ಇಂಡೋ-ಚೀನಾ ಗಡಿ ವಿವಾದ: ವಿಳಂಬವಾಗಲಿದೆ ಹೈಮಾ ಬರ್ಡ್ ಎಲೆಕ್ಟ್ರಿಕ್ ವಾಹನ ಬಿಡುಗಡೆ

ಭಾರತ ಹಾಗೂ ಚೀನಾ ದೇಶಗಳ ನಡುವಿನ ಗಡಿ ವಿವಾದವು ಆಟೋಮೊಬೈಲ್ ಉದ್ಯಮದ ಮೇಲೂ ಪರಿಣಾಮ ಬೀರಿದೆ. ಚೀನಾದ ಹಲವು ವಾಹನ ತಯಾರಕ ಕಂಪನಿಗಳು ಭಾರತದಲ್ಲಿ ತಮ್ಮ ಕಾರ್ಯಾಚರಣೆಯನ್ನು ಆರಂಭಿಸಲು ಮುಂದಾಗಿದ್ದವು.

ಇಂಡೋ-ಚೀನಾ ಗಡಿ ವಿವಾದ: ವಿಳಂಬವಾಗಲಿದೆ ಹೈಮಾ ಬರ್ಡ್ ಎಲೆಕ್ಟ್ರಿಕ್ ವಾಹನ ಬಿಡುಗಡೆ

ಆದರೆ ಇಂಡೋ-ಚೀನಾ ಗಡಿ ವಿವಾದದಿಂದಾಗಿ ಅವುಗಳ ಕಾರ್ಯಾಚರಣೆ ವಿಳಂಬವಾಗುತ್ತಿದೆ.ಚೀನಾದ ಪ್ರಮುಖ ವಾಹನ ತಯಾರಕ ಕಂಪನಿಯಾದ ಗ್ರೇಟ್ ವಾಲ್ ಮೋಟಾರ್ಸ್ ಸೇರಿದಂತೆ ಇತರ ಹಲವು ಕಂಪನಿಗಳು ಸುಮಾರು ರೂ.5,000 ಕೋಟಿಗಳ ಯೋಜನೆಗಳನ್ನು ಸ್ಥಗಿತಗೊಳಿಸಿವೆ. ಗ್ರೇಟ್ ವಾಲ್ ಮೋಟಾರ್ಸ್ ತನ್ನ ಉತ್ಪಾದನಾ ಘಟಕವನ್ನು ಮಹಾರಾಷ್ಟ್ರದ ಪುಣೆಯ ಸಮೀಪ ತಲೆಗಾಂವ್‌ನಲ್ಲಿ ನಿರ್ಮಿಸುತ್ತಿದೆ.

ಇಂಡೋ-ಚೀನಾ ಗಡಿ ವಿವಾದ: ವಿಳಂಬವಾಗಲಿದೆ ಹೈಮಾ ಬರ್ಡ್ ಎಲೆಕ್ಟ್ರಿಕ್ ವಾಹನ ಬಿಡುಗಡೆ

ಈಗ ಚೀನಾದ ಮತ್ತೊಂದು ವಾಹನ ತಯಾರಕ ಕಂಪನಿಯಾದ ಹೈಮಾ ಆಟೋಮೊಬೈಲ್ ಕೂಡ ಇದೇ ಪರಿಸ್ಥಿತಿಯನ್ನು ಎದುರಿಸುತ್ತಿದೆ. 2020ರ ಆಟೋ ಎಕ್ಸ್‌ಪೋ ಮೂಲಕ ಹೈಮಾ ಆಟೋಮೊಬೈಲ್ ದೇಶಿಯ ಮಾರುಕಟ್ಟೆಯನ್ನು ಪ್ರವೇಶಿಸಿತ್ತು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಇಂಡೋ-ಚೀನಾ ಗಡಿ ವಿವಾದ: ವಿಳಂಬವಾಗಲಿದೆ ಹೈಮಾ ಬರ್ಡ್ ಎಲೆಕ್ಟ್ರಿಕ್ ವಾಹನ ಬಿಡುಗಡೆ

ಕಂಪನಿಯು ತನ್ನ ಹೈಮಾ ಬರ್ಡ್ ಎಲೆಕ್ಟ್ರಿಕ್ ವಾಹನವನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಮುಂದಾಗಿತ್ತು. ಈಗ ಈ ಕಾರಿನ ಬಿಡುಗಡೆಯು ವಿಳಂಬವಾಗಿದೆ. ವರದಿಗಳ ಪ್ರಕಾರ, ಹೈಮಾ ಆಟೋಮೊಬೈಲ್ ಈ ಕಾರಿನ ಬಿಡುಗಡೆಯನ್ನು ಮುಂದೂಡಿದೆ.

