ಆಟೋ ಎಕ್ಸ್‌ಪೋ 2020: ಐದಕ್ಕೂ ಹೆಚ್ಚು ಹೊಸ ಕಾರುಗಳನ್ನು ಪ್ರದರ್ಶನಗೊಳಿಸಲಿದೆ ಗ್ರೇಟ್ ವಾಲ್ ಮೋಟಾರ್ಸ್

ದೆಹಲಿಯಲ್ಲಿ ಆರಂಭವಾಗಲಿರುವ 2020ರ ಆಟೋ ಎಕ್ಸ್‌ಪೋ ಆರಂಭಕ್ಕೆ ಕೇವಲ ಒಂದು ವಾರ ಮಾತ್ರ ಬಾಕಿಯಿದ್ದು, ಫೆ.7ರಿಂದ ನಡೆಯಲಿರುವ ಆಟೋ ಎಕ್ಸ್‌ಪೋದಲ್ಲಿ ಚೀನಿ ಮೂಲದ ಗ್ರೇಟ್ ವಾಲ್ ಮೋಟಾರ್ಸ್ ಸಂಸ್ಥೆಯು ತನ್ನ ಬಹುನೀರಿಕ್ಷಿತ ಕಾರು ಉತ್ಪನ್ನಗಳೊಂದಿಗೆ ಅಧಿಕೃತವಾಗಿ ಭಾಗಿಯಾಗುವ ಮಾಹಿತಿ ನೀಡಿದೆ.

ಆಟೋ ಎಕ್ಸ್‌ಪೋ 2020: ಐದಕ್ಕೂ ಹೆಚ್ಚು ಹೊಸ ಕಾರುಗಳನ್ನು ಪ್ರದರ್ಶನಗೊಳಿಸಲಿದೆ ಗ್ರೇಟ್ ವಾಲ್ ಮೋಟಾರ್ಸ್

ಭಾರತದಲ್ಲಿ ಕಳೆದ ಒಂದು ವರ್ಷದಿಂದ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ನಷ್ಟದ ಸುಳಿಯಲ್ಲಿ ಸಿಲುಕಿದ್ದರೂ ಸಹ ಇತ್ತೀಚೆಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಕಿಯಾ ಮೋಟಾರ್ಸ್ ಮತ್ತು ಎಂಜಿ ಮೋಟಾರ್ ಸಂಸ್ಥೆಗಳು ನೀರಿಕ್ಷೆಗೂ ಮೀರಿ ಹೊಸ ಕಾರುಗಳನ್ನು ಮಾರಾಟ ಮಾಡಿವೆ. ಇದೀಗ ಇದೇ ಹಾದಿಯಲ್ಲಿರುವ ಚೀನಾದ ಮತ್ತೊಂದು ಜನಪ್ರಿಯ ಗ್ರೇಟ್ ವಾಲ್ ಮೋಟಾರ್ಸ್ ಕಾರು ಉತ್ಪಾದನಾ ಸಂಸ್ಥೆಯು ಸಹ ಭಾರತದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ತವಕದಲ್ಲಿದೆ.

ಆಟೋ ಎಕ್ಸ್‌ಪೋ 2020: ಐದಕ್ಕೂ ಹೆಚ್ಚು ಹೊಸ ಕಾರುಗಳನ್ನು ಪ್ರದರ್ಶನಗೊಳಿಸಲಿದೆ ಗ್ರೇಟ್ ವಾಲ್ ಮೋಟಾರ್ಸ್

ಚೀನಾ ಮಾರುಕಟ್ಟೆಯಲ್ಲಿ ಸದ್ಯ ಭಾರೀ ಜನಪ್ರಿಯತೆ ಹೊಂದಿರುವ ಗ್ರೇಟ್ ವಾಲ್ ಮೋಟಾರ್ಸ್ ಸಂಸ್ಥೆಯು ಭಾರತದಲ್ಲಿ ಹೊಸ ಅಧ್ಯಾಯ ಶುರು ಮಾಡಲು ಸಜ್ಜಾಗುತ್ತಿದ್ದು, ಅಧಿಕೃತ ಟ್ವಿಟರ್ ಖಾತೆ ಮೂಲಕ ಆಟೋ ಎಕ್ಸ್‌ಪೋದಲ್ಲಿ ಭಾಗಿಯಾಗುತ್ತಿರುವುದಾಗಿ ಹೇಳಿಕೊಂಡಿದೆ.

