ಲಾಕ್‌ಡೌನ್ ಸಂಕಷ್ಟ: ವಾಹನ ದಾಖಲೆಗಳ ಮಾನ್ಯತಾ ಅವಧಿಯನ್ನು ವಿಸ್ತರಿಸಿದ ಕೇಂದ್ರ ಸರ್ಕಾರ

ಲಾಕ್‌ಡೌನ್‌ ಸಂಕಷ್ಟಕ್ಕೆ ಸಿಲುಕಿರುವ ದೇಶದ ಜನತೆಗೆ ಹಲವಾರು ವಿನಾಯ್ತಿ ಘೋಷಿಸಿರುವ ಕೇಂದ್ರ ಸರ್ಕಾರವು ಸಾರಿಗೆ ವಲಯಕ್ಕೂ ಹಲವಾರು ವಿನಾಯ್ತಿ ನೀಡಿದ್ದು, ಇದೀಗ ವಾಹನಗಳ ಅಗತ್ಯ ದಾಖಲೆಗಳ ಮಾನ್ಯತಾ ಅವಧಿಯನ್ನು ಹೆಚ್ಚಿಸಿದೆ.

ವಾಹನ ದಾಖಲೆಗಳ ಮಾನ್ಯತಾ ಅವಧಿಯನ್ನು ವಿಸ್ತರಿಸಿದ ಕೇಂದ್ರ ಸರ್ಕಾರ

ದೇಶಾದ್ಯಂತ ಕರೋನಾ ವೈರಸ್ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ವೈರಸ್ ತಡೆಗಾಗಿ ಲಾಕ್‌ಡೌನ್ ಅನ್ನು ಹಂತಹಂತವಾಗಿ ಮುಂದುವರಿಸಲಾಗುತ್ತಿದೆ. ಇದರಿಂದ ಸಂಕಷ್ಟಕ್ಕೆ ಸಿಲುಕಿರುವ ಜನಸಾಮಾನ್ಯರ ಅನುಕೂಲಕ್ಕಾಗಿ ಹಲವಾರು ತೆರಿಗೆ ಪಾವತಿಯ ಅವಧಿ ವಿನಾಯ್ತಿ ಘೋಷಿಸಿರುವ ಕೇಂದ್ರ ಸರ್ಕಾರವು ಇದೀಗ ವಾಹನಗಳ ಅಗತ್ಯ ದಾಖಲೆಗಳ ಮಾನ್ಯತಾ ಅವಧಿಯನ್ನು ಸಹ ಮುಂದುವರಿಸಿ ಹೊಸ ಆದೇಶ ನೀಡಿದೆ.

ವಾಹನ ದಾಖಲೆಗಳ ಮಾನ್ಯತಾ ಅವಧಿಯನ್ನು ವಿಸ್ತರಿಸಿದ ಕೇಂದ್ರ ಸರ್ಕಾರ

ಲಾಕ್‌ಡೌನ್ ಹಿನ್ನಲೆಯಲ್ಲಿ ಈ ಹಿಂದೆ ಮೇ 31ರ ತನಕ ವಾಹನ ದಾಖಲೆಗಳಿಗೆ ಮಾನ್ಯತಾ ಅವಧಿಯನ್ನು ಘೋಷಿಸಿದ್ದ ಕೇಂದ್ರ ಸರ್ಕಾರವು ಇದೀಗ ಲಾಕ್‌ಡೌನ್ ಮತ್ತೆ ಮುಂದುವರಿದಿರುವ ಕಾರಣ ಜುಲೈ 31ರ ವರೆಗೆ ಕಾಲಾವಕಾಶ ನೀಡಿದೆ.

ವಾಹನ ದಾಖಲೆಗಳ ಮಾನ್ಯತಾ ಅವಧಿಯನ್ನು ವಿಸ್ತರಿಸಿದ ಕೇಂದ್ರ ಸರ್ಕಾರ

ಫೆಬ್ರುವರಿ 29ರ ನಂತರ ಕೊನೆಗೊಳ್ಳಬೇಕಿದ್ದ ವಾಹನ ದಾಖಲೆಗಳ ಮಾನ್ಯತಾ ಅವಧಿಯು ಜೂನ್ 30ರ ತನಕ ಅನ್ವಯವಾಗಲಿದ್ದು, ಮಾರ್ಚ್ ಮತ್ತು ಅವಧಿಯಲ್ಲಿ ಕೊನೆಗೊಳ್ಳಬೇಕಿದ್ದ ವಾಹನ ದಾಖಲೆಗಳ ಮಾನ್ಯತಾ ಅವಧಿಯು ಜುಲೈ 31ರ ಅನ್ವಯವಾಗುತ್ತದೆ.

