕರೋನಾ ವೈರಸ್ ಭೀತಿ: ಜಿನೆವಾ ಆಟೋ ಪ್ರದರ್ಶನಕ್ಕೆ ಬಿತ್ತು ಬ್ರೇಕ್

ಇದರ ನಡುವೆ ಕರೋನಾ ವೈರಸ್ ಚೀನಿ ಆರ್ಥಿಕತೆ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದು, ಜೊತೆಗೆ ಆಟೋ ಉದ್ಯಮದ ಅಭಿವೃದ್ದಿಗೂ ಭಾರೀ ಹೊಡೆತ ನೀಡಿದೆ. ಕರೋನಾ ವೈರಸ್‌ನಿಂದಾಗಿ ಚೀನಾದಲ್ಲಿರುವ ಪ್ರಮುಖ ಆಟೋ ಉತ್ಪಾದನಾ ಘಟಕಗಳು ಹೊಸ ವಾಹನ ಉತ್ಪಾದನೆಯನ್ನೇ ಬಂದ್ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೊಸ ವಾಹನಗಳ ಮಾರಾಟವು ಕೇವಲ ಒಂದೇ ತಿಂಗಳಿನಲ್ಲಿ ಶೇ.18ರಿಂದ ಶೇ.20 ರಷ್ಟು ಇಳಿಕೆ ಕಂಡಿದೆ.

ಕರೋನಾ ವೈರಸ್ ಭೀತಿ: ಜಿನೆವಾ ಆಟೋ ಪ್ರದರ್ಶನಕ್ಕೆ ಬಿತ್ತು ಬ್ರೇಕ್

ಇದು ಕೇವಲ ಚೀನಾದಲ್ಲಿನ ಪರಿಸ್ಥಿತಿಯಲ್ಲ, ಚೀನಾದಿಂದ ಆಮದುಗೊಳ್ಳುವ ಆಟೋ ಬೀಡಿಭಾಗಗಳನ್ನು ನೆಚ್ಚಿಕೊಂಡಿರುವ ಭಾರತೀಯ ಆಟೋ ಉತ್ಪಾದನಾ ಸಂಸ್ಥೆಗಳ ಪರಿಸ್ಥಿತಿ ಕೂಡಾ ಶೋಚನಿಯವಾಗುತ್ತಿದೆ.

ಕರೋನಾ ವೈರಸ್ ಭೀತಿ: ಜಿನೆವಾ ಆಟೋ ಪ್ರದರ್ಶನಕ್ಕೆ ಬಿತ್ತು ಬ್ರೇಕ್

ವಿಶ್ವದ ಪ್ರಮುಖ ವಾಹನ ಉತ್ಪಾದನಾ ಸಂಸ್ಥೆಗಳು ಚೀನಿ ಮಾರುಕಟ್ಟೆಯಿಂದಲೇ ಬಿಡಿಭಾಗಗಳ ಆಮದು ನೆಚ್ಚಿಕೊಂಡಿದ್ದು, ಅದು ಇದೀಗ ಕುಂಠಿತವಾಗಿರುವುದು ಚೀನಾದಲ್ಲಿ ಮಾತ್ರವಲ್ಲದೇ ಭಾರತೀಯ ಆಟೋ ಉದ್ಯಮದ ಮೇಲೂ ದುಷ್ಪರಿಣಾಮ ಬೀರುತ್ತಿದೆ.

ಕರೋನಾ ವೈರಸ್ ಭೀತಿ: ಜಿನೆವಾ ಆಟೋ ಪ್ರದರ್ಶನಕ್ಕೆ ಬಿತ್ತು ಬ್ರೇಕ್

ನಿಗದಿತ ಅವಧಿಯೊಳಗೆ ಬಿಡಿಭಾಗಗಳ ಪೂರೈಕೆಯಿಲ್ಲದೆ ವಾಹನ ಉತ್ಪಾದನೆಯು ತಗ್ಗುತ್ತಿದ್ದು, ಗ್ರಾಹಕರಿಂದ ಬೇಡಿಕೆಯಿದ್ದರೂ ವಾಹನಗಳನ್ನು ಪೂರೈಕೆ ಮಾಡಲು ಸಾಧ್ಯವಾಗದೆ ಪರದಾಟುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಕರೋನಾ ವೈರಸ್ ಭೀತಿ: ಜಿನೆವಾ ಆಟೋ ಪ್ರದರ್ಶನಕ್ಕೆ ಬಿತ್ತು ಬ್ರೇಕ್

ಸದ್ಯ ಲಭ್ಯವಿರುವ ಸ್ಥಳೀಯ ಬಿಡಿಭಾಗಗಳಿಂದ ವಾಹನ ಉತ್ಪಾದನೆಯು ಮುಂದುವರಿದಿದ್ದು, ಪರಿಸ್ಥಿತಿ ಹೀಗೆ ಮುಂದುವರಿದಲ್ಲಿ ಭಾರತೀಯ ಆಟೋ ಉತ್ಪಾದನಾ ಸಂಸ್ಥೆಯು ಮತ್ತಷ್ಟು ನಷ್ಟ ಅನುಭವಿಸಬೇಕಾದ ಪರಿಸ್ಥಿತಿ ಬಂದೊಗಲಿದೆ.

ಕರೋನಾ ವೈರಸ್ ಭೀತಿ: ಜಿನೆವಾ ಆಟೋ ಪ್ರದರ್ಶನಕ್ಕೆ ಬಿತ್ತು ಬ್ರೇಕ್

ಇದರ ಜೊತೆಗೆ ಚೀನಿ ಅತಿ ದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾದ ಸೈಕ್(ಎಂಜಿ ಮೋಟಾರ್ ಮಾತೃಸಂಸ್ಥೆ), ಟೊಯೊಟಾ, ಫಾವ್, ಹೈಮಾ, ಗ್ರೇಟ್ ವಾಲ್ ಮೋಟಾರ್ಸ್, ಫೋಕ್ಸ್‌ವ್ಯಾಗನ್, ಜೀಪ್ ಮತ್ತು ಹವಾಲ್ ಕಾರುಗಳ ಉತ್ಪಾದನೆಯಲ್ಲಿ ಕುಂಠಿತವಾಗಿರುವುದಲ್ಲದೇ ಮಾರಾಟ ಪ್ರಕ್ರಿಯೆಯು ಸಹ ತೀವ್ರಗತಿಯಲ್ಲಿ ಕುಸಿತ ಕಾಣುತ್ತಿದೆ.

Most Read Articles

Kannada
English summary
2020 Geneva Motor Show Cancelled due to Corona Virus. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X