ಆಟೋ ಉದ್ಯಮ ಸುಧಾರಣೆಗಾಗಿ ಜಿಎಸ್‌ಟಿ ವಿನಾಯ್ತಿ ನೀಡಲು ಮುಂದಾದ ಕೇಂದ್ರ ಸರ್ಕಾರ

ಮಾಹಾಮಾರಿ ಕರೋನಾ ವೈರಸ್‌ ಪರಿಣಾಮ ಬಹುತೇಕ ಆಟೋ ಕಂಪನಿಗಳು ಭಾರೀ ನಷ್ಟ ಅನುಭವಿಸಿದ್ದು, ಲಾಕ್‌ಡೌನ್ ವಿನಾಯ್ತಿ ನಂತರವೂ ಹೊಸ ವಾಹನಗಳ ಮಾರಾಟ ಪ್ರಮಾಣದಲ್ಲಿ ತುಸು ಹೆಚ್ಚಳ ಕಂಡುಬಂದಿದ್ದರೂ ಆರ್ಥಿಕ ಮುಗ್ಗಟ್ಟು ಆಟೋ ಕಂಪನಿಗಳನ್ನು ಸಂಕಷ್ಟಕ್ಕೆ ಸಿಲುಕಿಸುವಂತೆ ಮಾಡಿದೆ.

ಆಟೋ ಉದ್ಯಮ ಸುಧಾರಣೆಗಾಗಿ ಜಿಎಸ್‌ಟಿ ವಿನಾಯ್ತಿ ನೀಡಲು ಮುಂದಾದ ಕೇಂದ್ರ ಸರ್ಕಾರ

ಸದ್ಯ ವೈರಸ್ ಭೀತಿ ಹೆಚ್ಚಳದ ನಡುವೆಯೂ ಹೊಸ ಸುರಕ್ಷಾ ಮಾರ್ಗಸೂಚಿಗಳೊಂದಿಗೆ ವ್ಯಾಪಾರ ವಹಿವಾಟು ಕೈಗೊಂಡಿರುವ ಆಟೋ ಕಂಪನಿಗಳು ಕನಿಷ್ಠ ಪ್ರಮಾಣದ ವಾಹನ ಮಾರಾಟ ಪ್ರಮಾಣವನ್ನು ದಾಖಲಿಸಿದ್ದು, ಬಹುತೇಕ ವಾಹನಗಳ ಮಾರಾಟದಲ್ಲಿ ಶೇ.15ರಿಂದ ಶೇ.40ರಷ್ಟು ಕುಸಿತ ಕಂಡುಬಂದಿದೆ. ಸದ್ಯ ವೈರಸ್ ಭೀತಿ ಹಿನ್ನಲೆಯಲ್ಲಿ ಹೊಸ ವಾಹನಗಳ ಮಾರಾಟ ಪ್ರಕ್ರಿಯೆಯು ಮುಂಬರುವ ದಿನಗಳಲ್ಲಿ ಹೆಚ್ಚಳವಾಗುವ ನೀರಿಕ್ಷೆಯಿದ್ದು, ಆಟೋ ಉದ್ಯಮ ಸುಧಾರಣೆಗಾಗಿ ತಾತ್ಕಾಲಿಕ ಪರಿಹಾರ ನೀಡುವಂತೆ ಆಟೋ ಕಂಪನಿಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತಿವೆ.

ಆಟೋ ಉದ್ಯಮ ಸುಧಾರಣೆಗಾಗಿ ಜಿಎಸ್‌ಟಿ ವಿನಾಯ್ತಿ ನೀಡಲು ಮುಂದಾದ ಕೇಂದ್ರ ಸರ್ಕಾರ

ಕರೋನಾ ಮಹಾಮಾರಿಯಿಂದಾಗಿ ಕೇವಲ ಆಟೋ ಉದ್ಯಮದಲ್ಲಿ ಮಾತ್ರವಲ್ಲ ಎಲ್ಲಾ ವಾಣಿಜ್ಯ ವಹಿವಾಟಿನಲ್ಲೂ ಆರ್ಥಿಕ ಸಂಕಷ್ಟ ಎದುರಾಗಿದ್ದು, ವ್ಯಾಪಾರ ಅಭಿವೃದ್ದಿಯು ಇದೀಗ ಒಂದು ಹೊಸ ಸವಾಲಾಗಿ ಪರಿಣಮಿಸಿರುವುದು ಹೊಸ ವಾಹನ ಮಾರಾಟದಲ್ಲಿ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.

