ಕರೋನಾ ವೈರಸ್ ಎಫೆಕ್ಟ್: ಹೊಸ ಸಾರಿಗೆ ನಿಯಮ ಮುಂದೂಡಿಕೆ ಸಾಧ್ಯತೆ

ಕೇಂದ್ರ ಸಾರಿಗೆ ಇಲಾಖೆಯು ವಾಹನ ತಯಾರಕ ಕಂಪನಿಗಳ ಅರ್ಧ ಡಜನ್‌ಗೂ ಹೆಚ್ಚು ಸಲಹೆಗಳನ್ನು ಸ್ವೀಕರಿಸಿದೆ. ವಾಹನ ತಯಾರಕ ಕಂಪನಿಗಳು ಹೊಸ ವಾಹನ ಸುರಕ್ಷತಾ ಮಾನದಂಡಗಳನ್ನು ಮುಂದೂಡುವಂತೆ ಮನವಿ ಮಾಡಿವೆ.

ಕರೋನಾ ವೈರಸ್ ಎಫೆಕ್ಟ್: ಹೊಸ ಸಾರಿಗೆ ನಿಯಮ ಮುಂದೂಡಿಕೆ ಸಾಧ್ಯತೆ

ಎಲ್ಲಾ ಹೊಸ ಕಾರುಗಳಲ್ಲಿ ಪಾದಚಾರಿಗಳಿಗಾಗಿ ಸುರಕ್ಷತಾ ಫೀಚರ್ ಹಾಗೂ ರಿವರ್ಸ್ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಸಾರಿಗೆ ಇಲಾಖೆಯು ಆದೇಶಿಸಿದೆ. ಕರೋನಾ ವೈರಸ್ ಆರ್ಭಟದಿಂದ ಸಂಕಷ್ಟಕ್ಕೆ ಸಿಲುಕಿರುವ ಆಟೋ ಮೊಬೈಲ್ ಉದ್ಯಮಕ್ಕೆ ಹೊಸ ಸುರಕ್ಷತಾ ಮಾನದಂಡಗಳನ್ನು ಜಾರಿಗೆ ತರಲು ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ವಾಹನ ತಯಾರಕ ಕಂಪನಿಗಳು ಹೇಳಿವೆ.

ಕರೋನಾ ವೈರಸ್ ಎಫೆಕ್ಟ್: ಹೊಸ ಸಾರಿಗೆ ನಿಯಮ ಮುಂದೂಡಿಕೆ ಸಾಧ್ಯತೆ

ಆಟೋಮೊಬೈಲ್ ಅಸೋಸಿಯೇಷನ್ ಪ್ರಕಾರ ​​ಈ ಹೊಸ ಸುರಕ್ಷತಾ ಮಾನದಂಡಗಳನ್ನು ಅಳವಡಿಸುವ ವೆಚ್ಚವು ಹೆಚ್ಚಳವಾಗುವ ಕಾರಣಕ್ಕೆ ವಾಹನಗಳ ಬೇಡಿಕೆ ಕುಸಿಯಬಹುದು. ಆಟೋಮೊಬೈಲ್ ಮಾರುಕಟ್ಟೆ ಚೇತರಿಸಿಕೊಳ್ಳುವವರೆಗೆ ಹೊಸ ನಿಯಮಗಳನ್ನು ಜಾರಿಗೊಳಿಸದಂತೆ ಆಟೋಮೊಬೈಲ್ ಅಸೋಸಿಯೇಷನ್ ಒತ್ತಾಯಿಸಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕರೋನಾ ವೈರಸ್ ಎಫೆಕ್ಟ್: ಹೊಸ ಸಾರಿಗೆ ನಿಯಮ ಮುಂದೂಡಿಕೆ ಸಾಧ್ಯತೆ

ಮೂಲಗಳ ಪ್ರಕಾರ, ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರಿಗೆ ಇರುವ ಫುಟ್ ರೆಸ್ಟ್, ಸ್ಯಾರಿ ಗಾರ್ಡ್ ಫೀಚರ್‌ಗಳು ಇನ್ನು ಮುಂದೆ ಕಡ್ಡಾಯವಾಗಿರುವುದಿಲ್ಲ. ಬಸ್ಸುಗಳು ಹಾಗೂ ಟ್ರಕ್‌ಗಳಲ್ಲಿರುವ ಬೆಂಕಿ ಪತ್ತೆ ಹಚ್ಚುವ ವ್ಯವಸ್ಥೆಯನ್ನು ಸಹ ತೆಗೆದುಹಾಕಲಾಗುತ್ತದೆ. ಸಾರಿಗೆ ಇಲಾಖೆಯು ವಾಹನ ತಯಾರಕ ಕಂಪನಿಗಳಿಗೆ ನೋಟಿಸ್ ನೀಡಿ ಈ ಮಾಹಿತಿ ನೀಡಲಿದೆ.

