ಬಹುನೀರಿಕ್ಷಿತ ಹವಾಲ್ ಎಫ್7,ಎಫ್7 ಎಕ್ಸ್ ಕಾರುಗಳ ಬಿಡುಗಡೆ ಮಾಹಿತಿ ಬಹಿರಂಗ

ದೇಶಿಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಕಾರು ಮಾರಾಟವನ್ನು ಆರಂಭಿಸುತ್ತಿರುವ ಚೀನಿ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಗ್ರೇಟ್ ವಾಲ್ ಮೋಟಾರ್ಸ್ ತನ್ನ ಅಂಗಸಂಸ್ಥೆ ಹವಾಲ್ ಕಾರು ಮಾದರಿಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಅಂತಿಮ ಹಂತದ ಸಿದ್ದತೆಯಲ್ಲಿದ್ದು, ಹೊಸ ಕಾರುಗಳ ಬಿಡುಗಡೆ ಮಾಹಿತಿ ಬಿಟ್ಟುಕೊಟ್ಟಿದೆ.

ಬಹುನೀರಿಕ್ಷಿತ ಹವಾಲ್ ಎಫ್7,ಎಫ್7 ಎಕ್ಸ್ ಕಾರುಗಳ ಬಿಡುಗಡೆ ಮಾಹಿತಿ ಬಹಿರಂಗ

ಮಧ್ಯಮ ಗಾತ್ರದ ಐಷಾರಾಮಿ ಎಸ್‌ಯುವಿ ಆವೃತ್ತಿಯಾಗಿರುವ ಹವಾಲ್ ಹೊಸ ಕಾರುಗಳು ಹೊಸ ನೀರಿಕ್ಷೆಯೊಂದಿಗೆ ದೇಶಿಯ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಎಸ್‌ಯುವಿ, ಸೆಡಾನ್, ಎಂಪಿವಿ ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಅನಾವರಣಗೊಳಿಸಿದೆ. ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಲಾದ ಎಫ್5, ಎಫ್7,ಎಫ್7 ಎಕ್ಸ್ ಮತ್ತು ಹೆಚ್9 ಎಸ್‌ಯುವಿ ಕಾರುಗಳಲ್ಲಿ ಎಫ್7 ಮತ್ತು ಎಫ್7ಎಕ್ಸ್ ಮೊದಲ ಹಂತದಲ್ಲಿ ಬಿಡುಗಡೆಯಾಗಲಿವೆಯೆಂತೆ.

ಬಹುನೀರಿಕ್ಷಿತ ಹವಾಲ್ ಎಫ್7,ಎಫ್7 ಎಕ್ಸ್ ಕಾರುಗಳ ಬಿಡುಗಡೆ ಮಾಹಿತಿ ಬಹಿರಂಗ

ಭಾರತದಲ್ಲಿ 2021ಕ್ಕೆ ಅಧಿಕೃತವಾಗಿ ಕಾರು ಉತ್ಪಾದನೆ ಮತ್ತು ಆರಂಭಿಸಲಿರುವ ಹವಾಲ್ ಸಂಸ್ಥೆಯು ಎಫ್7 ಮಾದರಿಯನ್ನು ಮಧ್ಯಮ ಶ್ರೇಣಿಯ ಎಸ್‌ಯುವಿ ಆವೃತ್ತಿಯಾಗಿ ಮತ್ತು ಎಫ್7 ಎಕ್ಸ್ ಕೂಪೆ ಆವೃತ್ತಿಯನ್ನು ಮಧ್ಯಮ ಕ್ರಮಾಂಕದ ಐಷಾರಾಮಿ ಕಾರು ಮಾದರಿಯಾಗಿ ಬಿಡುಗಡೆಗೊಳಿಸಲಿದೆ.