ಇಂಡೋ-ಚೀನಾ ಗಡಿ ವಿವಾದ: ವಿಳಂಬವಾಗಲಿದೆ ಹೈಮಾ ಬರ್ಡ್ ಎಲೆಕ್ಟ್ರಿಕ್ ವಾಹನ ಬಿಡುಗಡೆ

2020ರ ಆಟೋ ಎಕ್ಸ್‌ಪೋದಲ್ಲಿ ಹೈಮಾ ತನ್ನ ಎಲೆಕ್ಟ್ರಿಕ್ ಕಾರ್ ಅನ್ನು ಪ್ರದರ್ಶಿಸಿತ್ತು.ಹೈಮಾ ಆಟೋಮೊಬೈಲ್, ದೆಹಲಿ ಮೂಲದ ಬರ್ಡ್ ಗ್ರೂಪ್ ಸಹಭಾಗಿತ್ವದಲ್ಲಿ ಈ ಎಲೆಕ್ಟ್ರಿಕ್ ಕಾರನ್ನು ತಯಾರಿಸಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಇಂಡೋ-ಚೀನಾ ಗಡಿ ವಿವಾದ: ವಿಳಂಬವಾಗಲಿದೆ ಹೈಮಾ ಬರ್ಡ್ ಎಲೆಕ್ಟ್ರಿಕ್ ವಾಹನ ಬಿಡುಗಡೆ

ಹೈಮಾ ಬರ್ಡ್ ಎಲೆಕ್ಟ್ರಿಕ್ ಇವಿ 1 ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಎಕ್ಸ್ ಶೋರೂಂ ದರದಂತೆ ರೂ.10 ಲಕ್ಷಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಹೇಳಲಾಗಿತ್ತು. ಈ ಬಗ್ಗೆ ಮಾತನಾಡಿರುವ ಬರ್ಡ್ ಎಲೆಕ್ಟ್ರಿಕ್ ನಿರ್ದೇಶಕರಾದ ಅಂಕುರ್ ಭಾಟಿಯಾರವರು ನಮ್ಮ ಕಂಪನಿಯು ಭಾರತದ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಎಲೆಕ್ಟ್ರಿಕ್ ಕಾರ್ ಅನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಇಂಡೋ-ಚೀನಾ ಗಡಿ ವಿವಾದ: ವಿಳಂಬವಾಗಲಿದೆ ಹೈಮಾ ಬರ್ಡ್ ಎಲೆಕ್ಟ್ರಿಕ್ ವಾಹನ ಬಿಡುಗಡೆ

ಸದ್ಯ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಹೈಮಾ ಬರ್ಡ್ ಎಲೆಕ್ಟ್ರಿಕ್ ಇವಿ 1 ಕಾರಿನ ಬಿಡುಗಡೆ ವಿಳಂಬವಾಗಿದೆ ಎಂದು ಹೇಳಿದ್ದಾರೆ. ಹೈಮಾ ಕಾರಿನಲ್ಲಿ 20.5 ಕಿ.ವ್ಯಾ ಅಥವಾ 28.5 ಕಿ.ವ್ಯಾ ಬ್ಯಾಟರಿ ಇರಲಿದೆ. ಈ ಬ್ಯಾಟರಿಗಳನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 20.5 ಕಿ.ವ್ಯಾ ಬ್ಯಾಟರಿ 200 ಕಿ.ಮೀ ವ್ಯಾಪ್ತಿ ಚಲಿಸಿದರೆ, 28.5 ಕಿ.ವ್ಯಾ ಬ್ಯಾಟರಿ 300 ಕಿ.ಮೀಗಳವರೆಗೆ ಚಲಿಸಲಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಇಂಡೋ-ಚೀನಾ ಗಡಿ ವಿವಾದ: ವಿಳಂಬವಾಗಲಿದೆ ಹೈಮಾ ಬರ್ಡ್ ಎಲೆಕ್ಟ್ರಿಕ್ ವಾಹನ ಬಿಡುಗಡೆ

20.5 ಕಿ.ವ್ಯಾ ಬ್ಯಾಟರಿಯಲ್ಲಿರುವ ಮೋಟಾರ್ 39 ಬಿಹೆಚ್‌ಪಿ ಪವರ್ ಹಾಗೂ 95 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನೂ 28.5 ಕಿ.ವ್ಯಾ ಬ್ಯಾಟರಿಯಲ್ಲಿ ಅಳವಡಿಸಲಾದ ಮೋಟಾರ್ 105 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

Most Read Articles

Kannada
English summary
Haima Bird Electric vehicle launch delayed in India. Read in Kannada.
Story first published: Tuesday, June 30, 2020, 19:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X