ಕರೋನಾ ವೈರಸ್ ಎಫೆಕ್ಟ್: ಹೊಸ ಸಾರಿಗೆ ನಿಯಮ ಮುಂದೂಡಿಕೆ ಸಾಧ್ಯತೆ

ಸಾರಿಗೆ ಇಲಾಖೆಯು ವಾಹನ ತಯಾರಕರು ಬಿಎಸ್ 6 ವಾಹನಗಳನ್ನು ಉತ್ಪಾದಿಸಲು ಅಗತ್ಯವಿರುವ ರೋಡ್ ಎಲಿಜಿಬಿಲಿಟಿ ಸರ್ಟಿಫಿಕೇಟ್ ನೀಡುವಿಕೆಯನ್ನು ಸಹ ಮುಂದೂಡಲಿದೆ. ಪಾದಚಾರಿಗಳ ಸುರಕ್ಷತಾ ಫೀಚರ್ ತೆಗೆದು ಹಾಕುವಂತೆ ಸಾರಿಗೆ ಇಲಾಖೆಯು ಅನುಮತಿ ನೀಡಿಲ್ಲ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಕರೋನಾ ವೈರಸ್ ಎಫೆಕ್ಟ್: ಹೊಸ ಸಾರಿಗೆ ನಿಯಮ ಮುಂದೂಡಿಕೆ ಸಾಧ್ಯತೆ

ಈ ಮಾನದಂಡಗಳ ಬಗ್ಗೆ 2015ರಲ್ಲಿಯೇ ತಿಳಿಸಲಾಗಿದ್ದು, 2018ರಿಂದ ಬಿಡುಗಡೆಯಾಗುತ್ತಿರುವ ಎಲ್ಲಾ ಹೊಸ ವಾಹನಗಳಲ್ಲಿ ಅಳವಡಿಸಲಾಗಿದೆ. ಸದ್ಯ ಅಸ್ತಿತ್ವದಲ್ಲಿರುವ ವಾಹನಗಳು ಈ ವರ್ಷದ ಅಕ್ಟೋಬರ್‌ನಿಂದ ಈ ನಿಯಮಗಳನ್ನು ಪಾಲಿಸಬೇಕಾಗಿದೆ.

ಕರೋನಾ ವೈರಸ್ ಎಫೆಕ್ಟ್: ಹೊಸ ಸಾರಿಗೆ ನಿಯಮ ಮುಂದೂಡಿಕೆ ಸಾಧ್ಯತೆ

ಇತ್ತೀಚಿಗೆ ವಾಹನ ಉದ್ಯಮದ ಮುಖ್ಯಸ್ಥರೊಂದಿಗೆ ಸಂವಾದ ನಡೆಸಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿರವರು ಹೊಸ ನಿಯಮಗಳ ಗಡುವನ್ನು ರದ್ದುಗೊಳಿಸುವ ಬೇಡಿಕೆಯನ್ನು ಪರಿಗಣಿಸುವುದಾಗಿ ಭರವಸೆ ನೀಡಿದ್ದರು. ಸಾರಿಗೆ ಇಲಾಖೆಯು ಕೋವಿಡ್ -19 ಆರ್ಭಟದ ನಡುವೆ ಆಟೋ ಮೊಬೈಲ್ ಉದ್ಯಮದ ಬೆಂಬಲಕ್ಕಾಗಿ ಶೀಘ್ರದಲ್ಲೇ ವಾಹನ ಸ್ಕ್ರ್ಯಾಪಿಂಗ್ ನೀತಿಯನ್ನು ಜಾರಿಗೆ ತರಲಿದೆ ಎಂದು ಗಡ್ಕರಿರವರು ಹೇಳಿದ್ದರು.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕರೋನಾ ವೈರಸ್ ಎಫೆಕ್ಟ್: ಹೊಸ ಸಾರಿಗೆ ನಿಯಮ ಮುಂದೂಡಿಕೆ ಸಾಧ್ಯತೆ

ಆರ್ಥಿಕ ಹಿಂಜರಿತದಿಂದ ಚೇತರಿಸಿಕೊಳ್ಳಲು ಆಟೋ ಮೊಬೈಲ್ ಉದ್ಯಮವು ವಿದೇಶಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಬೇಕೆಂದು ಸಲಹೆ ನೀಡಿದ್ದಾರೆ. ಕರೋನಾ ವೈರಸ್ ಬಿಕ್ಕಟ್ಟನ್ನು ಜಾಗತಿಕ ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಸ್ಥಾಪಿಸುವ ಅವಕಾಶವನ್ನಾಗಿ ಮಾಡಿಕೊಳ್ಳುವಂತೆ ಹೂಡಿಕೆದಾರರಿಗೆ ಹಾಗೂ ಉದ್ಯಮಗಳಿಗೆ ಸಚಿವರು ಕರೆ ನೀಡಿದರು.

Most Read Articles

Kannada
English summary
Government might postpone implementation of new automotive regulations. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X