400 ಕಿ.ಮೀಗೂ ಹೆಚ್ಚು ಮೈಲೇಜ್ ನೀಡಲಿದೆ ಈ ಎಲೆಕ್ಟ್ರಿಕ್ ಕಾರು

ಚೀನಾ ಮೂಲದ ಗ್ರೇಟ್ ವಾಲ್ ಮೋಟಾರ್ಸ್ ತನ್ನ ಹೊಸ ಓರಾ ಆರ್ 2 ಎಲೆಕ್ಟ್ರಿಕ್ ಕಾರ್ ಅನ್ನು ಅನಾವರಣಗೊಳಿಸಿದೆ. ಓರಾ ಆರ್ 2 ಎಲೆಕ್ಟ್ರಿಕ್ ಕಾರಿನ ಎಂಜಿನ್ ಭಾಗಗಳ ಬಗ್ಗೆ ಗ್ರೇಟ್ ವಾಲ್ ಮೋಟಾರ್ಸ್ ಯಾವುದೇ ಮಾಹಿತಿಯನ್ನು ಬಿಡುಗಡೆಗೊಳಿಸಿಲ್ಲ.

400 ಕಿ.ಮೀಗೂ ಹೆಚ್ಚು ಮೈಲೇಜ್ ನೀಡಲಿದೆ ಈ ಎಲೆಕ್ಟ್ರಿಕ್ ಕಾರು

ಈ ಎಲೆಕ್ಟ್ರಿಕ್ ಕಾರು ಚೀನಾ ಮಾರುಕಟ್ಟೆಯಲ್ಲಿ ಇದೇ ತಿಂಗಳು ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಗ್ರೇಟ್ ವಾಲ್ ಮೋಟಾರ್ಸ್ ಕಂಪನಿಯು ಈ ವರ್ಷದ ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದಿದ್ದ 2020ರ ಆಟೋ ಎಕ್ಸ್‌ಪೋದಲ್ಲಿ ವಿಶ್ವದ ಅಗ್ಗದ ಎಲೆಕ್ಟ್ರಿಕ್ ಕಾರ್ ಎಂದು ಹೇಳಲಾದ ಆರ್ 1 ಮಾದರಿಯನ್ನು ಅನಾವರಣಗೊಳಿಸಿತ್ತು.

400 ಕಿ.ಮೀಗೂ ಹೆಚ್ಚು ಮೈಲೇಜ್ ನೀಡಲಿದೆ ಈ ಎಲೆಕ್ಟ್ರಿಕ್ ಕಾರು

ಆರ್ 2 ಮಾದರಿಯ ಕಾರ್ ಅನ್ನು ಆರ್ 1 ಮಾದರಿಯ ಎಲೆಕ್ಟ್ರಿಕ್ ಕಾರಿನ ಪ್ಲಾಟ್‌ಫಾರಂ ಮೇಲೆ ಅಭಿವೃದ್ಧಿಪಡಿಸಲಾಗಿದೆ. ಓರಾ ಆರ್ 2 ಎಲೆಕ್ಟ್ರಿಕ್ ಕಾರು, ಆರ್ 1 ಎಲೆಕ್ಟ್ರಿಕ್ ಕಾರಿಗಿಂತ 15 ಎಂಎಂ ಹೆಚ್ಚು ಅಂದರೆ 2490 ಎಂಎಂ ವ್ಹೀಲ್ ಬೇಸ್ ಹೊಂದಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

400 ಕಿ.ಮೀಗೂ ಹೆಚ್ಚು ಮೈಲೇಜ್ ನೀಡಲಿದೆ ಈ ಎಲೆಕ್ಟ್ರಿಕ್ ಕಾರು

ಆರ್ 1 ಮಾದರಿಯಲ್ಲಿರುವ ಎಲೆಕ್ಟ್ರಿಕ್ ಮೋಟರ್, 48 ಬಿಹೆಚ್‌ಪಿ ಪವರ್ ಉತ್ಪಾದಿಸಿದರೆ, ಆರ್ 2 ಮಾದರಿಯಲ್ಲಿರುವ ಎಲೆಕ್ಟ್ರಿಕ್ ಮೋಟರ್ 63 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಓರಾ ಆರ್ 2 ಕಾರಿನಲ್ಲಿರುವ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ ಈ ಎಲೆಕ್ಟ್ರಿಕ್ ಕಾರು 401 ಕಿ.ಮೀಗಳವರೆಗೆ ಚಲಿಸುತ್ತದೆ.