ಬಹುನೀರಿಕ್ಷಿತ ಹವಾಲ್ ಎಫ್7,ಎಫ್7 ಎಕ್ಸ್ ಕಾರುಗಳ ಬಿಡುಗಡೆ ಮಾಹಿತಿ ಬಹಿರಂಗ

ಎಫ್7 ಎಸ್‌ಯುವಿ ಮಾದರಿಯು ಎಂಜಿ ಹೆಕ್ಟರ್ ಎಸ್‌ಯುವಿ ಕಾರಿಗೆ ಸಮನಾಗಿರಲಿದ್ದು, ಇದು 5 ಆಸನಗಳ ಕಾರು ಮಾದರಿಯಾಗಲಿದೆ. ಈ ಕಾರು 4,640-ಎಂಎಂ ಉದ್ದ, 1,846-ಎಂಎಂ ಅಗಲ ಮತ್ತು 1,690-ಎಂಎಂ ಎತ್ತರವಿದೆ. ಹಾಗೆಯೇ ಎಫ್7 ಎಕ್ಸ್ ಕೂಪೆ ಕೂಡಾ ಗಾತ್ರದಲ್ಲಿ ವೈವಿಧ್ಯಮಯವಾಗಿದ್ದು, ವಿಭಿನ್ನ ಆಯ್ಕೆಗೆ ಆದ್ಯತೆ ನೀಡುವ ಗ್ರಾಹಕರಿಗೆ ಎಫ್7 ಎಕ್ಸ್ ಒಂದು ಉತ್ತಮ ಆಯ್ಕೆಯಾಗಿರಲಿದೆ ಎನ್ನಬಹುದು.

ಬಹುನೀರಿಕ್ಷಿತ ಹವಾಲ್ ಎಫ್7,ಎಫ್7 ಎಕ್ಸ್ ಕಾರುಗಳ ಬಿಡುಗಡೆ ಮಾಹಿತಿ ಬಹಿರಂಗ

ಎಂಜಿನ್ ಸಾಮರ್ಥ್ಯ

ಎಫ್ 7 ಮತ್ತು ಎಫ್ 7ಎಕ್ಸ್ ಕಾರುಗಳಲ್ಲಿ ಗ್ರಾಹಕರ ಬೇಡಿಕೆಯೆಂತೆ 1.5 ಲೀಟರ್ ಪೆಟ್ರೋಲ್ ಮತ್ತು 2.0-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ನೀಡುವ ಸಾಧ್ಯತೆಯಿದ್ದು, ಇದರಲ್ಲಿ 1.5-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 150-ಬಿಎಚ್‌ಪಿ ಮತ್ತು 280-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದೆ. 2.0-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 190-ಬಿಎಚ್‌ಪಿ ಮತ್ತು 340-ಎನ್ಎಂ ಟಾರ್ಕ್ ಅನ್ನು ನೀಡಲಿದ್ದು, ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯಲಿದೆ.

ಬಹುನೀರಿಕ್ಷಿತ ಹವಾಲ್ ಎಫ್7,ಎಫ್7 ಎಕ್ಸ್ ಕಾರುಗಳ ಬಿಡುಗಡೆ ಮಾಹಿತಿ ಬಹಿರಂಗ

ಜೊತೆಗೆ ಎರಡೂ ಎಂಜಿನ್‌ಗಳು 7-ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ನಲ್ಲಿ ಲಭ್ಯವಿದ್ದು, ಫ್ರಂಟ್ ವೀಲ್ ಡ್ರೈವ್ ಮತ್ತು ಫೋರ್ ವೀಲ್ ಡ್ರೈವ್ ಸಿಸ್ಟಮ್ ಆಯ್ಕೆ ರೂಪದಲ್ಲಿ ನೀಡಲಾಗುತ್ತದೆ. ಇದರೊಂದಿಗೆ ಹೊಸ ಕಾರುಗಳಲ್ಲಿ ಡೀಸೆಲ್ ಎಂಜಿನ್ ನೀಡುವ ಸಾಧ್ಯತೆಗಳಿದ್ದು, 2.0-ಲೀಟರ್ ಟರ್ಬೋ ಡೀಸೆಲ್ ನೀಡಬಹುದೆಂದು ನೀರಿಕ್ಷಿಸಲಾಗಿದೆ.

ಬಹುನೀರಿಕ್ಷಿತ ಹವಾಲ್ ಎಫ್7,ಎಫ್7 ಎಕ್ಸ್ ಕಾರುಗಳ ಬಿಡುಗಡೆ ಮಾಹಿತಿ ಬಹಿರಂಗ

ಇನ್ನು ಹವಾಲ್ ಹೊಸ ಕಾರು ಮಾದರಿಯಲ್ಲಿ 9.0-ಇಂಚಿನ ಟಚ್ ಸ್ಕ್ರೀನ್‌ನೊಂದಿಗೆ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪನೋರಮಿಕ್ ಸನ್‌ರೂಫ್, 6 ಏರ್‌ಬ್ಯಾಗ್, ಕ್ರ್ಯಾಶ್ ಅಲರ್ಟ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್, 360 ಡಿಗ್ರಿ ಕ್ಯಾಮೆರಾ ಮತ್ತು ಡ್ರೈವರ್ ಅಸಿಸ್ಟ್ ಸೇರಿದಂತೆ ಹಲವು ಪ್ರೀಮಿಯಂ ಫೀಚರ್ಸ್ ಹೊಂದಿವೆ.