ಆಟೋ ಎಕ್ಸ್‌ಪೋ 2020: ಐದಕ್ಕೂ ಹೆಚ್ಚು ಹೊಸ ಕಾರುಗಳನ್ನು ಪ್ರದರ್ಶನಗೊಳಿಸಲಿದೆ ಗ್ರೇಟ್ ವಾಲ್ ಮೋಟಾರ್ಸ್

ಚೀನಿ ಮಾರುಕಟ್ಟೆಯಲ್ಲಿ ತನ್ನ ಅಂಗಸಂಸ್ಥೆಯಾಗಿರುವ ಹವಾಲ್ ಕಾರು ಉತ್ಪಾದನಾ ಸಂಸ್ಥೆಯ ಜೊತೆಗೂಡಿ ಭಾರತದಲ್ಲಿ ಕಾರು ಮಾರಾಟವನ್ನು ಆರಂಭಿಸುತ್ತಿರುವ ಗ್ರೇಟ್ ವಾಲ್ ಮೋಟಾರ್ಸ್ ಸಂಸ್ಥೆಯು ಭಾರತೀಯ ಗ್ರಾಹಕರ ಬೇಡಿಕೆಯೆಂತೆ ಹತ್ತಕ್ಕೂ ಹೆಚ್ಚು ಹೊಸ ಮಾದರಿಯ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿವೆ.

ಆಟೋ ಎಕ್ಸ್‌ಪೋ 2020: ಐದಕ್ಕೂ ಹೆಚ್ಚು ಹೊಸ ಕಾರುಗಳನ್ನು ಪ್ರದರ್ಶನಗೊಳಿಸಲಿದೆ ಗ್ರೇಟ್ ವಾಲ್ ಮೋಟಾರ್ಸ್

ಹವಾಲ್ ಹೆಚ್6 ಎನ್ನುವ ಮಧ್ಯಮ ಗಾತ್ರದ ಎಸ್‌ಯುವಿ ಮಾದರಿಯು ಭಾರತದಲ್ಲಿ ಮೊದಲ ಹಂತದಲ್ಲಿ ಬಿಡುಗಡೆಯಾಗುವ ಸುಳಿವು ನೀಡಿದ್ದು, ಎಂಜಿ ಹೆಕ್ಟರ್, ಜೀಪ್ ಕಂಪಾಸ್, ಕಿಯಾ ಸೆಲ್ಟೊಸ್, ಮಹೀಂದ್ರಾ ಎಕ್ಸ್‌ಯುವಿ500 ಮತ್ತು ಹ್ಯುಂಡೈ ಕ್ರೆಟಾ ಕಾರುಗಳಿಗೆ ಇದು ಪೈಪೋಟಿಯಾಗಿದೆ. ಇದರೊಂದಿಗೆ ಸೆಡಾನ್, ಎಂಪಿವಿ, ಹ್ಯಾಚ್‌ಬ್ಯಾಕ್ ಮತ್ತು ಎಲೆಕ್ಟ್ರಿಕ್ ಕಾರು ಮಾದರಿಗಳು ಸಹ ಸೇರಿದ್ದು, ಕೈಗೆಟುಕುವ ಬೆಲೆಗಳಲ್ಲಿ ಹೊಸ ಕಾರು ಉತ್ಪನ್ನಗಳು ಬಿಡುಗಡೆಗೊಳ್ಳಲಿವೆ.

ಆಟೋ ಎಕ್ಸ್‌ಪೋ 2020: ಐದಕ್ಕೂ ಹೆಚ್ಚು ಹೊಸ ಕಾರುಗಳನ್ನು ಪ್ರದರ್ಶನಗೊಳಿಸಲಿದೆ ಗ್ರೇಟ್ ವಾಲ್ ಮೋಟಾರ್ಸ್

ಇನ್ನು ಗ್ರೇಟ್ ವಾಲ್ ಸಂಸ್ಥೆಯ ಕಾರು ಉತ್ಪನ್ನಗಳ ಬಗೆಗೆ ಹೇಳುವುದಾದರೇ, ಮಧ್ಯಮ ಗಾತ್ರದ ಎಸ್‌ಯುವಿ ಕಾರು ಮಾರಾಟದಲ್ಲಿ ಭಾರೀ ಜನಪ್ರಿಯತೆ ಹೊಂದಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಅಭಿವೃದ್ದಿಗೊಳಿಸಲಿದೆ.

ಆಟೋ ಎಕ್ಸ್‌ಪೋ 2020: ಐದಕ್ಕೂ ಹೆಚ್ಚು ಹೊಸ ಕಾರುಗಳನ್ನು ಪ್ರದರ್ಶನಗೊಳಿಸಲಿದೆ ಗ್ರೇಟ್ ವಾಲ್ ಮೋಟಾರ್ಸ್

ಮೊದಲ ಹಂತವಾಗಿ ಭಾರತದಲ್ಲಿ ವಾರ್ಷಿಕವಾಗಿ 2 ಲಕ್ಷ ಕಾರುಗಳ ಉತ್ಪಾದನಾ ಸಾಮರ್ಥ್ಯದ ಘಟಕವನ್ನು ತೆರೆಯಲು ಯೋಜಿಸಿರುವ ಗ್ರೇಟ್ ವಾಲ್ ಮೋಟಾರ್ಸ್ ಸಂಸ್ಥೆಯು, ಚೀನಾದಲ್ಲಿ ಪ್ರತಿ ಸ್ಪರ್ಧಿ ಕಾರು ಸಂಸ್ಥೆಯಾಗಿರುವ ಸೈಕ್‌(ಎಂಜಿ ಮೋಟಾರ್ ಮಾತೃ ಸಂಸ್ಥೆ)ಗೆ ಪೈಪೋಟಿ ನೀಡುತ್ತಿರುವಂತೆ ಭಾರತದಲ್ಲೂ ಎಂಜಿಗೆ ಪೈಪೋಟಿ ನೀಡಲು ಭಾರೀ ಪ್ರಮಾಣದ ಹೂಡಿಕೆ ಮಾಡಿದೆ.