ಆಟೋ ಉದ್ಯಮ ಸುಧಾರಣೆಗಾಗಿ ಜಿಎಸ್‌ಟಿ ವಿನಾಯ್ತಿ ನೀಡಲು ಮುಂದಾದ ಕೇಂದ್ರ ಸರ್ಕಾರ

ಸದ್ಯ ತೀವ್ರ ಕುಸಿತ ಕಂಡಿರುವ ಹೊಸ ವಾಹನಗಳ ಮಾರಾಟವು ಮತ್ತೆ ಮೊದಲಿನಂತೆ ಚೇತರಿಸಿಕೊಳ್ಳಲು ತುಸು ಸಮಯಾವಕಾಶ ತೆಗೆದುಕೊಳ್ಳಲಿದ್ದು, ಆಟೋ ತಜ್ಞರ ಪ್ರಕಾರ ವಾಹನ ಮಾರಾಟವು ಮೊದಲಿನ ಸ್ಥಿತಿಗೆ ಬರಲು ಕನಿಷ್ಠ 2 ರಿಂದ 3 ವರ್ಷ ಬೇಕಾಗಬಹುದೆಂದು ಅಂದಾಜಿಸಿದ್ದಾರೆ.

ಆಟೋ ಉದ್ಯಮ ಸುಧಾರಣೆಗಾಗಿ ಜಿಎಸ್‌ಟಿ ವಿನಾಯ್ತಿ ನೀಡಲು ಮುಂದಾದ ಕೇಂದ್ರ ಸರ್ಕಾರ

ಭಾರತೀಯ ಆಟೋ ಮೊಬೈಲ್ ಉದ್ಯಮ ಪ್ರಕ್ರಿಯೆಯನ್ನು ನಿರ್ವಹಣೆ ಮಾಡುತ್ತಿರುವ SIAM(ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಟರರ್ಸ್) ಸಂಘವು ಕೂಡಾ ಇದೇ ಅಂಶದ ಮೇಲೆ ಕಳವಳ ವ್ಯಕ್ತಪಡಿಸಿದ್ದು, ಪರಿಸ್ಥಿತಿ ಸುಧಾರಣೆಗಾಗಿ ಕೇಂದ್ರ ಸರ್ಕಾರಕ್ಕೆ ಹಲವು ಬೇಡಿಕೆಗಳನ್ನು ಸಲ್ಲಿಸಿದೆ.

ಆಟೋ ಉದ್ಯಮ ಸುಧಾರಣೆಗಾಗಿ ಜಿಎಸ್‌ಟಿ ವಿನಾಯ್ತಿ ನೀಡಲು ಮುಂದಾದ ಕೇಂದ್ರ ಸರ್ಕಾರ

ಆಟೋ ಉತ್ಪಾದನಾ ಕಂಪನಿಗಳ ಬೇಡಿಕೆ ಕುರಿತಂತೆ ಈಗಾಗಲೇ ಭಾರತೀಯ ಕೈಗಾರಿಕಾ ಒಕ್ಕೂಟದ ಸದಸ್ಯರೊಂದಿಗೆ ಮಹತ್ವದ ಸಮಾಲೋಚನೆ ನಡೆಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದ್ವಿಚಕ್ರ ವಾಹನಗಳ ಮೇಲಿನ ಜಿಎಸ್‌ಟಿ ಕಡಿತ ಮಾಡುವ ಕುರಿತಾಗಿ ಸುಳಿವು ನೀಡಿದ್ದರು.

ಆಟೋ ಉದ್ಯಮ ಸುಧಾರಣೆಗಾಗಿ ಜಿಎಸ್‌ಟಿ ವಿನಾಯ್ತಿ ನೀಡಲು ಮುಂದಾದ ಕೇಂದ್ರ ಸರ್ಕಾರ

ಆದರೆ ನಿನ್ನೆಯಷ್ಟೇ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಟರರ್ಸ್ ಸಂಘದ 60ನೇ ವಾರ್ಷಿಕೋತ್ಸವದಲ್ಲಿ ಭಾಗಿಯಾಗಿದ್ದ ಕೇಂದ್ರದ ಭಾರೀ ಕೈಗಾರಿಕಾ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರು ವಾಹನ ಉದ್ಯಮಕ್ಕೆ ತಾತ್ಕಲಿಕವಾಗಿ ಪರಿಹಾರ ನೀಡಲು ಸರ್ಕಾರ ಚಿಂತನೆ ನಡೆಸಿದ್ದು, ದ್ವಿಚಕ್ರ ಮಾತ್ರವಲ್ಲ ಎಲ್ಲಾ ಬಗೆಯ ವಾಹನಗಳ ಮೇಲೂ ಶೇ.10 ರಷ್ಟು ಜಿಎಸ್‌ಟಿ ವಿನಾಯ್ತಿ ನೀಡಬಹುದಾಗಿದೆ ಎಂಬ ಹೇಳಿಕೆ ನೀಡಿದ್ದಾರೆ.