ಬಹುನೀರಿಕ್ಷಿತ ಹವಾಲ್ ಎಫ್7,ಎಫ್7 ಎಕ್ಸ್ ಕಾರುಗಳ ಬಿಡುಗಡೆ ಮಾಹಿತಿ ಬಹಿರಂಗ

ಅಂದಾಜು ಬೆಲೆ(ಎಕ್ಸ್‌ಶೋರೂಂ ಪ್ರಕಾರ)

ಎಫ್7 ಕಾರು ಭಾರತದಲ್ಲಿ ಎಂಜಿ ಹೆಕ್ಟರ್, ಕಿಯಾ ಸೆಲ್ಟೊಸ್, ಜೀಪ್ ಕಂಪಾಸ್, ಟಾಟಾ ಹ್ಯಾರಿಯರ್ ಮತ್ತು ಮಹೀಂದ್ರಾ ಎಕ್ಸ್‌ಯುವಿ500 ಕಾರುಗಳಿಗೆ ಪ್ರತಿಸ್ಪರ್ಧಿ ಮಾದರಿಯಾಗಿ ಮಾರಾಟಗೊಳ್ಳಲಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.14 ಲಕ್ಷದಿಂದ ರೂ.18 ಲಕ್ಷ ಬೆಲೆಯೊಂದಿಗೆ ಬಿಡುಗಡೆಗೊಳ್ಳುವ ಸಾಧ್ಯತೆಗಳಿವೆ.

ಬಹುನೀರಿಕ್ಷಿತ ಹವಾಲ್ ಎಫ್7,ಎಫ್7 ಎಕ್ಸ್ ಕಾರುಗಳ ಬಿಡುಗಡೆ ಮಾಹಿತಿ ಬಹಿರಂಗ

ಎಫ್7 ಎಕ್ಸ್ ಮಾದರಿಯ ಎಫ್7 ಕಾರಿಗಿಂತಲೂ ದುಬಾರಿ ಬೆಲೆ ಹೊಂದಿರಲಿದ್ದು, ಮಧ್ಯಮ ಗಾತ್ರದಲ್ಲಿ ಯಾವುದೇ ಕಾರು ಮಾದರಿಗಳಲ್ಲೂ ಕೂಪೆ ಕಾರುಗಳ ಮಾರಾಟ ಭಾರತದಲ್ಲಿ ಲಭ್ಯವಿಲ್ಲವಾದರೂ ಎಫ್7 ಎಕ್ಸ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 25 ಲಕ್ಷದಿಂದ ರೂ. 30 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಲಿದೆ.

ಬಹುನೀರಿಕ್ಷಿತ ಹವಾಲ್ ಎಫ್7,ಎಫ್7 ಎಕ್ಸ್ ಕಾರುಗಳ ಬಿಡುಗಡೆ ಮಾಹಿತಿ ಬಹಿರಂಗ

ಇದರೊಂದಿಗೆ ಮೊದಲ ಹಂತವಾಗಿ ಭಾರತದಲ್ಲಿ ವಾರ್ಷಿಕವಾಗಿ 2 ಲಕ್ಷ ಕಾರುಗಳ ಉತ್ಪಾದನಾ ಸಾಮರ್ಥ್ಯದ ಘಟಕವನ್ನು ತೆರೆಯಲು ಯೋಜಿಸಿರುವ ಗ್ರೇಟ್ ವಾಲ್ ಮೋಟಾರ್ಸ್ ಸಂಸ್ಥೆಯು, ಚೀನಾದಲ್ಲಿ ಪ್ರತಿ ಸ್ಪರ್ಧಿ ಕಾರು ಸಂಸ್ಥೆಯಾಗಿರುವ ಸೈಕ್‌(ಎಂಜಿ ಮೋಟಾರ್ ಮಾತೃ ಸಂಸ್ಥೆ)ಗೆ ಪೈಪೋಟಿ ನೀಡುತ್ತಿರುವಂತೆ ಭಾರತದಲ್ಲೂ ಎಂಜಿಗೆ ಪೈಪೋಟಿ ನೀಡಲು ಭಾರೀ ಪ್ರಮಾಣದ ಹೂಡಿಕೆ ಮಾಡಿದೆ.

Most Read Articles

Kannada
English summary
According to report, Chinese car maker, Haval will launch F7 and the F7X SUV models in India by early next year. Read in Kannada.
Story first published: Saturday, February 15, 2020, 18:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X