ಜನರಲ್ ಮೋಟಾರ್ಸ್ ಘಟಕವನ್ನು ಖರೀದಿಸಲಿದೆ ಗ್ರೇಟ್ ವಾಲ್ ಮೋಟಾರ್ಸ್

ಚೀನಾ ಮೂಲದ ಗ್ರೇಟ್ ವಾಲ್ ಮೋಟಾರ್ಸ್, ಅಮೇರಿಕಾ ಮೂಲದ ಜನರಲ್ ಮೋಟಾರ್ಸ್ ಮಹಾರಾಷ್ಟ್ರದ ತಾಲೆಗಾಂವ್‍‍ನಲ್ಲಿ ಹೊಂದಿರುವ ಉತ್ಪಾದನಾ ಘಟಕವನ್ನು ಖರೀದಿಸಲು ಮುಂದಾಗಿದೆ. ಈ ಸಂಬಂಧ ಜನರಲ್ ಮೋಟಾರ್ಸ್‍‍ನೊಂದಿಗೆ ಮಾತುಕತೆ ನಡೆಸುತ್ತಿದೆ.

ಜನರಲ್ ಮೋಟಾರ್ಸ್ ಘಟಕವನ್ನು ಖರೀದಿಸಲಿದೆ ಗ್ರೇಟ್ ವಾಲ್ ಮೋಟಾರ್ಸ್

ಲೈವ್‍‍ಮಿಂಟ್ ವರದಿಗಳ ಪ್ರಕಾರ, ಗ್ರೇಟ್ ವಾಲ್ ಮೋಟಾರ್ಸ್‍ ಜನರಲ್ ಮೋಟಾರ್ಸ್‍‍ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಕೆಲವು ವರದಿಗಳ ಪ್ರಕಾರ ಗ್ರೇಟ್ ವಾಲ್ ಮೋಟಾರ್ಸ್ ಈ ಉತ್ಪಾದನಾ ಘಟಕವನ್ನು 250ರಿಂದ 300 ಮಿಲಿಯನ್ ಅಮೇರಿಕನ್ ಡಾಲರ್‍‍ಗಳನ್ನು ನೀಡಿ ಖರೀದಿಸಲಿದೆ.

ಜನರಲ್ ಮೋಟಾರ್ಸ್ ಘಟಕವನ್ನು ಖರೀದಿಸಲಿದೆ ಗ್ರೇಟ್ ವಾಲ್ ಮೋಟಾರ್ಸ್

ಚೀನಾ ಕಂಪನಿಗಳಿಗೆ ಯಾವ ರೀತಿಯ ಸವಲತ್ತುಗಳನ್ನು ನೀಡಲಾಗುವುದು ಎಂಬುದರ ಬಗೆ ಗ್ರೇಟ್ ವಾಲ್ ಮೋಟಾರ್ಸ್ ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದೆ. ತಾಲೆಗಾಂವ್‍‍‍ನಲ್ಲಿರುವ ಉತ್ಪಾದನಾ ಘಟಕದಲ್ಲಿ ಪ್ರತಿ ವರ್ಷ 1.65 ಲಕ್ಷ ವಾಹನಗಳನ್ನು ಉತ್ಪಾದಿಸಬಹುದು.

ಜನರಲ್ ಮೋಟಾರ್ಸ್ ಘಟಕವನ್ನು ಖರೀದಿಸಲಿದೆ ಗ್ರೇಟ್ ವಾಲ್ ಮೋಟಾರ್ಸ್

ಈ ಘಟಕದವು 1.60 ಲಕ್ಷ ಎಂಜಿನ್‍‍ಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಸಹ ಹೊಂದಿದೆ. ಈ ಘಟಕವು ಜನರಲ್ ಮೋಟಾರ್ಸ್ ಕಂಪನಿಯು ಮಾರಾಟ ಮಾಡುತ್ತಿರುವ ಎರಡನೇ ಘಟಕವಾಗಿದೆ. ಈ ಮೊದಲು 2017ರಲ್ಲಿ ಹಲೊಲ್ ಘಟಕವನ್ನು ಚೀನಾ ಮೂಲದ ಸೈಕ್ ಕಂಪನಿಗೆ ಮಾರಾಟ ಮಾಡಲಾಗಿತ್ತು.