ಆಟೋ ಉದ್ಯಮ ಸುಧಾರಣೆಗಾಗಿ ಜಿಎಸ್‌ಟಿ ವಿನಾಯ್ತಿ ನೀಡಲು ಮುಂದಾದ ಕೇಂದ್ರ ಸರ್ಕಾರ

ಆದರೂ ಜಿಎಸ್‌ಟಿ ವಿನಾಯ್ತಿ ಕುರಿತು ಇದುವರೆಗೂ ಅಂತಿಮ ನಿರ್ಧಾರ ತಗೆದುಕೊಳ್ಳಲಾಗಿಲ್ಲ ಎನ್ನುವ ಬಗ್ಗೆ ಮಾಹಿತಿ ನೀಡಿರುವ ಸಚಿವ ಪ್ರಕಾಶ್ ಜಾವಡೇಕರ್ ಅವರು, ಆಟೋ ಉದ್ಯಮ ಸುಧಾರಣೆಗಾಗಿ ಜಿಎಸ್‌ಟಿ ವಿನಾಯ್ತಿ ನೀಡುವುದು ಸರ್ಕಾರದ ಮಟ್ಟದಲ್ಲಿ ಈಗಾಗಲೇ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಲಾಗಿದೆ ಎನ್ನುವ ಮಾಹಿತಿ ನೀಡಿದ್ದಾರೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಆಟೋ ಉದ್ಯಮ ಸುಧಾರಣೆಗಾಗಿ ಜಿಎಸ್‌ಟಿ ವಿನಾಯ್ತಿ ನೀಡಲು ಮುಂದಾದ ಕೇಂದ್ರ ಸರ್ಕಾರ

ಇನ್ನು ಕೇಂದ್ರ ಸರ್ಕಾರವು ಕರೋನಾ ವೈರಸ್ ಪರಿಣಾಮ ಭಾರೀ ಪ್ರಮಾಣದ ತೆರಿಗೆ ಆದಾಯದ ನಷ್ಟ ಅನುಭವಿಸುತ್ತಿದ್ದು, ಆದಾಯ ಕ್ರೂಢೀಕರಣಕ್ಕಾಗಿ ವಿವಿಧ ಆದಾಯ ಮೂಲಗಳನ್ನು ಉತ್ತೇಜಿಸಲು ಹೊಸ ವಾಹನಗಳ ಖರೀದಿ ಮೇಲೆ ಜಿಎಸ್‌ಟಿ ವಿನಾಯ್ತಿ ನೀಡುವುದು ಬಹುತೇಕ ಖಚಿತವಾಗಿದೆ.

ಆಟೋ ಉದ್ಯಮ ಸುಧಾರಣೆಗಾಗಿ ಜಿಎಸ್‌ಟಿ ವಿನಾಯ್ತಿ ನೀಡಲು ಮುಂದಾದ ಕೇಂದ್ರ ಸರ್ಕಾರ

ಒಂದು ವೇಳೆ ಕೇಂದ್ರ ಸರ್ಕಾರವು ಹೊಸ ವಾಹನಗಳ ಖರೀದಿ ಮೇಲೆ ಜಿಎಸ್‌ಟಿ ವಿನಾಯ್ತಿ ನೀಡಿದ್ದೆ ಆದಲ್ಲಿ ಹೊಸ ವಾಹನ ಮಾರಾಟವು ಮುಂಬರುವ ದೀಪಾವಳಿ ಹೊತ್ತಿಗೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಲಿದ್ದು, ಇದರಿಂದ ಕೇಂದ್ರ ಸರ್ಕಾರಕ್ಕೂ ಹೆಚ್ಚಿನ ಮಟ್ಟದ ಆದಾಯ ಹರಿದುಬರುವ ನೀರಿಕ್ಷೆಯಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಆಟೋ ಉದ್ಯಮ ಸುಧಾರಣೆಗಾಗಿ ಜಿಎಸ್‌ಟಿ ವಿನಾಯ್ತಿ ನೀಡಲು ಮುಂದಾದ ಕೇಂದ್ರ ಸರ್ಕಾರ

ಆದರೆ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ತೆಗೆದುಕೊಳ್ಳುವ ತೀರ್ಮಾನಗಳ ಹೊಸ ವಾಹನಗಳ ಮಾರಾಟ ಚೇತರಿಕೆಗೆ ಸಹಕಾರಿಯಾಗಲಿದ್ದು, ಸದ್ಯ ಹೊಸ ವಾಹನಗಳ ಖರೀದಿ ಮೇಲೆ ಶೇ.28ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ.

Most Read Articles

Kannada
English summary
Union Govt is planning to give GST cut on all kinds of automobiles to boost sales.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X