ವಾಹನ ದಾಖಲೆಗಳ ಮಾನ್ಯತಾ ಅವಧಿಯನ್ನು ವಿಸ್ತರಿಸಿದ ಕೇಂದ್ರ ಸರ್ಕಾರ

ಲಾಕ್‌ಡೌನ್ ಅವಧಿಯಲ್ಲಿ ಮುಕ್ತಾಯಗೊಂಡ ವಾಹನ ದಾಖಲೆಗಳ ನವೀಕರಣಕ್ಕೆ ಯಾವುದೇ ಹೆಚ್ಚುವರಿ ಮೊತ್ತ ವಿಧಿಸುವುದಿಲ್ಲ ಎಂಬುವುದನ್ನು ಸ್ಪಷ್ಟಪಡಿಸಿರುವ ಕೇಂದ್ರ ಸಾರಿಗೆ ಇಲಾಖೆಯು ವಾಹನ ಸವಾರರಿಗೆ ಸಿಹಿಸುದ್ದಿ ನೀಡಿದೆ.

MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ವಾಹನ ದಾಖಲೆಗಳ ಮಾನ್ಯತಾ ಅವಧಿಯನ್ನು ವಿಸ್ತರಿಸಿದ ಕೇಂದ್ರ ಸರ್ಕಾರ

ಹೀಗಾಗಿ ಲಾಕ್‌ಡೌನ್ ಸಂದರ್ಭದಲ್ಲಿ ಮಾನ್ಯತೆ ಮುಕ್ತಾಯಗೊಂಡಿದ್ದ ಆರ್‌ಸಿ(ನೋಂದಣಿ ಪ್ರಮಾಣಪತ್ರ), ಡಿಎಲ್(ಚಾಲನಾ ಪ್ರಮಾಣಪತ್ರ) ಮತ್ತು ಎಫ್‌ಸಿ(ಫಿಟ್‌ನೆಸ್ ಪ್ರಮಾಣಪತ್ರ)ಗಳ ಅವಧಿಯು ಲಾಕ್‌ಡೌನ್ ಅವಧಿಯ ಆಧಾರದ ಮೇಲೆ ಜೂನ್ 30 ಮತ್ತು ಜುಲೈ 31ರ ತನಕ ಮಾನ್ಯತೆ ಪಡೆದುಕೊಂಡಿರಲಿವೆ.

ವಾಹನ ದಾಖಲೆಗಳ ಮಾನ್ಯತಾ ಅವಧಿಯನ್ನು ವಿಸ್ತರಿಸಿದ ಕೇಂದ್ರ ಸರ್ಕಾರ

ಲಾಕ್‌ಡೌನ್ ಅವಧಿಯನ್ನು ಹೊರತುಪಡಿಸಿ ಸಾಮಾನ್ಯ ದಿನಗಳಲ್ಲಿ ಅಗತ್ಯ ದಾಖಲೆಗಳ ನವೀಕರಣ ಮಾಡದ ವಾಹನ ಮಾಲೀಕರಿಗೆ ಹೆಚ್ಚುವರಿ ಶುಲ್ಕದ ಹೊರೆ ಬೀಳಲಿದ್ದು, ಲಾಕ್‌ಡೌನ್ ಸಂಕಷ್ಟದಲ್ಲಿ ಸಿಲುಕಿದ ವಾಹನ ಮಾಲೀಕರಿಗೆ ಮಾತ್ರವೇ ಕೇಂದ್ರ ಸರ್ಕಾರ ಹೊಸ ವಿನಾಯ್ತಿ ಅನ್ವಯವಾಗಲಿದೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ವಾಹನ ದಾಖಲೆಗಳ ಮಾನ್ಯತಾ ಅವಧಿಯನ್ನು ವಿಸ್ತರಿಸಿದ ಕೇಂದ್ರ ಸರ್ಕಾರ

ಇನ್ನು ಕರೋನಾ ವೈರಸ್ ಹರಡುವಿಕೆಯನ್ನು ತಡೆಯಲು ಹಲವಾರು ಕಠಿಣ ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರವು ಸಂಕಷ್ಟ ಸಮಯದಲ್ಲೂ ವಾಣಿಜ್ಯ ಚಟುವಟಿಕೆಗಳಿಗೆ ವಿನಾಯ್ತಿ ನೀಡಿದ್ದು, ಅಗತ್ಯ ದಾಖಲೆಗಳ ದಾಖಲೆಗಳಿದ್ದರೂ ಮಾನ್ಯತೆ ಇಲ್ಲದಿರುವ ವಾಹನ ದಾಖಲೆಗಳಿಗೆ ಹೆಚ್ಚುವರಿ ಅವಧಿ ವಿಸ್ತರಿಸಿರುವುದು ಸ್ವಾಗತಾರ್ಹ.

Most Read Articles

Kannada
English summary
COVID-19 Lockdown: Government Extends Vehicle Document Validity Period Till 31st Of July. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X