ಆಟೋ ಎಕ್ಸ್‌ಪೋ 2020: ಐದಕ್ಕೂ ಹೆಚ್ಚು ಹೊಸ ಕಾರುಗಳನ್ನು ಪ್ರದರ್ಶನಗೊಳಿಸಲಿದೆ ಗ್ರೇಟ್ ವಾಲ್ ಮೋಟಾರ್ಸ್

ಹೊಸ ಕಾರು ಉತ್ಪಾದನಾ ಘಟಕ ನಿರ್ಮಾಣಕ್ಕಾಗಿ ಕಳೆದ ವರ್ಷ ಪುಣೆ ಬಳಿ 500 ಎಕರೆ ಭೂಮಿ ಖರೀದಿಗೆ ಮುಂದಾಗಿದ್ದ ಗ್ರೇಟ್ ವಾಲ್ ಮೋಟಾರ್ಸ್ ಸಂಸ್ಥೆಯು ಕೊನೆಯ ಹಂತದಲ್ಲಿ ತೆಲಂಗಾಣದಲ್ಲಿರುವ ಜನರಲ್ ಮೋಟಾರ್ಸ್ ಸಂಸ್ಥೆಯ ಹಳೆಯ ಕಾರು ಉತ್ಪಾದನಾ ಘಟಕವನ್ನೇ ಖರೀದಿ ಮಾಡಿ ಉನ್ನತೀಕರಿಸುತ್ತಿದೆ.

ಆಟೋ ಎಕ್ಸ್‌ಪೋ 2020: ಐದಕ್ಕೂ ಹೆಚ್ಚು ಹೊಸ ಕಾರುಗಳನ್ನು ಪ್ರದರ್ಶನಗೊಳಿಸಲಿದೆ ಗ್ರೇಟ್ ವಾಲ್ ಮೋಟಾರ್ಸ್

ಆಟೋ ಎಕ್ಸ್‌ಪೋದಲ್ಲಿ ಹೊಸ ಕಾರುಗಳು ಭಾಗಿಯಾದ ನಂತರ ಅಧಿಕೃತ ಕಾರುಗಳ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳಿಗೆ ಚಾಲನೆ ದೊರೆಯಲಿದ್ದು, 2021ರ ವೇಳೆಗೆ ಗ್ರೇಟ್ ವಾಲ್ ಮೋಟಾರ್ಸ್ ಹೊಸ ಕಾರುಗಳು ಅಧಿಕೃತವಾಗಿ ಖರೀದಿಗೆ ಲಭ್ಯವಿರಲಿವೆ.

ಆಟೋ ಎಕ್ಸ್‌ಪೋ 2020: ಐದಕ್ಕೂ ಹೆಚ್ಚು ಹೊಸ ಕಾರುಗಳನ್ನು ಪ್ರದರ್ಶನಗೊಳಿಸಲಿದೆ ಗ್ರೇಟ್ ವಾಲ್ ಮೋಟಾರ್ಸ್

ಇಲ್ಲದೇ ಭಾರತದಿಂದಲೇ ಹೊಸ ಕಾರುಗಳನ್ನು ರಫ್ತು ಮಾಡಲು ಉದ್ದೇಶಿಸಿರುವ ಗ್ರೇಟ್ ವಾಲ್ ಸಂಸ್ಥೆಯು ಇಂಡೋನೇಷ್ಯಾ, ಆಸ್ಟ್ರೇಲಿಯಾ ಮಾರುಕಟ್ಟೆಗಳಿಗೆ ರಫ್ತು ಮಾಡುವ ಯೋಜನೆಯಲ್ಲಿದ್ದು, ಭಾರತದಲ್ಲಿ ತನ್ನ ಹೊಸ ಕಾರುಗಳ ಮಾರಾಟ ಸರಣಿಯನ್ನು ಪರಿಚಯಿಸಲು ಬರೋಬ್ಬರಿ ರೂ. 7 ಸಾವಿರ ಕೋಟಿ ಬಂಡವಾಳವನ್ನು ಹಂತಹಂತವಾಗಿ ಹೂಡಿಕೆ ಮಾಡಲಿದೆ.

Most Read Articles

Kannada
English summary
Great Wall Motors Confirms Debut At Auto Expo. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X