ಜನರಲ್ ಮೋಟಾರ್ಸ್ ಘಟಕವನ್ನು ಖರೀದಿಸಲಿದೆ ಗ್ರೇಟ್ ವಾಲ್ ಮೋಟಾರ್ಸ್

ಗ್ರೇಟ್ ವಾಲ್ ಮೋಟಾರ್ಸ್ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಆರಂಭಿಸುವ ಮುನ್ನ ಭೂಮಿ ಹಾಗೂ ಅಸ್ತಿತ್ವದಲ್ಲಿರುವ ಘಟಕಗಳನ್ನು ಹುಡುಕುತ್ತಿದೆ. ತಾಲೆಗಾಂವ್ ಘಟಕವನ್ನು ಖರೀದಿಸಿದ ನಂತರ ತನ್ನ ಕಾರ್ಯಾಚರಣೆಯನ್ನು ಶೀಘ್ರವಾಗಿ ಆರಂಭಿಸಲಿದೆ. ಗ್ರೇಟ್ ವಾಲ್ ತನ್ನ ಹವಾಲ್ ಸ್ಪೋರ್ಟ್ ಯುಟಿಲಿಟಿ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಜನರಲ್ ಮೋಟಾರ್ಸ್ ಘಟಕವನ್ನು ಖರೀದಿಸಲಿದೆ ಗ್ರೇಟ್ ವಾಲ್ ಮೋಟಾರ್ಸ್

ಈ ವಾಹನಗಳನ್ನು ಮುಂದಿನ ತಿಂಗಳು ದೆಹಲಿಯಲ್ಲಿ ನಡೆಯಲಿರುವ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಿದೆ. ಇತ್ತೀಚಿಗೆ ಗ್ರೇಟ್ ವಾಲ್ ಮೋಟಾರ್ಸ್ ಕಂಪನಿಯು ತನ್ನ ಟ್ವಿಟರ್ ಖಾತೆಯ ಮೂಲಕ ಹೊಸ ಮಾರುಕಟ್ಟೆಯಾದ ಭಾರತಕ್ಕೆ ನಮಸ್ತೆ ಇಂಡಿಯಾ ಎಂದು ಹೇಳುವ ಟೀಸರ್ ಒಂದನ್ನು ಬಿಡುಗಡೆಗೊಳಿಸಿತ್ತು.

ಜನರಲ್ ಮೋಟಾರ್ಸ್ ಘಟಕವನ್ನು ಖರೀದಿಸಲಿದೆ ಗ್ರೇಟ್ ವಾಲ್ ಮೋಟಾರ್ಸ್

ಈ ಟೀಸರ್‍‍ನ ಕೊನೆಯಲ್ಲಿ ಎಸ್‍‍ಯುವಿಯೊಂದರ ಸಿಲ್‍ಹೋಟ್ ಅನ್ನು ತೋರಿಸಲಾಗಿತ್ತು. ಆ ಎಸ್‍‍ಯುವಿಯು ಹವಾಲ್ ಹೆಚ್ 6 ಆಗಿರುವ ಸಾಧ್ಯತೆಗಳಿವೆ. ಈ ಎಸ್‍‍ಯುವಿಯನ್ನು ಹಲವಾರು ಬಾರಿ ಭಾರತದಲ್ಲಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ.

ಜನರಲ್ ಮೋಟಾರ್ಸ್ ಘಟಕವನ್ನು ಖರೀದಿಸಲಿದೆ ಗ್ರೇಟ್ ವಾಲ್ ಮೋಟಾರ್ಸ್

ಗ್ರೇಟ್ ವಾಲ್ ಮೋಟಾರ್ಸ್ ಹವಾಲ್ ಹೆಸರಿನಲ್ಲಿ - ಹವಾಲ್ ಹೆಚ್ 2, ಹೆಚ್ 4, ಹೆಚ್ 6 ಹಾಗೂ ಹೆಚ್ 9 ಎಂಬ ನಾಲ್ಕು ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಇವುಗಳಲ್ಲಿ ಹೆಚ್ 4 ಮಾದರಿಯನ್ನು ಮೊದಲು ಬಿಡುಗಡೆಗೊಳಿಸಲಾಗುವುದು.

ಜನರಲ್ ಮೋಟಾರ್ಸ್ ಘಟಕವನ್ನು ಖರೀದಿಸಲಿದೆ ಗ್ರೇಟ್ ವಾಲ್ ಮೋಟಾರ್ಸ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಇದು ಗ್ರೇಟ್ ವಾಲ್ ಮೋಟಾರ್ಸ್ ಪಾಲಿಗೆ ಶುಭ ಸುದ್ದಿ. ಅಸ್ತಿತ್ವದಲ್ಲಿರುವ ಉತ್ಪಾದನಾ ಘಟಕವನ್ನು ಖರೀದಿಸುವುದು ಒಳ್ಳೆಯ ನಿರ್ಧಾರ. ಇದರಿಂದಾಗಿ ಉತ್ಪಾದನಾ ಘಟಕದ ಮೇಲೆ ಬಂಡವಾಳ ಹೂಡಿಕೆ ಮಾಡುವುದು ತಪ್ಪಿ, ದೇಶಿಯ ಮಾರುಕಟ್ಟೆಯಲ್ಲಿ ಶೀಘ್ರವಾಗಿ ಕಾರ್ಯಾಚರಣೆಯನ್ನು ಆರಂಭಿಸಬಹುದು.

Most Read Articles

Kannada
English summary
Great Wall Motors In Advanced Talks With GMC: To Acquire Talegaon Facility - Read in Kannada
Story first published: Wednesday, January 8, 2020, 15:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X