400 ಕಿ.ಮೀಗೂ ಹೆಚ್ಚು ಮೈಲೇಜ್ ನೀಡಲಿದೆ ಈ ಎಲೆಕ್ಟ್ರಿಕ್ ಕಾರು

ಚೀನಾ ಮಾರುಕಟ್ಟೆಯಲ್ಲಿ ಆರ್ 1 ಎಲೆಕ್ಟ್ರಿಕ್ ಕಾರ್ ಅನ್ನು ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. 28.5 ಕಿ.ವ್ಯಾ ಬ್ಯಾಟರಿ ಹೊಂದಿರುವ ಮಾದರಿಯು 300 ಕಿ.ಮೀಗಳವರೆಗೆ ಚಲಿಸಿದರೆ, 33 ಕಿ.ವ್ಯಾ ಬ್ಯಾಟರಿ ಹೊಂದಿರುವ ಮಾದರಿಯು 350 ಕಿ.ಮೀಗಳವರೆಗೆ ಚಲಿಸುತ್ತದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

400 ಕಿ.ಮೀಗೂ ಹೆಚ್ಚು ಮೈಲೇಜ್ ನೀಡಲಿದೆ ಈ ಎಲೆಕ್ಟ್ರಿಕ್ ಕಾರು

ಬ್ಯಾಟರಿಯನ್ನು ಚಾರ್ಜ್ ಮಾಡಲು ಚಾರ್ಜಿಂಗ್ ಹೋಲ್ ಗಳನ್ನು ಕಾರಿನ ಮುಂಭಾಗದ ಎಡಭಾಗದಲ್ಲಿ ನೀಡಲಾಗಿದೆ. ವಿಂಡ್‌ಸ್ಕ್ರೀನ್ ಅನ್ನು ಕಾರಿನ ಹಿಂಭಾಗದಲ್ಲಿ ವಿಂಡ್‌ಶೀಲ್ಡ್ ಟೇಲ್‌ಗೇಟ್‌ನಂತೆ ನೀಡಲಾಗಿದೆ. ಹಿಂಭಾಗದಲ್ಲಿರುವ ಟೇಲ್‌ಲ್ಯಾಂಪ್‌ಗಳು ಈ ರೇರ್ ಸ್ಕ್ರೀನ್ ನ ಬಹುಭಾಗವನ್ನು ಆಕ್ರಮಿಸುತ್ತವೆ.

400 ಕಿ.ಮೀಗೂ ಹೆಚ್ಚು ಮೈಲೇಜ್ ನೀಡಲಿದೆ ಈ ಎಲೆಕ್ಟ್ರಿಕ್ ಕಾರು

ಇವುಗಳ ಮೇಲೆ ಓರಾ ಕಂಪನಿಯ ಲೊಗೊ ಅಳವಡಿಸಲಾಗಿದೆ. ಓರಾ ಕಂಪನಿಯ ಮೂರನೇ ಉತ್ಪನ್ನವಾದ ಈ ಕಾರಿನಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಯ ಕಾರುಗಳ ರೀತಿಯಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಇನ್ಫೋಟೆನ್ ಮೆಂಟ್ ಸಿಸ್ಟಂ ಹಾಗೂ ದೊಡ್ಡ ಗಾತ್ರದ ಇಂಟಿಗ್ರೇಟೆಡ್ ಸ್ಕ್ರೀನ್ ಗಳನ್ನು ನೀಡಲಾಗಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

400 ಕಿ.ಮೀಗೂ ಹೆಚ್ಚು ಮೈಲೇಜ್ ನೀಡಲಿದೆ ಈ ಎಲೆಕ್ಟ್ರಿಕ್ ಕಾರು

ಕಡಿಮೆ ವೆಚ್ಚದ ಎಲೆಕ್ಟ್ರಿಕ್ ಕಾರ್ ಆಗಿದ್ದರೂ, ಆರ್ 2 ಎಲೆಕ್ಟ್ರಿಕ್ ಕಾರಿನಲ್ಲಿ 6 ಏರ್‌ಬ್ಯಾಗ್, ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂಗಳನ್ನು ಅಳವಡಿಸಲಾಗುವುದು. ಈ ಹೊಸ ಎಲೆಕ್ಟ್ರಿಕ್ ಕಾರಿನ ಬೆಲೆಯು ಆರ್ 1 ಎಲೆಕ್ಟ್ರಿಕ್ ಕಾರಿನ ಬೆಲೆಗಿಂತ ಹೆಚ್ಚಾಗಿರಲಿದೆ.

400 ಕಿ.ಮೀಗೂ ಹೆಚ್ಚು ಮೈಲೇಜ್ ನೀಡಲಿದೆ ಈ ಎಲೆಕ್ಟ್ರಿಕ್ ಕಾರು

ಚೀನಾ ಸರ್ಕಾರದ ರಿಯಾಯಿತಿಗಳ ನಂತರ ಈ ಕಾರಿನ ಬೆಲೆ ಭಾರತದ ರೂಪಾಯಿ ಮೌಲ್ಯದಲ್ಲಿ ರೂ.6.5 ಲಕ್ಷಗಳಾಗಲಿದೆ. ಆರ್ 2 ಎಂಬುದು ಈ ಎಲೆಕ್ಟ್ರಿಕ್ ಕಾರಿನ ತಾತ್ಕಾಲಿಕ ಹೆಸರು. ಈ ಎಲೆಕ್ಟ್ರಿಕ್ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದೆಂದು ಗ್ರೇಟ್ ವಾಲ್ ಮೋಟಾರ್ಸ್ ಹೇಳಿದೆ.

Most Read Articles

Kannada
English summary
Great Wall Motors introduces new Aura R2 ev which offers 400 kms range. Read in Kannada.
Story first published: Saturday, July 4, 2020, 17:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X